ಪಾಠ 14
ಇಡೀ ಭೂಮಿಯನ್ನು ಆಳುವ ಒಂದು ರಾಜ್ಯ
ಇದು ಯಾವ ರಾಜ್ಯ ಅಂತ ನಿನಗೆ ಗೊತ್ತಾ?— ಹೌದು ದೇವರ ರಾಜ್ಯ. ಈ ರಾಜ್ಯ ಇಡೀ ಭೂಮಿಯನ್ನು ಪರದೈಸ್ ಆಗಿ ಮಾಡುತ್ತದೆ. ಈ ರಾಜ್ಯದ ಬಗ್ಗೆ ನಿನಗೆ ಇನ್ನೂ ತಿಳಿಯಬೇಕಾ?—
ಒಂದು ರಾಜ್ಯಕ್ಕೆ ಒಬ್ಬ ರಾಜನಿರುತ್ತಾನೆ. ಆ ರಾಜ ತನ್ನ ದೇಶದ ಜನರನ್ನು ಆಳುತ್ತಾನೆ. ದೇವರ ರಾಜ್ಯದ ರಾಜ ಯಾರು?— ಯೇಸು ಕ್ರಿಸ್ತ. ಅವನು ಸ್ವರ್ಗದಲ್ಲಿದ್ದಾನೆ. ಆದಷ್ಟು ಬೇಗ ಯೇಸು ಭೂಮಿ ಮೇಲಿರುವ ಎಲ್ಲರಿಗೂ ರಾಜನಾಗುತ್ತಾನೆ. ಆಗ ನಾವೆಲ್ಲರು ಸಂತೋಷವಾಗಿರುತ್ತೇವಾ?—
ಪರದೈಸಿನಲ್ಲಿ ನಿನಗೇನು ಮಾಡಬೇಕು ಅಂತ ಇಷ್ಟ?
ನಾವೆಲ್ಲರೂ ಸಂತೋಷದಿಂದ ಇರುತ್ತೇವೆ. ಅಲ್ಲಿ ಯಾರೂ ಜಗಳ ಮಾಡುವುದಿಲ್ಲ, ಯುದ್ಧ ಮಾಡುವುದಿಲ್ಲ, ಸಾಯುವುದಿಲ್ಲ. ಕಣ್ಣು ಕಾಣಿಸದವರಿಗೆ ಕಣ್ಣು ಕಾಣಿಸುತ್ತದೆ, ಕಿವಿ ಕೇಳಿಸದವರಿಗೆ ಕಿವಿ ಕೇಳಿಸುತ್ತದೆ. ನಡೆಯಲಿಕ್ಕೆ ಆಗದವರಿಗೆ ನಡೆಯಲು ಆಗುತ್ತದೆ. ಅವರು ಆಗ ಓಡಬಹುದು, ಜಿಗಿಯಬಹುದು. ಎಲ್ಲರಿಗೂ ಸಾಕಾಗುವಷ್ಟು ಆಹಾರ ಇರುತ್ತದೆ. ಪ್ರಾಣಿಗಳೆಲ್ಲ ನಮ್ಮ ಜೊತೆ ಮತ್ತು ಬೇರೆ ಪ್ರಾಣಿಗಳ ಜೊತೆ ಗೆಳೆಯರಂತೆ ಇರುತ್ತವೆ. ಸತ್ತು ಹೋದವರೆಲ್ಲರು ಮತ್ತೆ ಜೀವಕ್ಕೆ ಬರುತ್ತಾರೆ. ಈ ಕಿರುಹೊತ್ತಗೆಯಲ್ಲಿ ಮುಂಚೆ ಕಲಿತೆವಲ್ಲಾ ರೆಬೆಕ್ಕ, ರಾಹಾಬ, ದಾವೀದ, ಎಲೀಯ ಇವರೆಲ್ಲ ಮತ್ತೆ ಜೀವಕ್ಕೆ ಬರುತ್ತಾರೆ! ಆಗ ನೀನು ಹೋಗಿ ಅವರ ಹತ್ತಿರ ಮಾತಾಡುತ್ತೀಯಾ?—
ಯೆಹೋವನಿಗೆ ನೀನೆಂದರೆ ತುಂಬ ಇಷ್ಟ. ನೀನು ಯಾವಾಗಲೂ ಖುಷಿಯಾಗಿರಬೇಕು ಅನ್ನುವುದು ಆತನ ಯೆಹೋವನ ಬಗ್ಗೆ ಕಲಿತು, ಆತನ ಮಾತು ಕೇಳಿದರೆ ಭೂಮಿ ಪರದೈಸ್ ಆದಾಗ ನೀನು ಅಲ್ಲೇ ಯಾವಾಗಲೂ ಇರಬಹುದು! ಅಲ್ಲಿರಲು ಇಷ್ಟಪಡುತ್ತೀಯಾ?—
ಆಸೆ.