ಕ್ಷಮಿಸೋದು
ಕ್ಷಮಿಸೋದ್ರ ಬಗ್ಗೆ ಯೆಹೋವ ದೇವರಿಗೆ ಹೇಗನಿಸುತ್ತೆ?
ಕೀರ್ತ 86:5; ದಾನಿ 9:9; ಮೀಕ 7:18
ಇದನ್ನೂ ನೋಡಿ: 2ಪೇತ್ರ 3:9
-
ಬೈಬಲ್ ಉದಾಹರಣೆಗಳು:
-
ಕೀರ್ತ 78:40, 41; 106:36-46—ಇಸ್ರಾಯೇಲ್ಯರು ಯೆಹೋವನನ್ನ ಪದೇ ಪದೇ ನೋಯಿಸಿದ್ರೂ ಆತನು ಅವ್ರನ್ನ ಪದೇ ಪದೇ ಕ್ಷಮಿಸಿದನು
-
ಲೂಕ 15:11-32—ತಪ್ಪು ಮಾಡಿ ಪಶ್ಚಾತ್ತಾಪ ಪಟ್ಟ ಮಗನನ್ನ ಒಬ್ಬ ತಂದೆ ಹೇಗೆ ಕ್ಷಮಿಸಿದ್ನೋ ಅದೇ ತರ ಯೆಹೋವ ಕ್ಷಮಿಸ್ತಾರೆ ಅಂತ ಯೇಸು ಹೇಳಿದನು
-
ನಮ್ಮನ್ನ ಕ್ಷಮಿಸೋಕೆ ಯೆಹೋವ ದೇವರು ಏನು ಮಾಡಿದ್ದಾರೆ?
ಯೋಹಾ 1:29; ಎಫೆ 1:7; 1ಯೋಹಾ 2:1, 2
-
ಬೈಬಲ್ ಉದಾಹರಣೆಗಳು:
-
ಇಬ್ರಿ 9:22-28—ಯೇಸು ನಮಗೋಸ್ಕರ ತನ್ನ ಪ್ರಾಣ ಕೊಟ್ಟಿರೋದ್ರಿಂದ ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸ್ತಾನೆ ಅಂತ ಪೌಲ ಹೇಳಿದ್ದಾನೆ
-
ಪ್ರಕ 7:9, 10, 14, 15—ದೊಡ್ಡ ಗುಂಪಿನ ಜನ್ರಿಗೆ ಯೇಸುವಿನ ಬಿಡುಗಡೆ ಬೆಲೆ ಮೇಲೆ ನಂಬಿಕೆ ಇರೋದ್ರಿಂದ ಅವ್ರ ತಪ್ಪುಗಳನ್ನ ದೇವರು ಕ್ಷಮಿಸ್ತಾರೆ ಅಂತ ಯೋಹಾನ ಬರೆದಿದ್ದಾನೆ
-
ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸಬೇಕಾದ್ರೆ ಬೇರೆಯವರು ತಪ್ಪು ಮಾಡಿದಾಗ ನಾವು ಏನು ಮಾಡಬೇಕು?
ಮತ್ತಾ 6:14, 15; ಮಾರ್ಕ 11:25; ಲೂಕ 17:3, 4; ಯಾಕೋ 2:13
-
ಬೈಬಲ್ ಉದಾಹರಣೆಗಳು:
-
ಯೋಬ 42:7-10—ಯೆಹೋವ ಯೋಬನ ಕಾಯಿಲೆ ವಾಸಿ ಮಾಡಿ ಆಶೀರ್ವಾದ ಮಾಡೋಕೂ ಮುಂಚೆ ಅವನ ಮನಸ್ಸು ನೋಯಿಸಿದ ಮೂವರು ಸ್ನೇಹಿತರ ಪರವಾಗಿ ಪ್ರಾರ್ಥನೆ ಮಾಡೋದಕ್ಕೆ ಹೇಳಿದನು
-
ಮತ್ತಾ 18:21-35—ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸಬೇಕಾದ್ರೆ ನಾವು ಬೇರೆವ್ರನ್ನ ಕ್ಷಮಿಸೋದು ಎಷ್ಟು ಮುಖ್ಯ ಅಂತ ಯೇಸು ಒಂದು ಕಥೆ ಮೂಲಕ ಹೇಳಿದನು
-
ನಮ್ಮ ತಪ್ಪುಗಳನ್ನ ಒಪ್ಕೊಂಡು ಪಶ್ಚಾತ್ತಾಪ ಪಡೋದು ಎಷ್ಟು ಮುಖ್ಯ?
-
ಬೈಬಲ್ ಉದಾಹರಣೆಗಳು:
-
ಕೀರ್ತ 32:1-5; 51:1, 2, 16, 17—ದಾವೀದ ದೊಡ್ಡ ತಪ್ಪು ಮಾಡಿದಾಗ ಅದ್ರ ಬಗ್ಗೆ ಕೊರಗ್ತಿದ್ದ, ಆಮೇಲೆ ಅವನು ಮನಸಾರೆ ಪಶ್ಚಾತ್ತಾಪ ಪಟ್ಟ
-
ಯಾಕೋ 5:14-16—ನಾವೇನಾದ್ರೂ ದೊಡ್ಡ ತಪ್ಪು ಮಾಡಿದ್ರೆ ಹಿರಿಯರ ಸಹಾಯ ಪಡ್ಕೊಬೇಕು ಅಂತ ಯಾಕೋಬ ಹೇಳಿದ್ದಾನೆ
-
ಯೆಹೋವ ನಮ್ಮ ತಪ್ಪುಗಳನ್ನ ಕ್ಷಮಿಸಬೇಕಾದ್ರೆ ನಾವು ಯಾವ ಬದಲಾವಣೆ ಮಾಡ್ಕೊಬೇಕು?
ಜ್ಞಾನೋ 28:13; ಯೆಶಾ 55:7; ಎಫೆ 4:28
-
ಬೈಬಲ್ ಉದಾಹರಣೆಗಳು:
-
1ಅರ 21:27-29; 2ಪೂರ್ವ 18:18-22, 33, 34; 19:1, 2—ಯೆಹೋವ ತನಗೆ ಶಿಕ್ಷೆ ಕೊಡ್ತಾರೆ ಅಂದಾಗ ರಾಜ ಅಹಾಬ ದುಃಖಪಟ್ಟ. ಆದ್ರೆ ಅವನು ಮಾಡಿದ ತಪ್ಪಿಗೆ ಮನಸಾರೆ ಪಶ್ಚಾತ್ತಾಪ ಪಡಲಿಲ್ಲ, ಅದಕ್ಕೆ ಯೆಹೋವ ಅವನನ್ನ ಕ್ಷಮಿಸಲಿಲ್ಲ, ಸಾಯಿಸಿದನು
-
2ಪೂರ್ವ 33:1-16—ರಾಜ ಮನಸ್ಸೆ ತುಂಬಾ ಕೆಟ್ಟವನಾಗಿದ್ದ. ಆದ್ರೆ ಅವನು ಮನಸಾರೆ ಪಶ್ಚಾತ್ತಾಪ ಪಟ್ಟ, ಇಸ್ರಾಯೇಲ್ ಜನರು ಮೂರ್ತಿ ಪೂಜೆ ಬಿಟ್ಟು ಯೆಹೋವನನ್ನ ಆರಾಧಿಸೋಕೆ ಸಹಾಯ ಮಾಡಿದ, ಆಗ ಯೆಹೋವ ಅವನನ್ನ ಕ್ಷಮಿಸಿದನು
-
ನಾವು ನಿಜವಾಗ್ಲೂ ಪಶ್ಚಾತ್ತಾಪ ಪಟ್ರೆ ಯೆಹೋವ ನಮ್ಮನ್ನ ಎಷ್ಟರ ಮಟ್ಟಿಗೆ ಕ್ಷಮಿಸ್ತಾನೆ?
ಕೀರ್ತ 103:10-14; ಯೆಶಾ 1:18; 38:17; ಯೆರೆ 31:34; ಮೀಕ 7:19
-
ಬೈಬಲ್ ಉದಾಹರಣೆಗಳು:
-
2ಸಮು 12:13; 24:1; 1ಅರ 9:4, 5—ದಾವೀದ ತುಂಬಾ ದೊಡ್ಡ ತಪ್ಪುಗಳನ್ನ ಮಾಡಿದ್ರೂ ಅವನು ತಪ್ಪನ್ನ ಒಪ್ಕೊಂಡು ಪಶ್ಚಾತ್ತಾಪ ಪಟ್ಟಿದ್ರಿಂದ ಯೆಹೋವ ಅವನನ್ನ ಕ್ಷಮಿಸಿದನು, ಅವನನ್ನ ‘ನೀತಿಯಿಂದ ನಡೆದ ಮನುಷ್ಯ’ ಅಂತ ಹೇಳಿದನು
-
ಯೆಹೋವನ ತರ ಯೇಸುನೂ ಕ್ಷಮಿಸೋಕೆ ಸಿದ್ಧ ಅಂತ ಹೇಗೆ ತೋರಿಸ್ಕೊಟ್ಟನು?
-
ಬೈಬಲ್ ಉದಾಹರಣೆಗಳು:
-
ಮತ್ತಾ 26:36, 40, 41—ಶಿಷ್ಯರು ಯೇಸುಗೆ ಪ್ರೋತ್ಸಾಹ ಕೊಡೋ ಬದ್ಲು ನಿದ್ದೆ ಮಾಡ್ತಿದ್ದನ್ನ ನೋಡಿದಾಗ ಯೇಸು ಅವ್ರ ಪರಿಸ್ಥಿತಿನ ಅರ್ಥ ಮಾಡ್ಕೊಂಡನು
-
ಮತ್ತಾ 26:69-75; ಲೂಕ 24:33, 34; ಅಕಾ 2:37-41—ಪೇತ್ರ ಯೇಸುವನ್ನ ಮೂರು ಸಲ ಯಾರು ಅಂತ ಗೊತ್ತಿಲ್ಲ ಅಂದ, ಆದ್ರೆ ಅವನು ಪಶ್ಚಾತ್ತಾಪ ಪಟ್ಟಾಗ ಯೇಸು ಅವನನ್ನ ಕ್ಷಮಿಸಿದನು; ಯೇಸು ಜೀವಂತವಾಗಿ ಎದ್ದು ಬಂದಾಗ ನೇರವಾಗಿ ಅವನನ್ನ ಭೇಟಿ ಮಾಡಿ ಸಭೆಯಲ್ಲಿ ಅವನಿಗೆ ವಿಶೇಷ ಸುಯೋಗಗಳನ್ನ ಕೊಟ್ಟನು
-
ಯೆಹೋವ ದೇವರು ಎಲ್ರನ್ನೂ ಕ್ಷಮಿಸೋದಿಲ್ಲ ಅಂತ ನಾವು ಹೇಗೆ ಹೇಳಬಹುದು?
ಮತ್ತಾ 12:31; ಇಬ್ರಿ 10:26, 27; 1ಯೋಹಾ 5:16, 17
-
ಬೈಬಲ್ ಉದಾಹರಣೆಗಳು:
-
ಮತ್ತಾ 23:29-33—ಪಂಡಿತರು ಮತ್ತು ಫರಿಸಾಯರಿಗೆ ಯೇಸು ‘ಗೆಹೆನ್ನದಲ್ಲಿ ನಾಶ ಆಗ್ತೀರ ಅಥವಾ ಶಾಶ್ವತ ನಾಶ ಆಗ್ತೀರ’ ಅಂತ ಎಚ್ಚರಿಕೆ ಕೊಟ್ಟನು
-
ಯೋಹಾ 17:12; ಮಾರ್ಕ 14:21—ಯೇಸು ಇಸ್ಕರಿಯೂತ ಯೂದನನ್ನ ‘ನಾಶ ಆಗಬೇಕಾದವನು’ ಅಂತ ಕರೆದು ಅವನು ಹುಟ್ಟದೇ ಇದ್ದಿದ್ರೆ ಚೆನ್ನಾಗಿರ್ತಿತ್ತು ಅಂತ ಹೇಳಿದನು
-
ನಾವು ಬೇರೆವ್ರನ್ನ ಕ್ಷಮಿಸೋದಕ್ಕೆ ಯಾವುದು ನಮ್ಗೆ ಸಹಾಯ ಮಾಡುತ್ತೆ?