ಅಧ್ಯಾಯ ಹದಿನೆಂಟು
ದೀಕ್ಷಾಸ್ನಾನ ಮತ್ತು ದೇವರೊಂದಿಗಿನ ನಿಮ್ಮ ಸಂಬಂಧ
-
ಕ್ರೈಸ್ತ ದೀಕ್ಷಾಸ್ನಾನವನ್ನು ಹೇಗೆ ಕೊಡಲಾಗುತ್ತದೆ?
-
ದೀಕ್ಷಾಸ್ನಾನಕ್ಕೆ ಅರ್ಹರಾಗಲು ನೀವು ಯಾವ ಹೆಜ್ಜೆಗಳನ್ನು ತೆಗೆದುಕೊಳ್ಳುವುದು ಅಗತ್ಯ?
-
ಒಬ್ಬ ವ್ಯಕ್ತಿಯು ದೇವರಿಗೆ ಸಮರ್ಪಣೆ ಮಾಡಿಕೊಳ್ಳುವುದು ಹೇಗೆ?
-
ದೀಕ್ಷಾಸ್ನಾನ ಪಡೆದುಕೊಳ್ಳಲು ಯಾವ ವಿಶೇಷವಾದ ಕಾರಣವಿದೆ?
1. ಐಥಿಯೋಪ್ಯದ ಆಸ್ಥಾನದ ಅಧಿಕಾರಿಯೊಬ್ಬನು ದೀಕ್ಷಾಸ್ನಾನವನ್ನು ಮಾಡಿಸುವಂತೆ ಕೇಳಿಕೊಂಡದ್ದೇಕೆ?
“ಅಗೋ, ನೀರು; ನನಗೆ ದೀಕ್ಷಾಸ್ನಾನವಾಗುವದಕ್ಕೆ ಅಡ್ಡಿ ಏನು?” ಒಂದನೆಯ ಶತಮಾನದಲ್ಲಿ ಐಥಿಯೋಪ್ಯದ ಆಸ್ಥಾನದ ಅಧಿಕಾರಿಯೊಬ್ಬನು ಈ ಪ್ರಶ್ನೆಯನ್ನು ಕೇಳಿದನು. ಫಿಲಿಪ್ಪನೆಂಬ ಕ್ರೈಸ್ತನೊಬ್ಬನು ಯೇಸುವೇ ವಾಗ್ದತ್ತ ಮೆಸ್ಸೀಯನೆಂದು ಅವನಿಗೆ ರುಜುಪಡಿಸಿ ಅ. ಕೃತ್ಯಗಳು 8:26-37.
ತೋರಿಸಿದನು. ಶಾಸ್ತ್ರದಿಂದ ಏನು ಕಲಿತಿದ್ದನೊ ಅದರಿಂದ ಮನಮುಟ್ಟಿದವನಾಗಿ ಆ ಐಥಿಯೋಪ್ಯದವನು ಕ್ರಮಕೈಕೊಂಡನು. ತನಗೆ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಮನಸ್ಸಿದೆ ಎಂದು ಅವನು ತೋರಿಸಿದನು!—2. ನೀವು ದೀಕ್ಷಾಸ್ನಾನದ ಬಗ್ಗೆ ಏಕೆ ಗಂಭೀರವಾಗಿ ಯೋಚಿಸಬೇಕು?
2 ಈ ಪುಸ್ತಕದ ಹಿಂದಿನ ಅಧ್ಯಾಯಗಳನ್ನು ನೀವು ಒಬ್ಬ ಯೆಹೋವನ ಸಾಕ್ಷಿಯೊಂದಿಗೆ ಜಾಗರೂಕತೆಯಿಂದ ಅಧ್ಯಯನಮಾಡಿರುವಲ್ಲಿ ನೀವು ಹೀಗೆ ಕೇಳಲು ಸಿದ್ಧರಾಗಿರಬಹುದು: ‘ದೀಕ್ಷಾಸ್ನಾನ ಮಾಡಿಕೊಳ್ಳುವುದರಿಂದ ನನ್ನನ್ನು ಯಾವುದು ತಡೆಯುತ್ತದೆ?’ ಇಷ್ಟರಲ್ಲೇ ನೀವು, ಪರದೈಸಿನಲ್ಲಿ ನಿತ್ಯಜೀವದ ವಿಷಯದಲ್ಲಿ ಬೈಬಲ್ ಕೊಡುವ ವಾಗ್ದಾನದ ಕುರಿತು ಕಲಿತಿದ್ದೀರಿ. (ಲೂಕ 23:43; ಪ್ರಕಟನೆ 21:3, 4) ಮೃತರ ನಿಜವಾದ ಸ್ಥಿತಿಯ ಕುರಿತು ಮತ್ತು ಪುನರುತ್ಥಾನದ ನಿರೀಕ್ಷೆಯ ಕುರಿತೂ ನೀವು ಕಲಿತಿದ್ದೀರಿ. (ಪ್ರಸಂಗಿ 9:5; ಯೋಹಾನ 5:28, 29) ನೀವು ಯೆಹೋವನ ಸಾಕ್ಷಿಗಳೊಂದಿಗೆ ಅವರ ಕೂಟಗಳಲ್ಲಿ ಪ್ರಾಯಶಃ ಜೊತೆಗೂಡಿ, ಅವರು ಸತ್ಯಧರ್ಮವನ್ನು ಹೇಗೆ ಕಾರ್ಯರೂಪಕ್ಕೆ ಹಾಕುತ್ತಿದ್ದಾರೆಂದು ವ್ಯಕ್ತಿಪರವಾಗಿ ನೋಡಿರಬಹುದು. (ಯೋಹಾನ 13:35) ಅತಿ ಪ್ರಾಮುಖ್ಯವಾಗಿ, ನೀವು ಯೆಹೋವ ದೇವರೊಂದಿಗೆ ಒಂದು ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಲು ಆರಂಭಿಸಿರಲೂಬಹುದು.
3. (ಎ) ಯೇಸು ತನ್ನ ಹಿಂಬಾಲಕರಿಗೆ ಯಾವ ಆಜ್ಞೆಯನ್ನು ಕೊಟ್ಟನು? (ಬಿ) ನೀರಿನ ದೀಕ್ಷಾಸ್ನಾನವನ್ನು ಹೇಗೆ ಮಾಡಲಾಗುತ್ತದೆ?
3 ನೀವು ದೇವರನ್ನು ಸೇವಿಸಬಯಸುತ್ತೀರೆಂದು ಹೇಗೆ ತೋರಿಸಬಲ್ಲಿರಿ? ಯೇಸು ತನ್ನ ಹಿಂಬಾಲಕರಿಗೆ ಹೇಳಿದ್ದು: “ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ; ಅವರಿಗೆ . . . ದೀಕ್ಷಾಸ್ನಾನ ಮಾಡಿಸಿ.” (ಮತ್ತಾಯ 28:19) ಯೇಸು ತಾನೇ ನೀರಿನ ದೀಕ್ಷಾಸ್ನಾನ ಮಾಡಿಸಿಕೊಂಡು ಉತ್ತಮ ಮಾದರಿಯನ್ನಿಟ್ಟನು. ಅವನ ಮೇಲೆ ನೀರನ್ನು ಚಿಮುಕಿಸಲೂ ಇಲ್ಲ, ಇಲ್ಲವೆ ಸ್ವಲ್ಪ ನೀರನ್ನು ತಲೆಯ ಮೇಲೆ ಹೊಯ್ಯಲೂ ಇಲ್ಲ. (ಮತ್ತಾಯ 3:16) ‘ದೀಕ್ಷಾಸ್ನಾನ ಮಾಡಿಸು’ ಎಂಬ ಪದವು “ಅದ್ದು” ಎಂಬ ಅರ್ಥವುಳ್ಳ ಗ್ರೀಕ್ ಪದದಿಂದ ಬಂದಿದೆ. ಹೀಗೆ ಕ್ರೈಸ್ತ ದೀಕ್ಷಾಸ್ನಾನದ ಅರ್ಥವು ನೀರಿನಲ್ಲಿ ಪೂರ್ಣವಾಗಿ ಅದ್ದುವುದು ಇಲ್ಲವೆ ನಿಮಜ್ಜನ ಮಾಡುವುದು ಎಂದಾಗಿದೆ.
4. ನೀರಿನ ದೀಕ್ಷಾಸ್ನಾನವು ಏನನ್ನು ಸೂಚಿಸುತ್ತದೆ?
4 ಯೆಹೋವ ದೇವರೊಂದಿಗೆ ಒಂದು ಸಂಬಂಧವನ್ನು ಬೆಳೆಸಿಕೊಳ್ಳಲು ಬಯಸುವವರೆಲ್ಲರಿಗೆ ನೀರಿನ ದೀಕ್ಷಾಸ್ನಾನವು ಒಂದು ಆವಶ್ಯಕತೆಯಾಗಿದೆ. ದೀಕ್ಷಾಸ್ನಾನವು ದೇವರನ್ನು ಸೇವಿಸಲು ನಿಮಗಿರುವ ಬಯಕೆಯನ್ನು ಬಹಿರಂಗವಾಗಿ ಸೂಚಿಸುತ್ತದೆ. ಯೆಹೋವನ ಚಿತ್ತವನ್ನು ಮಾಡಲು ನೀವು ಸಂತೋಷಿಸುತ್ತೀರೆಂದು ಅದು ತೋರಿಸುತ್ತದೆ. (ಕೀರ್ತನೆ 40:7, 8) ಆದರೆ ದೀಕ್ಷಾಸ್ನಾನಕ್ಕೆ ಅರ್ಹರಾಗಲು ನೀವು ನಿಶ್ಚಿತ ಹೆಜ್ಜೆಗಳನ್ನು ತೆಗೆದುಕೊಳ್ಳತಕ್ಕದ್ದು.
ಜ್ಞಾನ ಮತ್ತು ನಂಬಿಕೆ ಅಗತ್ಯ
5. (ಎ) ದೀಕ್ಷಾಸ್ನಾನಕ್ಕೆ ಅರ್ಹರಾಗಲಿಕ್ಕಾಗಿ ತೆಗೆದುಕೊಳ್ಳಬೇಕಾದ ಪ್ರಥಮ ಹೆಜ್ಜೆ ಯಾವುದು? (ಬಿ) ಕ್ರೈಸ್ತ ಕೂಟಗಳು ಪ್ರಾಮುಖ್ಯವೇಕೆ?
5 ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳಲು ನೀವು ಈಗಾಗಲೇ ಆರಂಭಿಸಿದ್ದೀರಿ. ಹೇಗೆ? ಪ್ರಾಯಶಃ ಬೈಬಲಿನ ಕ್ರಮಬದ್ಧ ಅಧ್ಯಯನದಿಂದ ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಕುರಿತಾದ ಜ್ಞಾನವನ್ನು ಪಡೆದುಕೊಳ್ಳುವ ಮೂಲಕವೇ. (ಯೋಹಾನ 17:3) ಆದರೆ ಕಲಿಯಲಿಕ್ಕೆ ಇನ್ನೂ ಬಹಳಷ್ಟಿದೆ. ಕ್ರೈಸ್ತರಲ್ಲಿ ‘[ದೇವರ] ಚಿತ್ತದ ನಿಷ್ಕೃಷ್ಟ ಜ್ಞಾನವು ತುಂಬಿರ’ಬೇಕು. (ಕೊಲೊಸ್ಸೆ 1:9, NW) ಇದನ್ನು ಮಾಡಲು ನಿಮಗೆ ತುಂಬ ಸಹಾಯಮಾಡುವಂಥದ್ದು ಯೆಹೋವನ ಸಾಕ್ಷಿಗಳ ಸಭಾ ಕೂಟಗಳಿಗೆ ಹಾಜರಾಗುವುದೇ. ಇಂಥ ಕೂಟಗಳಿಗೆ ಉಪಸ್ಥಿತರಾಗುವುದು ಪ್ರಾಮುಖ್ಯ. (ಇಬ್ರಿಯ 10:24, 25) ಕೂಟಗಳಿಗೆ ಕ್ರಮವಾಗಿ ಹಾಜರಾಗುವುದು, ದೇವರ ಕುರಿತಾದ ನಿಮ್ಮ ಜ್ಞಾನವನ್ನು ಹೆಚ್ಚಿಸಲು ಸಹಾಯಮಾಡುವುದು.
6. ದೀಕ್ಷಾಸ್ನಾನಕ್ಕೆ ಅರ್ಹರಾಗಬೇಕಾದರೆ ಎಷ್ಟು ಬೈಬಲ್ ಜ್ಞಾನವು ನಿಮಗಿರಬೇಕು?
6 ದೀಕ್ಷಾಸ್ನಾನಕ್ಕೆ ಅರ್ಹರಾಗಲು ಬೈಬಲಿನಲ್ಲಿರುವುದೆಲ್ಲವೂ ನಿಮಗೆ ತಿಳಿದಿರಬೇಕಾಗಿಲ್ಲ ನಿಜ. ಐಥಿಯೋಪ್ಯದ ಆಸ್ಥಾನದ ಆ ಅಧಿಕಾರಿಗೆ ಸ್ವಲ್ಪ ಜ್ಞಾನವಿತ್ತೆಂಬುದು ನಿಶ್ಚಯ, ಆದರೆ ಶಾಸ್ತ್ರಗಳ ಕೆಲವು ಭಾಗಗಳನ್ನು ಅರ್ಥಮಾಡಿಕೊಳ್ಳಲು ಅವನಿಗೆ ಸಹಾಯವು ಬೇಕಾಗಿತ್ತು. (ಅ. ಕೃತ್ಯಗಳು 8:30, 31) ಅದೇ ರೀತಿ, ನಿಮಗೆ ಕಲಿತುಕೊಳ್ಳಲು ಇನ್ನೂ ತುಂಬ ವಿಷಯಗಳಿವೆ. ವಾಸ್ತವವೇನಂದರೆ, ನೀವು ದೇವರ ಕುರಿತಾಗಿ ಕಲಿತುಕೊಳ್ಳುವುದು ಎಂದಿಗೂ ಮುಗಿಯುವುದಿಲ್ಲ. (ಪ್ರಸಂಗಿ 3:11) ಆದರೂ, ನೀವು ದೀಕ್ಷಾಸ್ನಾನ ಹೊಂದುವುದಕ್ಕೆ ಮೊದಲು, ನಿಮಗೆ ಕಡಮೆಪಕ್ಷ ಬೈಬಲಿನ ಮೂಲಭೂತ ಬೋಧನೆಗಳಾದರೂ ಗೊತ್ತಿದ್ದು, ಅವನ್ನು ನೀವು ಅಂಗೀಕರಿಸಬೇಕು. (ಇಬ್ರಿಯ 5:12) ಇಂತಹ ಬೋಧನೆಗಳಲ್ಲಿ ಮೃತರ ಸ್ಥಿತಿಯೇನು ಎಂಬುದರ ಕುರಿತಾದ ಸತ್ಯ ಮತ್ತು ದೇವರ ಹೆಸರು ಹಾಗೂ ಆತನ ರಾಜ್ಯದ ಮಹತ್ವವನ್ನು ತಿಳಿದು ಅಂಗೀಕರಿಸುವುದು ಸೇರಿರುತ್ತದೆ.
7. ಬೈಬಲಿನ ಅಧ್ಯಯನವು ನಿಮ್ಮ ಮೇಲೆ ಯಾವ ಪರಿಣಾಮವನ್ನು ಬೀರಬೇಕು?
7 ಆದರೆ ಜ್ಞಾನವು ಮಾತ್ರ ಸಾಲದು. ಏಕೆಂದರೆ, “ನಂಬಿಕೆಯಿಲ್ಲದೆ ದೇವರನ್ನು ಮೆಚ್ಚಿಸುವದು ಅಸಾಧ್ಯ.” (ಇಬ್ರಿಯ 11:6) ಪುರಾತನ ನಗರವಾದ ಕೊರಿಂಥದಲ್ಲಿ ಕೆಲವರು ಕ್ರೈಸ್ತ ಸಂದೇಶವನ್ನು ಕೇಳಿಸಿಕೊಂಡಾಗ, ಅವರು “ನಂಬಿ ದೀಕ್ಷಾಸ್ನಾನಮಾಡಿಸಿಕೊಂಡರು” ಎಂದು ಬೈಬಲ್ ಹೇಳುತ್ತದೆ. (ಅ. ಕೃತ್ಯಗಳು 18:8) ತದ್ರೀತಿ, ಬೈಬಲಿನ ಅಧ್ಯಯನವು ನಿಮ್ಮಲ್ಲಿ, ಅದು ದೇವರ ಪ್ರೇರಿತ ವಾಕ್ಯವೆಂಬ ನಂಬಿಕೆಯನ್ನು ತುಂಬಿಸಬೇಕು. ದೇವರ ವಾಗ್ದಾನಗಳಲ್ಲಿ ಮತ್ತು ಯೇಸುವಿನ ಯಜ್ಞದ ರಕ್ಷಣಾ ಶಕ್ತಿಯಲ್ಲಿ ನಂಬಿಕೆಯಿಡುವಂತೆ ಬೈಬಲ್ ಅಧ್ಯಯನವು ನಿಮಗೆ ಸಹಾಯಮಾಡಬೇಕು.—ಯೆಹೋಶುವ 23:14; ಅ. ಕೃತ್ಯಗಳು 4:12; 2 ತಿಮೊಥೆಯ 3:16, 17.
ಬೈಬಲ್ ಸತ್ಯವನ್ನು ಇತರರಿಗೆ ಹಂಚುವುದು
8. ನೀವು ಕಲಿತಿರುವ ವಿಷಯಗಳನ್ನು ಇತರರೊಂದಿಗೆ ಹಂಚಿಕೊಳ್ಳುವಂತೆ ಯಾವುದು ನಿಮ್ಮನ್ನು ಪ್ರಚೋದಿಸುವುದು?
8 ನಿಮ್ಮ ಹೃದಯದಲ್ಲಿ ನಂಬಿಕೆಯು ಬೆಳೆಯುವಾಗ, ನೀವು ಕಲಿತಂಥ ವಿಷಯಗಳನ್ನು ನಿಮ್ಮಲ್ಲಿಯೇ ಇಟ್ಟುಕೊಳ್ಳುವುದನ್ನು ಕಷ್ಟಕರವಾಗಿ ಕಂಡುಕೊಳ್ಳುವಿರಿ. (ಯೆರೆಮೀಯ 20:9) ದೇವರ ಮತ್ತು ಆತನ ಉದ್ದೇಶಗಳ ಕುರಿತು ಇತರರೊಂದಿಗೆ ಮಾತಾಡಲು ನಿಮಗೆ ಬಲವಾದ ಪ್ರಚೋದನೆಯಾಗುವುದು.—2 ಕೊರಿಂಥ 4:13.
9, 10. (ಎ) ನೀವು ಬೈಬಲ್ ಸತ್ಯವನ್ನು ಯಾರೊಂದಿಗೆ ಹಂಚಿಕೊಳ್ಳಲು ಆರಂಭಿಸಬಹುದು? (ಬಿ) ಯೆಹೋವನ ಸಾಕ್ಷಿಗಳ ಸಂಘಟಿತ ಸಾರುವ ಕೆಲಸದಲ್ಲಿ ನೀವು ಭಾಗವಹಿಸಬಯಸುವಲ್ಲಿ ನೀವೇನು ಮಾಡಬೇಕು?
9 ನೀವು ಬೈಬಲ್ ಸತ್ಯವನ್ನು ಇತರರೊಂದಿಗೆ ಹಂಚಿಕೊಳ್ಳಲು ಆರಂಭಿಸಲಿಕ್ಕಾಗಿ, ಮೊದಲು ನಿಮ್ಮ ಸಂಬಂಧಿಕರು, ಸ್ನೇಹಿತರು, ನೆರೆಯವರು ಮತ್ತು ಜೊತೆಕೆಲಸಗಾರರೊಂದಿಗೆ ಅದರ ಕುರಿತಾಗಿ ಸಮಯೋಚಿತ ಜಾಣ್ಮೆಯಿಂದ ಮಾತಾಡಬಹುದು. ಮತ್ತು ಸಕಾಲದಲ್ಲಿ, ಯೆಹೋವನ ಸಾಕ್ಷಿಗಳ ಸಂಘಟಿತ ಸಾರುವ ಕೆಲಸದಲ್ಲಿ ನೀವು ಭಾಗವಹಿಸಬಯಸುವಿರಿ. ಆ ಹಂತದಲ್ಲಿ, ನಿಮಗೆ ಬೈಬಲನ್ನು ಬೋಧಿಸುತ್ತಿರುವ ಸಾಕ್ಷಿಯೊಂದಿಗೆ ಇದರ ಕುರಿತು ಸಂಕೋಚವಿಲ್ಲದೆ ಮಾತಾಡಿರಿ. ನೀವು ಸಾರ್ವಜನಿಕ ಸೇವೆಗೆ ಅರ್ಹರಾಗಿದ್ದೀರಿ ಎಂದು ತೋರುವುದಾದರೆ, ನೀವು ಮತ್ತು ನಿಮ್ಮ ಬೈಬಲ್ ಶಿಕ್ಷಕನು ಸಭಾ ಹಿರಿಯರೊಂದಿಗೆ ಕೂಡಿಬರುವ ಏರ್ಪಾಡುಗಳನ್ನು ಮಾಡಲಾಗುವುದು.
10 ಇದರಿಂದಾಗಿ, ದೇವರ ಮಂದೆಯನ್ನು ಕಾಯುವ ಕೆಲವು ಮಂದಿ ಕ್ರೈಸ್ತ ಹಿರಿಯರನ್ನು ನೀವು ಹೆಚ್ಚು ಉತ್ತಮವಾಗಿ ಪರಿಚಯಮಾಡಿಕೊಳ್ಳಲು ಸಾಧ್ಯವಾಗುವುದು. (ಅ. ಕೃತ್ಯಗಳು 20:28; 1 ಪೇತ್ರ 5:2, 3) ನಿಮಗೆ ಬೈಬಲಿನ ಮೂಲಭೂತ ಬೋಧನೆಗಳ ತಿಳಿವಳಿಕೆ ಇದೆ, ಅವುಗಳನ್ನು ನೀವು ನಂಬುತ್ತೀರಿ, ದೇವರ ಮೂಲತತ್ತ್ವಗಳಿಗನುಸಾರ ಜೀವಿಸುತ್ತಿದ್ದೀರಿ ಮತ್ತು ಯೆಹೋವನ ಸಾಕ್ಷಿಯಾಗಲು ನಿಮಗೆ ನಿಜವಾಗಿಯೂ ಮನಸ್ಸಿದೆ ಎಂದು ಈ ಹಿರಿಯರು ಗಮನಿಸುವಲ್ಲಿ, ನೀವು ಸುವಾರ್ತೆಯ ಅಸ್ನಾತ ಪ್ರಚಾರಕರಾಗಿ ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದೀರೆಂದು ಅವರು ನಿಮಗೆ ತಿಳಿಯಪಡಿಸುವರು.
11. ಸಾರ್ವಜನಿಕ ಶುಶ್ರೂಷೆಗೆ ಅರ್ಹರಾಗುವ ಮೊದಲು ಕೆಲವರು ಯಾವ ಬದಲಾವಣೆಗಳನ್ನು ಮಾಡಬೇಕಾದೀತು?
11 ಅಥವಾ ಈ ಹಿರಿಯರು, ನೀವು ಸಾರ್ವಜನಿಕ ಶುಶ್ರೂಷೆಗೆ ಅರ್ಹರಾಗಲು ನಿಮ್ಮ ಜೀವನಶೈಲಿ ಮತ್ತು ಅಭ್ಯಾಸಗಳಲ್ಲಿ ಇನ್ನೂ ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ ಎಂಬುದನ್ನು ಗಮನಿಸಬಹುದು. ಇದರಲ್ಲಿ, ಬೇರೆಯವರಿಗೆ ಗೊತ್ತಿಲ್ಲದೆ ಗುಪ್ತವಾಗಿಡಲ್ಪಟ್ಟಿರುವ ಕೆಲವು ರೂಢಿಗಳನ್ನು ನಿಲ್ಲಿಸುವುದು ಸೇರಿರಬಹುದು. ಆದುದರಿಂದ, ಅಸ್ನಾತ ಪ್ರಚಾರಕನಾಗಲು ಕೇಳಿಕೊಳ್ಳುವ ಮೊದಲೇ ನೀವು ಲೈಂಗಿಕ ಅನೈತಿಕತೆ, ಕುಡಿಕತನ ಮತ್ತು 1 ಕೊರಿಂಥ 6:9, 10; ಗಲಾತ್ಯ 5:19-21.
ಅಮಲೌಷಧದ ದುರುಪಯೋಗದಂತಹ ಗಂಭೀರ ಪಾಪಗಳಿಂದ ಮುಕ್ತರಾಗಬೇಕು.—ಪಶ್ಚಾತ್ತಾಪ ಮತ್ತು ಪರಿವರ್ತನೆ
12. ಪಶ್ಚಾತ್ತಾಪವು ಏಕೆ ಅಗತ್ಯವಾಗಿದೆ?
12 ನೀವು ದೀಕ್ಷಾಸ್ನಾನಕ್ಕೆ ಅರ್ಹರಾಗುವ ಮೊದಲು ಬೇರೆ ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳಬೇಕಾಗಿದೆ. ಅಪೊಸ್ತಲ ಪೇತ್ರನು ಹೇಳಿದ್ದು: “ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ.” (ಅ. ಕೃತ್ಯಗಳು 3:19) ಪಶ್ಚಾತ್ತಾಪಪಡುವುದೆಂದರೆ ನೀವು ಮಾಡಿರುವ ಯಾವುದೊ ತಪ್ಪಿಗಾಗಿ ಮನಃಪೂರ್ವಕವಾಗಿ ವಿಷಾದಿಸುವುದು ಎಂದು ಅರ್ಥ. ಒಬ್ಬನು ಅನೈತಿಕ ಜೀವನವನ್ನು ನಡೆಸಿರುವಲ್ಲಿ ಪಶ್ಚಾತ್ತಾಪಪಡುವುದು ಸ್ಪಷ್ಟವಾಗಿ ತಕ್ಕದಾಗಿರುತ್ತದೆ. ಆದರೆ ಒಬ್ಬನು ತುಲನಾತ್ಮಕವಾಗಿ ನೈತಿಕವಾಗಿ ಶುದ್ಧವಾದ ಜೀವನವನ್ನು ನಡೆಸಿರುವಲ್ಲಿ ಸಹ ಇದು ಆವಶ್ಯಕ. ಏಕೆ? ಏಕೆಂದರೆ ಮಾನವರೆಲ್ಲರೂ ಪಾಪಿಗಳಾಗಿದ್ದಾರೆ ಮತ್ತು ದೇವರ ಕ್ಷಮಾಪಣೆಯ ಅಗತ್ಯ ಅವರಿಗಿದೆ. (ರೋಮಾಪುರ 3:23; 5:12) ಬೈಬಲನ್ನು ಅಧ್ಯಯನಮಾಡುವ ಮೊದಲು ನಿಮಗೆ ದೇವರ ಚಿತ್ತವೇನೆಂಬುದು ತಿಳಿದಿರಲಿಲ್ಲ. ಹಾಗಿರುವಾಗ, ಆತನ ಚಿತ್ತಕ್ಕೆ ಪೂರ್ಣ ಹೊಂದಿಕೆಯಲ್ಲಿ ಜೀವಿಸಲು ನಿಮಗೆ ಹೇಗೆ ತಾನೇ ಸಾಧ್ಯವಿತ್ತು? ಈ ಕಾರಣದಿಂದ ಪಶ್ಚಾತ್ತಾಪವು ಅಗತ್ಯವಾಗಿದೆ.
13. ಪರಿವರ್ತನೆ ಎಂದರೇನು?
13 ಪಶ್ಚಾತ್ತಾಪದ ಬಳಿಕ ಪರಿವರ್ತನೆಯು ಇಲ್ಲವೆ ‘ತಿರಿಗಿಕೊಳ್ಳುವಿಕೆ’ ಇರತಕ್ಕದ್ದು. ವಿಷಾದಪಡುವುದಕ್ಕಿಂತಲೂ ಹೆಚ್ಚಿನದ್ದನ್ನು ನೀವು ಮಾಡಬೇಕು. ನೀವು ನಿಮ್ಮ ಹಿಂದಿನ ಜೀವನರೀತಿಯನ್ನು ತೊರೆದು ಇಂದಿನಿಂದ ಸರಿಯಾದುದನ್ನು ಮಾಡಲು ದೃಢನಿರ್ಧಾರವುಳ್ಳವರು ಆಗಿರುವುದು ಅಗತ್ಯ. ದೀಕ್ಷಾಸ್ನಾನ ಪಡೆದುಕೊಳ್ಳುವ ಮುಂಚೆ ಪಶ್ಚಾತ್ತಾಪ ಮತ್ತು ಪರಿವರ್ತನೆಗಳು ನೀವು ತೆಗೆದುಕೊಳ್ಳಲೇಬೇಕಾದ ಹೆಜ್ಜೆಗಳಾಗಿವೆ.
ವೈಯಕ್ತಿಕ ಸಮರ್ಪಣೆಯನ್ನು ಮಾಡಿಕೊಳ್ಳುವುದು
14. ದೀಕ್ಷಾಸ್ನಾನ ಪಡೆದುಕೊಳ್ಳುವ ಮೊದಲು ನೀವು ಯಾವ ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳತಕ್ಕದ್ದು?
14 ದೀಕ್ಷಾಸ್ನಾನ ಪಡೆದುಕೊಳ್ಳುವ ಮೊದಲು ತೆಗೆದುಕೊಳ್ಳಬೇಕಾದ ಇನ್ನೊಂದು ಪ್ರಮುಖ ಹೆಜ್ಜೆಯಿದೆ. ನೀವು ಯೆಹೋವ ದೇವರಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳಬೇಕು.
15, 16. ನಿಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವುದರ ಅರ್ಥವೇನು, ಮತ್ತು ಹಾಗೆ ಮಾಡಲು ಒಬ್ಬನನ್ನು ಯಾವುದು ಪ್ರಚೋದಿಸುವುದು?
15 ನೀವು ಮನಃಪೂರ್ವಕವಾಗಿ ಮಾಡುವ ಒಂದು ಪ್ರಾರ್ಥನೆಯಲ್ಲಿ ಯೆಹೋವ ದೇವರಿಗೆ ನಿಮ್ಮನ್ನೇ ಸಮರ್ಪಿಸಿಕೊಳ್ಳುವಾಗ, ಆತನಿಗೆ ನಿತ್ಯಕ್ಕೂ ಸಂಪೂರ್ಣ ಭಕ್ತಿಯನ್ನು ಧರ್ಮೋಪದೇಶಕಾಂಡ 6:15) ಆದರೆ ಒಬ್ಬನು ಹಾಗೆ ಮಾಡಲು ಏಕೆ ಬಯಸಾನು? ಒಬ್ಬ ಪುರುಷನು ಮದುವೆಯ ಉದ್ದೇಶದಿಂದ ಒಬ್ಬಾಕೆ ಸ್ತ್ರೀಯ ಪರಿಚಯಮಾಡಿಕೊಳ್ಳಲು ಆರಂಭಿಸಿದ್ದಾನೆಂದು ಭಾವಿಸೋಣ. ಅವನು ಆಕೆಯ ಕುರಿತು ಎಷ್ಟು ಹೆಚ್ಚು ತಿಳಿದುಕೊಂಡು ಆಕೆಯಲ್ಲಿರುವ ಉತ್ಕೃಷ್ಟ ಗುಣಗಳನ್ನು ನೋಡುತ್ತಾನೊ ಅಷ್ಟೇ ಹೆಚ್ಚಾಗಿ ಆಕೆಯ ಕಡೆಗೆ ಆಕರ್ಷಿತನಾಗುತ್ತಾನೆ. ಸಕಾಲದಲ್ಲಿ, ಅವನು ಆಕೆಗೆ ತನ್ನನ್ನು ಮದುವೆಯಾಗುವಂತೆ ಕೇಳುವುದು ಸ್ವಾಭಾವಿಕ. ಮದುವೆಯಾಗುವುದು ಅವನ ಮೇಲೆ ಹೆಚ್ಚಿನ ಜವಾಬ್ದಾರಿಗಳನ್ನು ತರುವುದು ನಿಜವಾದರೂ, ಪ್ರೀತಿಯು ಅವನು ಆ ಪ್ರಮುಖ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ಅವನನ್ನು ಪ್ರಚೋದಿಸುವುದು.
ಕೊಡುವಿರೆಂದು ವಚನ ಕೊಡುತ್ತೀರಿ. (16 ನೀವು ಯೆಹೋವನ ಪರಿಚಯಮಾಡಿಕೊಂಡು ಆತನನ್ನು ಪ್ರೀತಿಸಲು ತೊಡಗುವಾಗ, ಯಾವ ಷರತ್ತೂ ಇಲ್ಲದೆ ಆತನನ್ನು ಸೇವಿಸಲು ಇಲ್ಲವೆ ಯಾವ ಮಿತಿಗಳನ್ನೂ ಇಡದೆ ಆತನನ್ನು ಆರಾಧಿಸಲು ಪ್ರಚೋದಿಸಲ್ಪಡುತ್ತೀರಿ. ದೇವರ ಪುತ್ರನಾದ ಯೇಸು ಕ್ರಿಸ್ತನನ್ನು ಹಿಂಬಾಲಿಸಲು ಬಯಸುವ ಯಾವನೂ ತನ್ನನ್ನು ‘ನಿರಾಕರಿಸಿ’ಕೊಳ್ಳಬೇಕು. (ಮಾರ್ಕ 8:34) ನಮ್ಮ ವೈಯಕ್ತಿಕ ಬಯಕೆಗಳು ಮತ್ತು ಗುರಿಗಳು ನಾವು ದೇವರಿಗೆ ತೋರಿಸಬೇಕಾದ ಪೂರ್ಣ ವಿಧೇಯತೆಗೆ ಅಡ್ಡಬರದಂತೆ ಖಚಿತಪಡಿಸಿಕೊಳ್ಳುವ ಮೂಲಕ ನಾವು ನಮ್ಮನ್ನು ನಿರಾಕರಿಸಿಕೊಳ್ಳುತ್ತೇವೆ. ಹಾಗಾದರೆ, ನೀವು ದೀಕ್ಷಾಸ್ನಾನ ಪಡೆದುಕೊಳ್ಳುವ ಮುಂಚೆ ಯೆಹೋವ ದೇವರ ಚಿತ್ತವನ್ನು ಮಾಡುವುದು ನಿಮ್ಮ ಜೀವನದ ಪ್ರಮುಖ ಉದ್ದೇಶವಾಗಿರತಕ್ಕದ್ದು.—1 ಪೇತ್ರ 4:2.
ತಪ್ಪಿಬೀಳುವ ಭಯವನ್ನು ಗೆಲ್ಲುವುದು
17. ದೇವರಿಗೆ ಸಮರ್ಪಣೆ ಮಾಡಿಕೊಳ್ಳುವುದರಿಂದ ಕೆಲವರು ಏಕೆ ಹಿಮ್ಮೆಟ್ಟಬಹುದು?
17 ಕೆಲವರು ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳುವುದರಿಂದ ಹಿಮ್ಮೆಟ್ಟುವುದು, ಅವರು ಅಂತಹ ಗಂಭೀರವಾದ ಹೆಜ್ಜೆಯನ್ನು ತೆಗೆದುಕೊಳ್ಳಲು ತುಸು ಭಯಪಡುವುದರಿಂದಲೇ. ತಾವು ಸಮರ್ಪಿತ ಕ್ರೈಸ್ತರಾಗುವಲ್ಲಿ ದೇವರಿಗೆ ಲೆಕ್ಕ ಒಪ್ಪಿಸಬೇಕಾಗುವುದೆಂಬ ಭಯ ಅವರಿಗಿರಬಹುದು. ತಾವು ತಪ್ಪಿಬಿದ್ದು ಯೆಹೋವನನ್ನು ನಿರಾಶೆಗೊಳಿಸುವೆವೆಂದು ಅವರು ಹೆದರುವುದರಿಂದ, ಆತನಿಗೆ ಸಮರ್ಪಣೆ ಮಾಡಿಕೊಳ್ಳದಿರುವುದೇ ಉತ್ತಮವೆಂದು ಅವರು ನೆನಸುತ್ತಾರೆ.
18. ಯೆಹೋವನಿಗೆ ಸಮರ್ಪಣೆ ಮಾಡಿಕೊಳ್ಳಲು ನಿಮ್ಮನ್ನು ಯಾವುದು ಪ್ರಚೋದಿಸಬಲ್ಲದು?
18 ನೀವು ಯೆಹೋವನನ್ನು ಪ್ರೀತಿಸಲು ಕಲಿಯುವಾಗ, ಆತನಿಗೆ ಸಮರ್ಪಿಸಿಕೊಳ್ಳುವಂತೆ ಮತ್ತು ಆ ಸಮರ್ಪಣೆಗೆ ಹೊಂದಿಕೆಯಲ್ಲಿ ಜೀವಿಸಲು ಸರ್ವ ಪ್ರಯತ್ನವನ್ನು ಮಾಡುವಂತೆ ಪ್ರಚೋದಿಸಲ್ಪಡುವಿರಿ. (ಪ್ರಸಂಗಿ 5:4) ಸಮರ್ಪಣೆ ಮಾಡಿಕೊಂಡ ಬಳಿಕ “ಆತನಿಗೆ ಯೋಗ್ಯರಾಗಿ ನಡೆದು ಎಲ್ಲಾ ವಿಧದಲ್ಲಿ ಆತನನ್ನು ಸಂತೋಷ”ಪಡಿಸಲು ನೀವು ನಿಶ್ಚಯವಾಗಿಯೂ ಬಯಸುವಿರಿ. (ಕೊಲೊಸ್ಸೆ 1:10) ದೇವರ ಮೇಲೆ ನಿಮಗಿರುವ ಪ್ರೀತಿಯ ಕಾರಣ, ಆತನ ಚಿತ್ತವನ್ನು ಮಾಡುವುದು ತೀರ ಕಷ್ಟಕರವೆಂದು ನೀವು ನೆನಸಲಿಕ್ಕಿಲ್ಲ. “ದೇವರ ಮೇಲಣ ಪ್ರೀತಿ ಏನಂದರೆ ಆತನ ಆಜ್ಞೆಗಳನ್ನು ಕೈಕೊಂಡು ನಡೆಯುವದೇ. ಆತನ ಆಜ್ಞೆಗಳು ಭಾರವಾದವುಗಳಲ್ಲ” ಎಂದು ಬರೆದ ಅಪೊಸ್ತಲ ಯೋಹಾನನ ಮಾತುಗಳೊಂದಿಗೆ ನೀವೂ ಸಮ್ಮತಿಸುವಿರಿ ಎಂಬುದು ನಿಶ್ಚಯ.—1 ಯೋಹಾನ 5:3.
19. ದೇವರಿಗೆ ಸಮರ್ಪಣೆ ಮಾಡಿಕೊಳ್ಳುವ ವಿಷಯದಲ್ಲಿ ನೀವೇಕೆ ಭಯಪಡಬೇಕಾಗಿಲ್ಲ?
19 ಯೆಹೋವನಿಗೆ ನಿಮ್ಮನ್ನು ಸಮರ್ಪಿಸಿಕೊಳ್ಳಲು ನೀವು ಪರಿಪೂರ್ಣರಾಗಿರಬೇಕಾಗಿಲ್ಲ. ನಿಮ್ಮ ಇತಿಮಿತಿಗಳನ್ನು ಯೆಹೋವನು ಬಲ್ಲವನಾಗಿರುವುದರಿಂದ, ನೀವು ಮಾಡಲು ಶಕ್ತರಾಗಿರುವುದಕ್ಕಿಂತ ಹೆಚ್ಚಿನದ್ದನ್ನು ಆತನು ಎಂದಿಗೂ ನಿರೀಕ್ಷಿಸುವುದಿಲ್ಲ. (ಕೀರ್ತನೆ 103:14) ನೀವು ಸಫಲರಾಗಬೇಕೆಂದು ಆತನು ಬಯಸುತ್ತಾನೆ ಮತ್ತು ಆತನು ನಿಮ್ಮನ್ನು ಬೆಂಬಲಿಸಿ, ನಿಮಗೆ ಸಹಾಯಮಾಡುವನು. (ಯೆಶಾಯ 41:10) ನೀವು ಪೂರ್ಣಹೃದಯದಿಂದ ಯೆಹೋವನ ಮೇಲೆ ಭರವಸವಿಡುವಲ್ಲಿ, “ಆತನೇ ನಿಮ್ಮ ಮಾರ್ಗಗಳನ್ನು ಸರಾಗಮಾಡುವನು” ಎಂದು ನೀವು ನಿಶ್ಚಯದಿಂದಿರಬಲ್ಲಿರಿ.—ಜ್ಞಾನೋಕ್ತಿ 3:5, 6.
ದೀಕ್ಷಾಸ್ನಾನ ಪಡೆಯುವ ಮೂಲಕ ನಿಮ್ಮ ಸಮರ್ಪಣೆಯನ್ನು ಸಂಕೇತಿಸುವುದು
20. ನೀವು ಯೆಹೋವನಿಗೆ ಮಾಡುವ ಸಮರ್ಪಣೆಯು ಒಂದು ಖಾಸಗಿ ವಿಷಯವಾಗಿ ಉಳಿಯಬಾರದೇಕೆ?
20 ನಾವು ಈಗ ತಾನೇ ಚರ್ಚಿಸಿರುವ ವಿಷಯಗಳ ಕುರಿತು ಯೋಚಿಸುವುದು, ನೀವು ಪ್ರಾರ್ಥನೆಯಲ್ಲಿ ಯೆಹೋವನಿಗೆ ವೈಯಕ್ತಿಕವಾದ ಸಮರ್ಪಣೆ ಮಾಡಿಕೊಳ್ಳುವಂತೆ ಸಹಾಯ ನೀಡಬಹುದು. ದೇವರನ್ನು ನಿಜವಾಗಿಯೂ ಪ್ರೀತಿಸುವ ಪ್ರತಿಯೊಬ್ಬನು, ರೋಮಾಪುರ 10:10, NW) ನೀವು ಅದನ್ನು ಮಾಡುವುದು ಹೇಗೆ?
‘ರಕ್ಷಣೆಗಾಗಿ ಬಹಿರಂಗ ಘೋಷಣೆಯನ್ನು’ ಸಹ ಮಾಡತಕ್ಕದ್ದು. (21, 22. ನೀವು ನಿಮ್ಮ ನಂಬಿಕೆಯ ‘ಬಹಿರಂಗ ಘೋಷಣೆಯನ್ನು’ ಹೇಗೆ ಮಾಡಬಲ್ಲಿರಿ?
21 ನಿಮಗೆ ದೀಕ್ಷಾಸ್ನಾನ ಪಡೆಯಲು ಮನಸ್ಸಿದೆಯೆಂಬುದನ್ನು ನಿಮ್ಮ ಸಭೆಯ ಹಿರಿಯರ ಮಂಡಲಿಯ ಸಂಯೋಜಕನಿಗೆ ತಿಳಿಸಿರಿ. ಆಗ ಅವನು ಬೈಬಲಿನ ಮೂಲಭೂತ ಬೋಧನೆಗಳನ್ನು ಆವರಿಸುವ ಅನೇಕ ಪ್ರಶ್ನೆಗಳನ್ನು ಕೆಲವು ಮಂದಿ ಹಿರಿಯರು ನಿಮ್ಮೊಂದಿಗೆ ಪುನರ್ವಿಮರ್ಶಿಸುವಂತೆ ಏರ್ಪಡಿಸುವನು. ನೀವು ಅರ್ಹರೆಂದು ಆ ಹಿರಿಯರು ಒಪ್ಪಿಕೊಳ್ಳುವಲ್ಲಿ, ದೊರೆಯಲಿರುವ ಮುಂದಿನ ಸಂದರ್ಭದಲ್ಲಿ ನೀವು ದೀಕ್ಷಾಸ್ನಾನ ಹೊಂದಬಹುದೆಂದು ಅವರು ನಿಮಗೆ ತಿಳಿಸುವರು. * ಸಾಮಾನ್ಯವಾಗಿ ದೀಕ್ಷಾಸ್ನಾನದ ಸಂದರ್ಭಗಳಲ್ಲಿ ದೀಕ್ಷಾಸ್ನಾನದ ಅರ್ಥವನ್ನು ಪುನರ್ವಿಮರ್ಶಿಸುವ ಒಂದು ಭಾಷಣವು ಕೊಡಲ್ಪಡುತ್ತದೆ. ಆ ಬಳಿಕ ದೀಕ್ಷಾಸ್ನಾನದ ಎಲ್ಲ ಅಭ್ಯರ್ಥಿಗಳು ಎದ್ದು ನಿಂತು ಎರಡು ಸರಳ ಪ್ರಶ್ನೆಗಳಿಗೆ ಉತ್ತರ ಕೊಡುವಂತೆ ಅವರನ್ನು ಆಮಂತ್ರಿಸಲಾಗುತ್ತದೆ. ಇದು ಅವರು ತಮ್ಮ ನಂಬಿಕೆಯ ಕುರಿತು ಬಾಯಿಮಾತಿನ ‘ಬಹಿರಂಗ ಘೋಷಣೆ’ ಮಾಡುವ ಒಂದು ವಿಧವಾಗಿದೆ.
22 ದೇವರಿಗೆ ಸಮರ್ಪಿಸಿಕೊಂಡ ವ್ಯಕ್ತಿಯಾಗಿ ಮತ್ತು ಈಗ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೆಂದು ನಿಮ್ಮನ್ನು ಬಹಿರಂಗವಾಗಿ ಗುರುತಿಸುವುದು ಈ ದೀಕ್ಷಾಸ್ನಾನವೇ. ದೀಕ್ಷಾಸ್ನಾನಾರ್ಥಿಗಳು ಯೆಹೋವನಿಗೆ ಸಮರ್ಪಣೆ ಮಾಡಿಕೊಂಡಿದ್ದಾರೆಂದು ಬಹಿರಂಗವಾಗಿ ತೋರಿಸುವ ಸಲುವಾಗಿ ಅವರನ್ನು ನೀರಿನಲ್ಲಿ ಪೂರ್ಣವಾಗಿ ನಿಮಜ್ಜನಮಾಡಲಾಗುತ್ತದೆ.
ನಿಮ್ಮ ದೀಕ್ಷಾಸ್ನಾನದ ಅರ್ಥ
23. ‘ತಂದೆಯ, ಮಗನ, ಪವಿತ್ರಾತ್ಮದ ಹೆಸರಿನಲ್ಲಿ’ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದರ ಅರ್ಥವೇನು?
23 ತನ್ನ ಶಿಷ್ಯರು ‘ತಂದೆಯ, ಮಗನ, ಪವಿತ್ರಾತ್ಮದ ಹೆಸರಿನಲ್ಲಿ ದೀಕ್ಷಾಸ್ನಾನ’ ಮಾಡಿಸಲ್ಪಡುವರೆಂದು ಯೇಸು ಹೇಳಿದನು. (ಮತ್ತಾಯ 28:19) ದೀಕ್ಷಾಸ್ನಾನಾರ್ಥಿಯು ಯೆಹೋವ ದೇವರ ಮತ್ತು ಯೇಸು ಕ್ರಿಸ್ತನ ಅಧಿಕಾರವನ್ನು ಒಪ್ಪಿಕೊಳ್ಳುತ್ತಾನೆಂದು ಇದರ ಅರ್ಥ. (ಕೀರ್ತನೆ 83:18; ಮತ್ತಾಯ 28:18) ದೇವರ ಪವಿತ್ರಾತ್ಮ ಅಥವಾ ಕಾರ್ಯಕಾರಿ ಶಕ್ತಿಯ ಪಾತ್ರ ಮತ್ತು ಕಾರ್ಯವನ್ನು ಸಹ ಅವನು ಮಾನ್ಯಮಾಡುತ್ತಾನೆ.—ಗಲಾತ್ಯ 5:22, 23; 2 ಪೇತ್ರ 1:21.
24, 25. (ಎ) ದೀಕ್ಷಾಸ್ನಾನವು ಏನನ್ನು ಸಂಕೇತಿಸುತ್ತದೆ? (ಬಿ) ಯಾವ ಪ್ರಶ್ನೆಗೆ ಉತ್ತರ ದೊರೆಯಬೇಕಾಗಿದೆ?
24 ಆದರೂ ದೀಕ್ಷಾಸ್ನಾನವು ಕೇವಲ ಒಂದು ಸ್ನಾನವಲ್ಲ. ಅದು ಅತಿ ಪ್ರಾಮುಖ್ಯವಾದ ಕೀರ್ತನೆ 25:14.
ವಿಷಯವೊಂದರ ಪ್ರತೀಕವಾಗಿದೆ. ನೀರಿನ ಒಳಗೆ ಹೋಗುವುದು, ನೀವು ನಿಮ್ಮ ಹಿಂದಿನ ಜೀವನಮಾರ್ಗದ ಸಂಬಂಧದಲ್ಲಿ ಸತ್ತಿದ್ದೀರೆಂಬುದನ್ನು ಸೂಚಿಸುತ್ತದೆ. ನೀರಿನೊಳಗಿಂದ ಮೇಲಕ್ಕೆತ್ತಲ್ಪಡುವುದು, ನೀವೀಗ ದೇವರ ಚಿತ್ತವನ್ನು ಮಾಡಲಿಕ್ಕಾಗಿ ಜೀವಿಸುತ್ತಿದ್ದೀರಿ ಎಂಬುದನ್ನು ಸೂಚಿಸುತ್ತದೆ. ನೀವು ಮಾಡಿರುವ ಸಮರ್ಪಣೆಯು ಒಂದು ಕಾರ್ಯಕ್ಕಾಗಲಿ ಉದ್ದೇಶಕ್ಕಾಗಲಿ ಬೇರೆ ಮಾನವರಿಗಾಗಲಿ ಇಲ್ಲವೆ ಒಂದು ಸಂಘಟನೆಗಾಗಲಿ ಅಲ್ಲ, ಬದಲಾಗಿ ಯೆಹೋವ ದೇವರಿಗೆ ತಾನೇ ಮಾಡಿದ ಸಮರ್ಪಣೆಯಾಗಿದೆ ಎಂಬುದನ್ನೂ ನೆನಪಿನಲ್ಲಿಡಿರಿ. ನಿಮ್ಮ ಸಮರ್ಪಣೆ ಮತ್ತು ದೀಕ್ಷಾಸ್ನಾನವು ದೇವರೊಂದಿಗೆ ಅತಿ ನಿಕಟವಾದ ಸ್ನೇಹ, ಅಂದರೆ ಆತನೊಂದಿಗಿನ ಅತ್ಯಾಪ್ತವಾದ ಸಂಬಂಧದ ಆರಂಭವಾಗಿದೆ.—25 ದೀಕ್ಷಾಸ್ನಾನವು ರಕ್ಷಣೆಯ ಖಾತ್ರಿಯನ್ನು ಕೊಡುವುದಿಲ್ಲ. “ಮನೋಭೀತಿಯಿಂದ ನಡುಗುವವರಾಗಿ ನಿಮ್ಮ ನಿಮ್ಮ ರಕ್ಷಣೆಯನ್ನು ಸಾಧಿಸಿಕೊಳ್ಳಿರಿ” ಎಂದು ಅಪೊಸ್ತಲ ಪೌಲನು ಬರೆದನು. (ಫಿಲಿಪ್ಪಿ 2:12) ದೀಕ್ಷಾಸ್ನಾನವು ಕೇವಲ ಆರಂಭವಾಗಿದೆ ಅಷ್ಟೇ. ಆದುದರಿಂದ, ನೀವು ದೇವರ ಪ್ರೀತಿಯಲ್ಲಿ ಹೇಗೆ ಉಳಿಯಬಲ್ಲಿರಿ ಎಂಬುದೇ ಈಗ ಏಳುವ ಪ್ರಶ್ನೆಯಾಗಿದೆ. ಇದಕ್ಕೆ ನಮ್ಮ ಕೊನೆಯ ಅಧ್ಯಾಯವು ಉತ್ತರವನ್ನು ಒದಗಿಸುವುದು.
^ ಪ್ಯಾರ. 21 ಯೆಹೋವನ ಸಾಕ್ಷಿಗಳು ಏರ್ಪಡಿಸುವ ವಾರ್ಷಿಕ ಸಮ್ಮೇಳನಗಳಲ್ಲಿ ಮತ್ತು ಅಧಿವೇಶನಗಳಲ್ಲಿ ದೀಕ್ಷಾಸ್ನಾನದ ಏರ್ಪಾಡುಗಳು ಮಾಡಲ್ಪಡುತ್ತವೆ.