ಇತರರು ಹೇಗೆ ಸಹಾಯ ಮಾಡಬಲ್ಲರು?
“ನಾನು ಏನಾದರೂ ಮಾಡಸಾಧ್ಯವಿರುವುದು ಇದ್ದರೆ, ನನಗೆ ತಿಳಿಸಿದರೆ ಸಾಕು.” ಹೊಸತಾಗಿ ವಿರಹಿಯಾಗಿರುವ ಸ್ನೇಹಿತನಿಗೊ, ಸಂಬಂಧಿಗೊ ನಮ್ಮಲ್ಲಿ ಅನೇಕರು ಮೇಲಿನಂತೆ ಹೇಳುತ್ತೇವೆ. ಹೌದು, ನಾವು ಯಥಾರ್ಥವಾಗಿ ಹಾಗೆಯೇ ಅರ್ಥೈಸುತ್ತೇವೆಂಬುದು ಖರೆ. ಸಹಾಯಿಸಲು ನಾವು ಏನನ್ನೂ ಮಾಡಿಯೇವು. ಆದರೆ ವಿರಹಿಯು ನಮ್ಮನ್ನು ಕರೆದು, “ನೀನು ನನಗೆ ಸಹಾಯಿಸಲು ಇದನ್ನು ಮಾಡಬೇಕೆಂದು ನಾನು ಯೋಚಿಸಿದ್ದೇನೆ,” ಎಂದು ಹೇಳುತ್ತಾನೊ? ಸಾಧಾರಣವಾಗಿ ಹೇಳುವುದಿಲ್ಲ. ದುಃಖಿಸುತ್ತಿರುವ ಒಬ್ಬನಿಗೆ ನಾವು ನಿಜವಾಗಿಯೂ ನೆರವಾಗಿ ಅವನ ದುಃಖಶಮನ ಮಾಡಬೇಕಾಗಿರುವಲ್ಲಿ ನಾವು ಯಾವುದೋ ಆರಂಭಿಕ ಹೆಜ್ಜೆಯನ್ನು ತೆಗೆದುಕೊಳ್ಳಬೇಕಾಗಿ ಬಂದೀತು.
ಒಂದು ಬೈಬಲ್ ಜ್ಞಾನೋಕ್ತಿಯು ನುಡಿಯುವುದು: “ಸಮಯೋಚಿತವಾದ ಮಾತುಗಳು ಬೆಳ್ಳಿಯ ನಕಾಸಿಯಲ್ಲಿ ಖಚಿತವಾದ ಬಂಗಾರದ ಹಣ್ಣುಗಳಿಗೆ ಸಮಾನ.” (ಜ್ಞಾನೋಕ್ತಿ 15:23; 25:11) ಏನು ಹೇಳಬೇಕು, ಹೇಳಬಾರದು, ಏನು ಮಾಡಬೇಕು, ಮಾಡಬಾರದು ಎಂದು ತಿಳಿಯುವುದರಲ್ಲಿ ವಿವೇಕವಿದೆ. ಕೆಲವು ವಿರಹಿಗಳಾದ ವ್ಯಕ್ತಿಗಳು ಸಹಾಯಕರವೆಂದು ಕಂಡುಕೊಂಡ ಹಲವು ಶಾಸ್ತ್ರಾಧಾರಿತ ಸೂಚನೆಗಳು ಇಲ್ಲಿವೆ.
ಏನು ಮಾಡಬೇಕು. . .
ಕಿವಿಗೊಡಿರಿ: “ಕಿವಿಗೊಡುವುದರಲ್ಲಿ ತೀವ್ರವಾಗಿ” ಇರ್ರಿ ಎಂದು ಯಾಕೋಬ 1:19 ಹೇಳುತ್ತದೆ. ನೀವು ಮಾಡಬಲ್ಲ ಅತ್ಯಂತ ಸಹಾಯಕಾರಿಯಾದ ವಿಷಯಗಳಲ್ಲಿ ಒಂದು, ವಿರಹಿಗೆ ಕಿವಿಗೊಡುವ ಮೂಲಕ ಅವನ ನೋವಿನಲ್ಲಿ ಭಾಗಿಯಾಗುವುದೇ. ಕೆಲವು ವಿರಹಿಗಳಾದ ವ್ಯಕ್ತಿಗಳಿಗೆ ಮೃತರಾಗಿರುವ ತಮ್ಮ ಪ್ರಿಯರ ಕುರಿತು, ಮರಣವನ್ನುಂಟುಮಾಡಿದ ಅಪಘಾತ ಅಥವಾ ಕಾಯಿಲೆಯ ಕುರಿತು, ಅಥವಾ ಮರಣದಿಂದೀಚೆಗೆ ತಮ್ಮ ಅನಿಸಿಕೆಗಳ ಕುರಿತು ಮಾತನಾಡಬೇಕಾಗುವ ಅವಶ್ಯವಿದ್ದೀತು. ಹೀಗಿರುವುದರಿಂದ ಹೀಗೆ ಕೇಳಿರಿ: “ಅದರ ಕುರಿತು ಮಾತನಾಡುವ ಮನಸ್ಸು ನಿಮಗಿದೆಯೆ?” ಅವರು ನಿರ್ಣಯಿಸಲಿ. ತನ್ನ ತಂದೆ ತೀರಿಕೊಂಡ ಸಮಯವನ್ನು ಜ್ಞಾಪಿಸಿಕೊಂಡು, ಒಬ್ಬ ಯುವಕನು ಹೇಳಿದ್ದು: “ಏನು ಸಂಭವಿಸಿತೆಂದು ಇತರರು ಕೇಳಿದಾಗ ಮತ್ತು ಅವರು ನಿಜವಾಗಿಯೂ ಕಿವಿಗೊಟ್ಟು ಕೇಳಿದಾಗ ಅದು ನನಗೆ ನಿಜವಾಗಿ ಸಹಾಯ ಮಾಡಿತು.” ಉತ್ತರಗಳನ್ನು ಅಥವಾ ಪರಿಹಾರಗಳನ್ನು ಒದಗಿಸಲೇಬೇಕೆಂಬ ಅನಿಸಿಕೆ ಇಲ್ಲದವರಾಗಿ ತಾಳ್ಮೆಯಿಂದ ಮತ್ತು ಸಹಾನುಭೂತಿಯಿಂದ ಕಿವಿಗೊಡಿರಿ. ಅವರು ಯಾವಾವುದರಲ್ಲಿ ಪಾಲಿಗರಾಗಲು ಬಯಸುತ್ತಾರೊ ಅದನ್ನು ವ್ಯಕ್ತಪಡಿಸುವಂತೆ ಬಿಡಿರಿ.
ಪುನರಾಶ್ವಾಸನೆಯನ್ನು ಒದಗಿಸಿರಿ: ಅವರಿಗೆ ಏನೇನು ಮಾಡಸಾಧ್ಯವಿತ್ತೊ ಅದೆಲ್ಲವನ್ನು (ಅಥವಾ ಯಾವುದು ಸತ್ಯ ಮತ್ತು ಸಕಾರಾತ್ಮಕ ಎಂದು ನಿಮಗೆ ತಿಳಿದಿದೆಯೊ ಅದನ್ನು) ಅವರು ಮಾಡಿದರೆಂದು ಅವರಿಗೆ ಭರವಸೆ ಕೊಡಿರಿ. ಅವರ ಅನಿಸಿಕೆಗಳು—ಶೋಕ, ಕೋಪ, ಅಪರಾಧ ಪ್ರಜ್ಞೆ ಅಥವಾ ಬೇರೆ ಕೆಲವು ಭಾವೋದ್ರೇಕಗಳು—ಅಸಾಮಾನ್ಯವಾದವುಗಳಾಗಿರಲಿಕ್ಕಿಲ್ಲವೆಂದು ಅವರಿಗೆ ಪುನರಾಶ್ವಾಸನೆ ಕೊಡಿರಿ. ಅದೇ ರೀತಿಯ ನಷ್ಟದಿಂದ ಸಾಫಲ್ಯವಾಗಿ ಚೇತರಿಸಿಕೊಂಡ ನಿಮಗೆ ಪರಿಚಯವಿರುವ ಇತರರ ಕುರಿತು ಅವರಿಗೆ ಹೇಳಿರಿ. ಇಂತಹ “ಸವಿನುಡಿಯು” “ಎಲುಬಿಗೆ ಕ್ಷೇಮ,” ಎನ್ನುತ್ತದೆ ಜ್ಞಾನೋಕ್ತಿ 16:24.—1 ಥೆಸಲೊನೀಕ 5:11, 14.
ದೊರಕಿಸಿಕೊಳ್ಳಿರಿ: ಸ್ನೇಹಿತರೂ ಸಂಬಂಧಿಗಳೂ ಉಪಸ್ಥಿತರಾಗಿರುವ ಮೊದಲ ದಿನಗಳಲ್ಲಿ ಮಾತ್ರವಲ್ಲ, ಇತರರು ತಮ್ಮ ವಾಡಿಕೆಯ ದಿನಚರಿಗೆ ಹಿಂದಿರುಗಿಹೋದ ಬಳಿಕ, ತಿಂಗಳುಗಳ ತರುವಾಯವೂ ಜ್ಞಾನೋಕ್ತಿ 17:17, NW) “ನಮ್ಮ ಸಂಜೆಗಳು ಕಾರ್ಯಗಳಿಂದ ತುಂಬಿರುವಂತೆ, ಹೀಗೆ ನಾವಿಬ್ಬರೇ ಮನೆಯಲ್ಲಿ ಹೆಚ್ಚು ಸಮಯ ಕಳೆಯದಂತೆ ನಮ್ಮ ಮಿತ್ರರು ನೋಡಿಕೊಂಡರು,” ಎಂದು ತನ್ನ ಮಗುವನ್ನು ಕಾರ್ ಅಪಘಾತದಲ್ಲಿ ಕಳೆದುಕೊಂಡ ಟೆರೆಸ್ಯಾ ವಿವರಿಸುತ್ತಾಳೆ. “ನಮಗಿದ್ದ ಶೂನ್ಯ ಅನಿಸಿಕೆಯನ್ನು ನಾವು ನಿಭಾಯಿಸಲು ಇದು ಸಹಾಯ ಮಾಡಿತು.” ಮುಂದಿನ ಅನೇಕ ವರ್ಷಗಳಲ್ಲಿ, ವಿವಾಹ ವಾರ್ಷಿಕೋತ್ಸವ ಅಥವಾ ಮರಣ ದಿನದಂತಹ ವಾರ್ಷಿಕೋತ್ಸವ ದಿನಗಳು ಬದುಕಿರುವವರಿಗೆ ಒತ್ತಡದ ಸಮಯವಾಗಿರಬಲ್ಲವು. ಇಂತಹ ತಾರೀಖುಗಳನ್ನು, ಅವು ಬರುವಾಗ, ಅಗತ್ಯವಿರುವಲ್ಲಿ ಸಹಾನುಭೂತಿಯ ಬೆಂಬಲಕ್ಕಾಗಿ ನೀವು ನಿಮ್ಮನ್ನು ದೊರಕಿಸಿಕೊಳ್ಳುವಂತೆ ನಿಮ್ಮ ಕ್ಯಾಲೆಂಡರಿನಲ್ಲಿ ಏಕೆ ಗುರುತಿಸಿಡಬಾರದು?
ನಿಮ್ಮನ್ನು ದೊರಕಿಸಿಕೊಳ್ಳಿರಿ. ಈ ರೀತಿಯಲ್ಲಿ ನೀವು “ನಿಜ ಸಂಗಾತಿ,” “ಆಪತ್ತಿನ” ಸಮಯದಲ್ಲಿ ಮಿತ್ರನ ಬಳಿಯಲ್ಲೇ ನಿಲ್ಲುವ ರೀತಿಯ ವ್ಯಕ್ತಿಯಾಗುವಿರಿ. (ಸೂಕ್ತವಾದ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿರಿ: ಮಾಡಲು ಹೊರಗಿನ ಕೆಲಸಗಳಿವೆಯೊ? ಮಕ್ಕಳನ್ನು ನೋಡಿಕೊಳ್ಳಲು ಯಾರ ಅವಶ್ಯವಾದರೂ ಇದೆಯೆ? ಭೇಟಿ ಕೊಡುವ ಸ್ನೇಹಿತರಿಗೂ ಸಂಬಂಧಿಗಳಿಗೂ ವಸತಿಗೆ ಸ್ಥಳವಿದೆಯೆ? ಇತ್ತೀಚೆಗೆ ವಿರಹಿಗಳಾದ ವ್ಯಕ್ತಿಗಳು ಅನೇಕ ವೇಳೆ ಎಷ್ಟು ಸ್ತಬ್ಧರಾಗಿ ಹೋಗುತ್ತಾರೆಂದರೆ ಇತರರು ಹೇಗೆ ಸಹಾಯಮಾಡಸಾಧ್ಯವಿದೆ ಎಂದು ಹೇಳುವದಂತೂ ಇರಲಿ, ತಾವು ಏನು ಮಾಡುವುದು ಅವಶ್ಯವೆಂದೂ ತಿಳಿಯದವರಾಗಿರುತ್ತಾರೆ. ಆದುದರಿಂದ ಒಂದು ನಿಜ ಆವಶ್ಯಕತೆಯನ್ನು ನೀವು ನೋಡುವಲ್ಲಿ, ಅದು ಕೇಳಲ್ಪಡುವ ತನಕ ಕಾಯಬೇಡಿರಿ; ನೀವೇ ಆರಂಭದ ಹೆಜ್ಜೆ ತೆಗೆದುಕೊಳ್ಳಿರಿ. (1 ಕೊರಿಂಥ 10:24; ಹೋಲಿಸಿ 1 ಯೋಹಾನ 3:17, 18.) ಗಂಡ ಸತ್ತಿದ್ದ ಒಬ್ಬಾಕೆ ಸ್ತ್ರೀ ಜ್ಞಾಪಿಸಿಕೊಂಡದ್ದು: “ಅನೇಕರು, ‘ನಾನು ಮಾಡಸಾಧ್ಯವಿರುವುದು ಏನಾದರೂ ಇದ್ದರೆ, ನನಗೆ ತಿಳಿಸಿ,’ ಎಂದು ಹೇಳಿದರು. ಆದರೆ ಒಬ್ಬ ಸ್ನೇಹಿತೆ ಕೇಳಲಿಲ್ಲ. ಅವಳು ಮಲಗುವ ಕೋಣೆಯೊಳಗೆ ಹೋಗಿ, ಹಾಸಿಗೆಯ ಬಟ್ಟೆಗಳನ್ನು ಕಳಚಿ, ಅವನ ಮರಣದಿಂದ ಕೊಳೆಯಾಗಿದ್ದ ಬಟ್ಟೆಗಳನ್ನು ತೊಳೆದಳು. ಇನ್ನೊಬ್ಬಳು ಒಂದು ತೊಟ್ಟಿ, ನೀರು ಮತ್ತು ಶುಚಿಮಾಡುವ ಸಾಮಾನುಗಳನ್ನು ತೆಗೆದುಕೊಂಡು ನನ್ನ ಗಂಡ ಯಾವುದರ ಮೇಲೆ ಕಾರಿದ್ದನೋ ಆ ರತ್ನಗಂಬಳಿಯನ್ನು ಶುಚಿಮಾಡಿದಳು. ಕೆಲವು ವಾರಗಳು ಕಳೆದ ಮೇಲೆ ಸಭೆಯ ಹಿರಿಯರಲ್ಲಿ ಒಬ್ಬನು ತನ್ನ ಕೆಲಸದ ಪೋಷಾಕು ಮತ್ತು ಉಪಕರಣಗಳೊಂದಿಗೆ ಬಂದು, ‘ಇಲ್ಲಿ ಯಾವ ವಸ್ತುವಾದರೂ ರಿಪೇರಿಗೆ ಸಿದ್ಧವಾಗಿದೆಯೆಂದು ನನಗೆ ಗೊತ್ತು. ಅದೇನು ಹೇಳಿ,’ ಎಂದು ಕೇಳಿದನು. ಒಂದೇ ತಿರುಗಣಿಯಲ್ಲಿ ನೇತಾಡುತ್ತಿದ್ದ ಬಾಗಿಲನ್ನು ಮತ್ತು ಒಂದು ಎಲೆಕ್ಟ್ರಿಕಲ್ ಸಾಮಾನನ್ನು ರಿಪೇರಿ ಮಾಡಿದ್ದಕ್ಕಾಗಿ ಆ ಮನುಷ್ಯನು ನನ್ನ ಹೃದಯಕ್ಕೆ ಎಷ್ಟು ಪ್ರಿಯನು!”—ಹೋಲಿಸಿ ಯಾಕೋಬ 1:27.
ಆತಿಥ್ಯ ಮಾಡುವವರಾಗಿರಿ: “ಸತ್ಕಾರ ಮಾಡುವದನ್ನು ಮರೆಯಬೇಡಿರಿ,” ಎಂದು ಬೈಬಲು ನಮಗೆ ಜ್ಞಾಪಕ ಹುಟ್ಟಿಸುತ್ತದೆ. (ಇಬ್ರಿಯ 13:2) ನಾವು ವಿಶೇಷವಾಗಿ ದುಃಖಿಸುತ್ತಿರುವವರಿಗೆ ಸತ್ಕಾರ ಮಾಡಲು ನೆನಪಿಸಿಕೊಳ್ಳಬೇಕು. “ಯಾವಾಗಲಾದರೂ ಬನ್ನಿ” ಎಂದು ಹೇಳಿ ಆಮಂತ್ರಿಸುವ ಬದಲಿಗೆ, ಒಂದು ದಿನ ಮತ್ತು ಸಮಯವನ್ನು ಗೊತ್ತು ಮಾಡಿರಿ. ಅವರು ನಿರಾಕರಿಸುವಲ್ಲಿ, ಸುಲಭವಾಗಿ ನಿರಾಶರಾಗಬೇಡಿ. ಸ್ವಲ್ಪ ಮೃದು ಪ್ರೋತ್ಸಾಹ ಅಗತ್ಯವಿದ್ದೀತು. ಅವರು ಇತರರ ಮುಂದೆ ತಮ್ಮ ಭಾವೋದ್ರೇಕದ ನಿಯಂತ್ರಣವನ್ನು ಕಳೆದುಕೊಂಡೇವೆಂಬ ಭಯದಿಂದ ನಿಮ್ಮ ಆಮಂತ್ರಣವನ್ನು ಪ್ರಾಯಶಃ ನಿರಾಕರಿಸಿದರು. ಅಥವಾ ಅಂತಹ ಸಮಯದಲ್ಲಿ ತಾವು ಒಂದು ಊಟ ಮತ್ತು ಸಹವಾಸದಲ್ಲಿ ಆನಂದಿಸುತ್ತಿದ್ದೇವೆಂಬ ಅಪರಾಧ ಪ್ರಜ್ಞೆಯಿಂದ ಅವರಿರಬಹುದು. ಬೈಬಲಿನಲ್ಲಿ ಹೇಳಿರುವ ಲುದ್ಯ ಎಂಬ ಸತ್ಕಾರ ಸ್ವಭಾವದ ಸ್ತ್ರೀಯನ್ನು ನೆನಪಿಸಿಕೊಳ್ಳಿರಿ. ಆಕೆಯ ಮನೆಗೆ ಆಮಂತ್ರಿಸಲ್ಪಟ್ಟ ಬಳಿಕ, ಲೂಕನು ಹೇಳುವುದು, “ಆಕೆ ನಾವು ಬಂದೇ ಬರುವಂತೆ ಮಾಡಿದಳು.”—ಅ. ಕೃತ್ಯಗಳು 16:15, NW.
ತಾಳಿಕೊಳ್ಳುವವರೂ ಅರ್ಥ ಮಾಡಿಕೊಳ್ಳುವವರೂ ಆಗಿರಿ: ವಿರಹಿಗಳು ಮೊದಲಾಗಿ ಏನಾದರೂ ಹೇಳುವಲ್ಲಿ ಹೆಚ್ಚು ಆಶ್ಚರ್ಯಪಡುವುದು ಬೇಡ. ಅವರು ಕೋಪ ಮತ್ತು ಅಪರಾಧ ಪ್ರಜ್ಞೆಯುಳ್ಳವರಾಗಿರಬಹುದೆಂಬುದು ಜ್ಞಾಪಕದಲ್ಲಿರಲಿ. ಭಾವೂದ್ರೇಕದ ಕೆರಳು ನಿಮಗೆ ಸಂಬೋಧಿಸಲ್ಪಡುವಲ್ಲಿ, ನೀವು ಕೋಪದಿಂದ ಪ್ರತಿವರ್ತನೆ ಕೊಲೊಸ್ಸೆ 3:12, 13.
ತೋರಿಸದಿರಲು ಒಳನೋಟ ಮತ್ತು ತಾಳ್ಮೆ ಅಗತ್ಯವಿರುವುದು. “ಕನಿಕರ ದಯೆ ದೀನಭಾವ ಸಾತ್ವಿಕತ್ವ ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ,” ಎಂದು ಬೈಬಲು ಶಿಫಾರಸ್ಸು ಮಾಡುತ್ತದೆ.—ಪತ್ರ ಬರೆಯಿರಿ: ಸಂತಾಪಸೂಚಕ ಪತ್ರ ಅಥವಾ ಸಹಾನುಭೂತಿಯ ಕಾರ್ಡು—ಇವುಗಳ ಮೌಲ್ಯವನ್ನು ಅನೇಕ ವೇಳೆ ಅಲಕ್ಷಿಸಲಾಗುತ್ತದೆ. ಇದರಿಂದ ಆಗುವ ಪ್ರಯೋಜನವೊ? ತನ್ನ ತಾಯಿಯನ್ನು ಕ್ಯಾನ್ಸರಿಗೆ ಕಳೆದುಕೊಂಡ ಸಿಂಡೀ ಉತ್ತರ ಕೊಡುವುದು: “ಒಬ್ಬ ಸ್ನೇಹಿತೆ ಒಂದು ಅಂದವಾದ ಪತ್ರ ಬರೆದಳು. ಅದು ನನಗೆ ನಿಜವಾಗಿಯೂ ಸಹಾಯ ಮಾಡಿತು ಏಕೆಂದರೆ ನಾನು ಅದನ್ನು ಪುನಃ ಪುನಃ ಓದಸಾಧ್ಯವಿತ್ತು.” ಇಂತಹ ಪ್ರೋತ್ಸಾಹನೆಯ ಪತ್ರ ಅಥವಾ ಕಾರ್ಡನ್ನು “ಸಂಕ್ಷೇಪವಾಗಿ” ರಚಿಸಿ ಬರೆಯಬಹುದು, ಆದರೆ ಅದು ನಿಮ್ಮ ಹೃದಯದಿಂದ ಬರಬೇಕು. (ಇಬ್ರಿಯ 13:22) ನಿಮಗೆ ಚಿಂತೆಯಿದೆ ಮತ್ತು ಮೃತನ ಸಂಬಂಧದಲ್ಲಿ ನೀವು ಒಂದು ವಿಶೇಷ ಸ್ಮರಣೆಯಲ್ಲಿ ಭಾಗಿಯಾಗಿದ್ದೀರಿ ಎಂದು ಅದು ಹೇಳಸಾಧ್ಯವಿದೆ, ಇಲ್ಲವೆ ಮೃತನಾದ ವ್ಯಕ್ತಿಯಿಂದ ನಿಮ್ಮ ಜೀವನ ಹೇಗೆ ಸ್ಪರ್ಶಿಸಲ್ಪಟ್ಟಿದೆ ಎಂಬುದನ್ನು ಅದು ತೋರಿಸಸಾಧ್ಯವಿದೆ.
ಅವರೊಂದಿಗೆ ಪ್ರಾರ್ಥಿಸಿರಿ: ವಿರಹಿಗಳಿಗಾಗಿ ಮತ್ತು ಅವರೊಂದಿಗೆ ಮಾಡುವ ನಿಮ್ಮ ಪ್ರಾರ್ಥನೆಗಳ ಬೆಲೆಯನ್ನು ಕಡಮೆಯಾಗಿ ಎಣಿಸಬೇಡಿರಿ. “ನೀತಿವಂತನ ಅತ್ಯಾಸಕ್ತಿಯುಳ್ಳ ವಿಜ್ಞಾಪನೆಯು ಬಹು ಬಲವಾಗಿದೆ,” ಎನ್ನುತ್ತದೆ ಬೈಬಲು. (ಯಾಕೋಬ 5:16) ದೃಷ್ಟಾಂತಕ್ಕೆ, ಅವರ ಪರವಾಗಿ ನೀವು ಪ್ರಾರ್ಥಿಸುವುದನ್ನು ಕೇಳುವುದು ಅಪರಾಧ ಪ್ರಜ್ಞೆಯಂತಹ ನಕಾರಾತ್ಮಕ ಅನಿಸಿಕೆಗಳನ್ನು ಶಮನಗೊಳಿಸಲು ಸಹಾಯ ಮಾಡಬಲ್ಲದು.—ಯಾಕೋಬ 5:13-15 ಹೋಲಿಸಿ.
ಮಾಡಬಾರದ ಸಂಗತಿಗಳು. . .
ಏನು ಹೇಳಬೇಕು ಅಥವಾ ಮಾಡಬೇಕು ಎಂದು ತಿಳಿಯದಿರುವ ಕಾರಣದಿಂದ ದೂರವಿರಬೇಡಿರಿ: ‘ಅವರೀಗ ತಾವಾಗಿಯೇ ಇರುವುದು ಅಗತ್ಯವೆಂಬುದು ನನಗೆ ಖಾತ್ರಿ,’ ಎಂದು ನಾವು ಹೇಳಿಕೊಳ್ಳಬಹುದು. ಆದರೆ ಪ್ರಾಯಶಃ ಸತ್ಯ ವಿಚಾರವೇನಂದರೆ ನಾವು ತಪ್ಪಾದ ಸಂಗತಿಯನ್ನು ಮಾಡುವ ಅಥವಾ ಹೇಳುವ ಕುರಿತು ಭಯಪಡುವುದರಿಂದ ದೂರವಿರುತ್ತಿದ್ದೇವೆ. ಆದರೂ, ಮಿತ್ರರು, ಸಂಬಂಧಿಗಳು ಅಥವಾ ಜೊತೆ ವಿಶ್ವಾಸಿಗಳು ತಮ್ಮಿಂದ ತಪ್ಪಿಸಿಕೊಳ್ಳುವುದು ವಿರಹಿಯನ್ನು ಇನ್ನೂ ಹೆಚ್ಚು ಒಂಟಿಗನಾಗಿ ಮಾಡಿ, ಅವನ ವೇದನೆಗೆ ಕೂಡಿಸಬಹುದು. ಮಾತುಗಳಲ್ಲಿ ಮತ್ತು ಕ್ರಿಯೆಗಳಲ್ಲಿ ಅತಿ ದಯೆಯವುಗಳು ಅನೇಕ ವೇಳೆ ತೀರ ಸರಳವಾದವುಗಳೇ ಎಂಬುದು ನೆನಪಿರಲಿ. (ಎಫೆಸ 4:32) ನಿಮ್ಮ ಉಪಸ್ಥಿತಿಯೇ ಒಂದು ಪ್ರೋತ್ಸಾಹನೆಯ ಮೂಲವಾಗಬಲ್ಲದು. (ಅ. ಕೃತ್ಯಗಳು 28:15 ಹೋಲಿಸಿ.) ತನ್ನ ಮಗಳು ಸತ್ತ ದಿನವನ್ನು ಟೆರೆಸ್ಯಾ ಜ್ಞಾಪಿಸಿಕೊಂಡು ಹೇಳುವುದು: “ಒಂದು ತಾಸಿನೊಳಗೆ ಆಸ್ಪತ್ರೆಯ ಸಾರ್ವಜನಿಕಾಂಗಣ ಸ್ನೇಹಿತರಿಂದ ತುಂಬಿಹೋಗಿತ್ತು; ಎಲ್ಲ ಹಿರಿಯರು ಮತ್ತು ಅವರ ಹೆಂಡತಿಯರು ಅಲ್ಲಿದ್ದರು. ಸ್ತ್ರೀಯರಲ್ಲಿ ಕೆಲವರು ಕೂದಲು ಗುಂಗುರಾಗಿಸುವ ಕ್ಲಿಪ್ಪುಗಳನ್ನಿಟ್ಟುಕೊಂಡೇ ಬಂದಿದ್ದರು, ಕೆಲವರು ತಮ್ಮ ಕೆಲಸದ ಪೋಷಾಕಿನಲ್ಲಿದ್ದರು. ಅವರು ಎಲ್ಲವನ್ನೂ ಬಿಟ್ಟು ಬಂದರು. ಅವರಲ್ಲಿ ಅನೇಕರು, ತಮಗೆ ಏನು ಹೇಳಬೇಕೆಂದು ತಿಳಿಯದು ಎಂದು ನಮಗಂದರು, ಆದರೆ ಅದು ದೊಡ್ಡ ಸಂಗತಿಯಾಗಿರಲಿಲ್ಲ, ಅವರು ಬಂದದ್ದೇ ಮಹತ್ವದ್ದಾಗಿತ್ತು.”
ದುಃಖಿಸುವುದನ್ನು ನಿಲ್ಲಿಸಲಿಕ್ಕಾಗಿ ಅವರ ಮೇಲೆ ಒತ್ತಡ ಹಾಕಬೇಡಿರಿ: ‘ನೋಡಮ್ಮ, ಅಳಬೇಡ,’ ಎಂದು ನಾವು ಹೇಳಬಯಸೇವು. ಆದರೆ ಕಣ್ಣೀರನ್ನು ಹರಿಯಲು ಬಿಡುವುದೇ ಹೆಚ್ಚು ಉತ್ತಮವಾಗಿದ್ದೀತು. “ವಿರಹಿಗಳು ತಮ್ಮ ಭಾವವನ್ನು ತೋರಿಸಿ ಅನಿಸಿಕೆಗಳನ್ನು ಹೊರತರುವುದು ಪ್ರಾಮುಖ್ಯವೆಂದು ನನ್ನ ಯೋಚನೆ,” ಎನ್ನುತ್ತಾಳೆ ಕ್ಯಾತ್ರಿನ್, ತನ್ನ ಗಂಡನ ಮರಣವನ್ನು ಜ್ಞಾಪಿಸಿಕೊಳ್ಳುತ್ತಾ. ಅವರಿಗೆ ಹೇಗನಿಸಬೇಕು ಎಂದು ಇತರರಿಗೆ ಹೇಳುವ ಪ್ರವೃತ್ತಿಯನ್ನು ತಡೆದು ಹಿಡಿಯಿರಿ. ಮತ್ತು ಅವರ ಅನಿಸಿಕೆಗಳನ್ನು ಕಾಪಾಡಲು ನೀವು ನಿಮ್ಮ ಅನಿಸಿಕೆಗಳನ್ನು ಅಡಗಿಸಿಡಬೇಕು ಎಂದು ಭಾವಿಸಬೇಡಿರಿ. ಬದಲಿಗೆ, “ಅಳುವವರ ಸಂಗಡ ಅಳಿರಿ,” ಎಂದು ಶಿಫಾರಸ್ಸು ಮಾಡುತ್ತದೆ ಬೈಬಲು.—ರೋಮಾಪುರ 12:15.
ಮೃತನ ಬಟ್ಟೆ ಅಥವಾ ಸ್ವಂತ ವಸ್ತುಗಳನ್ನು ತೆಗೆದು ಬಿಡಲು ಅವರು ಸಿದ್ಧರಾಗುವ ಮೊದಲೇ ಬೇಗನೆ ಸಲಹೆ ಕೊಡಬೇಡಿರಿ: ಅವರು ನೆನಪಿಗೆ ಬರಿಸುವ ವಸ್ತುಗಳನ್ನು, ಅವು ಹೇಗೋ ದುಃಖವನ್ನು ಲಂಬಿಸುವ ಕಾರಣದಿಂದ ತೆಗೆದುಬಿಡುವುದು ಹೆಚ್ಚು ಉತ್ತಮವೆಂದು ನಮಗನಿಸಬಹುದು. ಆದರೆ, “ಕಣ್ಣಿಗೆ ಮರೆ, ಮನಸ್ಸಿಗೂ ಮರೆ” ಎಂಬ ನುಡಿ ಇಲ್ಲಿ ಅನ್ವಯಿಸಲಿಕ್ಕಿಲ್ಲ. ವಿರಹಿಯಾದ ವ್ಯಕ್ತಿ ಮೃತನನ್ನು ನಿಧಾನವಾಗಿ ಬಿಟ್ಟುಬಿಡುವ ಅಗತ್ಯವಿರಬಹುದು. ತನ್ನ ಎಳೆಯ ಮಗನಾದ ಯೋಸೇಫನು ಕಾಡು ಮೃಗವೊಂದರಿಂದ ಕೊಲ್ಲಲ್ಪಟ್ಟಿದ್ದಾನೆಂದು ನಂಬುವಂತೆ ನಡೆಸಲ್ಪಟ್ಟಾಗ ಮೂಲಪಿತ ಯಾಕೋಬನ ಪ್ರತಿಕ್ರಿಯೆಯ ಬೈಬಲ್ ವರ್ಣನೆಯನ್ನು ಜ್ಞಾಪಿಸಿಕೊಳ್ಳಿರಿ. ಯೋಸೇಫನ ರಕ್ತದ ಕಲೆಗಳಿದ್ದ ಉದ್ದ ಅಂಗಿಯು ಯಾಕೋಬನಿಗೆ ನೀಡಲ್ಪಟ್ಟಾಗ, ಅವನು “ತನ್ನ ಮಗನಿಗಾಗಿ ಬಹು ದಿನಗಳ ವರೆಗೂ ಹಂಬಲಿಸುತ್ತಿದ್ದನು. ಅವನ ಗಂಡುಮಕ್ಕಳೂ ಹೆಣ್ಣುಮಕ್ಕಳೂ ಎಲ್ಲರೂ ದುಃಖಶಮನ ಮಾಡುವದಕ್ಕೆ ಪ್ರಯತ್ನಿಸಿದಾಗ್ಯೂ ಅವನು ಶಾಂತಿಯನ್ನು” ಹೊಂದಲಿಲ್ಲ.—ಆದಿಕಾಂಡ 37:31-35.
ಜ್ಞಾನೋಕ್ತಿ 12:18) ಒಂದು ಮಗು ಇನ್ನೊಂದನ್ನು ಎಂದಿಗೂ ಪುನರ್ಭರ್ತಿ ಮಾಡಲಾರದು. ಏಕೆ? ಏಕೆಂದರೆ ಪ್ರತಿಯೊಂದು ಮಗು ಅಸದೃಶವಾಗಿದೆ.
‘ನಿನಗೆ ಇನ್ನೊಂದು ಮಗುವಾಗಸಾಧ್ಯವಿದೆ,’ ಎಂದು ಹೇಳಬೇಡಿ: “ನನಗೆ ಇನ್ನೊಂದು ಮಗುವಾಗಸಾಧ್ಯವಿದೆ ಎಂದು ಹೇಳಿದ ಜನರ ಮೇಲೆ ನಾನು ಅಸಮಾಧಾನಗೊಂಡೆ,” ಎಂದು ತನ್ನ ಒಂದು ಮಗುವನ್ನು ಮರಣದಲ್ಲಿ ಕಳೆದುಕೊಂಡ ಒಬ್ಬ ತಾಯಿ ಜ್ಞಾಪಿಸಿಕೊಳ್ಳುತ್ತಾಳೆ. ಅವರ ಹೇತು ಒಳ್ಳೆಯದು, ಆದರೆ ದುಃಖಿಸುತ್ತಿರುವ ತಾಯಿಗೆ, ಸತ್ತ ಮಗುವನ್ನು ಪುನರ್ಭರ್ತಿ ಮಾಡಸಾಧ್ಯವಿದೆ ಎಂಬ ವಿಷಯವು ‘ಕತ್ತಿಯ ಹಾಗೆ ತಿವಿಯ’ ಬಲ್ಲದು. (ಅಗಲಿರುವವನ ಪ್ರಸ್ತಾಪವನ್ನು ಎತ್ತುವುದರಿಂದ ಅನಿವಾರ್ಯವಾಗಿ ದೂರವಿರಬೇಡಿರಿ: “ಅನೇಕ ಜನರು ನನ್ನ ಮಗ ಜಿಮಿಯ ಹೆಸರನ್ನು ಎತ್ತುತ್ತಿರಲಿಲ್ಲ ಅಥವಾ ಅವನ ವಿಷಯ ಮಾತಾಡುತ್ತಿರಲಿಲ್ಲ,” ಎಂದು ಜ್ಞಾಪಿಸಿಕೊಳ್ಳುತ್ತಾಳೆ ಒಬ್ಬಾಕೆ ತಾಯಿ. “ಇತರರು ಹಾಗೆ ಮಾಡಿದಾಗ ನನಗೆ ತುಸು ನೋವಾಯಿತೆಂದು ನಾನು ಒಪ್ಪಿಕೊಳ್ಳಲೇ ಬೇಕು.” ಆದುದರಿಂದ ಮೃತನ ಹೆಸರು ಎದ್ದುಬರುವಾಗ ವಿಷಯವನ್ನು ಬದಲಾಯಿಸುವ ಅಗತ್ಯವಿಲ್ಲ. ಆ ವ್ಯಕ್ತಿಯ ಪ್ರಿಯನ ಕುರಿತು ಮಾತಾಡುವುದು ಅವನಿಗೆ ಅವಶ್ಯವೊ ಎಂದು ಅವನನ್ನು ಕೇಳಿರಿ. (ಯೋಬ 1:18, 19 ಮತ್ತು 10:1 ಹೋಲಿಸಿ.) ಅಗಲಿರುವವರನ್ನು ತಮಗೆ ಮೆಚ್ಚುಗೆಯವನನ್ನಾಗಿ ಮಾಡಿದ ಅವನ ವಿಶೇಷ ಗುಣಗಳನ್ನು ಸ್ನೇಹಿತರು ಹೇಳುವಾಗ ಕೇಳುವುದನ್ನು ಕೆಲವು ವಿರಹಿಗಳು ಗಣ್ಯಮಾಡುತ್ತಾರೆ.—ಹೋಲಿಸಿ ಅ. ಕೃತ್ಯಗಳು 9:36-39.
‘ಅದು ಒಳಿತಿಗಾಗಿಯೆ ಆಯಿತು,’ ಎಂದು ತ್ವರಿತವಾಗಿ ಹೇಳಬೇಡಿ: ಮರಣದ ವಿಷಯದಲ್ಲಿ ಸಕಾರಾತ್ಮಕವಾದ ಯಾವುದನ್ನೋ ಕಂಡುಹಿಡಿಯಲು ಪ್ರಯತ್ನಿಸುವುದು ದುಃಖಿಸುತ್ತಿರುವ ‘ಖಿನ್ನರಿಗೆ’ ಸದಾ ‘ಶಮನವನ್ನು’ ತರುವುದಿಲ್ಲ. (1 ಥೆಸಲೊನೀಕ 5:14) ತನ್ನ ತಾಯಿ ಸತ್ತ ಸಮಯವನ್ನು ಜ್ಞಾಪಿಸಿಕೊಳ್ಳುತ್ತಾ ಒಬ್ಬ ಯುವ ಸ್ತ್ರೀ ಹೇಳಿದ್ದು: “ಇತರರು, ‘ಆಕೆ ಕಷ್ಟಾನುಭವಪಡುತ್ತಿಲ್ಲ’ ಅಥವಾ, ‘ಕನಿಷ್ಠ ಪಕ್ಷ ಆಕೆಗೆ ಶಾಂತಿಯಾದರೂ ಇದೆ,’ ಎಂದು ಹೇಳುತ್ತಿದ್ದರು. ಆದರೆ ನನಗೆ ಅದನ್ನು ಕೇಳುವುದು ಇಷ್ಟವಿರಲಿಲ್ಲ.” ಇಂತಹ ಹೇಳಿಕೆಗಳು ಬದುಕಿರುವವರಿಗೆ ಅವರು ದುಃಖಿಸಬಾರದು ಅಥವಾ ಅವರ ನಷ್ಟವು ಗಮನಾರ್ಹವಲ್ಲವೆಂಬ ಸೂಚನೆಯನ್ನು ಕೊಡಬಹುದು. ಆದರೂ ಅವರು ತಮ್ಮ ಪ್ರಿಯನ ಅಗಲಿಕೆಗೆ ತೀರ ವಿಷಾದಪಡುವ ಕಾರಣ ಬಲು ದುಃಖಿಗಳಾಗಿರಬಹುದು.
‘ನಿನಗೆ ಹೇಗನಿಸುತ್ತದೆದು ನನಗೆ ಗೊತ್ತು,’ ಎಂದು ಹೇಳದಿರುವುದು ಒಳ್ಳೆಯದು: ನಿಮಗೆ ನಿಜವಾಗಿ ಗೊತ್ತುಂಟೊ? ದೃಷ್ಟಾಂತಕ್ಕೆ, ಒಬ್ಬ ಹೆತ್ತವರಿಗೆ ತಮ್ಮ ಮಗು ಸಾಯುವಾಗ ಹೇಗನಿಸುತ್ತದೆಂದು, ನಿಮಗೆ ಅಂತಹ ಅನುಭವವಾಗಿಲ್ಲದಿರುವಲ್ಲಿ ಗೊತ್ತಿರುವುದು ಸಾಧ್ಯವೊ? ಮತ್ತು ಒಂದು ವೇಳೆ ನಿಮಗೆ ಆಗಿದ್ದರೂ, ನಿಮಗೆ ಅನಿಸಿದಷ್ಟೇ ನಿಷ್ಕೃಷ್ಟವಾಗಿ ಇತರರಿಗೆ ಅನಿಸಲಿಕ್ಕಿಲ್ಲವೆಂದು ಗ್ರಹಿಸಿಕೊಳ್ಳಿರಿ. (ಪ್ರಲಾಪಗಳು 1:12 ಹೋಲಿಸಿ.) ಇನ್ನೊಂದು ಪಕ್ಕದಲ್ಲಿ, ಸಮಂಜಸವೆಂದು ಕಂಡುಬರುವಲ್ಲಿ, ನಿಮ್ಮ ಪ್ರಿಯನ ನಷ್ಟದಿಂದ ನೀವು ಹೇಗೆ ಚೇತರಿಸಿಕೊಂಡಿರೆಂದು ಹೇಳುವುದರಲ್ಲಿ ಸ್ವಲ್ಪ ಪ್ರಯೋಜನವಿರಬಹುದು. ಮಗಳು ಕೊಲ್ಲಲ್ಪಟ್ಟಿದ್ದ ಒಬ್ಬ ಸ್ತ್ರೀ, ಸತ್ತುಹೋಗಿದ್ದ ಇನ್ನೊಬ್ಬ ಹುಡುಗಿಯ ತಾಯಿ ತಾನು ಸ್ವತಃ ಸಾಮಾನ್ಯ ಜೀವನಕ್ಕೆ ಹಿಂದಿರುಗಿದರ್ದ ಕುರಿತು ಹೇಳಿದಾಗ ಪುನರಾಶ್ವಾಸನೆಯನ್ನು ಕಂಡುಕೊಂಡಳು. ಅವಳಂದದ್ದು: “ಸತ್ತಿದ್ದ ಹುಡುಗಿಯ ಆ ತಾಯಿ ತನ್ನ ಕಥೆಯನ್ನು, ‘ನಿನಗೆ ಹೇಗನಿಸುತ್ತದೆಂದು ನನಗೆ ಗೊತ್ತು,’ ಎಂದು ಹೇಳಿ ಪ್ರಾರಂಭಿಸಲಿಲ್ಲ. ತನಗೆ ಸಂಗತಿಗಳು ಹೇಗಿದ್ದವು ಎಂದು ಮಾತ್ರ ಹೇಳಿ ನಾನು ಅವುಗಳಿಗೆ ಸಂಬಂಧ ಕಲ್ಪಿಸುವಂತೆ ಬಿಟ್ಟಳು.”
ವಿರಹಿಯಾದ ಒಬ್ಬ ವ್ಯಕ್ತಿಗೆ ಸಹಾಯ ಮಾಡಲು ನಿಮ್ಮ ವತಿಯಿಂದ ಕನಿಕರ, ವಿವೇಚನೆ ಮತ್ತು ಬಲು ಪ್ರೀತಿ ಬೇಕಾಗುತ್ತದೆ. ವಿರಹಿಯು ನಿಮ್ಮ ಬಳಿಗೆ ಬರುವಂತೆ ಕಾಯಬೇಡಿ. “ನಾನು ಮಾಡಸಾಧ್ಯವಿರುವುದು ಏನಾದರೂ ಇದ್ದರೆ . . .” ಎಂದು ಮಾತ್ರ ಹೇಳಬೇಡಿ. ಆ “ಏನಾದರೂ” ಎಂಬುದನ್ನು ನೀವೇ ಕಂಡುಹಿಡಿದು, ಬಳಿಕ ಸೂಕ್ತವಾದ ಆರಂಭದ ಹೆಜ್ಜೆಯನ್ನು ತೆಗೆದುಕೊಳ್ಳಿ.
ಕೆಲವು ಪ್ರಶ್ನೆಗಳು ಉಳಿದಿವೆ: ಪುನರುತ್ಥಾನದ ಸಂಬಂಧದಲ್ಲಿ ಬೈಬಲಿನ ನಿರೀಕ್ಷೆಯ ಕುರಿತೇನು? ಅದು ನಿಮಗೂ ಸತ್ತಿರುವ ನಿಮ್ಮ ಪ್ರಿಯರಿಗೂ ಯಾವ ಅರ್ಥದಲ್ಲಿರಬಲ್ಲದು? ಅದು ಭರವಸಾರ್ಹವಾದ ಒಂದು ನಿರೀಕ್ಷೆಯೆಂದು ನಾವು ಹೇಗೆ ಖಾತರಿಯಿಂದಿರಬಲ್ಲೆವು?