ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ಸಾಕ್ಷಿಗಳು—ಶಸ್ತ್ರಚಿಕಿತ್ಸಾ/ನೈತಿಕ ಪಂಥಾಹ್ವಾನ

ಯೆಹೋವನ ಸಾಕ್ಷಿಗಳು—ಶಸ್ತ್ರಚಿಕಿತ್ಸಾ/ನೈತಿಕ ಪಂಥಾಹ್ವಾನ

ಪರಿಶಿಷ್ಟ

ಯೆಹೋವನ ಸಾಕ್ಷಿಗಳು—ಶಸ್ತ್ರಚಿಕಿತ್ಸಾ/ನೈತಿಕ ಪಂಥಾಹ್ವಾನ

ಅಮೆರಿಕನ್‌ ಮೆಡಿಕಲ್‌ ಎಸೋಸಿಯೇಷನಿನ ಅನುಮತಿಯಿಂದ, ದ ಜರ್ನಲ್‌ ಆಫ್‌ ದಿ ಅಮೆರಿಕನ್‌ ಮೆಡಿಕಲ್‌ ಎಸೋಸಿಯೇನ್‌ (ಜೆಎಎಮ್‌ಎ), ನವಂಬರ 27, 1981, ಸಂಪುಟ 246, ನಂ. 21, ಪುಟ 2471, 2472 ರಿಂದ ತೆಗೆದು ಪುನರ್ಮುದ್ರಿಸಲಾಗಿದೆ. ಹಕ್ಕುಸ್ವಾಮ್ಯ 1981, ಅಮೆರಿಕನ್‌ ಮೆಡಿಕಲ್‌ ಎಸೋಸಿಯೇಷನ್‌.

ಯೆಹೋವನ ಸಾಕ್ಷಿಗಳ ಚಿಕಿತ್ಸೆಯಲ್ಲಿ ವೈದ್ಯರ ಮುಂದೆ ಒಂದು ವಿಶೇಷ ಪಂಥಾಹ್ವಾನ ಎದ್ದು ಬರುತ್ತದೆ. ಈ ಧರ್ಮದ ಸದಸ್ಯರಿಗೆ, ಸದೃಶ ಅಥವಾ ಸ್ವಂತ (homologus or autologus) ಪೂರ್ಣ ರಕ್ತ, ಒತ್ತಿ ತುಂಬಿದ ಕೆಂಪು ರಕ್ತ ಕಣ, ಬಿಳಿ ರಕ್ತ ಕಣ, ಅಥವಾ ರಕ್ತದ ಕಿರುಫಲಕ (ಪ್ಲೇಟೆಟ್ಲ್ಸ್‌) ಗಳ ವಿರುದ್ಧ ಆಳವಾದ ಧಾರ್ಮಿಕ ನಂಬಿಕೆಯಿದೆ. ಅನೇಕರು (ಅರಕ್ತದಿಂದ ನೆನೆಸಿದ) ಹಾರ್ಟ್‌-ಲಂಗ್‌, ಡಯಾಲಿಸಿಸ್‌, ಅಥವಾ ಇನ್ನಿತರ ಉಪಕರಣಗಳನ್ನು, ದೇಹದ ರಕ್ತ ಚಲನೆಯನ್ನು ನಿಲ್ಲಿಸದಿರುವಲ್ಲಿ, ಉಪಯೋಗಿಸುವಂತೆ ಅನುಮತಿಸುತ್ತಾರೆ. ವೈದ್ಯಕೀಯ ಸಿಬ್ಬಂದಿಗಳಿಗೆ ಹೊಣೆಗಾರಿಕೆಯ ಚಿಂತೆ ಆವಶ್ಯವಿಲ್ಲ, ಏಕಂದರೆ, ತಮ್ಮ ತಿಳುವಳಿಕೆಯ ರಕ್ತ ನಿರಾಕರಣೆಯ ಕಾರಣ ಬರುವ ಹೊಣೆಗಾರಿಕೆಯಿಂದ ಬಿಡುಗಡೆ ಮಾಡಲು ಸಾಕ್ಷಿಗಳು ಯೋಗ್ಯ ಶಾಸನಬದ್ಧ ಕ್ರಮಗಳನ್ನು ಕೈಕೊಳ್ಳುತ್ತಾರೆ. ಅವರು ಸ್ಥಾನಭರ್ತಿಗಾಗಿ ಅರಕ್ತ ದ್ರವಗಳನ್ನು ಅಂಗೀಕರಿಸುತ್ತಾರೆ. ಈ ಮತ್ತು ಇತರ ಸೂಕ್ಷ್ಮ ವಿಧಾನಗಳನ್ನು ಉಪಯೋಗಿಸುತ್ತಾ ವೈದ್ಯರು ವಯಸ್ಕ ಹಾಗೂ ಅಪ್ರಾಪ್ತ ಸಾಕ್ಷಿ ರೋಗಿಗಳ ಮೇಲೆ ಎಲ್ಲಾ ರೀತಿಯ ಜಟಿಲ ಶಸ್ತ್ರಚಿಕಿತ್ಸೆಗಳನ್ನು ನಡಿಸುತ್ತಾರೆ. ಹೀಗೆ, ಇಂಥ ರೋಗಿಗಳಿಗೆ, “ಆಖಂಡ ವ್ಯಕ್ತಿ”ಗೆ ಚಿಕಿತ್ಸೆ ನೀಡುವ ಸೂತ್ರಾನುಸಾರವಾದ ಒಂದು ಪ್ರಮಾಣಭೂತ ಚಿಕಿತ್ಸಾ ವಿಧಾನವು ಉತ್ಪನ್ನವಾಗಿದೆ. (JAMA 1981; 246:2471-2472)

ವೈದ್ಯರು ಒಂದು ದೊಡ್ಡ ಆರೋಗ್ಯ ವಿವಾದಾಂಶದ ಬೆಳೆಯುತ್ತಿರುವ ಪಂಥಾಹ್ವಾನವನ್ನು ಎದುರಿಸುತ್ತಾರೆ. ಯುನೊಯಿಟೆಡ್‌ ಸ್ಟೇಟ್ಸ್‌ನಲ್ಲಿ ರಕ್ತ ಪೂರಣವನ್ನು ಅಂಗೀಕರಿಸದ ಐದು ಲಕ್ಷಕ್ಕೂ ಹೆಚ್ಚು ಯೆಹೋವನ ಸಾಕ್ಷಿಗಳಿದ್ದಾರೆ. ಸಾಕ್ಷಿಗಳ ಮತ್ತು ಅವರ ಒಡನಾಡಿಗಳ ಸಂಖ್ಯೆ ಹೆಚ್ಚುತ್ತಾ ಇದೆ. ಈ ಹಿಂದೆ, ರಕ್ತ ಪೂರಣ ನಿರಾಕರಣೆಯನ್ನು ವೈದ್ಯರು ಮತ್ತು ಆಸ್ಪತ್ರೆಯ ಅಧಿಕಾರಿಗಳು ಶಾಸನಬದ್ಧ ಸಮಸ್ಯೆಯಾಗಿ ಕಂಡು ವೈದ್ಯಕೀಯವಾಗಿ ಸೂಕ್ತವೆಂದು ತಾವು ಮುಂದುವರಿಯಲು ಕೋರ್ಟಿನಿಂದ ಅಧಿಕಾರವನ್ನು ಪಡೆದಿರುವುದಾದರೂ, ಇತ್ತೀಚಿನ ವೈದ್ಯಕೀಯ ಸಾಹಿತ್ಯಗಳು ಈ ಮನೋಭಾವದಲ್ಲಿ ಗಮನಾರ್ಹವಾದ ಬದಲಾವಣೆಯಾಗುತ್ತಿದೆ ಎಂದು ತೋರಿಸುತ್ತವೆ. ಅದು, ಅತಿ ಕೆಳಗಿನ ಹಿಮೋಗ್ಲೋಬಿನ್‌ ಮಟ್ಟವಿರುವ ರೋಗಿಗಳಿಗೆ ಮಾಡಿರುವ ಶಸ್ತ್ರಚಿಕಿತ್ಸೆಯ ಅನುಭವದಿಂದಾಗಿರಬಹುದು, ಅಥವಾ, ತಿಳುವಳಿಕೆಯ ಸಮ್ಮತಿ ಎಂಬ ಶಾಸನಬದ್ಧ ಸೂತ್ರದ ಹೆಚ್ಚಿದ ಪ್ರಜ್ಞೆಯಿಂದಾಗಿರಬಹುದು.

ಈಗ, ವಯಸ್ಕ ಮತ್ತು ಅಪ್ರಾಪ್ತ ವಯಸ್ಸಿನ ಸಾಕ್ಷಿಗಳನ್ನೊಳಗೊಂಡ ಹೆಚ್ಚಿದ ಸಂಖ್ಯೆಯ ಆಯ್ಕೆಯ ಶಸ್ತ್ರಚಿಕಿತ್ಸೆ ಮತ್ತು ಗಾಯರೋಗಾವಸ್ಥೆ ಯ ಕೇಸುಗಳನ್ನು ರಕ್ತ ಪೂರಣಗಳಿಲ್ಲದೆ ಚಿಕಿತ್ಸೆ ಮಾಡಲಾಗುತ್ತದೆ. ಇತ್ತೀಚೆಗೆ, ಯೆಹೋವನ ಸಾಕ್ಷಿಗಳ ಪ್ರತಿನಿಧಿಗಳು, ದೇಶದ ಕೇವು ಅತಿ ದೊಡ್ಡ ಚಿಕಿತ್ಸಾ ಕೇಂದ್ರಗಳಲ್ಲಿ ಶಸ್ತ್ರಚಿಕಿತ್ಸಾ ಮತ್ತು ಆಡಳಿತ ಸಿಬ್ಬಂದಿಗಳನ್ನು ಭೇಟಿಯಾದರು. ಈ ಭೇಟಿಗಳು ತಿಳುವಳಿಕೆಯನ್ನು ಹೆಚ್ಚಿಸಿ, ರಕ್ತವನ್ನು ಉಳಿಸುವುದು, ಅಂಗಸ್ಥಲಾಂತರ ಮತ್ತು ವೈದ್ಯಕೀಯ⁄ಶಾಸನ ಬದ್ಧ ಮುಕಾಬಿಲೆಯನ್ನು ತಪ್ಪಿಸುವುದು—ಈ ಪ್ರಶ್ನೆಗಳನ್ನು ಪರಿಹರಿಸುವರೆ ಸಹಾಯ ಮಾಡಿದವು.

ಚಿಕಿತ್ಸೆಯ ವಿಷಯದಲ್ಲಿ ಸಾಕ್ಷಿಗಳ ನೆಲೆ

ಯೆಹೋವನ ಸಾಕ್ಷಿಗಳು ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಗೆ ಒಪ್ಪುತ್ತಾರೆ. ಅವರಲ್ಲಿ ಹಲವಾರು ಜನರು ವೈದ್ಯರು. ಹೌದು, ಸರ್ಜನರೂ ಆಗಿದ್ದಾರೆ. ಆದರೆ ಸಾಕ್ಷಿಗಳು ಆಳವಾದ ಧಾರ್ಮಿಕತೆಯ ಜನರು. ಬೈಬಲಿನ ಈ ವಚನಗಳು ಅವರಿಗೆ ರಕ್ತ ಪೂರಣವನ್ನು ನಿಷೇಧಿಸುತ್ತವೆಂದು ಅವರು ನಂಬುತ್ತಾರೆ: “ಮಾಂಸದ ಪ್ರಾಣ — ಅದರ ರಕ್ತವನ್ನು ಮಾತ್ರ ನೀವು ತಿನ್ನಬಾರದು.” (ಆದಿಕಾಂಡ 9:3, 4); “[ನೀವು] ಅದರ ರಕ್ತವನ್ನು ಎರೆದು ಮಣ್ಣಿನಿಂದ ಅದನ್ನು ಮುಚ್ಚ ಬೇಕು.” (ಯಾಜಕಕಾಂಡ 17:13-14); ಮತ್ತು “ಹಾದರವನ್ನು, ಕತ್ತು ಹಿಸುಕಿ ಕೊಂದದ್ದನ್ನು ಮತ್ತು ರಕ್ತವನ್ನು ವಿಸರ್ಜಿಸಬೇಕು.” (ಅಪೊಸ್ತಲರ ಕೃತ್ಯಗಳು 15:19-21)1

ಈ ವಚನಗಳನ್ನು ವೈದ್ಯಕೀಯ ಭಾಷೆಯಲ್ಲಿ ಕೊಟ್ಟಿರುವುದಿಲ್ಲವಾದರೂ, ಸಾಕ್ಷಿಗಳು ಅವನ್ನು ಅವು ಪೂರ್ಣ ರಕ್ತ, ಒತ್ತಿ ತುಂಬಿದ ಕೆಂಪು ರಕ್ತ ಕಣ, ರಕ್ತ ರಸ, ಬಿಳಿ ರಕ್ತ ಕಣ ಹಾಗೂ ರಕ್ತದ ಕಿರುಫಲಕ (ಪ್ಲೇಟೆಟ್ಲ್ಸ್‌) ಗಳ ಪೂರಣವನ್ನು ನಿಷೇಧಿಸುತ್ತವೆಂಬಂತೆ ವೀಕ್ಷಿಸುತ್ತಾರೆ. ಆದರೂ, ಸಾಕ್ಷಿಗಳ ಧಾರ್ಮಿಕ ತಿಳುವಳಿಕೆ, ಆಲ್ಬುಮಿನ್‌, ಇಮ್ಯೂನ್‌ ಗ್ಲೋಬ್ಯುಲಿನ್‌ ಅಂಗಾಂಶಗಳನ್ನೂ ಹಿಮೋಫಿಲಿಯ ತಯಾರಿಕೆಗಳನ್ನೂ ಪೂರ್ತಿಯಾಗಿ ನಿಷೇಧಿಸುವುದಿಲ್ಲ. ಇವುಗಳನ್ನು ಅಂಗೀಕರಿಸಬೇಕೊ ಬೇಡವೊ ಎಂಬ ನಿರ್ಣಯವನ್ನು ಪ್ರತಿಯೊಬ್ಬ ಸಾಕ್ಷಿ ಮಾಡ ತಕ್ಕದ್ದು.2

ದೇಹದಿಂದ ತೆಗೆದ ರಕ್ತವನ್ನು ತೊಲಗಿಸಬೇಕೆಂಬುದು ಸಾಕ್ಷಿಗಳ ನಂಬಿಕೆಯಾಗಿರುವುದರಿಂದ ತಮ್ಮದೇ ಆದ ಶೇಖರಿಸಿಟ್ಟ ರಕ್ತದ ಸ್ವಯಂ-ಪೂರಣವನ್ನು ಅವರು ಅಂಗೀಕರಿಸುವುದಿಲ್ಲ. ಶಸ್ತ್ರಚಿಕಿತ್ಸೆಯ ಮಧ್ಯೆ ರಕ್ತ ಶೇಖರಣೆ ಮಾಡುವ ವಿಧಾನ ಅಥವಾ ರಕ್ತ ಶೇಖರಣೆಯನ್ನೊಳಗೊಂಡಿರುವ ಹೀಮೊಡೈಲ್ಯುಷನ್‌ ವಿಧಾನ ಅವರಿಗೆ ಆಕ್ಷೇಪಣೀಯ. ಆದರೂ ಅನೇಕ ಸಾಕ್ಷಿಗಳು ಡಯಾಲಿಸಿಸ್‌ ಮತ್ತು ಹಾರ್ಟ್‌-ಲಂಗ್‌ (ಅರಕ್ತ ಹೊಯ್ದು ನೆನೆಸಿದ) ಉಪಕರಣಗಳನ್ನೂ ದೇಹದ ಹೊರಗೆ ರಕ್ತ ಪರಿಚಲನೆಯನ್ನು ನಿಲ್ಲಿಸದೆ ಶಸ್ತ್ರಚಿಕಿತ್ಸೆಯ ಮಧ್ಯೆ ರಕ್ಷಿಸಲ್ಪಡುವ ರಕ್ತವನ್ನೂ ಅನುಮತಿಸುತ್ತಾರೆ. ಆದುದರಿಂದ ವೈದ್ಯನು ವೈಯಕ್ತಿಕವಾಗಿ ಅವನ ಮನಸ್ಸಾಕ್ಷಿ ಏನು ಹೇಳುತ್ತದೆಂದು ಕೇಳಬೇಕು.2

ಬೈಬಲು ಅಂಗ ಸ್ಥಲಾಂತರದ ಕುರಿತು ನೇರವಾಗಿ ಹೇಳುತ್ತದೆಂದು ಸಾಕ್ಷಿಗಳಿಗೆ ಅನಿಸುವುದಿಲ್ಲ. ಈ ಕಾರಣದಿಂದ, ಪಾರದರ್ಶಕ ಪಟಲ (Cornea), ಮೂತ್ರ ಪಿಂಡ ಮತಿತ್ತರ ಅಂಗಕಟ್ಟುಗಳ ಸ್ಥಲಾಂತರದ ಕುರಿತು ನಿರ್ಣಯವನ್ನು ಪ್ರತಿಯೊಬ್ಬ ಸಾಕ್ಷಿಯು ಮಾಡತಕ್ಕದ್ದು.

ದೊಡ್ಡ ರೀತಿಯ ಶಸ್ತ್ರಚಿಕಿತ್ಸೆ ಸಾಧ್ಯ

ರಕ್ತ ಉತ್ಪನ್ನಗಳ ಸಂಬಂಧದಲ್ಲಿ ಸಾಕ್ಷಿಗಳ ನೆಲೆಯ ಕಾರಣ “ಡಾಕ್ಟರರ ಕೈ ಕಟ್ಟಲ್ಪಡುತ್ತದೆ” ಎಂದು ಹೇಳಿ ಸರ್ಜನರು ಅನೇಕ ವೇಳೆ ಸಾಕ್ಷಿಗಳ ಚಿಕಿತ್ಸೆಯನ್ನು ನಿರಾಕರಿಸಿರುವುದಾದರೂ ಅನೇಕ ವೈದ್ಯರು ಈಗ ಈ ಸ್ಥಿತಿಯನ್ನು ಅದು ತಮ್ಮ ನೈಪುಣ್ಯಕ್ಕೆ ಪಂಥಾಹ್ವಾನ ನೀಡುವ ಇನ್ನೊಂದು ಜಟಿಲ ಪರಿಸ್ಥಿತಿಯೆಂದು ವೀಕ್ಷಿಸಲು ತೊಡಗಿದ್ದಾರೆ. ಸಾಕ್ಷಿಗಳು ಅಸ್ಫಟಿಕ ಅಥವಾ ಸ್ಫಟಿಕ ರೂಪದ ಭರ್ತಿ ದ್ರವಗಳಿಗೆ ಅಥವಾ ಕೆಳ ಮಟ್ಟದ ರಕ್ತದೊತ್ತಡದ ಆ್ಯನಿಸ್ತೀಸಿಯ3 ಅಥವಾ ಸಾಮಾನ್ಯಕ್ಕಿಂತ ಕೆಳಗಣ ದೇಹ ಶಾಖ (hypothermia) ಕ್ಕೆ ಆಕ್ಷೇಪಿಸುವುದಿಲ್ಲವಾದ ಕಾರಣ, ಇವುಗಳನ್ನು ಯಶಸ್ವೀಯಾಗಿ ಉಪಯೋಗಿಸಲಾಗಿದೆ. ಹೆಟ್‌ಸಾರ್ಚ್ಟ್‌ನ4 ಪ್ರಚಲಿತ ಹಾಗೂ ಭಾವೀ ಲೇಪನ, ಇಂಟ್ರಿವೆನಸ್‌ ಐಅರ್ನ್‌ ಡೆಕ್ಷ್‌ಟ್ರನ್‌ ಇಂಜೆಕ್ಷನುಗಳ5,6 ದೊಡ್ಡ ಡೋಸು ಮತ್ತು “ಸೋನಿಕ್‌ ಸ್ಕಾಲ್‌ಪೆಲ್‌”7 ಎಂಬ ಧ್ವನಿ ಚೂರಿ, ಭರವಸಾರ್ಹವಾಗಿದ್ದು ಧಾರ್ಮಿಕವಾಗಿ ಅನಾಕ್ಷೇಪಣೀಯ. ಮತ್ತು ಇತ್ತೀಚೆಗೆ ವಿಕಸಿಸಲ್ಪಟ್ಟಿರುವ ಫ್ಲೂಒರಿನ್‌ ಮೂಲಧಾತುವಿರುವ ರಕ್ತ ಬದಲಿ (fluosol-DA) ಅಪಾಯ ರಹಿತವೂ ಕಾರ್ಯಸಾಧಕವೂ8 ಆಗುವಲ್ಲಿ, ಅದರ ಉಪಯೋಗ ಸಾಕ್ಷಿಗಳ ನಂಬಿಕೆಗೆ ವ್ಯತಿರಿಕ್ತವಾಗಿರುವುದಿಲ್ಲ.

1977 ರಲ್ಲಿ, ಆಟ್‌ ಮತ್ತು ಕೂಲೀ9 ಸಾಕ್ಷಿಗಳಿಗೆ ರಕ್ತ ಪೂರಣವಿಲ್ಲದೆ ಮಾಡಿದ 542 ಹೃದಯ ನಾಳ (cardiovascular) ಗಳ ಶಸ್ತ್ರಚಿಕಿತ್ಸೆಗಳ ಕುರಿತು ವರದಿ ಮಾಡುತ್ತಾ ಈ ವಿಧಾನವನ್ನು “ಹಿತಕರವಾಗಿರುವ ಕಡಿಮೆ ಅಪಾಯ” ದಿಂದ ಮಾಡಸಾಧ್ಯವಿದೆಯೆಂದು ತೀರ್ಮಾನಿಸಿದರು. ನಮ್ಮ ವಿನಂತಿಗೆ ಉತ್ತರವಾಗಿ ಕೂಲೀ ಇತ್ತೀಚೆಗೆ, 22% ಅಪ್ರಾಪ್ತ ವಯಸ್ಸಿನವರಿದ್ದ 1,026 ಶಸ್ತ್ರಚಿಕಿತ್ಸೆಗಳ ಸಂಖ್ಯಾ ಸಂಗ್ರಹಣ ಪುನರ್ವಿಮರ್ಶೆಯನ್ನು ಮಾಡಿ “ಯೆಹೋವನ ಸಾಕ್ಷಿಗಳ ಗುಂಪಿನ ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ಅಪಾಯವು ಇತರರಿಗಿಂತ ವಾಸ್ತವಿಕವಾಗಿ ಹೆಚ್ಚಾಗಿರುವುದಿಲ್ಲ” ಎಂದು ನಿರ್ದರಿಸಿದರು. ತದ್ರೀತಿ, ಮೈಕೆಲ್‌ ಇ. ಡಿಬೇಕಿ, ಎಮ್‌ಡಿ, ಇವರು, “[ಸಾಕ್ಷಿಗಳನ್ನೊಳಗೊಂಡ] ಅಧಿಕಾಂಶ ಸನ್ನಿವೇಶಗಳಲ್ಲಿ, ರಕ್ತ ಪೂರಣ ಮಾಡಲ್ಪಡುವ ಶಸ್ತ್ರಚಿಕಿತ್ಸೆಯ ಅಪಾಯ ಸಂಭವ ರಕ್ತ ಪೂರಣ ಕೊಡುವ ರೋಗಿಗಳದ್ದಕ್ಕಿಂತ ಹೆಚ್ಚಾಗಿರುವುದಿಲ್ಲ” ಎಂದು ತಿಳಿಸಿದರು. (ಸ್ವಂತ ನಿವೇದನೆ, ಮಾರ್ಚ್‌ 1981). ಈ ಲೇಖನ ಮೂತ್ರ ಶಾಸ್ತ್ರಸಂಬಂಧಿತ10 (urologic) ಮತ್ತು ಅಂಗ ವಿಕಾರ ಸಂಬಂಧಿತ11 (orthopedic) ದೊಡ್ಡ ಶಸ್ತ್ರಚಿಕಿತ್ಸೆಗಳ ಯಶಸ್ವೀಯನ್ನೂ ದಾಖಲೆ ಮಾಡುತ್ತದೆ. ಜಿ. ಡೀನ್‌ ಮೆಕೀವನ್‌, ಎಮ್‌ಡಿ, ಮತ್ತು ಜೆ.ರಿಚರ್ಡ್‌ ಬೋವೆನ್‌, ಎಮ್‌ಡಿ, ಇವರು, ಹಿಂದುಗಡೆಯ ಬೆನ್ನು ಮೂಳೆಯ ಬೆಸುಗೆಯನ್ನು “20 [ಸಾಕ್ಷಿ] ಅಪ್ರಾಪ್ತ ವಯಸ್ಸಿನವರಿಗೆ ಯಶಸ್ವಿಯಾಗಿ ಮಾಡಲಾಗಿದೆ” ಎಂದು ಬರೆಯುತ್ತಾರೆ. (ಪ್ರಕಟವಾಗಿಲ್ಲದ ಆಧಾರಾಂಶ, ಆಗಸ್ಟ್‌ 1981) ಅವರು ಕೂಡಿಸಿ ಬರೆದುದು: “ಸರ್ಜನರು ರಕ್ತ ಪೂರಣ ನಿರಾಕರಣೆಗೆ ರೋಗಿಗಿರುವ ಹಕ್ಕಿಗೆ ಸನ್ಮಾನ ನೀತಿಯನ್ನು ಸ್ಥಾಪಿಸುವ ಆವಶ್ಯಕತೆಗಳಿಗಾಗಿ ರೋಗಿಯ ಭದ್ರತೆಯನ್ನು ಅನುಮತಿಸುವ ರೀತಿಯಲ್ಲಿ ಶಸ್ತ್ರಚಿಕಿತ್ಸೆಯನ್ನು ಮಾಡಬೇಕು.”

ಹರ್ಬ್ಸ್‌ಮೆನ್‌12 ಎಂಬವರು, “ಭಾರೀ ಗಾಯದಿಂದಾದ ರಕ್ತ ನಷ್ಟದ” ಕೆಲವು ಯುವ ಜನರನ್ನೊಳಗೊಂಡ ಕೇಸುಗಳಲ್ಲಿ ಸಾಫಲ್ಯವನ್ನು ವರದಿ ಮಾಡಿದ್ದಾರೆ. ಅವರು ಒಪ್ಪಿ ಕೊಳ್ಳುವುದು: “ರಕ್ತ ಆವಶ್ಯಕತೆಗಳ ಸಂಬಂಧದಲ್ಲಿ ಸಾಕ್ಷಿಗಳ ಪರಿಸ್ಥಿತಿ ಸ್ವಲ್ಪ ಪ್ರತಿಕೂಲ. ಆದರೂ ರಕ್ತಭರ್ತಿಗೆ ಅನ್ಯ ಮಾರ್ಗಗಳಿವೆಯೆಂಬುದೂ ಅತಿ ಸ್ಪಷ್ಟ.” ಅನೇಕ ಸರ್ಜನರು “ಶಾಸನ ಬದ್ಧ ಪರಿಣಾಮಗಳ ಭಯ” ದಿಂದಾಗಿ ಸಾಕ್ಷಿಗಳನ್ನು ರೋಗಿಗಳಾಗಿ ಅಂಗೀಕರಿಸಲು ಹಿಂಜರಿದಿರುವುದಾದರೂ ಇದು ಸಮಂಜಸವಾದ ಕಾರಣವಲ್ಲವೆಂದು ಅವರು ತೋರಿಸುತ್ತಾರೆ.

ಶಾಸನಬದ್ಧ ಚಿಂತೆ ವತ್ತು ಅಪ್ರಾಪ್ತ ವಯಸ್ಸಿನವರು

ವೈದ್ಯರನ್ನು ಮತ್ತು ಆಸ್ಪತ್ರೆಗಳನ್ನು ಬದ್ಧತೆಯಿಂದ ತಪ್ಪಿಸಲು13 ಸಾಕ್ಷಿಗಳು ಅಮೆರಿಕನ್‌ ಮೆಡಿಕಲ್‌ ಎಸೋಸಿಯೇಷನ್‌ ಫಾರ್ಮಿಗೆ ಹಸ್ತಾಕ್ಷರ ಮಾಡಲು ಸಿದ್ಧರಾಗಿದ್ದಾರೆ. ಮತ್ತು ಅಧಿಕಾಂಶ ಸಾಕ್ಷಿಗಳೊಂದಿಗೆ, ವೈದ್ಯಕೀಯ ಮತ್ತು ಶಾಸನ ಬದ್ಧ ಅಧಿಕಾರಿಗಳನ್ನು ಕೇಳಿ ತಯಾರಿಸಿದ, ತಾರೀಕು ಮತ್ತು ಸಾಕ್ಷಿಗಳ ಸಹಿ ಇರುವ ಮೆಡಿಕಲ್‌ ಎಲರ್ಟ್‌ ಕಾರ್ಡುಗಳಿವೆ. ಈ ಡೊಕ್ಯುಮೆಂಟುಗಳಿಗೆ ರೋಗಿಗಳು (ಅಥವಾ ಅವರ ಆಸ್ತಿ) ಬದ್ಧರಾಗಿದ್ದು, ಅದು ವೈದ್ಯರಿಗೆ ರಕ್ಷೆಯನ್ನು ನೀಡುತ್ತದೆ. ಇಂಥ ಮನ್ನಾ ದಾಖಲೆಗೆ ಸಹಿ ಹಾಕಿರುವಲ್ಲಿ, ಅಯೋಗ್ಯ ಚಿಕಿತ್ಸೆ ಮಾಡಲಾಗಿದೆ ಎಂದು ಹೇಳುವ ಕೇಸು, “ಆಧಾರವಿಲ್ಲದಂತೆ ಕಾಣುವುದು” ಎಂದು ಜಸಿಸ್ಟ್‌ ವಾರನ್‌ ಬರ್ಗರ್‌ ತೀರ್ಮಾನಿಸಿದರು. ಮತ್ತು “ಒತ್ತಾಯದ ವೈದ್ಯಕೀಯ ಚಿಕಿತ್ಸೆ ಮತ್ತು ಧಾರ್ಮಿಕ ಸ್ವಾತಂತ್ರ್ಯ” ಎಂಬ ರೋಗಿಗೆ ವಿಶ್ಲೇಷಣೆಯ ಕುರಿತು, ‘ಪ್ಯಾರಿಸ್‌’14 ಎಂಬವರು ಬರೆದುದು: “‘ಅನಿಚ್ಛೆಯ ರೋಗಿಗೆ ರಕ್ತ ಪೂರಣವನ್ನು ಒತ್ತಾಯದಿಂದ ಕೊಡಲು ತಪ್ಪಿದರೆ ವೈದ್ಯನು . . . ಪಾತಕ . . . ಬದ್ಧತೆಗೊಳಗಾಗುತ್ತಾನೆಂದು ಹೇಳುವ ಮಾತಿಗೆ ನಾನು ಯಾವ ಪ್ರಮಾಣವನ್ನೂ ಕಂಡು ಹಿಡಿದಿರುವುದಿಲ್ಲ’ ಎಂದು, ಲೇಖನವನ್ನು ಪರೀಕ್ಷಿಸಿದ ವ್ಯಾಖ್ಯಾನಕಾರನು ವರದಿ ಮಾಡಿದನು. ಈ ಅಪಾಯ ಕಾರಣವು ವಾಸ್ತವವಾದ ಸಾಧ್ಯತೆಯಾಗಿರುವ ಬದಲಿಗೆ ಫಲವತ್ತಾದ ಶಾಸನ ಬದ್ಧ ಮನಸ್ಸಿನ ಉತ್ಪನ್ನವೆಂದು ಕಾಣುತ್ತದೆ.”

ಅಪ್ರಾಪ್ತ ವಯಸ್ಸಿನನವರ ಆರೈಕೆ ಅತಿ ದೊಡ್ಡ ಚಿಂತೆಗೆ ಕಾರಣವಾಗಿದೆ. ಇದು, ಅನೇಕ ವೇಳೆ, ಮಕ್ಕಳ—ಅಲಕ್ಷ್ಯ ಕಾಯಿದೆಗಳಿಗನುಸಾರ ಹೆತ್ತವರನ್ನು ಕೋರ್ಟಿನ ದಾವೆಗೊಳಪಡಿಸುತ್ತದೆ. ಆದರೆ ಇಂಥ ದಾವೆಗಳ ಕುರಿತು ಸಾಕ್ಷಿಗಳ ಪರಿಚಯವಿರುವ ಅನೇಕ ವೈದ್ಯರು ಮತ್ತು ವಕೀಲರು ಸಂಶಯದ ಪ್ರಶ್ನೆಗಳನ್ನೆತ್ತುತ್ತಾರೆ. ಯೆಹೋವನ ಸಾಕ್ಷಿಗಳಾದ ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ವೈದ್ಯಕೀಯ ಆರೈಕೆಯನ್ನು ಬಯಸುತ್ತಾರೆಂದು ಅವರು ನಂಬುತ್ತಾರೆ. ತಮಗಿರುವ ಹೆತ್ತವರ ಜವಾಬ್ದಾರಿಯಿಂದ ಜಾರಿಕೊಳ್ಳಲು ಅಥವಾ ಅದನ್ನು ನ್ಯಾಯಾಧೀಶನಿಗೆ ಅಥವಾ ಇತರರಿಗೆ ಹೊರಿಸಲು ಅಪೇಕ್ಷೆಯಿಲ್ಲದೆ, ಸಾಕ್ಷಿಗಳು ತಮ್ಮ ಕುಟುಂಬದ ಧಾರ್ಮಿಕ ಕಟ್ಟಳೆಗಳಿಗೆ ಪರಿಗಣನೆ ಕೊಡಲ್ಪಡುವಂತೆ ಪ್ರೋತ್ಸಾಹಿಸುತ್ತಾರೆ. ಕೆನೇಡಿಯನ್‌ ಮೆಡಿಕಲ್‌ ಎಸೋಸಿಯೇಷನ್‌ ಮಾಜಿ ಕಾರ್ಯದರ್ಶಿ, ಡಾ. ಎ. ಡಿ. ಕೆಲಿ ಬರೆದುದು15: “ಅಪ್ರಾಪ್ತ ವಯಸ್ಸಿನ ಹೆತ್ತವರಿಗೆ ಮತ್ತು ಪ್ರಜ್ಞೆ ತಪ್ಪಿರುವ ರೋಗಿಗಳ ಸಂಬಂಧಿಗಳಿಗೆ ರೋಗಿಯ ಇಷ್ಟವನ್ನು ತರ್ಜುಮೆ ಮಾಡುವ ಹಕ್ಕಿದೆ. . . . ಒಂದು ಮಗುವನ್ನು ಹೆತ್ತವರ ವಶದಿಂದ ತೆಗೆದು ಕೊಂಡು ಹೋಗಲು ಪ್ರಾತಃಕಾಲ 2 ಗಂಟೆಗೆ ಸೇರಿರುವ ವಿವಾದಾಸ್ಪದವಾದ ಕೋರ್ಟಿನ ಕಾನೂನು ಕ್ರಮವನ್ನು ನಾನು ಮೆಚ್ಚುವುದಿಲ್ಲ.”

ಶಸ್ತ್ರಚಿಕಿತ್ಸೆ, ರೇಡಿಯೇಷನ್‌, ಕೆಮೊತೆರಪಿಯಂಥ ಅಪಾಯ-ಪ್ರಯೋಜನ ಸಾಧ್ಯತೆಗಳ ವಿಷಯಗಳಲ್ಲಿ ತಮ್ಮ ಮಕ್ಕಳ ಆರೈಕೆಯ ಕುರಿತು ಹೆತ್ತವರಿಗೆ ಮಾತಾಡುವ ಹಕ್ಕಿದೆ ಎಂಬುದು ಸ್ವತಸ್ಸಿದ್ಧ. ಪೂರಣದ ಅಪಾಯವನ್ನು16 ಮೀರಿ ಹೋಗುವ ನೈತಿಕ ಕಾರಣಗಳಿಗಾಗಿ, ಸಾಕ್ಷಿಗಳಾದ ಹೆತ್ತವರು ಧಾರ್ಮಿಕವಾಗಿ ನಿಷೇಧಿಸಲ್ಪಟ್ಟಿರುವ ಚಿಕಿತ್ಸೆಗಳನ್ನು ಉಪಯೋಗಿಸ ಬಾರದೆಂದು ಕೇಳಿ ಕೊಳ್ಳುತ್ತಾರೆ. ಇದು, ಕುಟುಂಬದ ಮೂಲಭೂತ ನಂಬಿಕೆಗಳನ್ನು ಉಲ್ಲಂಘಿಸುತ್ತಾ, ಅತಿಕ್ರಮಣ ವಿಧಾನದಿಂದ ಬಾಳಿಕೆ ಬರುವ ಮನೋಸಾಮಾಜಿಕ ಹಾನಿಯನ್ನು ಮಾಡ ಸಾಧ್ಯವುಳ್ಳ ವಿಷಯವನ್ನು ಅಲಕ್ಷ್ಯ ಮಾಡದೆ “ಅಖಂಡ ವ್ಯಕ್ತಿ” ಯನ್ನು ಚಿಕಿತ್ಸೆಗೊಳಪಡಿಸುವ ವೈದ್ಯಕೀಯ ವಿಧಿಗನುಸಾರವಾಗಿದೆ. ಅನೇಕ ವೇಳೆ, ದೇಶ ವ್ಯಾಪಕವಾಗಿ, ಸಾಕ್ಷಿಗಳ ಅನುಭವವಿರುವ ದೊಡ್ಡ ವೈದಕೀಯ ಕೇಂದ್ರಗಳು, ಸಾಕ್ಷಿಗಳ ಚಿಕಿತ್ಸೆ ಮಾಡಲು ಒಪ್ಪದಿರುವ ಆಸ್ಪತ್ರೆಗಳಿಂದ ರೋಗಿಗಳ ವರ್ಗಾವಣೆಯನ್ನು, ಶಿಶುರೋಗಿಗಳ ವರ್ಗಾವಣೆಯನ್ನು ಸಹ, ಸ್ವೀಕರಿಸುತ್ತವೆ.

ವೈದ್ಯನ ಪಂಥಾಹ್ವಾನ

ಯೆಹೋವನ ಸಾಕ್ಷಿಗಳ ಆರೈಕೆ, ಎಲ್ಲಾ ವಿಧಾನಗಳನ್ನು ಉಪಯೋಗಿಸಿ ಜೀವ ಮತ್ತು ಆರೋಗ್ಯವನ್ನು ಉಳಿಸಲು ತನ್ನನ್ನು ಸಮರ್ಪಿಸಿರುವ ವೈದ್ಯನಿಗೆ ಉಭಯ ಸಂಕಟವನ್ನು ತಂದೊಡ್ಡುತ್ತದೆಂಬುದು ಗ್ರಹಿಸಸಾಧ್ಯವಾಗುವ ವಿಷಯ. ಸಾಕ್ಷಿಗಳಿಗೆ ದೊಡ್ಡ ರೀತಿಯ ಶಸ್ತ್ರಚಿಕಿತ್ಸೆಯ ಕುರಿತು ಒಂದು ಲೇಖನ ಮಾಲೆಗೆ ಸಂಪಾದಕೀಯವಾಗಿ ಮುನ್ನುಡಿಯನ್ನು ಬರೆಯುತ್ತಾ ಹಾರ್ವಿ,17 “ನನ್ನ ಕೆಲಸಕ್ಕೆ ಅಡ್ಡಿ ಬರುವ ನಂಬಿಕೆಗಳು ನನಗೆ ಜುಗುಪ್ಸೆ ತರುತ್ತವೆ” ಎಂದು ಒಪ್ಪಿ ಕೊಂಡರು. ಆದರೆ ಅವರಂದದ್ದು: “ಪ್ರಾಯಶಃ ನಾವು ಸಹ ಸುಲಭವಾಗಿ, ಶಸ್ತ್ರಚಿಕಿತ್ಸೆಯ ವೈಯಕ್ತಿಕವಾಗಿ ಒಬ್ಬೊಬ್ಬ ವ್ಯಕ್ತಿಯ ಮೇಲೆ ಹೊಂದಿ ಕೊಂಡಿರುವ ಕೌಶಲ್ಯವಾಗಿದೆ ಎಂಬುದನ್ನು ಮರೆತು ಬಿಡುತ್ತೇವೆ. ವಿಧಾನವನ್ನು ನಾವು ಅಭಿವೃದ್ಧಿಗೊಳಿಸಸಾಧ್ಯವಿದೆ.”

ಫ್ರೊಫೆಸರ್‌ ಬೊಲೂಕಿ16 ಎಂಬವರು ಫಾರ್ಲಿಡಾದ ಡೆಡ್‌ ಕೌಂಟಿಯಲ್ಲಿರುವ, ಅತಿ ಕಾರ್ಯೋದ್ಯುಕ್ತ ಗಾಯರೋಗಸ್ಥಿತಿಯ ಆಸ್ಪತ್ರೆಗಳಲ್ಲಿ ಒಂದರಲ್ಲಿ “ಎಲ್ಲಾ [ಸಾಕ್ಷಿಗಳನ್ನೂ] ಆರೈಕೆ ಮಾಡಲು ನಿರಾಕರಿಸುವ ಧೋರಣೆಯೊಂದಿದೆ” ಎಂಬ ಗಾಬರಿಗೊಳಿಸುವ ವರದಿಯನ್ನು ಗಮನಿಸಿದರು. “ರೋಗಿಗಳ ಈ ಗುಂಪಿನಲ್ಲಿ ಅಧಿಕಾಂಶ ಶಸ್ತ್ರಚಿಕಿತ್ಸಾ ವಿಧಾನಗಳು ಮಾಮೂಲಿಗಿಂತ ಕಡಿಮೆ ಅಪಾಯದಿಂದ ಕೂಡಿವೆ” ಎಂದು ಅವರು ತೋರಿಸಿದರು. ಅವರು ಇನ್ನೂ ಹೇಳಿದ್ದು: “ಸರ್ಜನರು ತಮಗೆ ಆಧುನಿಕ ವೈದ್ಯಕೀಯ ಶಾಸ್ತ್ರದ ಒಂದು ಉಪಕರಣ ಹೀಗೆ ನಷ್ಟವಾಗುತ್ತದೆಂದು ಎಣಿಸಿದರೂ . . . ಈ ರೋಗಿಗಳ ಮೇಲೆ ಶಸ್ತ್ರಚಿಕಿತ್ಸೆ ನಡಿಸುವುದಾದರೆ ಅವರು ಎಷ್ಟೋ ಹೆಚ್ಚು ವಿಷಯಗಳನ್ನು ಕಲಿಯುವರೆಂಬ ಖಾತ್ರಿ ನನಗಿದೆ.”

ಸಾಕ್ಷಿ ರೋಗಿಯು ಸಮಸ್ಯೆಯೆಂದು ತಿಳಿಯುವ ಬದಲು, ಹೆಚ್ಚಚ್ಚು ವೈದ್ಯರು ಇದನ್ನು ವೈದ್ಯಕೀಯ ಪಂಥಾಹ್ವಾನವಾಗಿ ತೆಗೆದುಕೊಳ್ಳುತ್ತಾರೆ. ಈ ಪಂಥಾಹ್ವಾನವನ್ನು ಎದುರಿಸುವರೆ, ಈ ರೋಗಿಗಳಿಗೆ, ದೇಶದ ಅನೇಕ ವೈದ್ಯಕೀಯ ಕೇಂದ್ರಗಳಲ್ಲಿ ಒಪ್ಪಲ್ಪಟ್ಟಿರುವ ಒಂದು ಪ್ರಮಾಣಭೂತ ಚಿಕಿತ್ಸಾ ವಿಧಾನವನ್ನು ಅವರು ವಿಕಸಿಸಿದ್ದಾರೆ. ಅದೇ ಸಮಯದಲ್ಲಿ ಈ ವೈದ್ಯರು ರೋಗಿಯ ಪೂರ್ಣ ಹಿತಕ್ಕಾಗಿ ಅತ್ಯುತ್ತಮವಾಗಿರುವ ಆರೈಕೆಯನ್ನು ಒದಗಿಸುತ್ತಾರೆ. ಗಾರ್ಡನರ್‌ ಮತ್ತು ಇತರರು19 ಗಮನಿಸಿರುವುದು: “ರೋಗಿಯ ದೈಹಿಕ ಕಾಯಿಲೆ ಗುಣವಾದರೂ, ಅವನ ಅಭಿಪ್ರಾಯದಂತೆ, ದೇವರೊಂದಿಗಿರುವ ಆತ್ಮಿಕ ಜೀವಿತ ಉಲ್ಲಂಘಿಸಲ್ಪಟ್ಟು, ಇದು ಅರ್ಥಹೀನವಾದ ಮತ್ತು ಪ್ರಾಯಶಃ ಮರಣಕ್ಕಿಂತಲೂ ಕೀಳಾದ ಜೀವನಕ್ಕೆ ನಡಿಸುವಲ್ಲಿ ಇದರಿಂದ ಯಾರು ಪ್ರಯೋಜನ ಪಡೆಯುವನು?”

ವೈದ್ಯಕೀಯವಾಗಿ, ತಮ್ಮ ದೃಢ ನಂಬಿಕೆಗಳು ತುಸು ಅಪಾಯವನ್ನು ಹೆಚ್ಚಿಸಿ ಆರೈಕೆಯನ್ನು ಜಟಿಲಗೊಳಿಸಬಹುದೆಂಬುದನ್ನು ಸಾಕ್ಷಿಗಳು ಒಪ್ಪಿ ಕೊಳ್ಳುತ್ತಾರೆ. ಈ ಕಾರಣದಿಂದ, ಅವರು ಸಾಮಾನ್ಯವಾಗಿ ತಮಗೆ ಲಭಿಸುವ ಆರೈಕೆಗೆ ಅಸಾಧಾರಣವಾದ ಗಣ್ಯತೆಯನ್ನು ವ್ಯಕ್ತ ಪಡಿಸುತ್ತಾರೆ. ಆಳವಾದ ನಂಬಿಕೆ ಮತ್ತು ಜೀವಿಸುವ ತೀಕ್ಷ್ಣ ಇಚ್ಛೆಯ ಪ್ರಾಮುಖ್ಯ ಘಟಕಾಂಶಗಳಲ್ಲದೆ ಅವರು ವೈದ್ಯರೊಂದಿಗೆ ಮತ್ತು ವೈದ್ಯಕೀಯ ಸಿಬ್ಬಂಧಿಗಳೊಂದಿಗೆ ಸಂತೋಷದಿಂದ ಸಹಕರಿಸುತ್ತಾರೆ. ಹೀಗೆ ರೋಗಿ ಮತ್ತು ವೈದ್ಯ—ಇವರಿಬ್ಬರೂ ಈ ಅದ್ವೀತಿಯ ಪಂಥಾಹ್ವಾನವನ್ನು ಎದುರಿಸುವುದರಲ್ಲಿ ಏಕ ಮನಸ್ಸಿನವರಾಗಿರುತ್ತಾರೆ.

REFERENCES

1. Jehovah’s Witnesses and the Question of Blood. Brooklyn, NY, Watchtower Bible and Tract Society, 1977, pp. 1-64.

2. The Watchtower 1978;99 (June 15):29-31.

3. Hypotensive anesthesia facilitates hip surgery, MEDICAL NEWS. JAMA 1978;239:181.

4. Hetastarch (Hespan)—a new plasma expander. Med Lett Drugs Ther 1981;23:16.

5. Hamstra RD, Block MH, Schocket AL:Intravenous iron dextran in clinical medicine. JAMA 1980;243:1726-1731.

6. Lapin R: Major surgery in Jehovah’s Witnesses. Contemp Orthop 1980;2:647-654.

7. Fuerst ML: ‘Sonic scalpel’ spares vessels. Med Trib 1981;22:1,30.

8. Gonzáles ER: The saga of ‘artificial blood’: Fluosol a special boon to Jehovah’s Witnesses. JAMA 1980;243:719-724.

9. Ott DA, Cooley DA: Cardiovascular surgery in Jehovah’s Witnesses. JAMA 1977;238:1256-1258.

10. Roen PR, Velcek F: Extensive urologic surgery without blood transfusion. NY State J Med 1972;72:2524-2527.

11. Nelson CL, Martin K, Lawson N, et al: Total hip replacement without transfusion. Contemp Orthop 1980;2:655-658.

12. Herbsman H: Treating the Jehovah’s Witness. Emerg Med 1980;12:73-76.

13. Medicolegal Forms With Legal Analysis. Chicago, American Medical Association, 1976, p. 83.

14. Paris JJ: Compulsory medical treatment and religious freedom: Whose law shall prevail? Univ San Francisco Law Rev 1975;10:1-35.

15. Kelly AD: Aequanimitas Can Med Assoc J 1967;96:432.

16. Kolins J: Fatalities from blood transfusion. JAMA 1981;245:1120.

17. Harvey JP: A question of craftsmanship. Contemp Orthop 1980;2:629.

18. Bolooki H: Treatment of Jehovah’s Witnesses: Example of good care. Miami Med 1981;51:25-26.

19. Gardner B, Bivona J, Alfonso A, et al: Major surgery in Jehovah’s Witnesses. NY State J Med 1976;76:765-766.