ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಶ್ನೆ 7

ಸೆಕ್ಸ್‌ಗೆ ಒತ್ತಾಯ ಮಾಡಿದರೆ ಏನು ಮಾಡೋದು?

ಸೆಕ್ಸ್‌ಗೆ ಒತ್ತಾಯ ಮಾಡಿದರೆ ಏನು ಮಾಡೋದು?

ಪ್ರಾಮುಖ್ಯವೇಕೆ?

ಇದರ ಬಗ್ಗೆ ನೀವು ಮಾಡುವ ನಿರ್ಧಾರಗಳು ನಿಮ್ಮ ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತೆ.

ನೀವು ಈ ಜಾಗದಲ್ಲಿ ಇದ್ದಿದ್ದರೆ . . .

ಇದನ್ನು ಚಿತ್ರಿಸಿಕೊಳ್ಳಿ: ಹೆದರ್‌ ಮತ್ತೆ ಮೈಕ್‌ ಇಬ್ಬರಿಗೂ ಎರಡು ತಿಂಗಳ ಪರಿಚಯವಷ್ಟೇ. ಆದ್ರೆ ಅದು ಅನೇಕ ವರ್ಷಗಳಿಂದ ಇರೋ ಪರಿಚಯದಷ್ಟು ಆಪ್ತವಾಗಿದೆ. ಇಬ್ಬರೂ ಗಂಟೆಗಟ್ಟಲೆ ಫೋನಲ್ಲಿ ಮಾತಾಡುತ್ತಾ, ಮೆಸೆಜ್‌ ಮಾಡುತ್ತಾ ಇರುತ್ತಾರೆ. ಎಷ್ಟರ ಮಟ್ಟಿಗೆ ಆಪ್ತರಾಗಿದ್ದಾರೆ ಅಂದರೆ ಒಬ್ಬರು ಒಂದು ವಾಕ್ಯನಾ ಶುರು ಮಾಡಿದರೆ ಮತ್ತೊಬ್ಬರು ಮುಗಿಸುವಷ್ಟು! ಆದ್ರೆ ಮೈಕ್‌ ಇಷ್ಟಕ್ಕೆ ತೃಪ್ತನಾಗಲಿಲ್ಲ.

ಕಳೆದ ಎರಡು ತಿಂಗಳಲ್ಲಿ ಹೆದರ್‌ ಮತ್ತೆ ಮೈಕ್‌ ಇಬ್ಬರೂ ಕೈಕೈ ಹಿಡಿದುಕೊಂಡು ಮುತ್ತು ಕೊಡೋವರೆಗೂ ಮುಂದುವರೆದಿದ್ದಾರೆ. ಆದ್ರೆ ಇದಕ್ಕಿಂತ ಮುಂದೆ ಹೋಗೋದಕ್ಕೆ ಹೆದರ್‌ಗೆ ಇಷ್ಟ ಇಲ್ಲ. ಅದೇ ಸಮಯದಲ್ಲಿ ಅವನನ್ನ ಕಳಕೊಳ್ಳೋಕೂ ಅವಳಿಗೆ ಇಷ್ಟ ಇಲ್ಲ. ಮೈಕ್‍ನ ಜೀವನದಲ್ಲಿ ಅವಳೇ ಎಲ್ಲಾ! ‘ನಾನು ಮೈಕ್‌ ಇಬ್ಬರೂ ಪ್ರೀತಿಸುತ್ತಿದ್ದೀವಿ ಅಂದಮೇಲೆ . . .’ ಅಂತ ಮನಸ್ಸಿನಲ್ಲೇ ಅಂದುಕೊಳ್ಳುತ್ತಾಳೆ ಹೆದರ್‌.

ಹೆದರ್‌ನ ಜಾಗದಲ್ಲಿ ನೀವು ಇದ್ದಿದ್ದರೆ ಏನು ಮಾಡುತ್ತಿದ್ದಿರಿ?

ಸ್ವಲ್ಪ ಯೋಚಿಸಿ!

ಸೆಕ್ಸ್‌ ದೇವರು ಕೊಟ್ಟಿರುವ ಒಂದು ಉಡುಗೊರೆ. ಅದು ವಿವಾಹಿತರಿಗೆ ಮಾತ್ರ. ಮದುವೆಗೆ ಮುಂಚೆಯೇ ಅದರಲ್ಲಿ ಒಳಗೂಡುವುದಾದರೆ ದೇವರು ಕೊಟ್ಟ ಆ ಉಡುಗೊರೆಯನ್ನು ದುರುಪಯೋಗಿಸಿದಂತೆ. ಸೆಕ್ಸ್‌ ಅನ್ನೊದು ಉಡುಗೊರೆಯಾಗಿ ಸಿಕ್ಕಿದ ಸುಂದರ ಬಟ್ಟೆಯಂತೆ. ಅಂಥ ಬಟ್ಟೆಯನ್ನು ನೀವು ಧೂಳು ಒರೆಸಲು ಬಳಸುತ್ತೀರಾ?

ಪ್ರಕೃತಿಯ ನಿಯಮವನ್ನು ಮೀರಿದರೆ ಅದರಿಂದ ಅಪಾಯವೇ ಹೆಚ್ಚು. ಉದಾಹರಣೆಗೆ ಗುರುತ್ವಾಕರ್ಷಣಾ ನಿಯಮವನ್ನು ನಾವು ಮೀರುವುದಾದರೆ ಅದರಿಂದಾಗೋ ಪರಿಣಾಮಗಳನ್ನು ಕೂಡ ನಾವೇ ಅನುಭವಿಸಬೇಕಾಗುತ್ತೆ. ಅದೇ ರೀತಿ ನೈತಿಕ ನಿಯಮಗಳನ್ನು ಮೀರಿದರೂ ಕೂಡ ‘ಮಾಡಿದ್ದುಣ್ಣೋ ಮಾರಾಯ’ ಎನ್ನುವಂತೆ ಅಪಾಯ ಖಂಡಿತ. ಅದರಲ್ಲಿ ಒಂದು ನಿಯಮ: ‘ಹಾದರದಿಂದ ದೂರವಿರಿ.’—1 ಥೆಸಲೊನೀಕ 4:3.

ಈ ನಿಯಮವನ್ನು ಮುರಿದರೆ ಏನಾಗುತ್ತೆ? ಬೈಬಲ್‌ ಹೇಳುವುದು: “ಜಾರತ್ವವನ್ನು ರೂಢಿಮಾಡಿಕೊಂಡಿರುವವನು ತನ್ನ ದೇಹಕ್ಕೇ ವಿರುದ್ಧವಾಗಿ ಪಾಪಮಾಡುವವನಾಗಿದ್ದಾನೆ.” (1 ಕೊರಿಂಥ 6:18) ಇದು ನಿಜನಾ?

ಒಂದು ಸಂಶೋಧನೆಯ ಪ್ರಕಾರ ಮದುವೆಗೆ ಮುಂಚೆ ಲೈಂಗಿಕ ಸಂಬಂಧ ಇಟ್ಟುಕೊಂಡಿದ್ದ ಯುವಜನರು ಈ ಮುಂದಿನ ಪರಿಣಾಮಗಳಲ್ಲಿ ಒಂದನ್ನಾದರೂ ಎದುರಿಸಲೇಬೇಕಾಗುತ್ತದೆ:

  • ವಿಷಾದ. ಮದುವೆಗೆ ಮುಂಚೆಯೇ ಸೆಕ್ಸ್‌ನಲ್ಲಿ ಒಳಗೂಡಿದ ಯುವಜನರು ನಂತರ ಪಶ್ಚಾತ್ತಾಪಪಟ್ಟಿದ್ದಾರೆ.

  • ಸಂದೇಹ. ಒಂದುವೇಳೆ ಮದುವೆಗೆ ಮುಂಚೆಯೇ ಲೈಂಗಿಕತೆಯಲ್ಲಿ ಒಳಗೂಡಿದರೆ ವಿಶ್ವಾಸ ಕಳೆದುಕೊಂಡು ಬಿಡುತ್ತಾರೆ. ‘ಇವನು/ಇವಳು ಈ ಮುಂಚೆ ಬೇರೆ ಯಾರ ಜೊತೆಯಾದರೂ ಲೈಂಗಿಕತೆಯಲ್ಲಿ ಒಳಗೂಡಿದ್ರಾ’ ಅನ್ನೊ ಸಂಶಯ ಬಂದುಬಿಡುತ್ತದೆ.

  • ನಿರಾಸೆ. ಯಾರು ತಮ್ಮನ್ನು ರಕ್ಷಿಸುತ್ತಾರೋ ತಮ್ಮನ್ನು ದುರ್ಬಳಕೆ ಮಾಡಿಕೊಳ್ಳೋದಿಲ್ಲವೋ ಅಂತ ಹುಡುಗರನ್ನೇ ಹೆಚ್ಚಿನ ಹುಡುಗಿಯರು ಇಷ್ಟಪಡುತ್ತಾರೆ. ಅಲ್ಲದೆ ಯಾರು ತುಂಬಾ ಸಲಿಗೆಯಿಂದ ನಡೆದುಕೊಳ್ಳುತ್ತಾರೋ ಅಂಥ ಹುಡುಗಿಯರನ್ನು ಹುಡುಗರು ಅಷ್ಟಾಗಿ ಇಷ್ಟಪಡುವುದಿಲ್ಲ.

  • ಎಚ್ಚರ!!: ಒಂದುವೇಳೆ ಮದುವೆಗೆ ಮುಂಚೆಯೇ ಸೆಕ್ಸ್‌ನಲ್ಲಿ ಒಳಗೂಡಿದರೆ ನಿಮ್ಮ ಅಮೂಲ್ಯವಾದ ಸ್ವತ್ತನ್ನು ಕಳೆದುಕೊಂಡಂತೆ. (ರೋಮನ್ನರಿಗೆ 1:24) ಏಕೆಂದರೆ ನಿಮ್ಮ ದೇಹ ತುಂಬಾ ಅಮೂಲ್ಯ!

‘ಹಾದರದಿಂದ ದೂರವಿರಲು’ ನಿಮ್ಮಿಂದ ಸಾಧ್ಯವಿದೆ ಎಂದು ತೋರಿಸಿಕೊಡಿ. (1 ಥೆಸಲೊನೀಕ 4:3) ಆತುರಪಡಬೇಡಿ, ಮದುವೆ ಆದಮೇಲೆ ನೀವು ಸೆಕ್ಸ್‌ ಅನುಭವಿಸಬಹುದು. ಆಗ ಸಂತೋಷ, ತೃಪ್ತಿ ಇರುತ್ತೆ. ಆಗ ಸಂದೇಹ, ಪಶ್ಚಾತ್ತಾಪಕ್ಕೆ ಜಾಗ ಇರಲ್ಲ.—ಜ್ಞಾನೋಕ್ತಿ 7:22, 23; 1 ಕೊರಿಂಥ 7:3.

ನೀವೇನು ಹೇಳುತ್ತೀರಾ?

  • ಯಾರು ನಿಮ್ಮನ್ನ ನಿಜವಾಗಿ ಪ್ರೀತಿಸುತ್ತಾರೋ ಅಂಥವರು ನಿಮಗೆ ಶಾರೀರಿಕವಾಗಿ ಮತ್ತು ಭಾವನಾತ್ಮಕವಾಗಿ ಹಾನಿ ಮಾಡುತ್ತಾರಾ?

  • ಯಾರು ನಿಮ್ಮನ್ನ ನಿಜವಾಗಿ ಪ್ರೀತಿಸುತ್ತಾರೋ ಅಂಥವರು ದೇವರೊಂದಿಗಿನ ನಿಮ್ಮ ಸ್ನೇಹನಾ ಮುರಿಯೋದಕ್ಕೆ ಹೇಳುತ್ತಾರಾ?—ಇಬ್ರಿಯ 13:4.