ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಮ್ಮ ಮಾಹಿತಿಗಾಗಿ

ನಿಮ್ಮ ಮಾಹಿತಿಗಾಗಿ

ಸಹಾಯಕರು ನಿಮ್ಮ ನೆರವಿಗಾಗಿ ಸಹಾಯಕರನ್ನು ನೇಮಿಸಲಾಗಿದೆ. ವಾಹನ ನಿಲುಗಡೆ, ಜನರ ಗುಂಪು ನಿಯಂತ್ರಿಸೋದು, ಸೀಟು ಹಿಡಿಯೋದು ಮುಂತಾದ ವಿಷಯಗಳ ಕುರಿತು ಅವ್ರು ಕೊಡೋ ಮಾರ್ಗದರ್ಶನ ಪಾಲಿಸಿ ಪೂರ್ಣ ಸಹಕಾರ ಕೊಡಿ.

ಕಾಣಿಕೆಗಳು ಎಲ್ರು ಅಧಿವೇಶನ ಕಾರ್ಯಕ್ರಮ ಆನಂದಿಸಿ ಯೆಹೋವ ದೇವರಿಗೆ ಆಪ್ತರಾಗಲು ಸೀಟಿನ ವ್ಯವಸ್ಥೆ, ಧ್ವನಿವರ್ಧಕ ಮತ್ತು ಇನ್ನಿತರ ಸೌಲಭ್ಯ ಮಾಡಲಾಗಿದೆ. ಇದಕ್ಕಾಗಿ ಖರ್ಚು ತಗಲುತ್ತೆ. ನೀವು ಮನಸಾರೆ ಕೊಡುವ ಕಾಣಿಕೆಗಳು ಈ ಎಲ್ಲ ಖರ್ಚುಗಳನ್ನು ನಿಭಾಯಿಸೊಕೂ, ನಮ್ಮ ಲೋಕವ್ಯಾಪಕ ಕೆಲಸಕ್ಕೂ ನೆರವಾಗುತ್ತೆ. ನಿಮ್ಮ ಅನುಕೂಲಕ್ಕಾಗಿ ಅಲ್ಲಲ್ಲಿ ಕಾಣಿಕೆ ಪೆಟ್ಟಿಗೆಗಳು ಇರುತ್ತವೆ. ಕಾಣಿಕೆಯನ್ನು donate.dan124.comನಲ್ಲೂ ಕಳಿಸಬಹುದು. ದೇವರ ಕೆಲಸಕ್ಕೆ ಮನಸಾರೆ ಕೊಡುತ್ತಿರುವ ಕಾಣಿಕೆಯನ್ನು ಆಡಳಿತ ಮಂಡಲಿಯವ್ರು ತುಂಬ ಮೆಚ್ಚುತ್ತಾರೆ.

ಪ್ರಥಮ ಚಿಕಿತ್ಸೆ ಇದು ತುರ್ತು ಪರಿಸ್ಥಿತಿಗಳಿಗಾಗಿ ಮಾತ್ರ ಅನ್ನೋದನ್ನು ನೆನಪಿಡಿ

ಲಾಸ್ಟ್‌ ಆ್ಯಂಡ್‌ ಫೌಂಡ್‌ ಬೇರೆಯವ್ರ ವಸ್ತು ಸಿಕ್ಕಿದ್ರೆ ಲಾಸ್ಟ್‌ ಆ್ಯಂಡ್‌ ಫೌಂಡ್‌ ಇಲಾಖೆಗೆ ಕೊಡಿ. ನಿಮ್ಮ ವಸ್ತು ಕಳೆದು ಹೋಗಿದ್ರೆ ಈ ಇಲಾಖೆಯವರತ್ರ ವಿಚಾರಿಸಿ. ಹೆತ್ತವರ ಕೈತಪ್ಪಿದ ಮಕ್ಕಳನ್ನು ಈ ಇಲಾಖೆಗೆ ಒಪ್ಪಿಸಿ. ಆದ್ರೆ ಈ ಇಲಾಖೆಗೆ ಹೆಚ್ಚು ತೊಂದರೆ ಆಗದಿರಲು ಮಕ್ಕಳು ನಿಮ್ಮೊಟ್ಟಿಗೇ ಇರುವಂತೆ ದಯವಿಟ್ಟು ನೋಡಿಕೊಳ್ಳಿ.

ಸೀಟಿನ ವ್ಯವಸ್ಥೆ ದಯವಿಟ್ಟು ಬೇರೆಯವರಿಗೂ ಪರಿಗಣನೆ ತೋರಿಸಿ. ನಿಮ್ಜೊತೆ ಕಾರಲ್ಲಿ ಬರೋವ್ರಿಗೆ, ನಿಮ್ಮ ಮನೇಲಿ ತಂಗಿರುವವ್ರಿಗೆ, ಬೈಬಲ್‌ ವಿದ್ಯಾರ್ಥಿಗಳಿಗೆ ಮಾತ್ರ ಸೀಟುಗಳನ್ನು ಹಿಡಿಯಬಹುದು. ಸುಮ್ಮ ಸುಮ್ಮನೆ ಸೀಟುಗಳನ್ನು ಹಿಡಿಬೇಡಿ.

ಸ್ವಯಂ ಸೇವೆ ಅಧಿವೇಶನ ಕೆಲಸಕ್ಕೆ ಸಹಾಯಮಾಡಲು ಇಷ್ಟಪಡುವುದಾದ್ರೆ ಮಾಹಿತಿ ಮತ್ತು ಸ್ವಯಂ​ಸೇವೆಯ ಇಲಾಖೆಯನ್ನು ಸಂಪರ್ಕಿಸಿ.

ವಿಶೇಷ ಕೂಟಗಳು

ರಾಜ್ಯ ಪ್ರಚಾರಕರ ಶಾಲೆ 23ರಿಂದ 65 ವಯಸ್ಸಿನೊಳಗಿನ ಪಯನೀಯರರು ಹೆಚ್ಚು ಸೇವೆ ಮಾಡಲು ಬಯಸೋದಾದ್ರೆ ಈ ಕೂಟಕ್ಕೆ ಹಾಜರಾಗಬಹುದು. ಈ ಶಾಲೆಗೆ ಅರ್ಜಿಹಾಕಲು ಇಷ್ಟಪಡೋವ್ರಿಗಾಗಿ ಭಾನುವಾರ ಮಧ್ಯಾಹ್ನ ಕೂಟ ನಡೆಸಲಾಗುತ್ತೆ. ಕೂಟ ನಡೆಯೋ ಸ್ಥಳ ಹಾಗೂ ಸಮಯ ತಿಳಿಸಲಾಗುತ್ತೆ.

ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯಿಂದ ಏರ್ಪಡಿಸಲಾಗಿದೆ

© 2020 Watch Tower Bible and Tract Society of Pennsylvania