ಆದಿಕಾಂಡ 2:1-25
2 ಈ ರೀತಿ ಆಕಾಶ,* ಭೂಮಿ, ಅವುಗಳಲ್ಲಿ ಇರೋ ಎಲ್ಲವನ್ನ ಸೃಷ್ಟಿಸೋ ಕೆಲಸ ಮುಗಿತು.+
2 ಏಳನೇ ದಿನ ಆರಂಭವಾಗೋ ಮೊದ್ಲು ದೇವರು ತಾನು ಮಾಡ್ತಿದ್ದ ಕೆಲಸ ಮುಗಿಸಿದನು. ಎಲ್ಲ ಕೆಲಸ ಮುಗಿಸಿ ಏಳನೇ ದಿನ ವಿಶ್ರಾಂತಿ ಪಡಿಯೋಕೆ ಶುರು ಮಾಡಿದನು.+
3 ದೇವರು ಏಳನೇ ದಿನವನ್ನ ಆಶೀರ್ವದಿಸ್ತಾ ಅದು ಪವಿತ್ರ ಅಂದನು. ಯಾಕಂದ್ರೆ ದೇವರು ತಾನು ಮಾಡಬೇಕಂತ ಇದ್ದ ಎಲ್ಲವನ್ನ ಸೃಷ್ಟಿ ಮಾಡಿ ಅವತ್ತಿಂದ ವಿಶ್ರಾಂತಿ ಮಾಡ್ತಾ ಇದ್ದಾನೆ.
4 ಹೀಗೆ ಭೂಮಿ ಆಕಾಶ ಸೃಷ್ಟಿ ಆಯ್ತು. ಆ ದಿನ* ಯೆಹೋವ* ದೇವರು ಭೂಮಿ ಆಕಾಶವನ್ನ ಸೃಷ್ಟಿ ಮಾಡಿದನು.+
5 ಅಲ್ಲಿ ತನಕ ಭೂಮಿ ಮೇಲೆ ಪೊದೆ ಗಿಡಗಳು ಇರಲಿಲ್ಲ. ಯಾಕಂದ್ರೆ ಯೆಹೋವ ದೇವರು ಭೂಮಿ ಮೇಲೆ ಮಳೆ ಬೀಳೋ ಹಾಗೆ ಮಾಡಿರಲಿಲ್ಲ. ಭೂಮಿಯಲ್ಲಿ ವ್ಯವಸಾಯ ಮಾಡೋಕೆ ಮನುಷ್ಯನೂ ಇರಲಿಲ್ಲ.
6 ಆದ್ರೆ ಭೂಮಿಯಿಂದ ನೀರು ಆವಿಯಾಗಿ ಹೋಗಿ ಆಮೇಲೆ ಇಡೀ ನೆಲನ ಒದ್ದೆ ಮಾಡ್ತಿತ್ತು.
7 ಆಮೇಲೆ ಯೆಹೋವ ದೇವರು ನೆಲದ ಮಣ್ಣಿಂದ*+ ಮನುಷ್ಯನನ್ನ ರಚಿಸಿ ಅವನ ಮೂಗೊಳಗೆ ಜೀವಶ್ವಾಸ ಊದಿದನು.+ ಆಗ ಆ ಮನುಷ್ಯನಿಗೆ ಜೀವ ಬಂತು.*+
8 ಯೆಹೋವ ದೇವರು ಪೂರ್ವ ದಿಕ್ಕಲ್ಲಿರೋ ಏದೆನಿನಲ್ಲಿ+ ಒಂದು ತೋಟ ಮಾಡಿ ಆ ಮನುಷ್ಯನನ್ನ ಅಲ್ಲಿ ಇರೋಕೆ ಬಿಟ್ಟನು.+
9 ಆ ತೋಟದಲ್ಲಿ ನೋಡೋಕೆ ಸುಂದರವಾದ, ತಿನ್ನೋಕೆ ಒಳ್ಳೊಳ್ಳೆ ಹಣ್ಣು ಕೊಡೋ ಎಲ್ಲ ಮರಗಳನ್ನ ಬೆಳೆಯೋ ಹಾಗೆ ಯೆಹೋವ ದೇವರು ಮಾಡಿದನು. ಅಷ್ಟೇ ಅಲ್ಲ ತೋಟದ ಮಧ್ಯದಲ್ಲಿ ಜೀವದ ಮರ*+ ಮತ್ತು ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರ*+ ಬೆಳೆಯೋ ಹಾಗೆ ಮಾಡಿದನು.
10 ಏದೆನಿಂದ ಒಂದು ನದಿ ಹರಿತಿತ್ತು. ಅದ್ರಿಂದ ಆ ತೋಟಕ್ಕೆ ನೀರು ಸಿಗ್ತಿತ್ತು. ಆ ನದಿ ಕವಲೊಡೆದು ನಾಲ್ಕು ನದಿಗಳಾಗಿ ಹರಿತು.
11 ಮೊದಲನೇ ನದಿ ಹೆಸರು ಪೀಶೋನ್. ಇದು ಚಿನ್ನ ಸಿಗೋ ಹವೀಲಾ ದೇಶದ ಸುತ್ತ ಹರಿಯುತ್ತೆ.
12 ಆ ದೇಶದಲ್ಲಿ ಸಿಗೋ ಚಿನ್ನ ಶುದ್ಧ. ಅಲ್ಲಿ ಸುಗಂಧ ಅಂಟು, ಗೋಮೇದಕ ರತ್ನನೂ ಸಿಗುತ್ತೆ.
13 ಎರಡನೇ ನದಿ ಹೆಸರು ಗೀಹೋನ್. ಇದು ಕೂಷ್ ದೇಶದ ಸುತ್ತ ಹರಿಯುತ್ತೆ.
14 ಮೂರನೇ ನದಿ ಹೆಸರು ಹಿದ್ದೆಕೆಲ್.*+ ಇದು ಅಶ್ಶೂರ್+ ದೇಶದ ಪೂರ್ವಕ್ಕೆ ಹರಿಯುತ್ತೆ. ನಾಲ್ಕನೇ ನದಿ ಹೆಸರು ಯೂಫ್ರೆಟಿಸ್.+
15 ಯೆಹೋವ ದೇವರು ಮನುಷ್ಯನನ್ನ ಏದೆನ್ ತೋಟಕ್ಕೆ ಕರ್ಕೊಂಡು ಹೋದನು. ವ್ಯವಸಾಯ ಮಾಡೋಕೆ, ಅದನ್ನ ನೋಡ್ಕೊಳ್ಳೋಕೆ ಅವನನ್ನ ಅಲ್ಲಿ ಬಿಟ್ಟನು.+
16 ಅಷ್ಟೇ ಅಲ್ಲ ಯೆಹೋವ ದೇವರು ಅವನಿಗೆ ಈ ಆಜ್ಞೆ ಕೊಟ್ಟನು: “ನೀನು ಈ ತೋಟದಲ್ಲಿರೋ ಎಲ್ಲ ಮರದ ಹಣ್ಣನ್ನ ಹೊಟ್ಟೆ ತುಂಬ ತಿನ್ನಬಹುದು.+
17 ಆದ್ರೆ ಒಳ್ಳೇದರ ಕೆಟ್ಟದ್ದರ ತಿಳುವಳಿಕೆ ಕೊಡೋ ಮರದ ಹಣ್ಣನ್ನ ಮಾತ್ರ ತಿನ್ನಬಾರದು. ತಿಂದ್ರೆ ಅದೇ ದಿನ ಸತ್ತು ಹೋಗ್ತಿಯ.”+
18 ಆಮೇಲೆ ಯೆಹೋವ ದೇವರು “ಮನುಷ್ಯ ಒಬ್ಬನೇ ಇರೋದು ಒಳ್ಳೇದಲ್ಲ. ಅವನಿಗೆ ಸರಿಯಾದ ಜೋಡಿ ಕೊಡ್ತೀನಿ. ಅವನಿಗಾಗಿ ಒಬ್ಬ ಸಹಾಯಕಿಯನ್ನ ಮಾಡ್ತೀನಿ”+ ಅಂದನು.
19 ಯೆಹೋವ ದೇವರು ಮಣ್ಣಿಂದ ಎಲ್ಲ ಕಾಡುಪ್ರಾಣಿ, ಆಕಾಶದಲ್ಲಿ ಹಾರಾಡೋ ಎಲ್ಲ ಜೀವಿಗಳನ್ನ* ರೂಪಿಸ್ತಿದ್ದ. ಆಮೇಲೆ ಅವುಗಳನ್ನ ಅವನ ಹತ್ರ ತಂದು ಅವನು ಪ್ರತಿಯೊಂದಕ್ಕೆ ಏನೇನು ಹೆಸರಿಡ್ತಾನೆ ಅಂತ ನೋಡಿದನು. ಅವನು ಒಂದೊಂದು ಪ್ರಾಣಿಗೆ ಏನು ಹೆಸರಿಟ್ನೋ ಅದೇ ಅದ್ರ ಹೆಸರಾಯ್ತು.+
20 ಹೀಗೆ ಅವನು ಎಲ್ಲ ಸಾಕುಪ್ರಾಣಿಗೆ, ಆಕಾಶದಲ್ಲಿ ಹಾರಾಡೋ ಎಲ್ಲ ಜೀವಿಗೆ, ಪ್ರತಿಯೊಂದು ಕಾಡುಪ್ರಾಣಿಗೆ ಹೆಸರಿಟ್ಟ. ಆದ್ರೆ ಅವನಿಗೆ ಸಹಾಯ ಮಾಡೋಕೆ ಸರಿಯಾದ ಜೋಡಿ* ಇರಲಿಲ್ಲ.
21 ಹಾಗಾಗಿ ಯೆಹೋವ ದೇವರು ಅವನಿಗೆ ಗಾಢ ನಿದ್ದೆ ಬರಿಸಿದ. ಅವನು ನಿದ್ದೆ ಮಾಡ್ತಿದ್ದಾಗ ಅವನ ಪಕ್ಕೆ ಎಲುಬುಗಳಲ್ಲಿ ಒಂದನ್ನ ತೆಗೆದು ಆ ಜಾಗವನ್ನ ಮಾಂಸದಿಂದ ಮುಚ್ಚಿದನು.
22 ಆಮೇಲೆ ಯೆಹೋವ ದೇವರು ಆ ಮನುಷ್ಯನಿಂದ ತೆಗೆದ ಪಕ್ಕೆಲುಬನ್ನ ಸ್ತ್ರೀಯಾಗಿ ರೂಪಿಸಿದನು. ಅವಳನ್ನ ಅವನ ಹತ್ರ ಕರ್ಕೊಂಡು ಬಂದನು.+
23 ಆಗ ಅವನು ಹೀಗೆ ಹೇಳಿದ:
“ಇವಳೀಗ ನನ್ನ ಎಲುಬುಗಳಿಂದ ಬಂದ ಎಲುಬು,ನನ್ನ ಮಾಂಸದಿಂದ ಬಂದ ಮಾಂಸ ಆಗಿದ್ದಾಳೆ.
ಇವಳು ನರನಿಂದ ಬಂದಿರೋದ್ರಿಂದಇವಳನ್ನ ನಾರೀ ಅಂತ ಕರಿತಾರೆ.”+
24 ಹಾಗಾಗಿ ಪುರುಷ ತನ್ನ ಅಪ್ಪಅಮ್ಮನನ್ನ ಬಿಟ್ಟು ಹೆಂಡತಿ ಜೊತೆ ಇರ್ತಾನೆ.* ಅವರಿಬ್ರು ಒಂದೇ ದೇಹ ಆಗ್ತಾರೆ.+
25 ಆ ಪುರುಷ ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ರೂ+ ನಾಚಿಕೆಪಡಲಿಲ್ಲ.
ಪಾದಟಿಪ್ಪಣಿ
^ ಅದು ನಕ್ಷತ್ರ ಗ್ರಹ ಗ್ಯಾಲಕ್ಸಿಗಳು ಇರೋ ವಿಶ್ವ.
^ ಅದು, ಸೃಷ್ಟಿಯ ಆರು ದಿನಗಳನ್ನ ಸೂಚಿಸುತ್ತೆ.
^ ಇಲ್ಲಿ ದೇವರ ವೈಯಕ್ತಿಕ ಹೆಸರು יהוה (YHWH) ಮೊತ್ತಮೊದಲ ಸಾರಿ ಬಂದಿದೆ. ಇದು ಬೇರೆಲ್ಲಾ ದೇವರುಗಳಿಂದ ಯೆಹೋವ ಬೇರೆ ಅಂತ ತೋರಿಸುತ್ತೆ. ಪರಿಶಿಷ್ಟ ಎ4 ನೋಡಿ.
^ ಅಥವಾ “ಧೂಳಿಂದ.”
^ ಅಥವಾ “ಟೈಗ್ರಿಸ್.”
^ ಇಲ್ಲಿರೋ ಹೀಬ್ರು ಪದ ಪಕ್ಷಿಗೆ ಮಾತ್ರ ಅಲ್ಲ, ಕೀಟದ ತರ ರೆಕ್ಕೆ ಇರೋ ಬೇರೆ ಜೀವಿಗಳಿಗೂ ಸೂಚಿಸುತ್ತೆ.
^ ಅಥವಾ “ಸಹಾಯಕಿ.”
^ ಇದರ ಹೀಬ್ರು ಪದದ ಅರ್ಥ “ಅಂಟಿನ ತರ ಗಟ್ಟಿಯಾಗಿ ಅಂಟಿಕೊಳ್ಳೋದು.”