ಕೀರ್ತನೆ 1:1-6
1 ಕೆಟ್ಟವನ ಮಾತು ಕೇಳದೆ,ಪಾಪಿಗಳ ದಾರಿಯಲ್ಲಿ ಹೋಗದೆ,+ಗೇಲಿ ಮಾಡೋರ ಜೊತೆ ಕೂತುಕೊಳ್ಳದೆ+ ಇರೋನು ಸಂತೋಷವಾಗಿ ಇರ್ತಾನೆ.
2 ಅವನು ಯೆಹೋವನ ನಿಯಮಗಳನ್ನ ಪಾಲಿಸೋದ್ರಲ್ಲಿ ಖುಷಿಪಡ್ತಾನೆ,+ಆತನ ನಿಯಮ ಪುಸ್ತಕವನ್ನ ಹಗಲೂರಾತ್ರಿ ಓದಿ ಧ್ಯಾನಿಸ್ತಾನೆ.*+
3 ಅವನು ನೀರಿನ ಕಾಲುವೆ ಹತ್ರ ಇರೋ ಮರದ ತರ ಇದ್ದಾನೆ,ಅಂಥ ಮರ ಸರಿಯಾದ ಸಮಯಕ್ಕೆ ಹಣ್ಣು ಕೊಡುತ್ತೆ,ಅದರ ಎಲೆ ಯಾವತ್ತೂ ಒಣಗಿ ಹೋಗಲ್ಲ.
ಅವನು ಕೈಹಾಕೋ ಎಲ್ಲ ಕೆಲಸ ಚೆನ್ನಾಗಿ ನಡಿಯುತ್ತೆ.+
4 ಆದ್ರೆ ದುಷ್ಟರು ಹಾಗಿರಲ್ಲ,ಅವರು ಗಾಳಿಗೆ ಹಾರಿ ಹೋಗೋ ಹೊಟ್ಟಿನ ತರ ಇದ್ದಾರೆ.
5 ಹಾಗಾಗಿ ತೀರ್ಪಿನ ದಿನ ಬಂದಾಗ ದುಷ್ಟರಿಗೆ ನಿಲ್ಲಕ್ಕಾಗಲ್ಲ,+ಪಾಪಿಗಳು ನೀತಿವಂತರ ಗುಂಪಲ್ಲಿ ಇರಕ್ಕಾಗಲ್ಲ.+
6 ಯಾಕಂದ್ರೆ ನೀತಿವಂತನ ದಾರಿ ಬಗ್ಗೆ ಯೆಹೋವಗೆ ಚೆನ್ನಾಗಿ ಗೊತ್ತು.+
ಆದ್ರೆ ದುಷ್ಟನ ದಾರಿ ನಾಶವಾಗಿ ಹೋಗುತ್ತೆ.+
ಪಾದಟಿಪ್ಪಣಿ
^ ಅಥವಾ “ಮೆಲುಧ್ವನಿಯಲ್ಲಿ ಓದ್ತಾನೆ.”