ಕೀರ್ತನೆ 100:1-5
ಧನ್ಯವಾದದ ಮಧುರ ಗೀತೆ.
100 ಇಡೀ ಭೂಮಿಯ ಜನ್ರೇ, ಯೆಹೋವನಿಗೆ ಜೈಕಾರ ಹಾಕಿ.+
2 ಸಂತೋಷದಿಂದ ಯೆಹೋವನ ಸೇವೆ ಮಾಡಿ.+
ಸಂತೋಷದಿಂದ ಜೈಕಾರ ಹಾಕ್ತಾ ಆತನ ಸನ್ನಿಧಿಗೆ ಬನ್ನಿ.
3 ಯೆಹೋವನೇ ದೇವರು ಅಂತ ತಿಳ್ಕೊಳ್ಳಿ.*+
ನಮ್ಮನ್ನ ಸೃಷ್ಟಿಸಿದ್ದು ಆತನೇ, ನಾವು ಆತನಿಗೆ ಸೇರಿದವರು.+
ನಾವು ಆತನ ಜನ್ರು, ಆತನು ಪರಿಪಾಲಿಸೋ ಜನ್ರು.+
4 ಧನ್ಯವಾದ ಹೇಳ್ತಾ ಆತನ ಬಾಗಿಲ ಹತ್ರ ಬನ್ನಿ,+ಹೊಗಳ್ತಾ ಆತನ ಅಂಗಳಕ್ಕೆ ಬನ್ನಿ.+
ಆತನಿಗೆ ಧನ್ಯವಾದ ಹೇಳಿ, ಆತನ ಹೆಸ್ರನ್ನ ಕೊಂಡಾಡಿ.+
5 ಯಾಕಂದ್ರೆ ಯೆಹೋವ ಒಳ್ಳೆಯವನು.+
ಆತನ ಪ್ರೀತಿ ಶಾಶ್ವತ,ಆತನ ನಂಬಿಗಸ್ತಿಕೆ ನಿರಂತರ.+
ಪಾದಟಿಪ್ಪಣಿ
^ ಅಥವಾ “ಒಪ್ಕೊಳ್ಳಿ.”