ಕೀರ್ತನೆ 102:1-28
ಕುಗ್ಗಿಹೋಗಿರೋ ವ್ಯಕ್ತಿ ಬೇಜಾರಲ್ಲಿ ಇರೋವಾಗ* ಯೆಹೋವನ ಮುಂದೆ ತನ್ನ ಚಿಂತೆ ತೋಡ್ಕೊಳ್ತಾ ಮಾಡೋ ಪ್ರಾರ್ಥನೆ.+
102 ಯೆಹೋವ, ನನ್ನ ಪ್ರಾರ್ಥನೆ ಕೇಳಿಸ್ಕೊ,+ಸಹಾಯಕ್ಕಾಗಿ ನಾನಿಡೋ ಮೊರೆ ನಿನಗೆ ಮುಟ್ಟಲಿ.+
2 ನಾನು ಕಷ್ಟದಲ್ಲಿ ಇರೋವಾಗ ನಿನ್ನ ಮುಖನ ನನ್ನಿಂದ ಮರೆಮಾಡ್ಕೊಬೇಡ.+
ನಾನು ಹೇಳೋದು ಕೇಳು,*ನಾನು ಕರೆದ ತಕ್ಷಣ ನನಗೆ ಉತ್ರ ನೀಡು.+
3 ಯಾಕಂದ್ರೆ ನನ್ನ ದಿನಗಳು ಹೊಗೆ ತರ ಕಣ್ಮರೆ ಆಗ್ತಿವೆ,ನನ್ನ ಎಲುಬು ಬೆಂಕಿಗೂಡಿನ ತರ ಉರಿದು ಕಪ್ಪಾಗಿದೆ.+
4 ನನ್ನ ಹೃದಯ ಸೂರ್ಯನ ಶಾಖಕ್ಕೆ ಒಣಗಿಹೋಗಿರೋ ಹುಲ್ಲಿನ ತರ ಆಗಿದೆ.+
ನಾನು ಊಟ ಮಾಡೋದನ್ನೇ ಮರೆತು ಹೋಗ್ತಿದ್ದೀನಿ.
5 ನನ್ನ ಯಾತನೆ ಎಷ್ಟು ಜಾಸ್ತಿ ಆಗಿದೆ ಅಂದ್ರೆ ನರಳಿ ನರಳಿ,+ನನ್ನ ಚರ್ಮ ಎಲುಬುಗಳಿಗೆ ಅಂಟ್ಕೊಂಡಿದೆ.+
6 ನಾನು ಕಾಡಲ್ಲಿರೋ ಬಕಪಕ್ಷಿ* ತರ ಇದ್ದೀನಿ,ಹಾಳುಬಿದ್ದ ಜಾಗದಲ್ಲಿರೋ ಗೂಬೆ ತರ ಇದ್ದೀನಿ.
7 ಮಲಗಿದ್ರೂ ನನಗೆ ನಿದ್ದೆ ಬರ್ತಿಲ್ಲ.*
ಚಾವಣಿ ಮೇಲೆ ಕೂತ್ಕೊಳ್ಳೋ ಒಂಟಿ ಪಕ್ಷಿ ತರ ಇದ್ದೀನಿ.+
8 ಇಡೀ ದಿನ ಶತ್ರುಗಳು ನನ್ನನ್ನ ಬೈತಾರೆ.+
ನನ್ನನ್ನ ಅಣಕಿಸೋರು* ನನ್ನ ಹೆಸ್ರನ್ನ ಶಾಪವಾಗಿ ಬಳಸ್ತಾರೆ.
9 ಬೂದಿನೇ ನನ್ನ ಆಹಾರ ಆಗಿದೆ,+ನಾನು ಕುಡಿಯೋ ನೀರಲ್ಲಿ ನನ್ನ ಕಣ್ಣೀರು ಬೆರೆತುಹೋಗಿದೆ,+
10 ನಿನ್ನ ಕೋಪ, ನಿನ್ನ ಸಿಟ್ಟಿಂದ ನನಗೆ ಇಂಥ ಪರಿಸ್ಥಿತಿ ಬಂದಿದೆ,ನೀನು ನನ್ನನ್ನ ಎತ್ತಿ ಬಿಸಾಡಿ ಬಿಟ್ಟಿದ್ದೀಯ.
11 ನನ್ನ ದಿನಗಳು ಕಣ್ಮರೆಯಾಗೋ* ನೆರಳಿನ ತರ ಇದೆ,+ನಾನು ಹುಲ್ಲಿನ ತರ ಒಣಗಿ ಹೋಗ್ತಿದ್ದೀನಿ.+
12 ಆದ್ರೆ ಯೆಹೋವನೇ, ನೀನು ಶಾಶ್ವತಕ್ಕೂ ಇರ್ತಿಯ,+ನಿನ್ನ ಕೀರ್ತಿ* ತಲತಲಾಂತರಕ್ಕೂ ಇದ್ದೇ ಇರುತ್ತೆ.+
13 ನಿಜವಾಗ್ಲೂ ನೀನು ಬರ್ತಿಯ, ಚೀಯೋನಿಗೆ ಕರುಣೆ ತೋರಿಸ್ತೀಯ,+ಯಾಕಂದ್ರೆ ಅದ್ರ ಮೇಲೆ ಕೃಪೆ ತೋರಿಸೋ ಸಮಯ ಬಂದಿದೆ,+ಅಂದ್ಕೊಂಡಿದ್ದ ಸಮಯ ಬಂದಿದೆ.+
14 ಅದ್ರ ಕಲ್ಲುಗಳೆಂದ್ರೆ ನಿನ್ನ ಸೇವಕರಿಗೆ ತುಂಬ ಇಷ್ಟ,+ಅದ್ರ ಧೂಳಿನ ಮೇಲೂ ಅವ್ರಿಗೆ ತುಂಬ ಪ್ರೀತಿ.+
15 ಯೆಹೋವನ ಹೆಸ್ರಿಗೆ ದೇಶಗಳು ಹೆದರುತ್ತೆ,ನಿನ್ನ ಮಹಿಮೆ ನೋಡಿ ಎಲ್ಲ ರಾಜರು ಭಯಪಡ್ತಾರೆ.+
16 ಯಾಕಂದ್ರೆ ಯೆಹೋವ ಚೀಯೋನನ್ನ ಮತ್ತೆ ಕಟ್ತಾನೆ,+ಆತನು ತನ್ನ ಮಹಿಮೆಯಲ್ಲಿ ಬರ್ತಾನೆ.+
17 ಆತನು ಗತಿ ಇಲ್ಲದವರ ಪ್ರಾರ್ಥನೆಗೆ ಗಮನಕೊಡ್ತಾನೆ,+ಅವ್ರ ಪ್ರಾರ್ಥನೆಯನ್ನ ಆತನು ಕೀಳಾಗಿ ನೋಡಲ್ಲ.+
18 ಮುಂದೆ ಹುಟ್ಟೋ* ಜನ್ರು ಯಾಹುವನ್ನ ಸ್ತುತಿಸಬೇಕು ಅಂತ,+ಈ ಮಾತು ಮುಂದಿನ ಪೀಳಿಗೆಗಾಗಿ ಬರೆದಿದೆ.
19 ಮೇಲಿರೋ ತನ್ನ ಪವಿತ್ರ ಸ್ಥಳದಿಂದ ಆತನು ಕೆಳಗೆ ನೋಡ್ತಾನೆ,+ಸ್ವರ್ಗದಿಂದ ಯೆಹೋವ ಭೂಮಿ ಮೇಲೆ ದೃಷ್ಟಿ ಇಡ್ತಾನೆ.
20 ಯಾಕಂದ್ರೆ ಜೈಲಲ್ಲಿ ಇರೋರ ನಿಟ್ಟುಸಿರನ್ನ ಕೇಳಿಸ್ಕೊಳ್ಳೋಕೆ,+ಮರಣಶಿಕ್ಷೆ ಆಗ್ತಿರೋರನ್ನ ಬಿಡಿಸೋಕೆ ಆತನು ಹೀಗೆ ಮಾಡ್ತಾನೆ.+
21 ಹಾಗಾಗಿ ಚೀಯೋನಲ್ಲಿ ಯೆಹೋವನ ಹೆಸ್ರನ್ನ ಜೋರಾಗಿ ಹೇಳ್ತಾರೆ,+ಯೆರೂಸಲೇಮಲ್ಲಿ ಆತನನ್ನ ಹೊಗಳ್ತಾರೆ.
22 ಆಗ ದೇಶಗಳು ಮತ್ತು ರಾಜ್ಯಗಳು ಒಟ್ಟುಸೇರಿಯೆಹೋವನನ್ನ ಆರಾಧಿಸೋಕೆ ಬರುತ್ತವೆ.+
23 ಸಮ್ಯ ಬರೋ ಮುಂಚೆನೇ ಆತನು ನನ್ನ ಶಕ್ತಿನ ಕಿತ್ಕೊಂಡ,ನನ್ನ ದಿನ ಕಮ್ಮಿ ಆದ್ವು.
24 ನಾನು ಹೀಗೆ ಹೇಳಿದೆ “ನನ್ನ ದೇವರೇ,ತಲತಲಾಂತರಕ್ಕೂ ಇರೋನೇ,+ನನ್ನ ಅರ್ಧ ಆಯಸ್ಸಲ್ಲೇ ನನ್ನನ್ನ ಅಳಿಸಿಹಾಕಬೇಡ.
25 ತುಂಬ ವರ್ಷಗಳ ಹಿಂದೆನೇ ನೀನು ಭೂಮಿಗೆ ಬುನಾದಿ ಹಾಕಿದೆ,ಆಕಾಶ ನಿನ್ನ ಕೈಕೆಲಸ.+
26 ಅವು ನಾಶ ಆದ್ರೂ ನೀನು ಸದಾಕಾಲಕ್ಕೂ ಇರ್ತಿಯ,ಬಟ್ಟೆ ತರ ಅವೆಲ್ಲ ಹಾಳಾಗಿ ಹೋಗುತ್ತೆ.
ಬಟ್ಟೆ ತರ ನೀನು ಅವುಗಳನ್ನ ಬದಲಾಯಿಸ್ತೀಯ, ಅವು ಇಲ್ಲದೆ ಹೋಗುತ್ತೆ.
27 ಆದ್ರೆ ನೀನು ಇದ್ದ ಹಾಗೇ ಇರ್ತಿಯ, ನಿನಗೆ ಅಂತ್ಯಾನೇ ಇಲ್ಲ.+
28 ನಿನ್ನ ಸೇವಕರ ಮಕ್ಕಳು ಸುರಕ್ಷಿತವಾಗಿ ವಾಸಿಸ್ತಾರೆ,ಅವರ ಸಂತತಿ ಯಾವಾಗ್ಲೂ ನಿನ್ನ ಮುಂದೆ ಇರುತ್ತೆ.”+
ಪಾದಟಿಪ್ಪಣಿ
^ ಅಥವಾ “ಶಕ್ತಿ ಇಲ್ಲದೆ ಇರೋವಾಗ.”
^ ಅಥವಾ “ನೀನು ಬಗ್ಗಿ ಕೇಳಿಸ್ಕೊ.”
^ ಅಂದ್ರೆ, ಪೆಲಿಕನ್.
^ ಬಹುಶಃ, “ಸೊರಗಿ ಹೋಗಿದ್ದೀನಿ.”
^ ಅಥವಾ “ತಮಾಷೆ ಮಾಡೋರು.”
^ ಅಥವಾ “ಉದ್ದ ಆಗ್ತಿರೋ.”
^ ಅಥವಾ “ಹೆಸರು.” ಅಕ್ಷ. “ನೆನಪು.”
^ ಅಕ್ಷ. “ಸೃಷ್ಟಿಯಾಗೋ.”