ಕೀರ್ತನೆ 17:1-15
ದಾವೀದನ ಪ್ರಾರ್ಥನೆ.
17 ಯೆಹೋವನೇ ನ್ಯಾಯಕ್ಕಾಗಿ ನಾನು ಮಾಡೋ ಪ್ರಾರ್ಥನೆ ಕೇಳು,ಸಹಾಯಕ್ಕಾಗಿ ನಾನು ಕೂಗುವಾಗ ಗಮನಿಸು,ಕಪಟ ಇಲ್ಲದ ನನ್ನ ಪ್ರಾರ್ಥನೆನ ಕೇಳು.+
2 ನೀನು ಸರಿಯಾದ ತೀರ್ಪನ್ನ ಕೊಟ್ಟು ನನಗೆ ನ್ಯಾಯ ಸಿಗೋ ತರ ಮಾಡು,+ನಾನು ಸರಿಯಾಗಿ ಇರೋದನ್ನ ಮಾಡ್ತಿದ್ದೀನಾ ಅಂತ ನಿನ್ನ ಕಣ್ಣು ನೋಡಿ ಹೇಳಲಿ.
3 ನೀನು ನನ್ನ ಹೃದಯನ ಪರೀಕ್ಷಿಸಿದೆ, ಕತ್ತಲಲ್ಲೂ ನನ್ನನ್ನ ಪರಿಶೀಲಿಸಿದೆ,+ನೀನು ನನ್ನನ್ನ ಪರಿಷ್ಕರಿಸಿದೆ,+ನಾನು ಯಾವ ಕೆಟ್ಟ ಸಂಚನ್ನೂ ಮಾಡಿಲ್ಲ ಅಂತ,ನನ್ನ ಬಾಯಿ ಯಾವ ಪಾಪವನ್ನೂ ಮಾಡಿಲ್ಲ ಅಂತ ನಿನಗೆ ಗೊತ್ತಾಗುತ್ತೆ.
4 ಮನುಷ್ಯರು ಏನೇ ಮಾಡ್ಲಿ,ನಾನು ಮಾತ್ರ ನೀನು ಹೇಳಿದ ಹಾಗೆ ಕಳ್ಳರ ದಾರಿಯಿಂದ ದೂರ ಇರ್ತಿನಿ.+
5 ನನ್ನ ಕಾಲು ಎಡವಿ ಬೀಳದ ಹಾಗೆ,ನನ್ನ ಹೆಜ್ಜೆಗಳು ನಿನ್ನ ದಾರಿಯಲ್ಲೇ ಇರಲಿ.+
6 ದೇವರೇ, ನಾನು ನಿನಗೆ ಮೊರೆ ಇಡ್ತೀನಿ. ಯಾಕಂದ್ರೆ ನೀನು ಉತ್ತರ ಕೊಡ್ತೀಯ.+
ನಾನು ಹೇಳೋದನ್ನ, ನನ್ನ ಪ್ರಾರ್ಥನೆಯನ್ನ ಕೇಳಿಸ್ಕೊ.*+
7 ದೇವರೇ, ನಿನ್ನ ವಿರುದ್ಧ ದಂಗೆ ಏಳೋರ ಕೈಯಿಂದ ತಪ್ಪಿಸ್ಕೊಂಡುನಿನ್ನ ಬಲಗೈಯಲ್ಲಿ ಆಶ್ರಯ ಪಡ್ಕೊಳ್ಳೋಕೆ ಬರೋರನ್ನ ರಕ್ಷಿಸು,ಅದ್ಭುತವಾಗಿ ನಿನ್ನ ಶಾಶ್ವತ ಪ್ರೀತಿಯನ್ನ ತೋರಿಸು.+
8 ನಿನ್ನ ಕಣ್ಣಗುಡ್ಡೆ ಹಾಗೆ ನನ್ನನ್ನ ಕಾಪಾಡು,+ನಿನ್ನ ರೆಕ್ಕೆಗಳ ನೆರಳಲ್ಲಿ ನನ್ನನ್ನ ಬಚ್ಚಿಡು.+
9 ನನ್ನ ಮೇಲೆ ದಾಳಿ ಮಾಡೋ ಕೆಟ್ಟವರಿಂದ,ನನ್ನ ಹಿಂದೆ ಬಿದ್ದು ನನ್ನ ಪ್ರಾಣ ಕೇಳೋರಿಂದ ನನ್ನನ್ನ ರಕ್ಷಿಸು.+
10 ಅವರು ತಮ್ಮ ಹೃದಯಗಳನ್ನ ಕಲ್ಲಿನ ತರ ಮಾಡ್ಕೊಂಡಿದ್ದಾರೆ,*ಅವರು ಅಹಂಕಾರದಿಂದ ಮಾತಾಡ್ತಾರೆ.
11 ಈಗ ಅವರು ನಮ್ಮ ಸುತ್ತ ಸುತ್ಕೊಂಡಿದ್ದಾರೆ,+ನಮ್ಮನ್ನ ಕೆಳಗೆ ಬೀಳಿಸೋಕೆ* ಕಾಯ್ತಿದ್ದಾರೆ.
12 ನನ್ನ ಶತ್ರು, ಬೇಟೆನ ಸೀಳಿ ತುಂಡುತುಂಡು ಮಾಡೋಕೆ ಹಾತೊರೆಯೋ ಸಿಂಹದ ತರ ಇದ್ದಾನೆ,ಹೊಂಚುಹಾಕ್ತಾ ಮುದುರಿಕೊಂಡು ಕೂತಿರೋ ಎಳೇ ಸಿಂಹದ ತರ ಇದ್ದಾನೆ.
13 ಯೆಹೋವನೇ, ದಯವಿಟ್ಟು ಅವನ ವಿರುದ್ಧ ಹೋರಾಡಿ,+ ಅವನನ್ನ ಸೋಲಿಸು.
ನಿನ್ನ ಕತ್ತಿ ತಗೊಂಡು, ನನ್ನನ್ನ ಆ ಕೆಟ್ಟವನಿಂದ ಕಾಪಾಡು.
14 ಯೆಹೋವನೇ, ಕೈ ಚಾಚಿ ನನ್ನನ್ನ ರಕ್ಷಿಸು,ಈ ಲೋಕದ ಜನ್ರಿಂದ ನನ್ನನ್ನ ಕಾಪಾಡು, ಅವರು ಬರೀ ಇವತ್ತಿಗಾಗಿ ಬದುಕ್ತಾರೆ.+
ನಿನ್ನ ಖಜಾನೆಯಿಂದ ಅವರು ಹೊಟ್ಟೆ ತುಂಬಿಸ್ಕೊಳ್ತಿದ್ದಾರೆ,+ತಮ್ಮ ಮಕ್ಕಳಿಗೆ ಆಸ್ತಿನ ಬಿಟ್ಟುಹೋಗ್ತಾರೆ, ಅವ್ರಿಂದ ನನ್ನನ್ನ ಕಾಪಾಡು.
15 ಆದ್ರೆ ನಾನು ನೀತಿವಂತನಾಗಿ ಇರ್ತಿನಿ. ಯಾಕಂದ್ರೆ ನನಗೆ ನಿನ್ನ ಮುಖ ನೋಡಬೇಕು.
ಬೆಳಿಗ್ಗೆ ಎದ್ದು ನಿನ್ನ ಮುಂದೆ ನಿಂತ್ಕೊಳ್ಳೋದ್ರಲ್ಲೇ ನನಗೆ ಖುಷಿ ಸಿಗುತ್ತೆ.+
ಪಾದಟಿಪ್ಪಣಿ
^ ಅಥವಾ “ಬಾಗಿ ಕೇಳಿಸ್ಕೊ.”
^ ಅಕ್ಷ. “ಕೊಬ್ಬಿನಿಂದ ಮುಚ್ಚಿಕೊಂಡಿದ್ದಾರೆ.”
^ ಅಥವಾ “ನೆಲಕ್ಕೆ ಉರುಳಿಸೋಕೆ.”