ಜ್ಞಾನೋಕ್ತಿ 26:1-28
26 ಬೇಸಿಗೆಯಲ್ಲಿ ಹಿಮ ಬೀಳಬಾರದು, ಸುಗ್ಗಿಕಾಲದಲ್ಲಿ ಮಳೆ ಸುರಿಬಾರದು.
ಅದೇ ರೀತಿ ಮೂರ್ಖನಿಗೆ ಗೌರವ ಕೊಡ್ಲೇಬಾರದು.+
2 ಹಕ್ಕಿಗೆ ತಪ್ಪಿಸ್ಕೊಂಡು ಹೋಗೋಕೆ, ಕವಲುತೋಕೆ ಪಕ್ಷಿಗೆ ಹಾರಿಹೋಗೋಕೆ ಕಾರಣ ಇರೋ ತರ,ಒಂದೊಂದು ಶಾಪಕ್ಕೂ ಒಂದೊಂದು ಕಾರಣ ಇರುತ್ತೆ.*
3 ಕುದುರೆಗೆ ಚಾಟಿ, ಕತ್ತೆಗೆ ಲಗಾಮು,+ಮೂರ್ಖನ ಬೆನ್ನಿಗೆ ಬೆತ್ತ.+
4 ಮೂರ್ಖನಿಗೆ ಅವನ ಮೂರ್ಖತನಕ್ಕೆ ತಕ್ಕ ಹಾಗೆ ಉತ್ತರ ಕೊಡಬೇಡ,ಹಾಗೆ ಕೊಟ್ರೆ ಅವನಿಗೂ ನಿನಗೂ ವ್ಯತ್ಯಾಸ ಇರಲ್ಲ.*
5 ಮೂರ್ಖನಿಗೆ ಅವನ ಮೂರ್ಖತನಕ್ಕೆ ತಕ್ಕ ಹಾಗೆ ಉತ್ತರ ಕೊಡು,ಇಲ್ಲದಿದ್ರೆ ತಾನೇ ಬುದ್ಧಿವಂತ ಅಂದ್ಕೊಳ್ತಾನೆ.+
6 ಮೂರ್ಖನಿಗೆ ಜವಾಬ್ದಾರಿ ವಹಿಸ್ಕೊಡುವವನು,ಕಾಲು ಮುರಿದ್ಕೊಂಡು ತನಗೆ ತಾನೇ ಹಾನಿ ಮಾಡ್ಕೊಳ್ಳುವವನಿಗೆ ಸಮ.
7 ಮೂರ್ಖನ ಬಾಯಲ್ಲಿರೋ ಗಾದೆ,ಕುಂಟನ ಸೊರಗಿ ಹೋಗಿರೋ ಕಾಲಿಗೆ* ಸಮ.+
8 ಮೂರ್ಖನಿಗೆ ಗೌರವ ಕೊಡೋದು,ಕವಣೆಗೆ ಕಲ್ಲನ್ನ ಕಟ್ಟಿದ ಹಾಗೆ.+
9 ಮೂರ್ಖನ ಬಾಯಲ್ಲಿರೋ ಗಾದೆ,ಕುಡುಕನ ಕೈಯಲ್ಲಿರೋ ಮುಳ್ಳುಗಿಡದ ಹಾಗೆ.
10 ದಾರೀಲಿ ಹೋಗುವವರನ್ನ, ದಡ್ಡರನ್ನ ಕೆಲಸಕ್ಕೆ ಇಟ್ಕೊಳ್ಳೋನು,ಗೊತ್ತುಗುರಿ ಇಲ್ಲದೆ ಬಾಣ ಬಿಡೋ* ಬಿಲ್ಲುಗಾರನಿಗೆ ಸಮ.
11 ನಾಯಿ ತಾನು ಕಕ್ಕಿದ್ದನ್ನ ನೆಕ್ಕೋಕೆ ವಾಪಸ್ ಹೋದ ಹಾಗೆ,ಮೂರ್ಖ ತನ್ನ ಮೂರ್ಖತನವನ್ನ ಮತ್ತೆ ಮತ್ತೆ ತೋರಿಸ್ತಾನೆ.+
12 ತಾನೇ ದೊಡ್ಡ ಬುದ್ಧಿವಂತ ಅಂದ್ಕೊಂಡಿರೋ ವ್ಯಕ್ತಿಯನ್ನ ನೋಡಿದ್ದೀಯಾ?+
ಅವನಿಗೆ ಸಹಾಯ ಮಾಡೋದಕ್ಕಿಂತ ಮೂರ್ಖನಿಗೆ ಸಹಾಯ ಮಾಡೋದು ಸುಲಭ.
13 ಸೋಮಾರಿ “ದಾರೀಲಿ ಸಿಂಹ ಇದೆ!
ಅದು ಪಟ್ಟಣದ ಮುಖ್ಯಸ್ಥಳದಲ್ಲಿ* ತಿರುಗಾಡ್ತಿದೆ!” ಅಂತಾನೆ.+
14 ಬಾಗಿಲು ತಿರುಗಣಿಯಲ್ಲಿ ತಿರುಗೋ ತರ,ಸೋಮಾರಿ ತನ್ನ ಹಾಸಿಗೆ ಮೇಲೆ ಹೊರಳಾಡ್ತಾನೆ.+
15 ಸೋಮಾರಿ ತನ್ನ ಕೈಯನ್ನ ಮೃಷ್ಟಾನ್ನ ಊಟದ ಬಟ್ಟಲಲ್ಲಿ ಮುಳುಗಿಸ್ತಾನೆ,ಆದ್ರೆ ಆ ತುತ್ತನ್ನ ಬಾಯಿಗೆ ಇಡೋಕ್ಕೂ ಆಲಸ್ಯ.+
16 ಸೋಮಾರಿ ತಿಳುವಳಿಕೆಯಿಂದ ಉತ್ತರ ಕೊಡೋ ಏಳು ಜನ್ರಿಗಿಂತ,ತಾನೇ ಬುದ್ಧಿವಂತ ಅಂದ್ಕೊಳ್ತಾನೆ.
17 ದಾರೀಲಿ ಹೋಗುವಾಗ ತನಗೆ ಸಂಬಂಧ ಇಲ್ಲದ ವಿಷ್ಯಕ್ಕೆ ಕೋಪ ಮಾಡ್ಕೊಳ್ಳೋ ವ್ಯಕ್ತಿ,*ನಾಯಿಯ ಕಿವಿ ಹಿಡಿಯೋನಿಗೆ ಸಮ.+
18 ಕೊಳ್ಳಿಗಳನ್ನ, ಅಂಬುಗಳನ್ನ, ಜೀವ ತೆಗಿಯೋ ಬಾಣಗಳನ್ನ ಎಸಿಯೋ ಹುಚ್ಚನೂ ಒಂದೇ,
19 ಪಕ್ಕದ ಮನೆಯವನಿಗೆ ಕುತಂತ್ರ ಮಾಡಿ “ಸುಮ್ನೆ ತಮಾಷೆ ಮಾಡ್ದೆ” ಅಂತ ಹೇಳುವವನೂ ಒಂದೇ.+
20 ಕಟ್ಟಿಗೆ ಇಲ್ಲದಿದ್ರೆ ಬೆಂಕಿ ಆರಿಹೋಗುತ್ತೆ,ಸುಳ್ಳುಸುದ್ದಿ ಹಬ್ಬಿಸುವವನು ಇಲ್ಲದಿದ್ರೆ ಜಗಳ ನಿಂತುಹೋಗುತ್ತೆ.+
21 ಕೆಂಡಕ್ಕೆ ಇದ್ದಲು ಹೇಗೋ, ಬೆಂಕಿಗೆ ಕಟ್ಟಿಗೆ ಹೇಗೋ,ಜಗಳ ಹೆಚ್ಚಿಸೋಕೆ ಜಗಳಗಂಟನೂ ಹಾಗೇ.+
22 ಚಾಡಿಕೋರನ ಮಾತುಗಳು ರುಚಿಯಾದ ತುತ್ತುಗಳ ಹಾಗೆ,*ನುಂಗಿದಾಗ ನೇರವಾಗಿ ಹೊಟ್ಟೆಗೆ ಹೋಗುತ್ತೆ.+
23 ಕೆಟ್ಟವನ ಹೃದಯದಿಂದ ಹೊರಗೆ ಬರೋ ಪ್ರೀತಿಯ ಮಾತುಗಳು,ಜೇಡಿಮಣ್ಣಿನ ಪಾತ್ರೆ ತುಂಡಿನ ಮೇಲೆ ಹಚ್ಚಿರೋ ಬೆಳ್ಳಿ ತರ.+
24 ಬೇರೆಯವ್ರನ್ನ ದ್ವೇಷ ಮಾಡುವವನು ಚೆನ್ನಾಗೇನೋ ಮಾತಾಡ್ತಾನೆ,ಆದ್ರೆ ಹೃದಯದಲ್ಲಿ ಮೋಸ ಕಪಟವನ್ನ ಬಚ್ಚಿಟ್ಟಿರ್ತಾನೆ.
25 ಅವನ ಜೇನಿನಂಥ ಮಾತುಗಳನ್ನ ನಂಬಬೇಡ,ಯಾಕಂದ್ರೆ ಹೇಸಿಗೆ ಹುಟ್ಟಿಸೋ ಏಳು ವಿಷ್ಯ ಅವನ ಹೃದಯದಲ್ಲಿದೆ.*
26 ಅವನು ತನ್ನ ದ್ವೇಷವನ್ನ ಮೋಸದಿಂದ ಬಚ್ಚಿಟ್ರೂ,ಸಭೆಯಲ್ಲಿ ಅವನ ಕೆಟ್ಟತನ ಬಯಲಾಗುತ್ತೆ.
27 ಗುಂಡಿ ತೋಡುವವನು ತಾನೇ ಅದ್ರಲ್ಲಿ ಬೀಳ್ತಾನೆ,ಕಲ್ಲನ್ನ ಉರುಳಿಸುವವನ ಮೇಲೆ ಅದೇ ಕಲ್ಲು ಉರುಳಿ ಬರುತ್ತೆ.+
28 ಸುಳ್ಳು ನಾಲಿಗೆ ತನ್ನ ಸುಳ್ಳಿಗೆ ಬಲಿಯಾದವ್ರನ್ನ ದ್ವೇಷಿಸುತ್ತೆ,
ಬೆಣ್ಣೆ ಹಚ್ಚಿ ಮಾತಾಡೋ ಬಾಯಿ ನಾಶ ಆಗುತ್ತೆ.+
ಪಾದಟಿಪ್ಪಣಿ
^ ಬಹುಶಃ, “ಕಾರಣ ಇಲ್ಲದೆ ಶಾಪ ತಗಲಲ್ಲ.”
^ ಅಥವಾ “ಹಾಗೆ ಮಾಡಿದ್ರೆ ನೀನು ಅವನ ತರಾನೇ ಆಗ್ತೀಯ.”
^ ಅಥವಾ “ಜೋಲಾಡೋ ಕಾಲಿಗೆ.”
^ ಅಥವಾ “ಎಲ್ರಿಗೂ ಗಾಯ ಮಾಡೋ.”
^ ಬಹುಶಃ, “ವಿವಾದದಲ್ಲಿ ಬಾಯಿ ಹಾಕುವವನು.”
^ ಅಥವಾ “ಅತಿಯಾಸೆಯಿಂದ ನುಂಗೋ ಆಹಾರದ ತರ.”
^ ಅಥವಾ “ಅವನ ಹೃದಯ ಪೂರ್ತಿ ಅಸಹ್ಯವಾಗಿದೆ.”