ಮೀಕ 5:1-15
5 “ದಾಳಿಗೆ ಒಳಗಾದ ಮಗಳೇ,ನೀನು ನಿನ್ನ ಮೈಯನ್ನ ಕೊಯ್ದು ಗಾಯ ಮಾಡ್ಕೊಳ್ತಾ ಇದ್ದೀಯ.
ಶತ್ರುಗಳು ನಮಗೆ ಮುತ್ತಿಗೆ ಹಾಕಿದ್ದಾರೆ.+
ಅವರು ಇಸ್ರಾಯೇಲಿನ ನ್ಯಾಯಾಧೀಶನ ಕೆನ್ನೆಗೆ ಕೋಲಿಂದ ಹೊಡಿತಾರೆ.+
2 ಬೆತ್ಲೆಹೇಮ್ ಎಫ್ರಾತವೇ,*+ಯೆಹೂದದಲ್ಲಿ ಇರೋ ಪಟ್ಟಣಗಳಲ್ಲೇ* ಚಿಕ್ಕ ಪಟ್ಟಣ ನೀನು.
ಹಾಗಿದ್ರೂ ನನಗಾಗಿ ಇಸ್ರಾಯೇಲನ್ನ ಆಳೋ ರಾಜ ನಿನ್ನಿಂದಾನೇ ಬರ್ತಾನೆ.+
ಅವನ ಆರಂಭ ಪ್ರಾಚೀನ ಕಾಲದಲ್ಲಿ, ಲೆಕ್ಕ ಇಲ್ಲದಷ್ಟು ವರ್ಷಗಳ ಹಿಂದೆನೇ ಆಗಿತ್ತು.
3 ಹಾಗಾಗಿ ಗರ್ಭಿಣಿ ಮಗು ಹೆರೋ ತನಕಆತನು ತನ್ನ ಜನ್ರನ್ನ ಶತ್ರುಗಳ ಕೈಗೆ ಒಪ್ಪಿಸ್ತಾನೆ.
ರಾಜನ ಸಹೋದರರಲ್ಲಿ ಉಳಿದವರು ಇಸ್ರಾಯೇಲ್ ಜನ್ರ ಹತ್ರ ವಾಪಸ್ ಬರ್ತಾರೆ.
4 ಅವನು ಎದ್ದು ನಿಂತು, ಯೆಹೋವನ ಬಲದಿಂದ,+ಅವನ ದೇವರಾದ ಯೆಹೋವನ ಮಹೋನ್ನತ ಹೆಸ್ರಿನ ಅಧಿಕಾರದಿಂದ ಹಿಂಡನ್ನ ಮೇಯಿಸ್ತಾನೆ.
ಆ ಹಿಂಡು ಸುರಕ್ಷಿತವಾಗಿ ನೆಲೆಸುತ್ತೆ,+ಯಾಕಂದ್ರೆ ಅವನ ಹಿರಿಮೆ ಭೂಮಿಯ ಮೂಲೆಮೂಲೆಗೂ ಹಬ್ಬುತ್ತೆ.+
5 ಅವನು ಶಾಂತಿ ನೆಲೆಸೋ ತರ ಮಾಡ್ತಾನೆ.+
ಅಶ್ಶೂರದವನು ನಮ್ಮ ದೇಶವನ್ನ ದಾಳಿ ಮಾಡಿದ್ರೆ, ನಮ್ಮ ಭದ್ರ ಕೋಟೆಗಳನ್ನ ತುಳಿದುಹಾಕಿದ್ರೆ,+ಅವನನ್ನ ಎದುರಿಸೋಕೆ ಮನುಷ್ಯರಿಂದ ಆರಿಸ್ಕೊಂಡ ಏಳು ಕುರುಬರನ್ನ, ಹೌದು, ಎಂಟು ಅಧಿಕಾರಿಗಳನ್ನ* ನಾವು ನೇಮಿಸ್ತೀವಿ.
6 ಅವರು ಕತ್ತಿಯಿಂದ ಅಶ್ಶೂರ ದೇಶಕ್ಕೆ ಶಿಕ್ಷೆ ಕೊಡ್ತಾರೆ,+ನಿಮ್ರೋದ್+ ದೇಶದ ಬಾಗಿಲಲ್ಲಿ ಕತ್ತಿ ಬೀಸ್ತಾರೆ,ಅಶ್ಶೂರ ನಮ್ಮ ಮೇಲೆ ದಾಳಿಮಾಡಿ, ನಮ್ಮ ಪ್ರದೇಶವನ್ನ ತುಳಿದಾಗ,ಅವನ ಕೈಯಿಂದ ರಾಜ ನಮ್ಮನ್ನ ಬಿಡಿಸ್ತಾನೆ.+
7 ಯಾಕೋಬನ ವಂಶದವ್ರಲ್ಲಿ ಉಳಿದವರು ಅನೇಕ ಜನಾಂಗಗಳ ಮಧ್ಯಯೆಹೋವನಿಂದ ಬರೋ ಇಬ್ಬನಿ ತರ,ಮರಗಿಡಗಳ ಮೇಲೆ ಬೀಳೋ ಹದವಾದ ಮಳೆ ತರ ಇರ್ತಾರೆ.
ಆ ಇಬ್ಬನಿಯಾಗಲಿ ಮಳೆಯಾಗಲಿ ಮನುಷ್ಯನನ್ನ ಅವಲಂಬಿಸಿಲ್ಲ,ಮಾನವರಿಗಾಗಿ ಕಾಯಲ್ಲ.
8 ಯಾಕೋಬನ ವಂಶದವ್ರಲ್ಲಿ ಉಳಿದವರು ಜನಾಂಗಗಳ ಮಧ್ಯ,ದೇಶದೇಶಗಳ ಜನ್ರ ಮಧ್ಯಕಾಡಿನ ಪ್ರಾಣಿಗಳ ಮಧ್ಯದಲ್ಲಿರೋ ಸಿಂಹದ ತರ,ಕುರಿ ಹಿಂಡುಗಳ ಮಧ್ಯದಲ್ಲಿರೋ ಸಿಂಹದ ತರ ಇರ್ತಾರೆ.
ಅದು ಆ ಪ್ರಾಣಿಗಳ ಮಧ್ಯ ಹೋಗುವಾಗ ಅವುಗಳ ಮೇಲೆ ಬಿದ್ದು ಸೀಳಿ ತುಂಡುತುಂಡು ಮಾಡುತ್ತೆ.
ಅವುಗಳನ್ನ ರಕ್ಷಿಸುವವರು ಯಾರೂ ಇಲ್ಲ.
9 ನಿನ್ನ ವಿರೋಧಿಗಳ ಮೇಲೆ ನೀನು ಜಯ ಸಾಧಿಸ್ತೀಯ,ನಿನ್ನ ಎಲ್ಲ ಶತ್ರುಗಳು ನಾಶವಾಗ್ತಾರೆ.”
10 ಯೆಹೋವ ಹೀಗೆ ಹೇಳ್ತಾನೆ: “ಆ ದಿನದಲ್ಲಿನಾನು ನಿನ್ನ ಕುದುರೆಗಳನ್ನ, ನಿನ್ನ ರಥಗಳನ್ನ ನಾಶ ಮಾಡ್ತೀನಿ.
11 ನಾನು ನಿನ್ನ ದೇಶದ ಪಟ್ಟಣಗಳನ್ನ ನೆಲಸಮ ಮಾಡಿ,ನಿನ್ನ ಎಲ್ಲ ಭದ್ರ ಕೋಟೆಗಳನ್ನ ಕೆಡವಿಹಾಕ್ತೀನಿ.
12 ನೀನು ಮಾಡ್ತಿರೋ ಮಾಟಮಂತ್ರ ನಿಲ್ಲಿಸಿಬಿಡ್ತೀನಿ,ನಿನ್ನಲ್ಲಿ ಮಂತ್ರತಂತ್ರ ಮಾಡೋ ಎಲ್ರನ್ನೂ ನಾಶಮಾಡ್ತೀನಿ.+
13 ನಿನ್ನ ಕೆತ್ತಿದ ಮೂರ್ತಿಗಳನ್ನೂ ನಿನ್ನ ವಿಗ್ರಹಸ್ತಂಭಗಳನ್ನೂ ಮಣ್ಣುಪಾಲು ಮಾಡ್ತೀನಿ.
ನಿನ್ನ ಕೈಯಿಂದ ಮಾಡಿದ ವಸ್ತುಗಳಿಗೆ ನೀನು ಇನ್ನು ಯಾವತ್ತೂ ತಲೆಬಾಗಲ್ಲ.+
14 ನಾನು ನಿನ್ನ ಪೂಜಾಕಂಬಗಳನ್ನ* ಕಿತ್ತುಹಾಕ್ತೀನಿ.+
ನಿನ್ನ ಪಟ್ಟಣಗಳನ್ನ ನಿರ್ನಾಮ ಮಾಡ್ತೀನಿ.
15 ನನ್ನ ಮಾತು ಕೇಳದ ಜನಾಂಗಗಳಿಗೆನಾನು ಕೋಪ, ಕ್ರೋಧದಿಂದ ಸೇಡು ತೀರಿಸ್ತೀನಿ.”
ಪಾದಟಿಪ್ಪಣಿ
^ ಎಫ್ರಾತವು ಬೆತ್ಲೆಹೇಮಿಗೆ ಮೊದಲಿದ್ದ ಹೆಸ್ರಾಗಿರಬೇಕು ಅಥವಾ ಅದ್ರ ಸುತ್ತಮುತ್ತಲಿನ ಪ್ರದೇಶಕ್ಕಿದ್ದ ಹೆಸ್ರಾಗಿರಬೇಕು.
^ ಅಕ್ಷ. “ಸಾವಿರಗಳಲ್ಲಿ.” ಅಥವಾ “ಕುಟುಂಬಗಳಲ್ಲಿ.”
^ ಅಥವಾ “ನಾಯಕರನ್ನ.”