ಯೆರೆಮೀಯ 45:1-5
-
ಬಾರೂಕನಿಗೆ ಯೆಹೋವನ ಸಂದೇಶ (1-5)
45 ಯೋಷೀಯನ ಮಗ ಯೆಹೂದದ ರಾಜ ಯೆಹೋಯಾಕೀಮ ಆಳ್ತಿದ್ದ ನಾಲ್ಕನೇ ವರ್ಷ+ ಅದು. ಪ್ರವಾದಿ ಯೆರೆಮೀಯ ಹೇಳ್ತಾ ಹೋದ ಹಾಗೆ ನೇರೀಯನ ಮಗನಾದ ಬಾರೂಕ+ ಒಂದು ಪುಸ್ತಕದಲ್ಲಿ ಬರೀತಾ ಇದ್ದ.+ ಯೆರೆಮೀಯ ಬಾರೂಕನಿಗೆ ಹೇಳಿದ ಮಾತುಗಳು ಏನಂದ್ರೆ
2 “ಬಾರೂಕ, ಇಸ್ರಾಯೇಲಿನ ದೇವರಾದ ಯೆಹೋವ ನಿನಗೆ ಹೀಗೆ ಹೇಳ್ತಾನೆ
3 ‘ನೀನು ಬೇಜಾರಿಂದ “ಅಯ್ಯೋ, ಯೆಹೋವ ನನ್ನ ನೋವನ್ನ ಇನ್ನೂ ಜಾಸ್ತಿ ಮಾಡಿದ್ದಾನೆ. ನರಳಿ ನರಳಿ ನನಗೆ ಸಾಕಾಗಿ ಹೋಗಿದೆ, ಒಂಚೂರೂ ನೆಮ್ಮದಿ ಇಲ್ಲ” ಅಂತ ಹೇಳ್ದೆ.’
4 ಅದಕ್ಕೆ ದೇವರು ನಿನಗೆ ಈ ಸಂದೇಶ ಕೊಟ್ಟಿದ್ದಾನೆ ‘ಯೆಹೋವ ಹೇಳೋದು ಏನಂದ್ರೆ “ನೋಡು! ಇಡೀ ದೇಶದಲ್ಲಿ ನಾನು ಕಟ್ಟಿದ್ದನ್ನ ನಾನೇ ಹಾಳು ಮಾಡ್ತೀನಿ, ನಾನು ನೆಟ್ಟದ್ದನ್ನ ನಾನೇ ಕಿತ್ತುಹಾಕ್ತೀನಿ.+
5 ಆದ್ರೆ ನೀನು ದೊಡ್ಡ ದೊಡ್ಡ ವಿಷ್ಯಗಳನ್ನ ಪಡಿಯೋಕೆ ಪ್ರಯತ್ನ ಮಾಡ್ತಾ ಇದ್ದೀಯ.* ಇನ್ನು ಹಾಗೆ ಮಾಡಬೇಡ.”’
‘ಯಾಕಂದ್ರೆ ನಾನು ಎಲ್ಲ ಜನ್ರ ಮೇಲೆ ತುಂಬ ಬೇಗ ಕಷ್ಟ ತರ್ತಿನಿ.+ ಆದ್ರೆ ನೀನೆಲ್ಲೇ ಹೋದ್ರೂ ನಾನು ನಿನ್ನ ಜೀವ ಕಾಪಾಡ್ತೀನಿ’*+ ಅಂತ ಯೆಹೋವ ಹೇಳ್ತಾನೆ.”