ಯೆಶಾಯ 48:1-22

  • ಇಸ್ರಾಯೇಲಿನ ಖಂಡನೆ ಮತ್ತು ಶುದ್ಧೀಕರಣ (1-11)

  • ಯೆಹೋವ ಬಾಬೆಲಿನ ವಿರುದ್ಧ ಕ್ರಮ ತಗೊಳ್ತಾನೆ (12-16ಎ)

  • ದೇವರ ಬೋಧನೆ ಪ್ರಯೋಜನಕರ (16ಬಿ-19)

  • “ಬಾಬೆಲಿಂದ ಹೊರಡಿ!” (20-22)

48  ಯಾಕೋಬನ ಮನೆತನದವರೇ,ತಮ್ಮನ್ನೇ ತಾವು ಇಸ್ರಾಯೇಲನ ಹೆಸ್ರಿಂದ ಕರೆದ್ಕೊಳ್ಳುವವ್ರೇ,+ಯೆಹೂದದ ವಂಶದಿಂದ ಬಂದಿರುವವ್ರೇ ಇದನ್ನ ಕೇಳಿ.+ ನೀವು ಯೆಹೋವನ ಹೆಸ್ರಲ್ಲಿ ಆಣೆ ಮಾಡ್ತೀರ,ಇಸ್ರಾಯೇಲಿನ ದೇವರನ್ನ ಆರಾಧಿಸ್ತೀರ,ಆದ್ರೆ ಅದನ್ನ ಸತ್ಯದಿಂದಲೂ ನೀತಿಯಿಂದಲೂ ಮಾಡಲ್ಲ.+   ನಾವು ಪವಿತ್ರ ಪಟ್ಟಣದಲ್ಲಿ ವಾಸಿಸ್ತೀವಿ ಅಂತ ಅವರು ಹೇಳ್ಕೊಳ್ತಾರೆ,+ಸೈನ್ಯಗಳ ದೇವರಾದ ಯೆಹೋವ ಅನ್ನೋ ಹೆಸ್ರಿರೋಇಸ್ರಾಯೇಲ್‌ ದೇವರನ್ನ ಆಶ್ರಯಿಸಿದ್ದಾರೆ.+   “ತುಂಬ ಹಿಂದೆನೇ ನಾನು ಹಳೇ* ವಿಷ್ಯಗಳ ಬಗ್ಗೆ ತಿಳಿಸಿದೆ. ಅವು ನನ್ನ ಬಾಯಿಂದನೇ ಹೊರಟಿದ್ದವು,ನಾನು ಅವುಗಳನ್ನ ತಿಳಿಸಿದೆ.+ ತಕ್ಷಣ ಕ್ರಿಯೆಗೈದೆ, ಅವು ನೆರವೇರಿದವು.+   ನೀನು ಎಷ್ಟು ಮೊಂಡನಂತ ನನಗೆ ಗೊತ್ತು,ನಿನ್ನ ಕುತ್ತಿಗೆ ಕಬ್ಬಿಣದ್ದು, ನಿನ್ನ ಹಣೆ ತಾಮ್ರದ್ದು ಅಂತ ನಂಗೊತ್ತು.+   ಅದಕ್ಕೇ ನಾನು ತುಂಬ ಮುಂಚೆನೇ ನಿನಗೆ ಹೇಳಿದ್ದೆ. ಅದು ನೆರವೇರೋ ಮುಂಚೆನೇ ನೀನು ಅದನ್ನ ಕೇಳಿಸ್ಕೊಳ್ಳೋ ತರ ನಾನು ಮಾಡಿದ್ದೆ,ಯಾಕಂದ್ರೆ ‘ಅದನ್ನ ಮಾಡಿದ್ದು ನನ್ನ ಮೂರ್ತಿನೇ,ಅದನ್ನ ಆಜ್ಞಾಪಿಸಿದ್ದು ನನ್ನ ಕೆತ್ತಿದ ಮೂರ್ತಿನೇ, ನನ್ನ ಲೋಹದ ಪ್ರತಿಮೆನೇ’* ಅಂತ ನೀನು ಹೇಳಬಾರದಂತ ನಾನು ಹೀಗೆ ಮಾಡಿದ್ದೆ.   ನೀನು ಇವುಗಳನ್ನೆಲ್ಲ ಕೇಳಿಸ್ಕೊಂಡಿದ್ದೀಯ, ನೋಡಿದ್ದೀಯ. ಇವುಗಳನ್ನ ನೀನು* ಹೇಳಲ್ವಾ?+ ಈಗಿಂದ ನಾನು ನಿನಗೆ ಹೊಸ ವಿಷ್ಯಗಳನ್ನ ಹೇಳ್ತೀನಿ,+ನಿನಗೆ ಗೊತ್ತಿಲ್ಲದ ರಹಸ್ಯಗಳನ್ನ ನಾನು ತಿಳಿಸ್ತೀನಿ. ಅವುಗಳನ್ನ ನಾನು ಜೋಪಾನವಾಗಿ ಮರೆಮಾಡಿದ್ದೆ.   ‘ಅವುಗಳ ಬಗ್ಗೆ ನನಗೆ ಈಗಾಗಲೇ ಗೊತ್ತಿತ್ತು’ ಅಂತ ನೀನು ಹೇಳದ ಹಾಗೆನಾನು ಅವುಗಳನ್ನ ತುಂಬ ಹಿಂದೆನೇ ಸೃಷ್ಟಿಸದೆ ಈಗ ಸೃಷ್ಟಿಸ್ತಿದ್ದೀನಿ,ನೀನು ಅವುಗಳ ಬಗ್ಗೆ ಕೇಳಿಸ್ಕೊಳ್ತಿರೋದು ಇವತ್ತೇ, ಈ ಮುಂಚೆ ನಿನಗೆ ಅವುಗಳ ಬಗ್ಗೆ ಗೊತ್ತಿರಲಿಲ್ಲ.   ನೀನು ಅವುಗಳನ್ನ ಕೇಳಿಸ್ಕೊಳ್ಳೋಕಾಗಲಿ+ ಅರ್ಥ ಮಾಡ್ಕೊಳ್ಳೋಕಾಗಲಿ ಇಷ್ಟಪಡಲಿಲ್ಲ. ಮುಂಚಿನಿಂದಾನೇ ನೀನು ಕಿವಿಗಳನ್ನ ಮುಚ್ಕೊಂಡಿದ್ದೀಯ. ನೀನು ದೊಡ್ಡ ವಂಚಕ ಅಂತ,+ಹುಟ್ಟಿಂದಲೇ ಅಪರಾಧಿ ಅಂತ ನನಗೆ ಗೊತ್ತಿತ್ತು.+   ಆದ್ರೆ ನಾನು ನನ್ನ ಹೆಸ್ರಿಗಾಗಿ ನನ್ನ ಕೋಪವನ್ನ ಹಿಡಿದಿಡ್ತೀನಿ,+ನಾನು ನಿನ್ನನ್ನ ನಾಶಮಾಡದೆ,ನನ್ನ ಮಹಿಮೆಗಾಗಿ ನನ್ನನ್ನೇ ನಾನು ತಡೆಹಿಡಿತೀನಿ.+ 10  ನೋಡು! ನಾನು ನಿನ್ನನ್ನ ಪರಿಷ್ಕರಿಸಿದೆ, ಆದ್ರೆ ಬೆಳ್ಳಿ ತರ ಅಲ್ಲ.+ ನಾನು ನಿನ್ನನ್ನ ಕಷ್ಟದ ಕುಲುಮೆಯಲ್ಲಿ ಪರೀಕ್ಷಿಸಿದೆ.*+ 11  ನನಗಾಗಿ, ಹೌದು, ನನ್ನ ಹೆಸ್ರಿಗಾಗಿ ನಾನು ಕ್ರಿಯೆಗೈತೀನಿ,+ನನ್ನ ಹೆಸ್ರು ಅಪವಿತ್ರವಾಗೋಕೆ ನಾನು ಹೇಗೆ ತಾನೇ ಬಿಡಲಿ?+ ನಾನು ನನ್ನ ಮಹಿಮೆಯನ್ನ ಯಾರ ಜೊತೆನೂ ಹಂಚ್ಕೊಳ್ಳಲ್ಲ.* 12  ಯಾಕೋಬನೇ, ನಾನು ಕರೆದ ಇಸ್ರಾಯೇಲೇ ನನಗೆ ಕಿವಿಗೊಡು,ನಾನು ಬದಲಾಗಲ್ಲ.+ ನಾನೇ ಮೊದಲನೆಯವನು, ಕೊನೆಯವನೂ ನಾನೇ.+ 13  ನಾನು ನನ್ನ ಕೈಯಾರೆ ಭೂಮಿಗೆ ಅಡಿಪಾಯ ಹಾಕಿದೆ,+ನನ್ನ ಬಲಗೈಯಿಂದ ಆಕಾಶವನ್ನ ಹರಡಿದೆ.+ ನಾನು ಅವುಗಳನ್ನ ಕರೆದಾಗ ಅವೆರಡು ಒಟ್ಟಾಗಿ ಬಂದು ನನ್ನ ಮುಂದೆ ಹಾಜರಾಗ್ತವೆ. 14  ನೀವೆಲ್ಲ ಒಟ್ಟಾಗಿ ಸೇರಿಬಂದು ಕೇಳಿಸ್ಕೊಳ್ಳಿ. ಈ ಮಾತುಗಳನ್ನ ನಿಮ್ಮ ದೇವರುಗಳಲ್ಲಿ ಯಾರು ಹೇಳೋಕಾಗುತ್ತೆ? ಯೆಹೋವ ಯಾರನ್ನ ಪ್ರೀತಿಸ್ತಾನೋ,+ಅವನು ಬಾಬೆಲಿನ ವಿರುದ್ಧ ಆತನ ಇಷ್ಟವನ್ನ ನೆರವೇರಿಸ್ತಾನೆ,+ಅವನು ತನ್ನ ತೋಳುಗಳನ್ನ ಕಸ್ದೀಯರ ವಿರುದ್ಧ ಎತ್ತುತ್ತಾನೆ.+ 15  ಸ್ವತಃ ನಾನೇ ಇದನ್ನ ಹೇಳಿದ್ದೀನಿ, ನಾನೇ ಅವನನ್ನ ಕರೆದಿದ್ದೀನಿ.+ ನಾನೇ ಅವನನ್ನ ಕರ್ಕೊಂಡು ಬಂದಿದ್ದೀನಿ, ಅವನು ಮಾಡೋ ಪ್ರತಿಯೊಂದು ಕೆಲಸ ಸಫಲ ಆಗುತ್ತೆ.+ 16  ಜನ್ರೇ, ನನ್ನ ಹತ್ರ ಬಂದು ಇದನ್ನ ಕೇಳಿಸ್ಕೊಳ್ಳಿ. ಆರಂಭದಿಂದಾನೇ ನಾನು ರಹಸ್ಯವಾಗಿ ಮಾತಾಡ್ಲಿಲ್ಲ.+ ಅದು ನೆರವೇರೋಕೆ ಶುರು ಆದಾಗ ನಾನು ಅಲ್ಲೇ ಇದ್ದೆ.” ಈಗ ವಿಶ್ವದ ರಾಜನಾದ ಯೆಹೋವನೇ ನನ್ನನ್ನ ಕಳಿಸಿದ್ದಾನೆ, ಆತನ ಪವಿತ್ರ ಶಕ್ತಿಯನ್ನ ನನಗೆ ಕೊಟ್ಟಿದ್ದಾನೆ. 17  ನಿನ್ನನ್ನ ಬಿಡುಗಡೆ ಮಾಡಿದ ಇಸ್ರಾಯೇಲ್ಯರ ಪವಿತ್ರ ದೇವರಾಗಿರೋ ಯೆಹೋವ+ ಹೀಗೆ ಹೇಳ್ತಿದ್ದಾನೆ“ಯೆಹೋವನಾದ ನಾನೇ ನಿನ್ನ ದೇವರು. ನಿನ್ನ ಒಳಿತಿಗಾಗಿ* ನಿನಗೆ ಬೋಧಿಸುವವನು ನಾನೇ,+ನೀನು ಯಾವ ದಾರಿಯಲ್ಲಿ ನಡಿಬೇಕಂತ ನಿನಗೆ ಮಾರ್ಗದರ್ಶಿಸುವವನು ನಾನೇ.+ 18  ನೀನು ನನ್ನ ಆಜ್ಞೆಗಳಿಗೆ ಗಮನಕೊಟ್ರೆ ಎಷ್ಟೋ ಚೆನ್ನಾಗಿರುತ್ತೆ!+ ನಿನ್ನ ಶಾಂತಿ ನದಿ ತರನೂ+ನಿನ್ನ ನೀತಿ ಸಮುದ್ರದ ಅಲೆಗಳ ತರನೂ ಇರುತ್ತೆ.+ 19  ನಿನ್ನ ಸಂತತಿಯವರೂ ನಿನ್ನ ವಂಶಸ್ಥರೂ ಮರಳಿನ ತರ ಅಸಂಖ್ಯಾತರಾಗ್ತಾರೆ.+ ಅವ್ರ ಹೆಸ್ರನ್ನ ಯಾವತ್ತೂ ನನ್ನ ಮುಂದಿನಿಂದ ತೆಗೆದುಹಾಕಲಾಗಲ್ಲ ಅಥವಾ ಅಳಿಸಿಹಾಕಲಾಗಲ್ಲ.” 20  ಬಾಬೆಲಿಂದ ಹೊರಡಿ!+ ಕಸ್ದೀಯರಿಂದ ಓಡಿಹೋಗಿ! ಸಂತೋಷದಿಂದ ಅದನ್ನ ಹೇಳಿ! ತಿಳಿಸಿ!+ ಭೂಮಿಯ ಕಟ್ಟಕಡೆ ತನಕ ಈ ಸುದ್ದಿ ಮುಟ್ಟೋ ತರ ಮಾಡಿ.+ ಹೀಗೆ ಹೇಳಿ “ಯೆಹೋವ ತನ್ನ ಸೇವಕ ಯಾಕೋಬನನ್ನ ಬಿಡುಗಡೆ ಮಾಡಿದನು.+ 21  ಆತನು ಅವ್ರನ್ನ ಮರುಭೂಮಿಗಳ ಮೂಲಕ ನಡೆಸುವಾಗ ಅವ್ರಿಗೆ ಬಾಯಾರಿಕೆ ಆಗಲಿಲ್ಲ.+ ಆತನು ಅವ್ರಿಗಾಗಿ ಬಂಡೆಯಿಂದ ನೀರು ಹರಿಯೋ ತರ ಮಾಡಿದನು,ಆತನು ಬಂಡೆ ಸೀಳಿ ನೀರನ್ನ ಪ್ರವಾಹದ ಹಾಗೆ ಹರಿಸಿದನು.”+ 22  “ಕೆಟ್ಟವರಿಗೆ ಮನಶ್ಶಾಂತಿ ಇರಲ್ಲ” ಅಂತ ಯೆಹೋವ ಹೇಳ್ತಿದ್ದಾನೆ.+

ಪಾದಟಿಪ್ಪಣಿ

ಅಕ್ಷ. “ಮೊದಲ.”
ಅಥವಾ “ಅಚ್ಚಲ್ಲಿ ಹೊಯ್ದ ಪ್ರತಿಮೆನೇ.”
ಅಕ್ಷ. “ನೀವು.”
ಬಹುಶಃ, “ಆರಿಸಿಕೊಂಡೆ.”
ಅಕ್ಷ. “ನಾನು ನನ್ನ ಮಹಿಮೆಯನ್ನ ಮತ್ತೊಬ್ಬರಿಗೆ ಕೊಡಲ್ಲ.”
ಅಥವಾ “ನಿಮಗೆ ಪ್ರಯೋಜನವಾಗೋ ಹಾಗೆ.”