ಯೆಶಾಯ 52:1-15

  • ಚೀಯೋನೇ, ಎದ್ದೇಳು! (1-12)

    • ಸಿಹಿಸುದ್ದಿ ತರುವವನ ಕಾಲುಗಳು ಸುಂದರ (7)

    • ಚೀಯೋನಿನ ಕಾವಲುಗಾರರೆಲ್ಲ ಒಟ್ಟಾಗಿ ಕೂಗ್ತಾರೆ (8)

    • ಯೆಹೋವನ ಪಾತ್ರೆಗಳನ್ನ ಹೊರುತ್ತಿರುವ​ವರು ಶುದ್ಧರಾಗಿರಬೇಕು (11)

  • ಯೆಹೋವನ ಸೇವಕರನ್ನ ಉನ್ನತಕ್ಕೇರಿಸಲಾಗುತ್ತೆ (13-15)

    • ವಿಕಾರಗೊಂಡಿದ್ದ ಆಕಾರ (14)

52  ಚೀಯೋನೇ+ ಎದ್ದೇಳು! ಎದ್ದು ಶಕ್ತಿಯನ್ನ ತೊಟ್ಕೊ!+ ಯೆರೂಸಲೇಮೇ, ಪವಿತ್ರ ಪಟ್ಟಣವೇ, ನಿನ್ನ ಸುಂದರವಾದ ಬಟ್ಟೆಗಳನ್ನ ಧರಿಸ್ಕೊ!+ ಯಾಕಂದ್ರೆ ಇನ್ನು ಮುಂದೆ ಸುನ್ನತಿ ಆಗದೇ ಇರುವವರು ಮತ್ತು ಅಶುದ್ಧರು ನಿನ್ನನ್ನ ಪ್ರವೇಶಿಸಲ್ಲ.+   ಯೆರೂಸಲೇಮೇ, ಎದ್ದು ಧೂಳನ್ನ ಒದರಿ ಸಿಂಹಾಸನದ ಮೇಲೆ ಕೂತ್ಕೂ. ಚೀಯೋನ್‌ ಪಟ್ಟಣವೇ, ನಿನ್ನ ಕುತ್ತಿಗೆಗೆ ಹಾಕಿರೋ ಬೇಡಿಗಳನ್ನ ತೆಗೆದುಹಾಕು.+   ಯೆಹೋವ ಹೀಗೆ ಹೇಳ್ತಿದ್ದಾನೆ“ನಿನ್ನನ್ನ ದುಡ್ಡಿಗೆ ಮಾರಲಿಲ್ಲ,+ನಿನ್ನನ್ನ ಬಿಡಿಸ್ಕೊಂಡು ಬರುವಾಗ ಹಣವನ್ನ ಕೊಡಲ್ಲ.”+   ವಿಶ್ವದ ರಾಜನಾದ ಯೆಹೋವ ಹೀಗೆ ಹೇಳ್ತಿದ್ದಾನೆ“ಮೊದಲು ನನ್ನ ಜನ್ರು ವಿದೇಶಿಯರ ತರ ವಾಸಿಸೋಕೆ ಈಜಿಪ್ಟಿಗೆ ಹೋದ್ರು,+ಆಮೇಲೆ ಅಶ್ಶೂರ್ಯರು ಕಾರಣವಿಲ್ಲದೆ ಅವ್ರ ಮೇಲೆ ದಬ್ಬಾಳಿಕೆ ಮಾಡಿದ್ರು.”   ಯೆಹೋವ ಹೀಗೆ ಹೇಳ್ತಿದ್ದಾನೆ “ಯಾವುದೇ ಬೆಲೆಯನ್ನ ತೆರದೆ ನನ್ನ ಜನ್ರನ್ನ ಕರ್ಕೊಂಡು ಹೋಗಲಾಗಿದೆ. ಇಂಥ ಪರಿಸ್ಥಿತಿಯಲ್ಲಿ ನಾನು ಏನು ಮಾಡಲಿ?” ಯೆಹೋವ ಹೀಗೆ ಹೇಳ್ತಿದ್ದಾನೆ “ನನ್ನ ಜನ್ರ ಮೇಲೆ ಆಳ್ವಿಕೆ ಮಾಡ್ತಿರುವವರು ಅವ್ರ ವಿಜಯದ ಬಗ್ಗೆ ಕೊಚ್ಕೊಳ್ತಿದ್ದಾರೆ,+ದಿನವಿಡೀ ಅವರು ನನ್ನ ಹೆಸ್ರನ್ನ ಅಗೌರವಿಸ್ತಾ ಇರ್ತಾರೆ.+   ಆ ಕಾರಣದಿಂದಾಗಿ ನನ್ನ ಜನ್ರು ನನ್ನ ಹೆಸ್ರನ್ನ ತಿಳ್ಕೊಳ್ತಾರೆ,+ಹೌದು, ಮಾತಾಡ್ತಿರುವವನು ನಾನೇ ಅಂತ ಆ ದಿನ ಅವರು ಅರ್ಥ ಮಾಡ್ಕೊಳ್ತಾರೆ. ಇಗೋ! ಅದು ನಾನೇ!”   ಸಿಹಿಸುದ್ದಿ ತರುವವನ ಕಾಲುಗಳು ಬೆಟ್ಟಗಳ ಮೇಲೆ ಎಷ್ಟೋ ಸುಂದರವಾಗಿವೆ.+ ಅವನು ಶಾಂತಿಯನ್ನ ಹೇಳ್ತಾನೆ,+ಒಳ್ಳೇ ವಿಷ್ಯಗಳ ಬಗ್ಗೆ ಸಿಹಿಸುದ್ದಿ ತಗೊಂಡು ಬರ್ತಾನೆ,ರಕ್ಷಣೆಯನ್ನ ತಿಳಿಸ್ತಾನೆ,ಚೀಯೋನಿಗೆ “ನಿನ್ನ ದೇವರು ರಾಜನಾಗಿದ್ದಾನೆ!”+ ಅಂತ ಹೇಳ್ತಾನೆ.   ಕೇಳು! ನಿನ್ನ ಕಾವಲುಗಾರರು ಸಂತೋಷದಿಂದ ಕೂಗ್ತಿದ್ದಾರೆ. ಅವರು ಒಟ್ಟಾಗಿ ಹರ್ಷಧ್ವನಿಗೈತಿದ್ದಾರೆ,ಯಾಕಂದ್ರೆ ಚೀಯೋನಲ್ಲಿ ಇರುವವ್ರನ್ನ ಯೆಹೋವ ಮತ್ತೆ ಒಟ್ಟುಸೇರಿಸ್ತಿರೋದು ಅವ್ರಿಗೆ ಸ್ಪಷ್ಟವಾಗಿ ಕಾಣಿಸ್ತಿದೆ.   ಹಾಳು ಬಿದ್ದಿರೋ ಯೆರೂಸಲೇಮಿನ ಸ್ಥಳಗಳೇ,+ ಉಲ್ಲಾಸಪಡಿ, ಒಟ್ಟಾಗಿ ಹರ್ಷಧ್ವನಿಗೈರಿ. ಯಾಕಂದ್ರೆ ಯೆಹೋವ ತನ್ನ ಜನ್ರನ್ನ ಸಂತೈಸಿದ್ದಾನೆ,+ ಯೆರೂಸಲೇಮನ್ನ ಬಿಡಿಸ್ಕೊಂಡು ಬಂದಿದ್ದಾನೆ.+ 10  ಎಲ್ಲ ಜನಾಂಗಗಳು ತನ್ನ ಪವಿತ್ರ ಬಲವನ್ನ ನೋಡೋ ತರ ಯೆಹೋವ ಮಾಡಿದ್ದಾನೆ,+ನಮ್ಮ ದೇವರ ರಕ್ಷಣಾ ಕೆಲಸಗಳನ್ನ* ಭೂಮಿ ಮೇಲಿರೋ ಪ್ರತಿಯೊಬ್ರೂ ನೋಡ್ತಾರೆ.+ 11  ಯೆಹೋವನ ಆಲಯದಲ್ಲಿರೋ ಪಾತ್ರೆಗಳನ್ನ ಹೊತ್ಕೊಳ್ಳುವವ್ರೇ,+ಆ ಸ್ಥಳವನ್ನ ಬಿಟ್ಟು ಬನ್ನಿ! ಅಲ್ಲಿಂದ ಹೊರಗೆ ಬನ್ನಿ!+ ಅಶುದ್ಧವಾಗಿರೋ ಯಾವುದನ್ನೂ ಮುಟ್ಟಬೇಡಿ.+ ಅಲ್ಲಿಂದ ಹೊರಗೆ ಬನ್ನಿ.+ ನಿಮ್ಮನ್ನ ನೀವು ಶುದ್ಧವಾಗಿ ಇಟ್ಕೊಳ್ಳಿ! 12  ನೀವು ಅಲ್ಲಿಂದ ಹೆದರಿ ಹೋಗಬೇಕಾಗಿಲ್ಲ,ನೀವು ಅಲ್ಲಿಂದ ಓಡಿ ಹೋಗಬೇಕಾಗಿಲ್ಲ,ಯಾಕಂದ್ರೆ ಯೆಹೋವನೇ ನಿಮ್ಮ ಮುಂದೆಮುಂದೆ ಹೋಗ್ತಾನೆ,+ಇಸ್ರಾಯೇಲಿನ ದೇವರು ನಿಮ್ಮ ರಕ್ಷಣೆಗಾಗಿ ನಿಮ್ಮ ಹಿಂದೆಹಿಂದೆ ಬರ್ತಾನೆ.+ 13  ಇಗೋ! ನನ್ನ ಸೇವಕ+ ತಿಳುವಳಿಕೆಯಿಂದ* ಕ್ರಿಯೆಗೈತಾನೆ. ಅವನನ್ನ ಮೇಲೇರಿಸಲಾಗುತ್ತೆ,ಅವನನ್ನ ಉನ್ನತಕ್ಕೇರಿಸಲಾಗುತ್ತೆ, ಘನತೆಗೇರಿಸಲಾಗುತ್ತೆ.+ 14  ಬೇರೆಲ್ಲ ಮನುಷ್ಯರಿಗಿಂತ ವಿಚಿತ್ರವಾಗಿದ್ದ ಅವನ ರೂಪವನ್ನ ಕಂಡು,ಮಾನವಕುಲದಲ್ಲೇ ಬೇರೆಲ್ಲರಿಗಿಂತ ವಿಕಾರಗೊಂಡಿದ್ದ ಅವನ ಆಕಾರವನ್ನ ಕಂಡು,ತುಂಬ ಜನ ಅವನನ್ನ ಅಚ್ಚರಿಯಿಂದ ದುರುಗುಟ್ಟಿ ನೋಡಿದ್ರು. 15  ಅದೇ ರೀತಿ ಅನೇಕ ಜನಾಂಗಗಳ ಜನ್ರು ಅವನನ್ನ ನೋಡಿ ಬೆರಗಾಗ್ತಾರೆ.+ ಅವನ ಮುಂದೆ ರಾಜರು ತಮ್ಮ ಬಾಯಿ ಮುಚ್ಕೊಳ್ತಾರೆ,*+ಯಾಕಂದ್ರೆ ಯಾರೂ ಇಂದಿನ ತನಕ ಹೇಳಿರದ ವಿಷ್ಯಗಳನ್ನ ಅವರು ನೋಡ್ತಾರೆ,ಇಂದಿನ ತನಕ ಕೇಳಿಸ್ಕೊಂಡಿರದ ವಿಷ್ಯಗಳಿಗೆ ಅವರು ಗಮನಕೊಡ್ತಾರೆ.+

ಪಾದಟಿಪ್ಪಣಿ

ಅಥವಾ “ಜಯವನ್ನ.”
ಅಕ್ಷ. “ಒಳನೋಟ.”
ಅಥವಾ “ಮೂಕರಾಗ್ತಾರೆ.”