ಯೋಬ 12:1-25
12 ಅದಕ್ಕೆ ಯೋಬ ಹೀಗಂದ:
2 “ಹೌದೌದು, ನೀವೇ ತುಂಬ ಬುದ್ಧಿವಂತರು,ನೀವೇನಾದ್ರೂ ಇಲ್ಲದೇ ಹೋದ್ರೆ ಭೂಮಿಯಲ್ಲಿ ವಿವೇಕಿಗಳೇ ಇರಲ್ವೇನೋ!
3 ನನಗೂ ತಿಳುವಳಿಕೆ ಇದೆ.
ನಾನು ನಿಮಗಿಂತ ಕಮ್ಮಿ ಇಲ್ಲ.
ನೀವು ಹೇಳಿದ ವಿಷ್ಯಗಳೆಲ್ಲ ಯಾರಿಗೆ ತಾನೇ ಗೊತ್ತಿಲ್ಲ?
4 ನಾನು ದೇವರನ್ನ ಬೇಡ್ಕೊಂಡು ಆತನ ಉತ್ತರಕ್ಕಾಗಿ ಕಾಯ್ತಾ ಇದ್ದೀನಿ,+ಇದನ್ನ ನೋಡಿ ನನ್ನ ಗೆಳೆಯರು ಆಡ್ಕೊಳ್ತಾರೆ.+
ಒಬ್ಬ ನೀತಿವಂತನನ್ನ, ನಿರಪರಾಧಿಯನ್ನ ನೋಡಿದ್ರೆ ಜನ ನಗೋದು ಸಹಜ.
5 ನಮಗೆ ಯಾವ ಕಷ್ಟಾನೂ ಬರಲ್ಲ,ಕಷ್ಟ ಬರೋದು ಚಂಚಲ ಮನಸ್ಸಿನವ್ರಿಗೆ* ಮಾತ್ರ ಅಂತ ಯೋಚಿಸ್ತಾರೆ.
6 ಲೂಟಿ ಮಾಡೋರು ನೆಮ್ಮದಿಯಿಂದ ಬದುಕ್ತಾರೆ,+ತಾವು ಆರಾಧಿಸೋ ಮೂರ್ತಿಗಳನ್ನ ಕೈಗಳಲ್ಲಿ ಹೊತ್ಕೊಂಡು ಹೋಗುವವರುದೇವರನ್ನ ರೇಗಿಸುವವರು ಚೆನ್ನಾಗಿ ಇರ್ತಾರೆ.+
7 ಆದ್ರೆ ನೀವು ದಯವಿಟ್ಟು ಪ್ರಾಣಿಗಳನ್ನ ಕೇಳಿ, ಅವು ಕಲಿಸುತ್ತೆ,ಹಾರಾಡೋ ಪಕ್ಷಿಗಳನ್ನ ಕೇಳಿ, ಅವು ಹೇಳುತ್ತೆ.
8 ಭೂಮಿ ಬಗ್ಗೆ ಸ್ವಲ್ಪ ಯೋಚಿಸಿ,* ಅದು ಕಲಿಸುತ್ತೆ,ಸಮುದ್ರದಲ್ಲಿರೋ ಮೀನುಗಳು ಕೂಡ ನಿಮಗೆ ಕಲಿಸುತ್ತೆ.
9 ಯೆಹೋವನೇ ತಮ್ಮನ್ನ ಸೃಷ್ಟಿ ಮಾಡಿದ್ದು ಅಂತಇವುಗಳಲ್ಲಿ ಎಲ್ಲದ್ದಕ್ಕೂ ಗೊತ್ತು.
10 ಪ್ರತಿಯೊಂದು ಜೀವಿಯ ಪ್ರಾಣ,ಪ್ರತಿಯೊಬ್ಬ ಮನುಷ್ಯನ ಉಸಿರು* ದೇವರ ಕೈಯಲ್ಲಿದೆ.+
11 ನಾಲಿಗೆ ರುಚಿ ನೋಡೋ ತರಕಿವಿ ಮಾತುಗಳನ್ನ ಕೇಳಿಸ್ಕೊಂಡಾಗ ಯಾವುದು ಸರಿ ಯಾವುದು ತಪ್ಪು ಅಂತ ತಿಳ್ಕೊಳ್ಳಲ್ವಾ?+
12 ವಯಸ್ಸಾದವರಲ್ಲಿ ವಿವೇಕ ಇರುತ್ತೆ,+ತುಂಬ ಕಾಲ ಬದುಕಿದವರಲ್ಲಿ ತಿಳುವಳಿಕೆ ಇರುತ್ತೆ.
13 ಆದ್ರೆ ದೇವರಿಗೆ ಅದಕ್ಕಿಂತ ತುಂಬ ವಿವೇಕ, ಶಕ್ತಿ,+ ತಿಳುವಳಿಕೆ ಇದೆ.+
ಆತನು ತನ್ನ ಉದ್ದೇಶವನ್ನ ನೆರವೇರಿಸ್ತಾನೆ.
14 ಆತನು ಕೆಡವಿ ಹಾಕಿದ್ದನ್ನ ಯಾರು ಕಟ್ತಾರೆ?+
ಆತನು ಮುಚ್ಚಿದ್ದನ್ನ ತೆರೆಯೋಕೆ ಯಾರಿಂದ ಆಗುತ್ತೆ?
15 ಆತನು ನೀರನ್ನ ತಡೆದ್ರೆ ಭೂಮಿ ಒಣಗಿ ಹೋಗುತ್ತೆ,+ನೀರನ್ನ ಬಿಟ್ರೆ ಇಡೀ ಭೂಮಿ ಪ್ರವಾಹದಲ್ಲಿ ಮುಳುಗುತ್ತೆ.+
16 ಆತನಿಗೆ ಶಕ್ತಿ, ವಿವೇಕ* ಇದೆ,+ದಾರಿತಪ್ಪಿದವನು ದಾರಿತಪ್ಪಿಸುವವನು ಆತನ ಕೈಯಲ್ಲಿದ್ದಾರೆ.
17 ಸಲಹೆಗಾರರ ಹತ್ರ ಇರೋದನ್ನೆಲ್ಲ ಕಿತ್ಕೊಳ್ತಾನೆ,*ನ್ಯಾಯಾಧೀಶರನ್ನ ಮೂರ್ಖರಾಗಿ ಮಾಡ್ತಾನೆ.+
18 ರಾಜರನ್ನ ಅಧಿಕಾರದಿಂದ ತೆಗೆದು ಹಾಕ್ತಾನೆ,*+ಅವ್ರಿಗೆ ದಾಸರ ಬಟ್ಟೆ ಹಾಕಿಸ್ತಾನೆ.
19 ಸುಳ್ಳು ದೇವರ ಪುರೋಹಿತರನ್ನ ಬರಿಗಾಲಲ್ಲಿ ನಡಿಸ್ತಾನೆ,+ಅಧಿಕಾರ ಸ್ಥಾನದಲ್ಲಿ ಗಟ್ಟಿಯಾಗಿ ಕೂತವರನ್ನ ಕೆಳಗೆ ಬೀಳಿಸ್ತಾನೆ.+
20 ಭರವಸಾರ್ಹ ಸಲಹೆಗಾರರ ಬಾಯಿ ಮುಚ್ಚುತ್ತಾನೆ,ವೃದ್ಧರ* ಬುದ್ಧಿವಂತಿಕೆಯನ್ನ ತೆಗೆದುಬಿಡ್ತಾನೆ.
21 ಆತನು ನಾಯಕರ ಮೇಲೆ ಅವಮಾನವನ್ನ ಮಳೆಯಾಗಿ ಸುರಿತಾನೆ,+ಬಲಶಾಲಿಗಳ ಬಲವನ್ನ ಬತ್ತಿಸಿಬಿಡ್ತಾನೆ.
22 ಕತ್ತಲೆಯಲ್ಲಿ ಮರೆಯಾಗಿ ಇರೋದನ್ನ ಬೆಳಕಿಗೆ ತರ್ತಾನೆ,+ಕಾರ್ಗತ್ತಲೆ ಮೇಲೆ ಬೆಳಕು ಹರಿಸ್ತಾನೆ.
23 ದೇಶಗಳನ್ನ ದೊಡ್ಡದಾಗಿ ಬೆಳೆಯೋ ಹಾಗೆ ಮಾಡಿ ನಾಶ ಮಾಡ್ತಾನೆ,ಅವುಗಳ ಗಡಿ ವಿಸ್ತರಿಸೋ ಹಾಗೆ ಮಾಡಿ ಆಮೇಲೆ ಸೆರೆ ಹಿಡ್ಕೊಂಡು ಹೋಗೋ ಹಾಗೆ ಮಾಡ್ತಾನೆ.
24 ಜನನಾಯಕರ ತಿಳುವಳಿಕೆಯನ್ನ ಕಿತ್ಕೊಳ್ತಾನೆ,ದಾರಿಯಿಲ್ಲದ ಬಂಜರು ಭೂಮಿಯಲ್ಲಿ ಅವ್ರನ್ನ ಅಲೆದಾಡಿಸ್ತಾನೆ.+
25 ಅವರು ಕತ್ತಲೆಯಲ್ಲಿ ತಡಕಾಡ್ತಾರೆ,+ಅಮಲೇರಿದವರು ಅಲೆದಾಡೋ ತರ ಅಲೆದಾಡ್ತಾರೆ.+
ಪಾದಟಿಪ್ಪಣಿ
^ ಅಥವಾ “ಜಾರಿ ಬೀಳುವವರಿಗೆ.”
^ ಬಹುಶಃ, “ಭೂಮಿ ಜೊತೆ ಮಾತಾಡಿ.”
^ ಅಥವಾ “ಪ್ರಾಣ.”
^ ಅಥವಾ “ಪ್ರಯೋಜನ ತರೋ ವಿವೇಕ.”
^ ಅಕ್ಷ. “ಬರಿಗಾಲಲ್ಲಿ ಹೋಗೋ ತರ ಮಾಡ್ತಾನೆ.”
^ ಅಕ್ಷ. “ರಾಜರು ಹಾಕಿದ ಬೇಡಿಗಳನ್ನ ಆತನು ಬಿಚ್ಚುತ್ತಾನೆ.”
^ ಅಥವಾ “ಹಿರಿಯರ.”