ಹೋಶೇಯ 10:1-15
10 “ಇಸ್ರಾಯೇಲ ಕೀಳ್ಮಟ್ಟದ* ಹಣ್ಣುಗಳನ್ನ ಕೊಡೋ* ದ್ರಾಕ್ಷಿಬಳ್ಳಿ ತರ ಇದ್ದಾನೆ.+
ಅವನು ಹೆಚ್ಚು ಹಣ್ಣುಗಳನ್ನ ಕೊಟ್ಟಷ್ಟು ಯಜ್ಞವೇದಿಗಳನ್ನೂ ಹೆಚ್ಚಿಸ್ಕೊಂಡಿದ್ದಾನೆ,+ಅವನ ಭೂಮಿಯ ಬೆಳೆ ಹೆಚ್ಚಾದ ಹಾಗೆ ಅವನ ಪೂಜಾಕಂಬಗಳ ವೈಭವನೂ ಹೆಚ್ಚಾಗ್ತಿದೆ.+
2 ಅವರು ಹೊರಗೊಂದು ತರ ಒಳಗೊಂದು ತರ,*ಅವರು ಅಪರಾಧಿಗಳು ಅಂತ ಈಗ ತೀರ್ಮಾನ ಆಗುತ್ತೆ.
ಅವರ ಯಜ್ಞವೇದಿಗಳನ್ನ ಒಡೆದುಬಿಡುವವನು ಒಬ್ಬನಿದ್ದಾನೆ,ಆತನು ಅವ್ರ ಪೂಜಾಕಂಬಗಳನ್ನ ನಾಶಮಾಡ್ತಾನೆ.
3 ಅವ್ರೀಗ ‘ನಾವು ಯೆಹೋವನಿಗೆ ಭಯಪಡದ ಕಾರಣ ನಮಗೆ ರಾಜನಿಲ್ಲ.+
ಇದ್ರೂ ನಮಗಾಗಿ ಅವನು ಏನು ತಾನೇ ಮಾಡಕ್ಕಾಗುತ್ತೆ?’ ಅಂತಾರೆ.
4 ಅವರು ಪೊಳ್ಳು ಮಾತುಗಳನ್ನಾಡ್ತಾರೆ, ಸುಳ್ಳಾಣೆ ಇಡ್ತಾರೆ,+ ಒಪ್ಪಂದಗಳನ್ನ ಮಾಡ್ಕೊಳ್ತಾರೆ.
ಹಾಗಾಗಿ ಅನ್ಯಾಯ ಹೊಲದಲ್ಲಿರೋ ವಿಷಕಾರಿ ಕಳೆಗಳ ತರ ಹರಡಿಕೊಂಡಿದೆ.+
5 ಬೇತ್-ಆವೆನಲ್ಲಿರೋ ಕರುವಿನ ಮೂರ್ತಿಗೆ ಬರೋ ಗತಿ ನೋಡಿ ಸಮಾರ್ಯದ ಜನ ಭಯಪಡ್ತಾರೆ,+ಯಾಕಂದ್ರೆ ಅದು ಸೆರೆಯಾಗಿ ಹೋಗುತ್ತೆ.
ಅದ್ರ ಜನ ಅದಕ್ಕಾಗಿ ಗೋಳಾಡ್ತಾರೆ,ಕರುವಿನ ಮೂರ್ತಿಯನ್ನೂ ಅದ್ರ ಮಹಿಮೆಯನ್ನೂ ನೋಡಿ ಸಂತೋಷಪಟ್ಟ ಸುಳ್ಳು ದೇವರ ಪುರೋಹಿತರೂ ಗೋಳಾಡ್ತಾರೆ.
6 ಆ ಮೂರ್ತಿಯನ್ನ ಅಶ್ಶೂರದ ಮಹಾ ರಾಜನಿಗೆ ಉಡುಗೊರೆಯಾಗಿ ತರಲಾಗುತ್ತೆ.+
ಎಫ್ರಾಯೀಮಿಗೆ ಅವಮಾನ ಆಗುತ್ತೆ,ಇಸ್ರಾಯೇಲ್ ಬುದ್ಧಿಹೀನ ಸಲಹೆ ಪಾಲಿಸಿದ್ರಿಂದ ನಾಚಿಕೆಗೀಡಾಗುತ್ತೆ.+
7 ಕಡಿದು ಹಾಕಿದ ಚಿಕ್ಕದೊಂದು ರೆಂಬೆ ಪ್ರವಾಹದಲ್ಲಿ ಕೊಚ್ಕೊಂಡು ಹೋಗೋ ಹಾಗೆ ಸಮಾರ್ಯ ಕಣ್ಮರೆಯಾಗುತ್ತೆ.+
ಅದೇ ರೀತಿ ಅದ್ರ ರಾಜನೂ ಖಂಡಿತ ನಾಶ ಆಗ್ತಾನೆ.
8 ಇಸ್ರಾಯೇಲನ್ನ ಪಾಪಕ್ಕೆ+ ನಡೆಸಿದ ಬೇತ್-ಆವೆನಿನ+ ಪೂಜಾಸ್ಥಳಗಳನ್ನ ನಾಶಮಾಡಲಾಗುತ್ತೆ.+
ಅವ್ರ ಯಜ್ಞವೇದಿಗಳ ಮೇಲೆ ಮುಳ್ಳುಗಿಡಗಳು ಮತ್ತು ಕಳೆಗಳು ಬೆಳಿಯುತ್ತೆ.+
ಜನ ಪರ್ವತಗಳಿಗೆ ‘ನಮ್ಮನ್ನ ಮುಚ್ಕೊಳ್ಳಿ!’
ಬೆಟ್ಟಗಳಿಗೆ ‘ನಮ್ಮ ಮೇಲೆ ಬೀಳಿ!’ ಅಂತಾ ಹೇಳ್ತಾರೆ.+
9 ಇಸ್ರಾಯೇಲೇ, ಗಿಬೆಯಾದಲ್ಲಿ ದುರಾಚಾರ ನಡೆದಂದಿನಿಂದ ನೀನು ಪಾಪ ಮಾಡಿದ್ದೀಯ.+
ಇಸ್ರಾಯೇಲ್ ಜನ ಅದೇ ಪಾಪವನ್ನ ಮುಂದುವರಿಸಿದ್ರು.
ಗಿಬೆಯಾದಲ್ಲಾದ ಯುದ್ಧದಲ್ಲಿ ಅನೀತಿವಂತ ಜನ ಪೂರ್ತಿ ನಾಶವಾಗಲಿಲ್ಲ.
10 ನನಗೆ ಇಷ್ಟ ಬಂದಾಗ ನಾನೂ ಅವ್ರಿಗೆ ಶಿಸ್ತು ಕೊಡ್ತೀನಿ.
ಅವ್ರ ಎರಡು ಪಾಪಗಳ ಭಾರವನ್ನ ಅವ್ರ ಮೇಲೆ ಹೇರಲಾದಾಗ*ಜನಾಂಗಗಳು ಅವ್ರ ವಿರುದ್ಧ ಸೇರಿಕೊಳ್ಳುತ್ತೆ.
11 ಎಫ್ರಾಯೀಮ್ ಕಣ ತುಳಿಯೋಕೆ ಇಷ್ಟಪಡೋ ಪಳಗಿಸಿದ ಕಡಸಿನ* ತರ ಇತ್ತು,ಹಾಗಾಗಿ ಅದ್ರ ಅಂದವಾದ ಕುತ್ತಿಗೆಯನ್ನ ನಾನು ಉಳಿಸಿದೆ.
ಈಗ ಎಫ್ರಾಯೀಮನ ಮೇಲೆ ಯಾರಾದ್ರೂ ಕೂತು* ಅವನಿಂದ ನೆಲವನ್ನ ಉಳೋ ತರ ನಾನು ಮಾಡ್ತೀನಿ.+
ಯೆಹೂದ ನೇಗಿಲನ್ನ ಹೊಡಿತಾನೆ, ಯಾಕೋಬ ಅವನಿಗಾಗಿ ಕುಂಟೆ ಎಳಿತಾನೆ.
12 ನೀತಿಯ ಬೀಜವನ್ನ ಬಿತ್ತಿ, ಶಾಶ್ವತ ಪ್ರೀತಿಯನ್ನ ಕೊಯ್ಯಿರಿ.
ಯೆಹೋವನ ಹತ್ರ ವಾಪಸ್ ಬರೋಕೆ* ಇನ್ನೂ ಸಮಯ ಇರುವಾಗ್ಲೇ+ ಕೃಷಿಭೂಮಿಯನ್ನ ಉಳುಮೆ ಮಾಡಿ,+ಆಗ ಆತನು ಬಂದು ನಿಮಗೆ ನೀತಿಯನ್ನ ಕಲಿಸ್ತಾನೆ.+
13 ಆದ್ರೆ ನೀವು ಕೆಟ್ಟತನವನ್ನ ಬಿತ್ತಿದ್ದೀರ,ಅನೀತಿಯನ್ನ ಕೊಯ್ದಿದ್ದೀರ.+
ಮೋಸದ ಫಲವನ್ನ ತಿಂದಿದ್ದೀರ.
ಯಾಕಂದ್ರೆ ನೀವು ನಿಮ್ಮ ಸ್ವಂತ ರೀತಿ-ನೀತಿ ಮೇಲೆ,ಅಸಂಖ್ಯಾತ ವೀರ ಸೈನಿಕರ ಮೇಲೆ ಭರವಸೆ ಇಟ್ಟಿದ್ದೀರ.
14 ನಿನ್ನ ಜನ್ರ ವಿರುದ್ಧ ಯುದ್ಧದ ಗಲಭೆ ಏಳುತ್ತೆ,ಬೇತ್-ಅರ್ಬೇಲನ್ನ ಶಲ್ಮಾನ ನಾಶಮಾಡಿದ ತರಭದ್ರ ಕೋಟೆಗಳಿರೋ ನಿಮ್ಮ ಪಟ್ಟಣಗಳು ಪೂರ್ತಿ ನಾಶ ಆಗುತ್ತೆ,+ಆ ಯುದ್ಧದ ಸಮಯದಲ್ಲಿ ತಾಯಂದಿರನ್ನೂ ಮಕ್ಕಳನ್ನೂ ಕ್ರೂರವಾಗಿ ಕೊಲ್ಲಲಾಗಿತ್ತು.
15 ಬೆತೆಲ್, ನಿನ್ನ ಅತಿಯಾದ ಕೆಟ್ಟತನಕ್ಕಾಗಿ ನಿನಗೂ ಅದೇ ಗತಿ ಆಗುತ್ತೆ.+
ಬೆಳಗಾದಾಗ ಇಸ್ರಾಯೇಲಿನ ರಾಜ ಖಂಡಿತ ನಾಶ ಆಗ್ತಾನೆ.”+
ಪಾದಟಿಪ್ಪಣಿ
^ ಬಹುಶಃ, “ಸೊಂಪಾಗಿ ಬೆಳಿತಿರೋ.”
^ ಅಥವಾ “ಭ್ರಷ್ಟ.”
^ ಅಥವಾ “ವಂಚಕರು.”
^ ಅಂದ್ರೆ, ನೊಗ ಹೊರೋ ಹಾಗೆ ಅವರು ಶಿಕ್ಷೆ ಅನುಭವಿಸುವಾಗ.
^ ಅಂದ್ರೆ, ಇನ್ನೂ ಕರು ಹಾಕದಿರೋ ಹಸು.
^ ಅಥವಾ “ಅವನ ಮೇಲೆ ನೊಗ ಹಾಕಿ.”
^ ಅಥವಾ “ಯೆಹೋವನನ್ನ ಹುಡುಕೋಕೆ.”