ಒಂದನೇ ಪೂರ್ವಕಾಲವೃತ್ತಾಂತ 5:1-26

  • ರೂಬೇನನ ವಂಶದವರು (1-10)

  • ಗಾದನ ವಂಶದವರು (11-17)

  • ಹಗ್ರೀಯರ ಸೋಲು (18-22)

  • ಮನಸ್ಸೆಯ ಅರ್ಧ ಕುಲ (23-26)

5  ಇಸ್ರಾಯೇಲನ ಮೊದಲ ಮಗನಾದ ರೂಬೇನನ+ ಗಂಡು ಮಕ್ಕಳ ಹೆಸ್ರು ಹೀಗಿದೆ. ಇವನು ಮೊದಲ್ನೇ ಮಗನಾಗಿದ್ದ. ಆದ್ರೆ ಅವನು ತನ್ನ ತಂದೆಯ ಹಾಸಿಗೆ ಮಲಿನ* ಮಾಡಿದ್ರಿಂದ+ ಅವನಿಗೆ ಸಿಗಬೇಕಾಗಿದ್ದ ಜ್ಯೇಷ್ಠಪುತ್ರನ ಹಕ್ಕು ಇಸ್ರಾಯೇಲನ ಮಗನಾದ ಯೋಸೇಫನ ಮಕ್ಕಳಿಗೆ ಸಿಕ್ತು.+ ಹೀಗೆ ಇಸ್ರಾಯೇಲ್‌ ವಂಶಾವಳಿ ಪಟ್ಟಿಯಲ್ಲಿ ಮೊದಲ ಮಗನಾದ ರೂಬೇನನ ಹೆಸ್ರು ಅಂತ ಬರೆದಿಲ್ಲ.  ಯೆಹೂದ+ ತನ್ನ ಸಹೋದರರಲ್ಲಿ ಎಲ್ರಿಗಿಂತ ಶ್ರೇಷ್ಠನಾಗಿದ್ದ, ಮುಂದಿನ ನಾಯಕ ಅವನ ವಂಶದಲ್ಲೇ ಹುಟ್ಟಲಿದ್ದ.+ ಹಾಗಿದ್ರೂ ಜ್ಯೇಷ್ಠಪುತ್ರನ ಹಕ್ಕು ಯೋಸೇಫನಿಗೆ ಸಿಕ್ತು.  ಇಸ್ರಾಯೇಲನ ಮೊದಲ್ನೇ ಮಗನಾಗಿದ್ದ ರೂಬೇನನ ಗಂಡು ಮಕ್ಕಳು ಹನೋಕ್‌, ಪಲ್ಲೂ, ಹೆಚ್ರೋನ್‌, ಕರ್ಮೀ.+  ಯೋವೇಲನ ಗಂಡು ಮಕ್ಕಳು ಶೆಮಾಯ, ಶೆಮಾಯನ ಮಗ ಗೋಗ್‌, ಗೋಗನ ಮಗ ಶಿಮ್ಮಿ,  ಶಿಮ್ಮಿಯ ಮಗ ಮೀಕ, ಮೀಕನ ಮಗ ರೆವಾಯ, ರೆವಾಯನ ಮಗ ಬಾಳ್‌,  ಬಾಳನ ಮಗ ಬೇರಾ. ಬೇರಾನನ್ನ ಅಶ್ಶೂರ್ಯರ ರಾಜನಾದ ತಿಗ್ಲತ್‌-ಪಿಲೆಸೆರ*+ ಕೈದಿಯಾಗಿ ಕರ್ಕೊಂಡು ಹೋದ. ಬೇರಾ ರೂಬೇನ್ಯರ ಪ್ರಧಾನ.  ಬೇರಾನ ಮನೆತನದವ್ರ ವಂಶಾವಳಿ ಪ್ರಕಾರ ಅವನ ಸಹೋದರರು ಮುಖ್ಯಸ್ಥನಾಗಿದ್ದ ಯೆಗೀಯೇಲ್‌, ಜೆಕರ್ಯ,  ಬೆಳ. ಬೆಳ ಅಜಾಜನ ಮಗ, ಅಜಾಜ ಶೆಮನ ಮಗ, ಶೆಮ ಯೋವೇಲನ ಮಗ. ಬೆಳನ ಮನೆತನದವರು ಅರೋಯೇರಿನಿಂದ+ ನೆಬೋ ತನಕ, ಬಾಳ್‌-ಮೆಯೋನಿನ+ ತನಕ ಇದ್ದ ಪ್ರಾಂತ್ಯಗಳಲ್ಲಿ ವಾಸ ಇದ್ರು.  ಗಿಲ್ಯಾದ್‌ ದೇಶದಲ್ಲಿ+ ಅವ್ರಿಗೆ ತುಂಬ ಪ್ರಾಣಿ ಇತ್ತು, ಹಾಗಾಗಿ ಅವರು ಪೂರ್ವದಲ್ಲಿದ್ದ ಯೂಫ್ರೆಟಿಸ್‌ ನದಿ+ ಪಕ್ಕ ಇರೋ ಕಾಡಿನ ತನಕ ಹೋಗಿ ಅಲ್ಲಿವರೆಗೆ ವಾಸ ಮಾಡಿದ್ರು. 10  ಸೌಲನ ಕಾಲದಲ್ಲಿ ಅವರು ಹಗ್ರೀಯರ ವಿರುದ್ಧ ಯುದ್ಧ ಮಾಡಿ ಸೋಲಿಸಿದ್ರು. ಹಾಗಾಗಿ ಗಿಲ್ಯಾದಿನ ಪೂರ್ವದಲ್ಲಿದ್ದ ಪ್ರಾಂತ್ಯಗಳಲ್ಲಿನ ಹಗ್ರೀಯರ ಡೇರೆಗಳಲ್ಲಿ ವಾಸಿಸಿದ್ರು. 11  ಇವ್ರ ಪಕ್ಕದಲ್ಲಿ ಗಾದನ ವಂಶದವರು ವಾಸ ಇದ್ರು. ಅವರು ಬಾಷಾನಿನ ಪ್ರದೇಶದಲ್ಲಿ ಸಲ್ಕಾ+ ತನಕ ವಾಸ ಇದ್ರು. 12  ಯೋವೇಲ ಬಾಷಾನಲ್ಲಿ ಮುಖ್ಯಸ್ಥನಾಗಿದ್ದ. ಅವನ ನಂತ್ರದ ಸ್ಥಾನದಲ್ಲಿ ಶಾಫಾಮ ಇದ್ದ. ಯನೈಯನಿಗೂ ಶಾಫಾಟನಿಗೂ ಬಾಷಾನಲ್ಲಿ ಜವಾಬ್ದಾರಿ ಇದ್ವು. 13  ಇವ್ರ ಸಂಬಂಧಿಕರು ಮೀಕಾಯೇಲ, ಮೆಷುಲ್ಲಾಮ, ಶೆಬ, ಯೋರೈ, ಯಕ್ಕಾನ್‌, ಜೀಯ, ಎಬೆರ. ಒಟ್ಟು ಏಳು ಜನ. 14  ಇವರು ಅಬೀಹೈಲನ ಗಂಡು ಮಕ್ಕಳು. ಅಬೀಹೈಲ್‌ ಹೂರಿಯ ಮಗ, ಹೂರಿ ಯಾರೋಹನ ಮಗ, ಯಾರೋಹ ಗಿಲ್ಯಾದನ ಮಗ, ಗಿಲ್ಯಾದ್‌ ಮೀಕಾಯೇಲನ ಮಗ, ಮೀಕಾಯೇಲ ಯೆಷೀಷೈನ ಮಗ, ಯೆಷೀಷೈ ಯಹ್ದೋನನ ಮಗ, ಯಹ್ದೋನ್‌ ಬೂಜನ ಮಗ. 15  ಅಹೀಯ ಇವ್ರ ಕುಲದ ಮುಖ್ಯಸ್ಥನಾಗಿದ್ದ. ಇವನು ಗೂನೀಯ ಮೊಮ್ಮಗ, ಅಬ್ದಿಯೇಲನ ಮಗ. 16  ಇವರು ಗಿಲ್ಯಾದಲ್ಲಿ,+ ಬಾಷಾನಲ್ಲಿ,+ ಅವುಗಳಿಗೆ ಸೇರಿದ* ಪಟ್ಟಣಗಳಲ್ಲಿ, ಶಾರೋನಿನ ಎಲ್ಲ ಹುಲ್ಲುಗಾವಲುಗಳ ಗಡಿ ತನಕ ಇದ್ರು. 17  ಇವ್ರೆಲ್ಲರ ಹೆಸ್ರು ಯೆಹೂದದ ರಾಜ ಯೋತಾಮನ,+ ಇಸ್ರಾಯೇಲಿನ ರಾಜ ಯಾರೊಬ್ಬಾಮನ*+ ಕಾಲದ ವಂಶಾವಳಿ ಪಟ್ಟಿಯಲ್ಲಿ ಇದೆ. 18  ರೂಬೇನ್ಯರ, ಗಾದ್ಯರ ಮತ್ತು ಮನಸ್ಸೆಯ ಅರ್ಧ ಕುಲದವರ ಸೈನ್ಯದಲ್ಲಿ ಗುರಾಣಿ, ಕತ್ತಿ ಹೊರ್ತಿದ್ದ, ಬಿಲ್ಲುಗಳನ್ನ ಧರಿಸಿದ್ದ* 44,760 ವೀರ ಸೈನಿಕರು ಇದ್ರು. ಅವರು ಯುದ್ಧ ಮಾಡೋಕೆ ತರಬೇತಿ ಪಡೆದಿದ್ರು. 19  ಅವರು ಹಗ್ರೀಯ,+ ಯಟೂರ್‌, ನಾಫೀಷ್‌,+ ನೋದಾಬ್‌ ಜನ್ರ ವಿರುದ್ಧ ಯುದ್ಧ ಮಾಡಿದ್ರು. 20  ಅವರು ಯುದ್ಧ ಮಾಡ್ತಿದ್ದಾಗ ಸಹಾಯ ಮಾಡು ಅಂತ ದೇವರನ್ನ ಬೇಡ್ಕೊಂಡಾಗ ದೇವರು ಅವ್ರಿಗೆ ಸಹಾಯ ಮಾಡಿದನು. ಯಾಕಂದ್ರೆ ಅವರು ಆತನ ಮೇಲೆ ನಂಬಿಕೆ ಇಟ್ಟಿದ್ರು.+ ದೇವರು ಹಗ್ರೀಯರನ್ನ, ಹಗ್ರೀಯರ ಜೊತೆ ಇದ್ದ ಎಲ್ಲ ಜನ್ರನ್ನ ಅವ್ರ ಕೈಗೆ ಒಪ್ಪಿಸಿಬಿಟ್ಟ. 21  ಅವರು ತಮ್ಮ ಶತ್ರುಗಳಿಂದ ಪ್ರಾಣಿಗಳನ್ನ ಅಂದ್ರೆ 50,000 ಒಂಟೆ, 2,50,000 ಕುರಿ, 2,000 ಕತ್ತೆ ವಶ ಮಾಡ್ಕೊಂಡ್ರು. 1,00,000 ಜನ್ರನ್ನ ಕೈದಿಗಳಾಗಿ ಕರ್ಕೊಂಡು ಹೋದ್ರು. 22  ಯುದ್ಧ ಮಾಡಿದ್ದು ಸತ್ಯ ದೇವರಾಗಿದ್ರಿಂದ ಶತ್ರು ಸೈನ್ಯದಲ್ಲಿ ತುಂಬ ಜನ ಸತ್ರು.+ ಮುಂದೆ ತಮ್ಮನ್ನ ಕೈದಿಗಳಾಗಿ ಕರ್ಕೊಂಡು ಹೋಗೋ ತನಕ ಅವರು ಶತ್ರುಗಳ ಜಾಗದಲ್ಲೇ ವಾಸ ಮಾಡಿದ್ರು.+ 23  ಮನಸ್ಸೆ ಕುಲದ ಅರ್ಧ ಜನ್ರು+ ಬಾಷಾನಿಂದ ಬಾಳ್‌-ಹೆರ್ಮೋನ್‌, ಸೆನೀರ್‌, ಹೆರ್ಮೋನ್‌ ಬೆಟ್ಟದ+ ತನಕ ಇದ್ದ ಪ್ರಾಂತ್ಯಗಳಲ್ಲಿ ವಾಸ ಮಾಡಿದ್ರು. ಅವ್ರ ಜನಸಂಖ್ಯೆ ತುಂಬ ಇತ್ತು. 24  ಏಫೆರ್‌, ಇಷ್ಷೀ, ಎಲೀಯೇಲ್‌, ಅಜ್ರೀಯೇಲ್‌, ಯೆರೆಮೀಯ, ಹೋದವ್ಯ, ಯೆಹ್ತೀಯೇಲ್‌ ಇವರು ಕುಲದ ಮುಖ್ಯಸ್ಥರು, ವೀರ ಸೈನಿಕರು, ಪ್ರಸಿದ್ಧರು. ಇವರು ತಮ್ಮತಮ್ಮ ಕುಲಕ್ಕೆ ಮುಖ್ಯಸ್ಥರಾಗಿದ್ರು. 25  ಆದ್ರೆ ತಮ್ಮ ಪೂರ್ವಜರ ದೇವರಿಗೆ ನಂಬಿಕೆದ್ರೋಹ ಮಾಡಿದ್ರು. ಆ ದೇವರು ಯಾವ ಜನ್ರನ್ನ ನಾಶ ಮಾಡಿದ್ನೋ ಆ ಜನ್ರ ದೇವರುಗಳನ್ನ ಆರಾಧನೆ ಮಾಡೋಕೆ* ಶುರು ಮಾಡಿದ್ರು.+ 26  ಆಗ ಇಸ್ರಾಯೇಲ್‌ ದೇವರು ಅಶ್ಶೂರ್ಯರ ರಾಜ ಪೂಲನ (ಅಂದ್ರೆ ಅಶ್ಶೂರ್ಯರ ರಾಜ ತಿಗ್ಲತ್‌-ಪಿಲೆಸೆರನ)+ ಮನಸ್ಸನ್ನ ಪ್ರೇರೇಪಿಸಿದ.+ ಹಾಗಾಗಿ ಅವನು ರೂಬೇನ್ಯರನ್ನ, ಗಾದ್ಯರನ್ನ, ಮನಸ್ಸೆ ಕುಲದ ಅರ್ಧ ಜನ್ರನ್ನ ಬಂಧಿಸಿ ಹಲಹ, ಹಾಬೋರ್‌, ಹಾರ, ಗೋಜಾನ್‌ ನದಿ+ ಹತ್ರ ಕರ್ಕೊಂಡು ಹೋದ. ಇವತ್ತಿಗೂ ಅವರು ಅಲ್ಲೇ ಇದ್ದಾರೆ.

ಪಾದಟಿಪ್ಪಣಿ

ಅಥವಾ “ಅಪವಿತ್ರ.”
ಅಥವಾ, “ತಿಲ್ಗತ್‌-ಪಿಲೆಸೆರ”
ಅಥವಾ “ಅವುಗಳ ಸುತ್ತಮುತ್ತ ಇದ್ದ.”
ಅದು, ಎರಡನೇ ಯಾರೊಬ್ಬಾಮ.
ಅಕ್ಷ. “ಕಾಲಿಂದ ತುಳಿತಿದ್ದ.”
ಅಥವಾ “ವೇಶ್ಯೆರ ತರ ನಡ್ಕೊಳ್ಳೋಕೆ.”