ಯೋಹಾನ ಬರೆದ ಮೊದಲನೇ ಪತ್ರ 5:1-21

  • ಯೇಸು ಮೇಲೆ ನಂಬಿಕೆ ಇಟ್ರೆ ಲೋಕ ಗೆಲ್ಲಬಹುದು (1-12)

    • ನಾವು ದೇವರನ್ನ ಪ್ರೀತಿಸೋದಾದ್ರೆ (3)

  • ಪ್ರಾರ್ಥನೆಗಿರೋ ಶಕ್ತಿಯಲ್ಲಿ ನಂಬಿಕೆ (13-17)

  • ಕೆಟ್ಟ ಲೋಕ ನಿಮ್ಮನ್ನ ದಾರಿತಪ್ಪಿಸದ ಹಾಗೆ ನೋಡ್ಕೊಳ್ಳಿ (18-21)

    • ಇಡೀ ಲೋಕ ಸೈತಾನನ ಕೈಯಲ್ಲಿ (19)

5  ಯೇಸುನೇ ಕ್ರಿಸ್ತ ಅಂತ ನಂಬೋ ಎಲ್ರೂ ದೇವರಿಂದ ಹುಟ್ಟಿದವರು.+ ಜೀವ ಕೊಟ್ಟಿರೋ ದೇವರನ್ನ ಪ್ರೀತಿಸುವವ್ರೆಲ್ಲ ದೇವರ ಮಕ್ಕಳನ್ನೂ ಪ್ರೀತಿಸ್ತಾರೆ.  ನಾವು ದೇವರನ್ನ ಪ್ರೀತಿಸುವಾಗ, ಆತನ ಆಜ್ಞೆಗಳನ್ನ ಪಾಲಿಸುವಾಗ ನಾವು ದೇವರ ಮಕ್ಕಳನ್ನ ಪ್ರೀತಿಸ್ತೀವಿ+ ಅಂತ ನಮಗೆ ಗೊತ್ತಾಗುತ್ತೆ.  ನಾವು ದೇವರನ್ನ ಪ್ರೀತಿಸೋದಾದ್ರೆ ಆತನ ಆಜ್ಞೆಗಳನ್ನ ಪಾಲಿಸೇ ಪಾಲಿಸ್ತೀವಿ.+ ಆ ಆಜ್ಞೆಗಳು ಅಷ್ಟೇನೂ ಕಷ್ಟ ಅಲ್ಲ.+  ಯಾಕಂದ್ರೆ ದೇವರಿಂದ ಹುಟ್ಟಿದವ್ರೆಲ್ಲ ಲೋಕನ ಗೆಲ್ತಾರೆ.+ ಈ ಲೋಕವನ್ನ ಗೆಲ್ಲೋಕೆ ನಮ್ಮ ನಂಬಿಕೆನೇ ನಮಗೆ ಸಹಾಯ ಮಾಡಿದೆ.+  ಲೋಕವನ್ನ ಯಾರಿಂದ ಗೆಲ್ಲೋಕೆ ಆಗುತ್ತೆ?+ ಯೇಸು ದೇವರ ಮಗ ಅಂತ ನಂಬಿಕೆ ಇರುವವ್ರಿಗೆ ತಾನೇ?+  ಯೇಸು ಕ್ರಿಸ್ತ ನೀರು ಮತ್ತು ರಕ್ತದಿಂದ ಬಂದ. ಆತನು ಬರೀ ನೀರಿಂದ ಬಂದಿಲ್ಲ,+ ನೀರು ಮತ್ತು ರಕ್ತದಿಂದ ಬಂದ.+ ಪವಿತ್ರಶಕ್ತಿನೇ ಇದಕ್ಕೆ ಸಾಕ್ಷಿ.+ ಯಾಕಂದ್ರೆ ಪವಿತ್ರಶಕ್ತಿ ಸತ್ಯವನ್ನ ಬಯಲು ಮಾಡುತ್ತೆ.  ಯೇಸು ಬಗ್ಗೆ ಹೇಳೋಕೆ ಈ ಮೂರು ಸಾಕ್ಷಿಗಳಿವೆ:  ಪವಿತ್ರಶಕ್ತಿ,+ ನೀರು+ ಮತ್ತು ರಕ್ತ.+ ಈ ಮೂರೂ ಸಾಕ್ಷಿಗಳು ಒಂದೇ ವಿಷ್ಯ ಹೇಳುತ್ತೆ.  ನಾವು ಜನ್ರು ಹೇಳೋ ಸಾಕ್ಷಿಯನ್ನ ನಂಬೋದಾದ್ರೆ ದೇವರು ಹೇಳೋ ಸಾಕ್ಷಿ ಅದಕ್ಕಿಂತ ಎಷ್ಟೋ ದೊಡ್ಡದು. ಯಾಕಂದ್ರೆ ದೇವರು ತನ್ನ ಮಗ ಯಾರಂತ ಹೇಳ್ತಾನೆ. 10  ದೇವರ ಮಗನ ಮೇಲೆ ನಂಬಿಕೆ ಇಡೋ ವ್ಯಕ್ತಿ ತನ್ನ ಹೃದಯದಲ್ಲಿ ಆತನನ್ನ ಒಪ್ಕೊಂಡಿರ್ತಾನೆ. ದೇವರ ಮೇಲೆ ನಂಬಿಕೆ ಇಲ್ಲದೆ ಇರೋ ವ್ಯಕ್ತಿ ದೇವರು ತನ್ನ ಮಗನ ಬಗ್ಗೆ ಹೇಳಿರೋ ಸತ್ಯನಾ ನಂಬಲ್ಲ. ಹೀಗೆ ಅವನು ದೇವರನ್ನೇ ಸುಳ್ಳುಗಾರ ಅಂತ ಹೇಳ್ತಾನೆ.+ 11  ದೇವರು ನಮಗೆ ಶಾಶ್ವತ ಜೀವ+ ಕೊಟ್ಟಿದ್ದಾನೆ. ತನ್ನ ಮಗನ ಮೂಲಕ ಈ ಜೀವ ಕೊಟ್ಟಿದ್ದಾನೆ.+ ಇದೇ ದೇವರು ಹೇಳಿರೋ ಸಾಕ್ಷಿ. 12  ಮಗನನ್ನ ಒಪ್ಕೊಳ್ಳುವವನಿಗೆ ಶಾಶ್ವತ ಜೀವ ಸಿಗುತ್ತೆ. ಆದ್ರೆ ದೇವರ ಮಗನನ್ನ ಒಪ್ಕೊಳ್ಳದೆ ಇರುವವನಿಗೆ ಶಾಶ್ವತ ಜೀವ ಸಿಗಲ್ಲ.+ 13  ದೇವರ ಮಗನ ಹೆಸ್ರಲ್ಲಿ ನಂಬಿಕೆ ಇಟ್ಟಿರೋ+ ನಿಮಗೆ ಶಾಶ್ವತ ಜೀವ ಸಿಗುತ್ತೆ ಅನ್ನೋ ವಿಷ್ಯ ಗೊತ್ತಾಗಬೇಕು ಅಂತ ನಾನು ಇದನ್ನೆಲ್ಲ ಬರಿತಾ ಇದ್ದೀನಿ.+ 14  ದೇವರ ಇಷ್ಟದ ಪ್ರಕಾರ ನಾವು ಏನೇ ಕೇಳಿದ್ರೂ ದೇವರು ಅದನ್ನ ಕೊಡ್ತಾನೆ+ ಅನ್ನೋ ನಂಬಿಕೆ ನಮಗಿದೆ.+ 15  ಅಷ್ಟೇ ಅಲ್ಲ, ನಾವು ಏನೇ ಬೇಡ್ಕೊಂಡ್ರೂ ದೇವರು ಅದನ್ನ ಕೊಡ್ತಾನೆ ಅನ್ನೋ ನಂಬಿಕೆ ಇರೋದ್ರಿಂದ ನಾವು ಈಗಾಗ್ಲೇ ಬೇಡಿರೋದು ಸಿಕ್ಕೇ ಸಿಗುತ್ತೆ ಅಂತ ನಮಗೆ ಗೊತ್ತು.+ 16  ಒಬ್ಬ ವ್ಯಕ್ತಿ ತನ್ನ ಸಹೋದರ ಪಾಪ ಮಾಡೋದನ್ನ ನೋಡಿದ ಅಂತ ಇಟ್ಕೊಳ್ಳಿ. ಆದ್ರೆ ಆ ಪಾಪ ಮರಣಶಿಕ್ಷೆ ಸಿಗುವಷ್ಟು ದೊಡ್ಡ ಪಾಪ ಅಲ್ಲಾಂದ್ರೆ ಅದನ್ನ ನೋಡಿದ ವ್ಯಕ್ತಿ ದೇವರಿಗೆ ಪ್ರಾರ್ಥನೆ ಮಾಡಬೇಕು. ಆಗ ದೇವರು ಆ ಸಹೋದರನಿಗೆ ಜೀವ ಕೊಡ್ತಾನೆ.+ ಹೌದು ಮರಣಶಿಕ್ಷೆ ಸಿಗುವಷ್ಟು ದೊಡ್ಡ ಪಾಪ ಮಾಡದೆ ಇರೋರಿಗೆ ದೇವರು ಜೀವ ಕೊಡ್ತಾನೆ. ಆದ್ರೆ ಮರಣಶಿಕ್ಷೆ ಸಿಗುವಷ್ಟು ದೊಡ್ಡ ಪಾಪನೂ ಇದೆ.+ ಅಂಥ ಪಾಪ ಮಾಡಿದವ್ರ ಬಗ್ಗೆ ನೀವು ಪ್ರಾರ್ಥನೆ ಮಾಡಬಾರದು ಅಂತ ನಾನು ಹೇಳ್ತಾ ಇದ್ದೀನಿ. 17  ಎಲ್ಲ ತರದ ಕೆಟ್ಟ ಕೆಲಸಗಳು ಪಾಪನೇ.+ ಆದ್ರೆ ಮರಣಶಿಕ್ಷೆ ಸಿಗದೇ ಇರೋ ಪಾಪನೂ ಇದೆ. 18  ಒಬ್ಬ ವ್ಯಕ್ತಿ ದೇವರ ಮಗನಾಗಿದ್ರೆ ಅವನು ಪಾಪ ಮಾಡ್ತಾನೆ ಇರಲ್ಲ. ಯಾಕಂದ್ರೆ ಯೇಸು ಕ್ರಿಸ್ತ ಅವನಿಗೆ ಕಾವಲಾಗಿ ಇರ್ತಾನೆ. ಸೈತಾನನಿಗೆ ಅವನನ್ನ ಮುಟ್ಟಕ್ಕೂ ಆಗಲ್ಲ.+ 19  ನಾವು ದೇವರಿಂದ ಬಂದವರು ಅಂತ ನಮಗೆ ಗೊತ್ತು. ಆದ್ರೆ ಇಡೀ ಲೋಕ ಸೈತಾನನ ಕೈಯಲ್ಲಿದೆ.+ 20  ಆದ್ರೆ ದೇವರ ಮಗ ಬಂದಿದ್ದಾನೆ ಅಂತಾನೂ ನಮಗೆ ಗೊತ್ತು.+ ಸತ್ಯದೇವರ ಬಗ್ಗೆ ಚೆನ್ನಾಗಿ ತಿಳ್ಕೊಳ್ಳೋಕೆ ದೇವರ ಮಗ ನಮಗೆ ತಿಳುವಳಿಕೆ ಕೊಟ್ಟಿದ್ದಾನೆ. ಯೇಸು ಕ್ರಿಸ್ತನ ಮೂಲಕ ನಾವು ದೇವರ ಜೊತೆ ಆಪ್ತರಾಗಿ ಇದ್ದೀವಿ.+ ಆತನೇ ಸತ್ಯ ದೇವರು. ಆತನೇ ಶಾಶ್ವತ ಜೀವ ಕೊಡ್ತಾನೆ.+ 21  ಚಿಕ್ಕ ಮಕ್ಕಳೇ, ಮೂರ್ತಿಗಳು ನಿಮ್ಮನ್ನ ದಾರಿತಪ್ಪಿಸದ ಹಾಗೆ ಹುಷಾರಾಗಿ ಇರಿ.+

ಪಾದಟಿಪ್ಪಣಿ