ಎರಡನೇ ಸಮುವೇಲ 8:1-18
8 ಸ್ವಲ್ಪ ಸಮಯ ಆದ್ಮೇಲೆ ದಾವೀದ ಫಿಲಿಷ್ಟಿಯರನ್ನ ಸೋಲಿಸಿ+ ಅವ್ರನ್ನ, ಅವ್ರ ಕೈಯಿಂದ ಮೇತಗಮ್ಮ ಅನ್ನೋ ಪಟ್ಟಣವನ್ನ ವಶ ಮಾಡ್ಕೊಂಡ.+
2 ಅವನು ಮೋವಾಬ್ಯರನ್ನ+ ಸೋಲಿಸಿ ಅವ್ರನ್ನ ನೆಲದ ಮೇಲೆ ಸಾಲಾಗಿ ಮಲಗಿಸಿ ಅಳೆಯೋ ದಾರದಿಂದ ಅಳೆದು, ಎರಡು ಅಳತೆ ದಾರದಷ್ಟು ಜನ್ರನ್ನ ಸಾಯಿಸಿದ. ಒಂದು ಅಳತೆ ದಾರದಷ್ಟು ಜನರನ್ನ ಉಳಿಸಿದ.+ ಹೀಗೆ ಮೋವಾಬ್ಯರು ದಾವೀದನ ಸೇವಕರಾದ್ರು. ಆಮೇಲೆ ಅವರು ದಾವೀದನಿಗೆ ಕಪ್ಪ ಕೊಡ್ತಾ ಹೋದ್ರು.+
3 ಚೋಬದ+ ರಾಜ ರೆಹೋಬನ ಮಗ ಹದದೆಜೆರ ಯೂಫ್ರೆಟಿಸ್ ನದಿಯ+ ಪ್ರದೇಶದಲ್ಲಿ ಮತ್ತೆ ರಾಜ ಆಗಬೇಕು ಅಂತ ಹೋಗ್ತಿದ್ದಾಗ ದಾರಿಯಲ್ಲೇ ದಾವೀದ ಅವನನ್ನ ಸೋಲಿಸಿಬಿಟ್ಟ.
4 ದಾವೀದ ಅವನ 1,700 ಕುದುರೆ ಸವಾರರನ್ನ, 20,000 ಕಾಲಾಳುಗಳನ್ನ ಸೆರೆಹಿಡಿದ. ಆಮೇಲೆ ಅವ್ರ ರಥಗಳ 100 ಕುದುರೆಗಳನ್ನ ಬಿಟ್ಟು ಉಳಿದ ಎಲ್ಲ ಕುದುರೆಗಳ ಹಿಂದಿನ ಕಾಲಿನ ನರಗಳನ್ನ ಕತ್ತರಿಸಿದ.+
5 ದಮಸ್ಕದ+ ಅರಾಮ್ಯರು ಚೋಬದ ರಾಜ ಹದದೆಜೆರನಿಗೆ ಸಹಾಯ ಮಾಡೋಕೆ ಬಂದಾಗ ದಾವೀದ 22,000 ಅರಾಮ್ಯರನ್ನ ಕೊಂದ.+
6 ಆಮೇಲೆ ದಾವೀದ ದಮಸ್ಕದ ಅರಾಮ್ಯರ ಪ್ರದೇಶದಲ್ಲಿ ಕಾವಲುಪಡೆಗಳನ್ನ ಸ್ಥಾಪಿಸಿದ. ಹೀಗೆ ಅರಾಮ್ಯರು ದಾವೀದನ ಸೇವಕರಾದ್ರು ಮತ್ತು ಅವನಿಗೆ ಕಪ್ಪ ಕೊಡ್ತಾ ಹೋದ್ರು. ದಾವೀದ ಹೋದಲ್ಲೆಲ್ಲ ಯೆಹೋವ ಅವನಿಗೆ ಜಯ* ಕೊಟ್ಟನು.+
7 ಅಷ್ಟೇ ಅಲ್ಲ ದಾವೀದ ಹದದೆಜೆರನ ಸೇವಕರಿಂದ ವೃತ್ತಾಕಾರದ ಬಂಗಾರದ ಗುರಾಣಿಗಳನ್ನ ತಗೊಂಡು ಯೆರೂಸಲೇಮಿಗೆ ಬಂದ.+
8 ಹದದೆಜೆರನ ಪಟ್ಟಣಗಳಾದ ಬೆಟಹ ಮತ್ತು ಬೇರೋತೈಯಿಂದ ರಾಜ ದಾವೀದ ತುಂಬ ತಾಮ್ರ ತಗೊಂಡ.
9 ದಾವೀದ ಹದದೆಜೆರನ ಇಡೀ ಸೈನ್ಯವನ್ನ ಸೋಲಿಸಿದ್ದಾನೆ ಅನ್ನೋ ಸುದ್ದಿ ಹಾಮಾತಿನ+ ರಾಜನಾದ ತೋವಿಯ ಕಿವಿಗೆ ಬಿತ್ತು.+
10 ಹಾಗಾಗಿ ತೋವಿ ತನ್ನ ಮಗ ಯೋರಾಮನನ್ನ ಅವನ ಹತ್ರ ಕಳಿಸಿ ರಾಜ ದಾವೀದ ಹೇಗಿದ್ದಾನೆ ಅಂತ ವಿಚಾರಿಸಿದ, ಹದದೆಜೆರನ ವಿರುದ್ಧ ಹೋರಾಡಿ ಅವನನ್ನ ಸೋಲಿಸಿದ್ದಕ್ಕಾಗಿ ಅಭಿನಂದನೆ ಹೇಳಿದ. (ಯಾಕಂದ್ರೆ ತೋವಿ ವಿರುದ್ಧ ಹದದೆಜೆರ ಆಗಾಗ ಯುದ್ಧಕ್ಕೆ ಬರ್ತಿದ್ದ.) ಯೋರಾಮ ದಾವೀದನಿಗಾಗಿ ಬೆಳ್ಳಿ, ಬಂಗಾರ, ತಾಮ್ರದ ವಸ್ತುಗಳನ್ನ ತಗೊಂಡು ಬಂದ.
11 ರಾಜ ದಾವೀದ ತಾನು ವಶ ಮಾಡ್ಕೊಂಡಿದ್ದ ಎಲ್ಲ ಜನಾಂಗಗಳ ಬೆಳ್ಳಿಬಂಗಾರದ ಜೊತೆ ಇವನ್ನೂ ಯೆಹೋವನಿಗಾಗಿ ಕೊಟ್ಟ.+
12 ಆ ಬೆಳ್ಳಿಬಂಗಾರವನ್ನ ದಾವೀದ ಅರಾಮಿನಿಂದ, ಮೋವಾಬಿನಿಂದ,+ ಅಮ್ಮೋನಿಯರಿಂದ, ಫಿಲಿಷ್ಟಿಯರಿಂದ,+ ಅಮಾಲೇಕ್ಯರಿಂದ,+ ಚೋಬದ ರಾಜ ರೆಹೋಬನ ಮಗ ಹದದೆಜೆರನಿಂದ ಕೂಡ+ ಲೂಟಿ ಮಾಡಿದ್ದ.
13 ದಾವೀದ ಉಪ್ಪಿನ ಕಣಿವೆಯಲ್ಲಿ 18,000 ಎದೋಮ್ಯರನ್ನ ಸಾಯಿಸಿ+ ತನಗಾಗಿ ಹೆಸ್ರನ್ನೂ ಮಾಡ್ಕೊಂಡ.
14 ಅವನು ಎದೋಮಿನಲ್ಲಿ ಕಾವಲು ಪಡೆಗಳನ್ನ ಸ್ಥಾಪಿಸಿದ. ಇಡೀ ಎದೋಮಿನಲ್ಲಿ ಕಾವಲು ಪಡೆಗಳನ್ನ ಸ್ಥಾಪಿಸಿದ, ಆಗ ಎಲ್ಲ ಎದೋಮ್ಯರು ದಾವೀದನ ಸೇವಕರಾದ್ರು.+ ದಾವೀದ ಹೋದಲ್ಲೆಲ್ಲ ಯೆಹೋವ ಅವನಿಗೆ ಜಯ* ಕೊಟ್ಟನು.+
15 ದಾವೀದ ಇಡೀ ಇಸ್ರಾಯೇಲನ್ನ+ ನೀತಿನ್ಯಾಯದಿಂದ+ ಆಳ್ತಿದ್ದ.+
16 ಚೆರೂಯಳ ಮಗ ಯೋವಾಬ+ ಸೇನಾಪತಿಯಾಗಿದ್ದ. ಅಹೀಲೂದನ ಮಗ ಯೆಹೋಷಾಫಾಟ+ ದಾಖಲೆಗಾರನಾಗಿದ್ದ.
17 ಅಹೀಟೂಬನ ಮಗ ಚಾದೋಕ,+ ಎಬ್ಯಾತಾರನ ಮಗ ಅಹೀಮೆಲೆಕ ಪುರೋಹಿತರಾಗಿದ್ರು. ಸೆರಾಯ ಕಾರ್ಯದರ್ಶಿ ಆಗಿದ್ದ.
18 ಯೆಹೋಯಾದನ ಮಗ ಬೆನಾಯ+ ಕೆರೇತ್ಯರ ಮತ್ತು ಪೆಲೇತ್ಯರ+ ಮೇಲೆ ಮುಖ್ಯಸ್ಥನಾಗಿದ್ದ. ದಾವೀದನ ಮಕ್ಕಳು ಪ್ರಮುಖ ಮಂತ್ರಿಗಳಾದ್ರು.*