ಆಗು ನೀ ಮಗು
ಡೌನ್‌ಲೋಡ್:
1. ಆಗು ನೀನು ಕೂಸು...
ಎಂದೇಳಿದನು ಯೇಸು
ಈ ಆಜ್ಞೆಯನ್ನ ಎಲ್ರು ಪಾಲ್ಸೋಣ
ನಂ ಬಾಲ್ಲ್ಯಕ್ ವಾಪಸ್ಸ್ ಹೋಗೋಣ
ಕಿತ್ತಾಟ ಕೋಪ ಕಾದಾಟ ಪೈಪೋಟಿ ದೂರ ಮಾಡೋಣ
(ಪಲ್ಲವಿ)
ನಾವಾಗೋಣ ಮಕ್ಕಳಂತೆ ತುಂಬಾ ದೀನ
ಮಾಡೋಣ ಈ ಸಂಸ್ಥೆಯನ್ನ ಬೃಂದಾವನ
ನಾವಾಗೋಣ ಮಕ್ಕಳಂತೆ ಮುಗ್ಧರಾಗಿ
ಸೇರೋಣ ಆ ಪರ್ದೈಸ್ನಲ್ಲಿ ನಾವ್ ಜೊತೆಯಾಗಿ
2. ಈ ಲೋಕ ತುಂಬ ಸ್ವಾರ್ಥ
ದೊಡ್ಢೋರ್ ಆಗೋಕ್ ಹೋಗೋದ್ ವ್ಯರ್ಥ
ಪುಟಾಣಿ ಮಕ್ಕಳಂತೆ ನಾವ್ ಆದ್ರೆ
ಅಪ್ಪಟ ಪ್ರೀತಿ ಹಂಚಿದ್ರೆ
ಯೆಹೋವ ದೇವ್ರ ಪ್ರೀತಿ ಗೆಲ್ತೀವಿ ಇಂದೂ ಮುಂದೆಂದು...ಎಂದು ಎಂದೆಂದು...
(ಪಲ್ಲವಿ)
ನಾವಾಗೋಣ ಮಕ್ಕಳಂತೆ ತುಂಬಾ ದೀನ
ಮಾಡೋಣ ಈ ಸಂಸ್ಥೆಯನ್ನ ಬೃಂದಾವನ
ನಾವಾಗೋಣ ಮಕ್ಕಳಂತೆ ಮುಗ್ಧರಾಗಿ
ಸೇರೋಣ ಆ ಪರ್ದೈಸ್ನಲ್ಲಿ ನಾವ್ ಜೊತೆಯಾಗಿ
ಆಗೂ ನೀ ಕೂಸು
(BRIDGE)
ಸೇಡೆಂಬ ಜೇಡ ಗೂಡ್ಕಟ್ಟೋದ್ ಬೇಡ,
ಪೋಟಾಪೋಟೀನ ಬಿಟ್ಟುಬಿಡೋಣ
ಒಣಹೆಮ್ಮೆಯೆಂಬ ಬಲೆಯನ್ನು ಕಿತ್ತಾಕಿ,
ನಾವ್ ಹಾರೋಣ ಚಿಟ್ಟೆಯಂತೆ...
(ಪಲ್ಲವಿ)
ನಾವಾಗೋಣ ಮಕ್ಕಳಂತೆ ತುಂಬಾ ದೀನ
ಮಾಡೋಣ ಈ ಸಂಸ್ಥೆಯನ್ನ ಬೃಂದಾವನ
ನಾವಾಗೋಣ ಮಕ್ಕಳಂತೆ ಮುಗ್ಧರಾಗಿ
ಸೇರೋಣ ಆ ಪರ್ದೈಸ್ನಲ್ಲಿ ನಾವ್ ಜೊತೆಯಾಗಿ
ಆಗೂ ನೀ ಕೂಸು