ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಜೊತೆಗಿರುವ ಯೆಹೋವ

ಜೊತೆಗಿರುವ ಯೆಹೋವ
  1. 1. ಮುಂಜಾನೇ ಸಿದ್ದನಾದೆ ಸಾರೋದಕೆ

    ದಿನಾ ಪ್ರಾರ್ಥನೆ ಮಾಡಿ ನಾ ಹೋಗುವೆ

    ಯಾವ ನಿರ್ಭಂಧಕ್ಕೂ ಅಂಜೋದೇ ಇಲ್ಲ

    ಧೈರ್ಯಕ್ಕೆ ದೇವ ನೀನೇ ಮೂಲ

    (ಪಲ್ಲವಿ)

    ತಂಗಾಳಿಯ ಹಾಗೆ ಬೀಸುತ್ತಿದೆ ನಿನ್‌ ಶಕ್ತಿ ಈಗ

    ಇನ್ನೆಲ್ಲಿದೆ ಆತಂಕ, ಇದ್ದಾಗ ದೇವ

    ಕಣ್‌ ರೆಪ್ಪೆಯಂತೆ ಕಾಯೋ ನನ್ನ ಯೆಹೋವ.

  2. 2. ಮುಸ್ಸಂಜೆ ವೇಳೆ ಯೋಚನೆಯು ನಂಗೆ

    ಆ ವ್ಯಕ್ತಿಯ ಮಾತು ನನ್‌ ಕಾಡ್ತಿದೆ

    ಎಲ್ಲೇ ಇದ್ದರೂ ನಾನು ನಿನ್‌ ಸಾಕ್ಷಿ ನೀಡ್ವೆ

    ಸಾರೋ ದಾರಿಯನ್ನು ತೋರು ದೇವರೇ

    (ಪಲ್ಲವಿ)

    ತಂಗಾಳಿಯ ಹಾಗೆ ಬೀಸುತ್ತಿದೆ ನಿನ್‌ ಶಕ್ತಿ ಈಗ

    ಇನ್ನೆಲ್ಲಿದೆ ಆತಂಕ, ಇದ್ದಾಗ ದೇವ

    ಕಣ್‌ ರೆಪ್ಪೆಯಂತೆ ಕಾಯೋ ನನ್ನ ಯೆಹೋವ.

    (ಅನುಪಲ್ಲವಿ)

    ಈಗ ನನ್ನಲ್ಲಿ ವಾಕ್ಯ ದಹಿಸುತ್ತಿದೆ

    ನನ್ನ ಹೃದಯದಲ್ಲಿ ಬೆಂಕಿಯಂತೆ

    ನಾ ಸಾರುವೆ ಅದೇನಾದರೂ

    ಓ ದೇವಾ ನೀ ಸಾಕು ಅನ್ನೋವರೆಗೂ

    ನಿನ್‌ ಸಾಕ್ಷಿ ಸೈನ್ಯಕ್ಕೆ ಹಿಂಸೆ ಬಂದ್ರೂ

    ಸಹಾಯ ನೀಡೋ ನನ್ನ ದೇವ್ರೇ

    ವಿಶ್ವಾಸ ಹೆಚ್ಚು ಮಾಡು ಯೆಹೋವ

    ನಿನ್‌ ರಾಜ್ಯಕ್ಕಾಗಿ ನಾ ಕಾಯುವೆ.

  3. 3. ಯೆಹೋವ ನೀನಿದ್ದೆ ನೆರಳಂತೆಯೇ

    ನಾನು ಋಣಿ ದೇವ ಸದಾ ನಿಂಗೆ

    ನಾಳೆ ಏನಾಗುತ್ತೋ ಗೊತ್ತೇ ಇಲ್ಲ

    ಜೊತೆ ನೀನಿದ್ದಾಗ ಒಂಟಿಯಲ್ಲ

    (ಪಲ್ಲವಿ)

    ತಂಗಾಳಿಯ ಹಾಗೆ ಬೀಸುತ್ತಿದೆ ನಿನ್‌ ಶಕ್ತಿ ಈಗ

    ಇನ್ನೆಲ್ಲಿದೆ ಆತಂಕ, ಇದ್ದಾಗ ದೇವ

    ಕಣ್‌ ರೆಪ್ಪೆಯಂತೆ ಕಾಯೋ ನನ್ನ ಯೆಹೋವ.