ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತಪ್ಪಿಂದನೇ ನೀ ಕಲಿ

ತಪ್ಪಿಂದನೇ ನೀ ಕಲಿ
  1. 1. ತಪ್ಪು ಮಾಡದೋರ್ಯಾರು?

    ಈ ಲೋಕದಿ ನೋಡು

    ಹೌದು ಯಾರಿಲ್ಲ

    ಎಡವೋದಂತು ಸಾಮಾನ್ಯ.

    ನಿಂಗಾಗಿ ಯೆಹೋವ

    ತನ್ನ ಕೈಯ ಚಾಚುವ.

    ಈ ತಪ್ಪಿಂದ ಪಾಠವ

    ನೀನಂತೂ ಇನ್ನು ಕಲೀಬೇಕೀಗ.

    (ಪಲ್ಲವಿ)

    ಕಣ್ಗಳು ಕೇಳಿದೆ,

    ದುಃಖವು ಯಾಕಿದೆ?

    ಪಾಠವ ನೀ ಕಲಿ

    ತಿದ್ದಿಕೋ ತಪ್ಪು ನೀ.

    ಎಂದಿಗೂ ಸೋಲದೆ

    ತಪ್ಪಿಂದನೇ ನೀ ಕಲಿ.

    ಆ ದೇವ ನೀಡುವ

    ಶಕ್ತಿ ಸಾಮರ್ಥ್ಯವನ್ನು.

    ಕಲಿನೀ ಪಾಠವ

  2. 2. ದಿನಾಲು ಚುಚ್ಚೋ ಮನ್ಸು,

    ದಿನವೂ ಕಾಡೊ ತಪ್ಪು

    ಅದರಿಂದ ನೀನಾಚೆ

    ಬಂದಾಗ ಸಂತೋಷ.

    ನಿನ್ನ ದುಃಖವನ್ನು

    ಆ ದೇವರಲ್ಲಿ ಹೇಳು.

    ತನ್‌ ವಾಕ್ಯದಿಂದ ಆತ

    ಕೊಡುವನು ಸಹಾಯವ ದಿನಾ.

    (ಪಲ್ಲವಿ)

    ಕಣ್ಗಳು ಕೇಳಿದೆ,

    ದುಃಖವು ಯಾಕಿದೆ?

    ಪಾಠವ ನೀ ಕಲಿ

    ತಿದ್ದಿಕೋ ತಪ್ಪು ನೀ

    ಎಂದಿಗೂ ಸೋಲದೆ

    ತಪ್ಪಿಂದನೇ ನೀ ಕಲಿ.

    ಆ ದೇವ ನೀಡುವ

    ಶಕ್ತಿ ಸಾಮರ್ಥ್ಯವನ್ನು.

    (ಅನುಪಲ್ಲವಿ)

    ನಿನ್ನ ದೇವ ಶಕ್ತಿಶಾಲಿ

    ಮಾಡುತ್ತಾನೆ ನೋವ ಖಾಲಿ.

    ಕೊರಗಿ ಕೂರಬೇಡ ನೀ,

    ಎಂದೆಂದೂ ನೀ

    ಪಾಠ ಕಲಿ.

    (ಪಲ್ಲವಿ)

    ಕಣ್ಗಳು ಕೇಳಿದೆ,

    ದುಃಖವು ಯಾಕಿದೆ?

    ಪಾಠವ ನೀ ಕಲಿ

    ತಿದ್ದಿಕೋ ತಪ್ಪು ನೀ

    ಎಂದಿಗೂ ಸೋಲದೆ

    ತಪ್ಪಿಂದನೇ ನೀ ಕಲಿ.

    ಆ ದೇವ ನೀಡುವ

    ಶಕ್ತಿ ಸಾಮರ್ಥ್ಯವನ್ನು.

    ಕಲಿನೀ ಪಾಠವ.

    ನೀ ಕಲಿ ಪಾಠವ.