ನಾವೊಂದು ಫ್ಯಾಮಿಲಿ
ಡೌನ್ಲೋಡ್:
1. ಕನ್ವೆನ್ಷನ್ ಅಟೆಂಡ್ ಮಾಡೋಕ್ಕೆ
ದೂರದೇಶಕ್ಕೆ ಪ್ರಯಾಣ
ನನ್ನ ಊರ್ಬಿಟ್ಟು ಇಲ್ಲಿ ಬಂದ್ರೂನು
ಅಲ್ಲ ಯಾವತ್ತು ಒಂಟಿ
ಅಲ್ಲಿರೋ ಸೋದ್ರರು ಸಿಕ್ಕ ಕೂಡ್ಲೇ
ಮರತೆ ನಾ ನನ್ನನ್ನೇ
ಎಂದಿಗೂ ಸೋಲದ ಇಂತಹ ಪ್ರೀತಿಗೆ
ದೇವಾ ನೀ ಕಾರಣ
(ಪಲ್ಲವಿ)
ಬಾನಲ್ಲಿ ಬಣ್ಣಗಳೇಳು
ಒಟ್ಟಾಗಿ ಒಂದೇ ಮಳೆಬಿಲ್ಲು
ನಂಬಣ್ಣ ಬೇರೆ ಇದ್ರೇನು
ನಾವೆಲ್ರು ಒಂದೇ ಫ್ಯಾಮಿಲಿ
2. ಎಲ್ಲೆಲ್ಲೂ ಬರೀ ಸಂತೋಷ
ಇಲ್ಲ ಎಲ್ಲೇನೇ ನಮ್ ಮಧ್ಯಾ
ಗೋಡೆ ಗಡ್ಯಾರ ಟಿಕ್ ಟಿಕ್ ಎನ್ನುತ್ತಾ
ಶುರು ಕನ್ವೆನ್ಷನ್ ದಿನಾ
ಪ್ರೀತಿಯ ಕಟ್ಟುವ ಉಪನ್ಯಾಸ
ಸಹವಾಸ ಉಲ್ಲಾಸ
ಎಂದಿಗೂ ಗೆಲ್ಲುವ ಅಕ್ಕರೆ ಪ್ರೀತಿಗೆ
ಅಪ್ಪಾ ನೀ ಕಾರಣ
(ಪಲ್ಲವಿ)
ಬಾನಲ್ಲಿ ಬಣ್ಣಗಳೇಳು
ಒಟ್ಟಾಗಿ ಒಂದೇ ಮಳೆಬಿಲ್ಲು
ನಂಬಣ್ಣ ಬೇರೆ ಇದ್ರೇನು
ನಾವೆಲ್ರು ಒಂದೇ ಫ್ಯಾಮಿಲಿ
3. ಸಂತೋಷ ಎಂಥ ಆನಂದ
ನಮ್ಮ ಮಿತ್ರತ್ವ ಅಪಾರ
ಏನೇ ಆದ್ರೂನು ನಮ್ಮ ಪ್ರೀತಿಯ
ಕಿಡಿ ಆರಲ್ಲ ಎಂದೂ
ನಾವೊಂದು ಸುಂದರ ಪುಷ್ಪಮಾಲೆ
ಕಟ್ಟಿರೋದು ಯೆಹೋವ
ಎಂದಿಗೂ ಬಾಡದ ಶಾಶ್ವತ ಪ್ರೀತಿಗೆ
ಯಾಹು ನೀ ಕಾರಣ
(BRIDGE)
ಕರಾವಳಿ ಮಲೆನಾಡಲ್ಲಿನ
ನಾವೆಲ್ಲ ಒಂದು
ನಾವೆಲ್ಲರೂ ಸೇರಿದ್ರೆ
ಘನತೆ ನಮ್ ತಂದೆಗೆ
(ಪಲ್ಲವಿ)
ಬಾನಲ್ಲಿ ಬಣ್ಣಗಳೇಳು
ಒಟ್ಟಾಗಿ ಒಂದೇ ಮಳೆಬಿಲ್ಲು
ನಂಬಣ್ಣ ಬೇರೆ ಇದ್ರೇನು
ನಾವೆಲ್ರು ಒಂದೇ ಫ್ಯಾಮಿಲಿ
ಕೈಬೆರ್ಳು ಐದಿರ್ಬಹ್ದು
ಆದ್ರೇನು ಸೇರಿ ಕೈವೊಂದು
ನಮ್ಮೂರು ಬೇರೆ ಇದ್ರೇನೂ
ನಾವೆಲ್ರೂ ಒಂದೇ ಫ್ಯಾಮಿಲಿ
ಉತ್ತರ ದಕ್ಷಿಣ ಪಶ್ಚಿಮಪೂರ್ವ
ಎಲ್ಲಿದ್ರೂ ನಾವೊಂದು ಫ್ಯಾಮಿಲಿ
ದೇವರ ಪ್ರೀತಿಯಲ್ಲೂ ಹಿಂಗೆ ನಾವು
ಇರ್ತೀವಿ ಜೊತೆ ಜೊತೆಯಾಗಿ