ಯೆಹೋವ ನಿಂದೆ ಈ ಜೀವ
ಡೌನ್‌ಲೋಡ್:
1. ನಿನ್ ವಾಕ್ಯ ನನ್ಗೆ ನೀರಂತೆ
ಬಾಡಲ್ಲ ನಾನೆಂದೂ ಹೂವಿನಂತೆ
ನಿನ್ ಮುಂದೆ ನಾನು ಈ ಧೂಳಿನಂತೆ
ನೀ ದಾರೀನ ತೋರು ಆ ಸೂರ್ಯನಂತೆ
(ಅನುಪಲ್ಲವಿ)
ಹೋ. . . ನನ್ ಜೀವ ನಿಂದು
ಹೋ. . . ಬಿಟ್ಟೋಗಲ್ಲ ಎಂದೂ
(ಪಲ್ಲವಿ)
ಯಾವ ಕಷ್ಟ ಬಂದ್ರೂ ಅದೇನೇ ಆದ್ರೂ
ಯೆಹೋವ ನಿಂದೇ ಈ ಜೀವ
ನಾ ಹೇಳಿದ್ದೆಲ್ಲಾ ಹಿಮ್ಮೆಟ್ಟೋದಿಲ್ಲ
ನನ್ ಪ್ರೀತಿ ಸುಳ್ಳಾಗದೆಂದೂ
ನನ್ನ ಶ್ವಾಸದಲ್ಲೂ ನೀನೇ ಯಾಹೂ
2. ಈ ಲೋಕದಲ್ಲಿ ನಿರಾಶೆ ಇದ್ರೂ
ಸುನಾಮಿಯಂತೆ ಹತಾಶೆ ಬಂದ್ರೂ
ವಿಶ್ವಾಸವನ್ನು ನೀ ಹೆಚ್ಚು ಮಾಡು
ದಿಕ್ಸೂಚಿಯಂತೆ ಸಹಾಯ ನೀಡು
(ಅನುಪಲ್ಲವಿ)
ಹೋ. . . ಈ ಸೇವೆ ಇಂದ
ಹೋ. . . ಹೆಚ್ಚಾಯ್ತು ನಿನ್ ಬಂಧ
(ಪಲ್ಲವಿ)
ಯಾವ ತೊಂದ್ರೆ ಬಂದ್ರೂ ನಾ ಕುಗ್ಗಿ ಹೋದ್ರೂ
ಯೆಹೋವ ನಿಂದೇ ಈ ಜೀವ
ನಾ ಹೇಳಿದ್ದೆಲ್ಲಾ ಹಿಮ್ಮೆಟ್ಟೋದಿಲ್ಲ
ನನ್ ಪ್ರೀತಿ ಸುಳ್ಳಾಗದೆಂದೂ
ನನ್ನ ಶ್ವಾಸದಲ್ಲೂ ನೀನೇ ಯಾಹೂ
(ಪಲ್ಲವಿ)
ಯಾರು ಏನೇ ಅಂದ್ರೂ ನನ್ನನ್ನೇ ಕೊಂದ್ರೂ
ಯೆಹೋವ ನಿಂದೇ ಈ ಜೀವ
ನಾ ಹೇಳಿದ್ದೆಲ್ಲಾ ಹಿಮ್ಮೆಟ್ಟೋದಿಲ್ಲ
ನನ್ ಪ್ರೀತಿ ಸುಳ್ಳಾಗದೆಂದೂ
ನನ್ನ ಶ್ವಾಸದಲ್ಲೂ ನೀನೇ ಯಾಹೂ
ನೀನೇ ಯಾಹೂ
ನೀನೇ ಯಾಹೂ