ವಿಶ್ವ ಸೋದರರ ಬಂಧ
ಡೌನ್‌ಲೋಡ್:
1. ಕಾರ್ಮೋಡ ಕೂಡಿ ಬರಲು,
ಭಯವ ಮೆಟ್ಟಿ ನಿಲ್ಲು.
ಹೋರಾಡಿ ಅಂಜಿಕೆ ಗೆಲ್ಲು.
ತುಸು ಬೇನೆ ನೀ ತಾಳು.
ಓ ಯೆಹೋವ ಈ ಸವಾಲು,
ಹೊಸದಲ್ಲ ತಾಳಲು.
ವಿಷ ವ್ಯೂಹವು ಈ ಬಾಳು,
ಕೊಡು ಧೈರ್ಯ ತಾಳಲು.
(ಪಲ್ಲವಿ)
ವಿಶ್ವ ಸೋದರರ ಬಂಧ,
ಈ ಸಮೂಹವೇ ಚೆಂದ.
ನಿಷ್ಠೆ ತೋರಲು ಓ ದೇವ,
ನೀಡುತ್ತೇವೆ ಪ್ರಾಣವಾ.
ನೀಡುತ್ತೇವೆ ಪ್ರಾಣವಾ.
2. ಈ ಲೋಕ ಹೂಡಿದೆ ಹೊಂಚು,
ತೆರೆಯ ಹಿಂದೆ ಸಂಚು.
ನಮ್ಮ ವಿಶ್ವಾಸ ಯೆಹೋವ,
ದಿನವೂ ಕಾಯೋ ದೇವ.
ನಮ್ ವಿರೋಧಿ ಸೈನ್ಯವೆಂದೂ
ಮುಂದೆ ನಿಲ್ಲಲಾಗದು.
ಹುಸಿ ಧೈರ್ಯ ತೋರೋ ವೈರಿ,
ನಿನ್ನ ಸೋಲು ಖಾತರಿ.
(ಪಲ್ಲವಿ)
ವಿಶ್ವ ಸೋದರರ ಬಂಧ,
ಈ ಸಮೂಹವೇ ಚೆಂದ.
ನಿಷ್ಠೆ ತೋರಲು ಓ ದೇವಾ,
ನೀಡುತ್ತೇವೆ ಪ್ರಾಣವಾ.
(ಅನುಪಲ್ಲವಿ)
ಬಂದರೂ ವಿರೋಧ,
ಬಲವಾಗಿ ನಾಟಿದ,
ನಿನ್ನ ಪ್ರೀತಿ ಸೋಲದೆಂದು,
ಈ ಭಾಷೆ ಸುಳ್ಳಾಗದು.
(ಪಲ್ಲವಿ)
ವಿಶ್ವ ಸೋದರರ ಬಂಧ,
ಈ ಸಮೂಹವೇ ಚೆಂದ.
ನಿಷ್ಠೆ ತೋರಲು ಓ ದೇವಾ,
ನೀಡುತ್ತೇವೆ ಪ್ರಾಣವಾ.
ನೀಡುತ್ತೇವೆ ಈ ಪ್ರಾಣ.