ಗೀತೆ 77
ಕ್ಷಮಿಸುವವರಾಗಿರಿ
1. ಯೆಹೋವ ಮಾಡಿದ
ಕ್ರಿಸ್ತ ದ್ವಾರಾ ವ್ಯವಸ್ಥೆ
ಪಾಪ ಮತ್ತು ಮೃತ್ಯುವಿನ
ಇಲ್ಲವಾಗಿಸುವಿಕೆ.
ನಿಜ ಪಶ್ಚಾತ್ತಾಪವಿರೆ
ಆತನ ಕ್ಷಮೆ ಲಭ್ಯ;
ಕ್ರಿಸ್ತ ಯಜ್ಞ, ನಾಮದಲಿ
ಕ್ಷಮೆಯ ಕೋರುವಾಗ.
2. ಅದೆಮಗೂ ಲಭ್ಯ,
ವರ್ತಿಸೆ ದೇವರಂತೆ
ಪ್ರದರ್ಶಿಸಿ ಅನುತಾಪ,
ತೋರಿಸಿ ಮುಕ್ತ ಕ್ಷಮೆ.
ಪರಸ್ಪರ ಕ್ಷಮೆದೋರೆ,
ಅಳಲು ತೊಲಗೋದು;
ಪ್ರೀತಿಯನು ತೋರಿಸೋಣ
ಮಾನ ಮರ್ಯಾದೆ ಕೊಟ್ಟು.
3. ಕರುಣೆ ಸದ್ಗುಣ,
ಬೆಳೆಸೋಣ ಅದನ್ನು.
ಬೇಗನೇ ದೂರವಾಗೋವು
ದ್ವೇಷಭಾವ, ಮುನಿಸು.
ಪ್ರೀತಿಯಾದ ದೇವರನ್ನು
ಅನುಸರಿಸೆ ನಾವು
ನಿಜವಾಗಿ ಕ್ಷಮಿಸುವ,
ದೇವರಂತಾಗುವೆವು.
(ಮತ್ತಾ. 6:12; ಎಫೆ. 4:32; ಕೊಲೊ. 3:13 ಸಹ ನೋಡಿ.)