ಗೀತೆ 107
ಬನ್ನಿ ಯೆಹೋವನ ಪರ್ವತಕ್ಕೆ
1. ನೋಡು ನೀ ಕಣ್ಣೆತ್ತಿ
ಅತ್ಯುನ್ನತ ಬೆಟ್ಟವ.
ಅದು ಯೆಹೋವನದ್ದು,
ಸರ್ವರ್ಗೆವಿದಿತ.
ಜನ ಬರುತ್ತಾರೆ
ದೂರದಿಂದ ಅಲ್ಲಿಗೆ;
ಕರೆಯುತ್ತ ‘ಬನ್ನಿರಿ
ದೇವರ ಸೇವೆಗೆ.’
ಜನಾಂಗ ಚಿಕ್ಕದು
ದೊಡ್ಡದಾಗುವ ಕಾಲ ಇದೇ.
ಬೆಳೆದು ನಾವೆಲ್ಲ
ದೇವಾಶೀರ್ವಾದ ನೋಡುತ್ತೇವೆ.
ಜನಸ್ತೋಮ ಬಂದು
ನಮಿಸಿ, ದೇವರಿಗೆ
ತಾವು ನಿಷ್ಠರೆಂದು
ವಚನ ಕೊಡುತ್ತಾರೆ.
2. ‘ವಾಕ್ಯವನ್ನು ಸಾರು’
ಆಜ್ಞಾಪಿಸಿದ ಯೇಸು.
ರಾಜ್ಯ ವಾರ್ತೆ ಮುಟ್ಟುತೆ
ಸಕಲರಿಗಿಂದು.
‘ನನ್ನ ಪಕ್ಷ ಬನ್ನಿ’
ಎನ್ನುತ್ತಾನೆ ಕ್ರಿಸ್ತನು.
ವಾಕ್ಯ ಮುನ್ನಡೆಸಲಿ
ಕೇಳುವವರನ್ನು.
ಎಷ್ಟೊಂದು ಸಂತೋಷ
ತರುತೆ ಮಹಾ ಸಮೂಹವು!
ಪಾಲಿದೆ ನಮಗೂ
ಯೆಹೋವನ ಜ್ಞಾನ ನೀಡಲು.
ನಾವು ಸ್ವರವೆತ್ತಿ
ಹೇಳುತ್ತೇವೆ ಇಂತೆಂದು:
‘ಯಾಹು ಬೆಟ್ಟಕ್ಕೆ ಬಾ,
ಅಲ್ಲಿರು ಯಾವಾಗಲೂ.’
(ಕೀರ್ತ. 43:3; 99:9; ಯೆಶಾ. 60:22; ಅ. ಕಾ. 16:5 ಸಹ ನೋಡಿ.)