ಸದಾ ಎಚ್ಚರವಾಗಿರಿ!
ಭೂಮಿಯಲ್ಲಿ ಮಿತಿಮೀರುತ್ತಿರುವ ತಾಪಮಾನ—ಇದರ ಬಗ್ಗೆ ಬೈಬಲ್ ಏನು ಹೇಳುತ್ತೆ?
2022 ಜುಲೈನಲ್ಲಿ ಲೋಕವ್ಯಾಪಕವಾಗಿ ಮಿತಿ ಮೀರಿದ ತಾಪಮಾನ ವರದಿಯಾಗಿದೆ:
“ಈ ತಿಂಗಳಲ್ಲಿ ಎರಡನೇ ಸಲ ಚೀನಾದ ಅಧಿಕಾರಿಗಳು, ಚೀನಾದ 70 ಜಾಗಗಳಲ್ಲಿ ತಾಪಮಾನ ಮಿತಿಮೀರುವ ಸಾಧ್ಯತೆ ಇದೆ ಎಂದು ಜನರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.”—ಜುಲೈ 25, 2022, ಸಿಎನ್ಎನ್ ವೈರ್ ಸರ್ವಿಸ್.
“ಯೂರೋಪಿನ ಎಲ್ಲಾ ಕಡೆ ತಾಪಮಾನ ಹೆಚ್ಚಾಗ್ತಿರೋದ್ರಿಂದ ಕಾಡ್ಗಿಚ್ಚು ಜಾಸ್ತಿ ಆಗ್ತಿದೆ.”—ಜುಲೈ 17, 2022, ದಿ ಗಾರ್ಡಿಯನ್.
“ಬೇಸಿಗೆಯ ಬಿಸಿಗಾಳಿ ಅಮೆರಿಕಾದ ಪೂರ್ವ ಕರಾವಳಿ, ದಕ್ಷಿಣ ಮತ್ತು ಪಶ್ಚಿಮದ ಕೆಲವು ಮಧ್ಯ ಭಾಗಗಳಲ್ಲಿ ಹರಡಿದ್ದರಿಂದ ಭಾನುವಾರ ಅಲ್ಲಿನ ಅನೇಕ ನಗರಗಳಲ್ಲಿ ಅತಿ ಹೆಚ್ಚು ತಾಪಾಮಾನದ ವರದಿಯಾಗಿದೆ.”—ಜುಲೈ 24, 2022, ದಿ ನ್ಯೂಯಾರ್ಕ್ ಟೈಮ್ಸ್.
ಇದೆಲ್ಲಾ ಯಾಕೆ ನಡೀತಾ ಇದೆ? ಹೀಗೇ ಆದ್ರೆ ಮುಂದೆ ಭೂಮಿಯಲ್ಲಿ ನಾವು ಬದುಕೋಕೆ ಆಗುತ್ತಾ? ಇದರ ಬಗ್ಗೆ ಬೈಬಲ್ ಏನು ಹೇಳುತ್ತೇ
ಬಿಸಿಗಾಳಿ ಅಥ್ವಾ ತಾಪಮಾನದ ಏರಿಕೆ ಬಗ್ಗೆ ಬೈಬಲಿನಲ್ಲಿ ಮೊದಲೇ ಹೇಳಿದ್ಯಾ?
ಹೌದು. ಉದಾಹರಣೆಗೆ, “ಭಯಾನಕ ದೃಶ್ಯಗಳು” ಅಥವಾ ವಿಚಿತ್ರವಾದ ಮತ್ತು ದಿಗಿಲು ಹುಟ್ಟಿಸುವ ಘಟನೆಗಳು ನಡೆಯುತ್ತೆ ಅಂತ ಯೇಸು ಮೊದಲೇ ಹೇಳಿದ್ದನು. ಈ ಘಟನೆಗಳಲ್ಲಿ ತಾಪಮಾನದ ಏರಿಕೆನೂ ಸೇರಿದೆ. (ಲೂಕ 21:11) ಜನರು ಭೂಮಿಯನ್ನು ಹಾಳು ಮಾಡುತ್ತಿರುವುದರಿಂದ ದಿನದಿಂದ ದಿನಕ್ಕೆ ತಾಪಮಾನ ಜಾಸ್ತಿ ಆಗ್ತಿದೆ. ಹೀಗೇ ಆಗ್ತಿದ್ರೆ ಮುಂದೊಂದು ದಿನ ಎಲ್ಲಿ ಭೂಮಿ ನಾಶ ಆಗುತ್ತೋ ಅನ್ನೋ ಭಯದಲ್ಲೇ ಜನ ಜೀವನ ಮಾಡ್ತಿದ್ದಾರೆ.
ಬದುಕೋಕೆ ಆಗದಷ್ಟು ಭೂಮಿ ಹಾಳಾಗಿ ಹೋಗುತ್ತಾ?
ಖಂಡಿತ ಇಲ್ಲ. ಮನುಷ್ಯರು ಭೂಮಿ ಮೇಲೆ ಶಾಶ್ವತವಾಗಿ ಜೀವನ ಮಾಡಬೇಕು ಅಂತನೇ ದೇವರು ಅದನ್ನು ಸೃಷ್ಟಿಮಾಡಿದ್ದಾನೆ. (ಕೀರ್ತನೆ 115:16; ಪ್ರಸಂಗಿ 1:4) ಈ ಭೂಮಿಯನ್ನು ಹಾಳು ಮಾಡೋದಕ್ಕೆ ದೇವರು ಯಾವತ್ತೂ ಬಿಡಲ್ಲ. ಅಲ್ಲದೇ ‘ಭೂಮಿಯನ್ನು ನಾಶ ಮಾಡೋ ಜನರನ್ನೂ ನಾನು ಸುಮ್ಮನೆ ಬಿಡಲ್ಲ’ ಅಂತ ಆತನು ಮಾತು ಕೊಟ್ಟಿದ್ದಾನೆ.—ಪ್ರಕಟನೆ 11:18.
ದೇವರು ಇನ್ನೂ ಏನೆಲ್ಲಾ ಮಾಡ್ತೀನಿ ಅಂತ ಮಾತು ಕೊಟ್ಟಿದ್ದಾನೆ ಅನ್ನೋದಕ್ಕೆ ಎರಡು ಉದಾಹರಣೆ ನೋಡಿ:
“ಕಾಡು ಮತ್ತು ಬರಡು ಭೂಮಿ ಸಂಭ್ರಮಪಡುತ್ತೆ, ಬಯಲು ಪ್ರದೇಶ ಉಲ್ಲಾಸಿಸ್ತಾ ಹೂಗಳಿಂದ ಕಂಗೊಳಿಸುತ್ತೆ.” (ಯೆಶಾಯ 35:1) ಭೂಮಿ ಬರಡಾಗೋದಕ್ಕೆ ದೇವರು ಯಾವತ್ತೂ ಬಿಡಲ್ಲ, ಬದಲಿಗೆ ಈಗಾಗಲೇ ಹಾಳಾಗಿರೋ ಭೂಮಿಯ ಭಾಗಗಳನ್ನು ಸರಿ ಮಾಡ್ತಾನೆ.
“ನೀನು ಭೂಮಿಯ ಆರೈಕೆ ಮಾಡ್ತೀಯ, ಅದು ಸಮೃದ್ಧವಾಗಿ ಬೆಳೆ ಕೊಡೋ ಹಾಗೆ ಮಾಡ್ತೀಯ.” (ಕೀರ್ತನೆ 65:9) ದೇವರ ಆಶೀರ್ವಾದದಿಂದ ಮುಂದೆ ಇಡೀ ಭೂಮಿ ಸುಂದರ ತೋಟ ಆಗುತ್ತೆ.
ಮಿತಿಮೀರಿದ ತಾಪಮಾನ ಬೈಬಲ್ ಭವಿಷ್ಯವಾಣಿಯ ನೆರವೇರಿಕೆಯಾಗಿದೆ. ಇದರ ಬಗ್ಗೆ ಹೆಚ್ಚನ್ನ ತಿಳಿಯಲು “ಭೂಮಿಯ ಭವಿಷ್ಯತ್ತು—ಯಾರ ಕೈಯಲ್ಲಿ?” ಅನ್ನೋ ಲೇಖನ ನೋಡಿ.
ಮುಂದೆ ಭೂಮಿಯ ವಾತಾವರಣ ಈ ರೀತಿ ಇರಲ್ಲ, ಯಾವಾಗಲೂ ಹಿತವಾಗಿರುತ್ತೆ ಅಂತ ಬೈಬಲ್ ಹೇಳುತ್ತೆ. ಇದರ ಬಗ್ಗೆ ಹೆಚ್ಚನ್ನು ತಿಳಿಯಲು “ಈ ಭೂಮಿಯನ್ನು ಸಂರಕ್ಷಿಸುವುದು ಯಾರು?” ಅನ್ನೋ ಲೇಖನ ನೋಡಿ.