ಸದಾ ಎಚ್ಚರವಾಗಿರಿ!
2023ರ ಬೇಸಿಗೆಯ ಬಿಸಿಗಾಳಿ—ಇದ್ರ ಬಗ್ಗೆ ಬೈಬಲ್ ಏನು ಹೇಳುತ್ತೆ?
ಹಿಂದೆಂದಿಗಿಂತಲೂ ಈಗ ಸುಡುಬಿಸಿಲು ಜಾಸ್ತಿಯಾಗ್ತಿದೆ. ಹವಾಮಾನದಲ್ಲಿ ತುಂಬ ಏರುಪೇರಾಗ್ತಿದೆ. ಇದ್ರಿಂದ ತುಂಬ ಸಮಸ್ಯೆಗಳು ಜಾಸ್ತಿಯಾಗಿದೆ. ಇದ್ರ ಬಗ್ಗೆ ಕೆಲವು ವರದಿಗಳು ಹೀಗಿವೆ:
“174 ವರ್ಷಗಳಿಂದ ಇಡೀ ಲೋಕದ ತಾಪಮಾನವನ್ನ ರೆಕಾರ್ಡ್ ಮಾಡಲಾಗ್ತಿದೆ. ಕಳೆದ ಜೂನ್ ತಿಂಗಳಲ್ಲಿ ಬಂದಷ್ಟು ತಾಪಮಾನ ಇಷ್ಟರವರೆಗೆ ಬಂದಿಲ್ಲ ಅಂತ ವರದಿ ತೋರಿಸುತ್ತೆ.”—ನ್ಯಾಷನಲ್ ಓಷಿಯಾನಿಕ್ ಆ್ಯಂಡ್ ಅಟ್ಮಾಸ್ಫಿಯರಿಕ್ ಅಡ್ಮಿನಿಸ್ಟ್ರೇಷನ್, ಯು.ಎಸ್. ಡಿಪಾರ್ಟ್ಮೆಂಟ್ ಆಫ್ ಕಾಮರ್ಸ್, ಜುಲೈ 13, 2023.
“ಇಟಲಿ, ಸ್ಪೇನ್, ಫ್ರಾನ್ಸ್, ಜರ್ಮನಿ ಮತ್ತು ಪೋಲೆಂಡ್ ದೇಶಗಳಲ್ಲಿ ಬಿಸಿಗಾಳಿ ಜಾಸ್ತಿಯಾಗಿದೆ. ಅಲ್ಲಿನ ಸಿಸಿಲಿ ಮತ್ತು ಸಾರ್ಡಿನಿಯಾ ದ್ವೀಪಗಳಲ್ಲಿ ತಾಪಮಾನ 48° ಸೆಲ್ಸಿಯಸ್ [118°F] ವರೆಗೆ ಜಾಸ್ತಿಯಾಗೋ ಸಾಧ್ಯತೆ ಇದೆ. ಯೂರೋಪ್ನಲ್ಲಿ ಇಷ್ಟರವರೆಗೆ ದಾಖಲಾಗಿರೋದ್ರಲ್ಲೇ ಇದು ಅತ್ಯಂತ ಜಾಸ್ತಿ ತಾಪಮಾನ ಆಗಿದೆ.”—ಯೂರೋಪಿಯನ್ ಸ್ಪೇಸ್ ಏಜೆನ್ಸಿ, ಜುಲೈ 13, 2023.
“ಭೂಮಿಯ ತಾಪಮಾನ ಹೆಚ್ಚಾಗ್ತಾ ಇರೋದ್ರಿಂದ ಆಗಾಗ ಧಾರಾಕಾರ ಮಳೆ ಆಗೋ ಸಾಧ್ಯತೆಯಿದೆ. ಇದರಿಂದ ಭೀಕರ ಪ್ರಳಯಗಳೂ ಆಗುತ್ತೆ.”—ಸ್ಟೀಫನ್ ಆ್ಯಲೆನ್ಬ್ರೂಕ್, ಡೈರೆಕ್ಟರ್ ಆಫ್ ಹೈಡ್ರೋಲಜಿ, ವಾಟರ್ ಆ್ಯಂಡ್ ಕ್ರಯೋಸ್ಪಿಯರ್ ಅಟ್ ದ ವರ್ಲ್ಡ್ ಮೆಟೊರೋಲೋಜಿಕಲ್ ಆರ್ಗನೈಸೇಶನ್, ಜುಲೈ 17, 2023.
ಹವಾಮಾನದಲ್ಲಾಗೋ ಏರುಪೇರಿನ ವರದಿಗಳನ್ನ ನೋಡಿದ್ರೆ ನಿಮಗೆ ಭಯ ಆಗುತ್ತಾ? ಈ ಗಂಭೀರ ವಿಷಯದ ಬಗ್ಗೆ ಬೈಬಲ್ ಏನು ಹೇಳುತ್ತೆ ಅಂತ ನೋಡೋಣ ಬನ್ನಿ.
ಹವಾಮಾನದ ಏರುಪೇರು ಬೈಬಲ್ನಲ್ಲಿರೋ ಭವಿಷ್ಯವಾಣಿಯ ನೆರವೇರಿಕೆನಾ?
ಹೌದು. ಉದಾಹರಣೆಗೆ “ಭಯಾನಕ ದೃಶ್ಯಗಳು ಮತ್ತು ದೊಡ್ಡದೊಡ್ಡ ಸೂಚನೆಗಳು ಕಾಣಿಸುತ್ತೆ” ಅಂತ ಯೇಸು ಮುಂಚೆನೇ ಹೇಳಿದ್ದನು. (ಲೂಕ 21:11) ಹಾಗಾಗಿ ನಮ್ಮ ದಿನಗಳಲ್ಲಿ ಹವಾಮಾನದಲ್ಲಿ ಏರುಪೇರಾಗೋದು ಮತ್ತು ಬಿಸಿ ಗಾಳಿಯಿಂದ ತೊಂದರೆಗಳಾಗೋದು ಬೈಬಲ್ ಭವಿಷ್ಯವಾಣಿಯ ನೆರವೇರಿಕೆಯಾಗಿದೆ ಅನ್ನೋದ್ರಲ್ಲಿ ಸಂಶಯವಿಲ್ಲ. ವಿಶ್ವದ ಎಲ್ಲಾ ಕಡೆ ಈ ರೀತಿ ತಾಪಮಾನ ಏರುತ್ತಾ ಇರೋದ್ರಿಂದ ಮನುಷ್ಯರೇ ಭೂಮಿಯನ್ನ ಹಾಳುಮಾಡ್ತಿದ್ದಾರೆ ಅನ್ನೋ ಭಯ ತುಂಬ ಜನರಿಗೆ ಕಾಡ್ತಿದೆ.
ಭೂಮಿ ಪೂರ್ತಿಯಾಗಿ ಹಾಳಾಗುತ್ತಾ?
ಇಲ್ಲ. ನಾವು ಶಾಶ್ವತವಾಗಿ ಜೀವಿಸಬೇಕಂತನೇ ದೇವರು ಈ ಭೂಮಿಯನ್ನ ಸೃಷ್ಟಿ ಮಾಡಿದನು. ಹಾಗಾಗಿ ಮನುಷ್ಯರು ಅದನ್ನ ನಾಶಮಾಡೋಕೆ ಆತನು ಬಿಡಲ್ಲ. (ಕೀರ್ತನೆ 115:16; ಪ್ರಸಂಗಿ 1:4) ‘ಭೂಮಿಯನ್ನ ನಾಶಮಾಡ್ತಿರೋ ಜನ್ರನ್ನ ನಾಶಮಾಡ್ತೀನಿ’ ಅಂತ ಆತನು ಮಾತು ಕೊಟ್ಟಿದ್ದಾನೆ.—ಪ್ರಕಟನೆ 11:18.
ಭೂಮಿಯಲ್ಲಿ ಆಗ್ತಿರೋ ಪ್ರಕೃತಿಯ ದುರಂತಗಳನ್ನ ಸರಿಮಾಡೋ ಸಾಮರ್ಥ್ಯ ದೇವರಿಗಿದೆ ಅಂತ ಬೈಬಲ್ ಹೇಳುತ್ತೆ.
“ಬಿರುಗಾಳಿಯನ್ನ ಆತನು [ದೇವರು] ನಿಲ್ಲಿಸ್ತಾನೆ, ಸಮುದ್ರದ ಅಲೆಗಳು ಪ್ರಶಾಂತವಾಗ್ತವೆ.” (ಕೀರ್ತನೆ 107:29) ಪ್ರಕೃತಿಯನ್ನ ಸಂಪೂರ್ಣವಾಗಿ ನಿಯಂತ್ರಿಸೋ ಶಕ್ತಿ ದೇವರಿಗಿದೆ. ಅದಕ್ಕೆ ಹವಾಮಾನದಲ್ಲಿ ಆಗ್ತಿರೋ ಏರುಪೇರಿಗೆ ಕಾರಣವಾಗಿರೋ ಪ್ರಕೃತಿಯ ದುರಂತಗಳನ್ನ ಆತನು ಸರಿಮಾಡ್ತಾನೆ.
“ನೀನು ಭೂಮಿಯ ಆರೈಕೆ ಮಾಡ್ತೀಯ, ಅದು ಸಮೃದ್ಧವಾಗಿ ಬೆಳೆ ಕೊಡೋ ಹಾಗೆ ಮಾಡ್ತೀಯ.” (ಕೀರ್ತನೆ 65:9) ದೇವರ ಆಶೀರ್ವಾದದಿಂದ ಈ ಭೂಮಿ ಸುಂದರ ತೋಟವಾಗುತ್ತೆ.
ಮುಂದೆ ಒಳ್ಳೆ ಪರಿಸ್ಥಿತಿ ಬರುತ್ತೆ ಅಂತ ಬೈಬಲ್ ಹೇಳುತ್ತೆ. ಇದ್ರ ಬಗ್ಗೆ ಜಾಸ್ತಿ ತಿಳ್ಕೊಳ್ಳೋಕೆ “ಈ ಭೂಮಿಯನ್ನು ಸಂರಕ್ಷಿಸುವುದು ಯಾರು?” ಅನ್ನೋ ಲೇಖನವನ್ನ ನೋಡಿ.