ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

JenkoAtaman/stock.adobe.com

ಸದಾ ಎಚ್ಚರವಾಗಿರಿ!

ನಿರೀಕ್ಷೆಗಳ ಗೂಡು 2023—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

ನಿರೀಕ್ಷೆಗಳ ಗೂಡು 2023—ಇದರ ಬಗ್ಗೆ ಬೈಬಲ್‌ ಏನು ಹೇಳುತ್ತೆ?

 2023 ಶುರುವಾಗ್ತಾ ಇದ್ದಂತೆ ನಮಗೆ, ನಮ್ಮ ಕುಟುಂಬದವ್ರಿಗೆ ಒಳ್ಳೇದೇ ಆಗಲಿ ಅಂತ ನಾವು ಆಸೆ ಪಡ್ತೀವಿ. ಈ ನಿರೀಕ್ಷೆ ಇಟ್ಕೊಳ್ಳೋದ್ರಲ್ಲಿ ತಪ್ಪಿಲ್ಲ. ಯಾಕೆ?

ಬೈಬಲ್‌ ಕೊಡೋ ನಿರೀಕ್ಷೆ

 ನಮಗಿರೋ ಕಷ್ಟಗಳೆಲ್ಲಾ ತುಂಬ ಬೇಗ ನಾಶ ಆಗುತ್ತೆ ಅಂತ ಬೈಬಲ್‌ ನಮಗೆ ಸಿಹಿಸುದ್ದಿ ಕೊಡುತ್ತೆ. ಅಷ್ಟೇ ಅಲ್ಲ, ಬೈಬಲ್‌ನಲ್ಲಿರೋ “ವಿಷ್ಯಗಳನ್ನೆಲ್ಲ ನಾವು ಕಲಿಬೇಕಂತ ಬರೆದ್ರು. ಈ ಪವಿತ್ರ ಬರಹಗಳು . . . ಸಾಂತ್ವನ ಪಡಿಯೋಕೆ ಸಹಾಯ ಮಾಡೋದ್ರಿಂದ ನಮಗೀಗ ನಿರೀಕ್ಷೆಯಿದೆ.”ರೋಮನ್ನರಿಗೆ 15:4.

ಈಗ ನಿಮಗೆ ಸಹಾಯ ಮಾಡೋ ನಿರೀಕ್ಷೆ

 ಬೈಬಲ್‌ನಲ್ಲಿರೋ ನಿರೀಕ್ಷೆ “ನಮ್ಮ ಜೀವನಕ್ಕೆ ಲಂಗರದ ಹಾಗಿದೆ.” (ಇಬ್ರಿಯ 6:19) ಈ ಮಾತು ಕಷ್ಟಗಳನ್ನ ಎದುರಿಸೋಕೆ ನಮಗೆ ಶಕ್ತಿ ಕೊಡುತ್ತೆ. ಒಳ್ಳೇ ರೀತಿ ಯೋಚಿಸೋಕೆ ಮತ್ತು ಸಂತೋಷವಾಗಿರೋಕೆ ನಮಗೆ ಸಹಾಯ ಮಾಡುತ್ತೆ. ಉದಾಹರಣೆಗೆ:

ನಿರೀಕ್ಷೆಯನ್ನ ಬಲಪಡಿಸಿ

 ತುಂಬ ಜನರು ಮುಂದೆ ಒಳ್ಳೇದಾಗುತ್ತೆ ಅಂತ ಹೇಳ್ತಾರೆ. ಆದ್ರೆ ಹಾಗೆ ಆಗುತ್ತೆ ಅನ್ನೋದಕ್ಕೆ ಅವ್ರಿಗೆ ಯಾವುದೇ ಗ್ಯಾರಂಟಿ ಇಲ್ಲ. ಆದ್ರೆ ಬೈಬಲ್‌ನಲ್ಲಿರೋ ಮಾತುಗಳು ಹಾಗಲ್ಲ. ಯಾಕಂದ್ರೆ ಅವನ್ನ ಹೇಳಿರೋದು ಯೆಹೋವ ದೇವರು. a ಆತನು “ಸುಳ್ಳು ಹೇಳೋಕೆ ಸಾಧ್ಯಾನೇ ಇಲ್ಲದ ದೇವರು.” (ತೀತ 1:2) ತಾನು ಕೊಟ್ಟಿರೋ ಪ್ರತಿಯೊಂದು ಮಾತನ್ನ ನೆರವೇರಿಸೋಕೆ ಯೆಹೋವ ದೇವರಿಂದ ಮಾತ್ರ ಸಾಧ್ಯ. ಆತನು “ತನಗೆ ಇಷ್ಟವಾಗಿದ್ದನ್ನೆಲ್ಲ ಮಾಡ್ತಾನೆ.”—ಕೀರ್ತನೆ 135:5, 6.

 ಬೈಬಲ್‌ ಕೊಡೋ ನಿರೀಕ್ಷೆ ಬಗ್ಗೆ ತಿಳಿಯಲು ನಾವು ನಿಮ್ಮನ್ನ ಆಮಂತ್ರಿಸ್ತೀವಿ. ‘ವಚನಗಳನ್ನ ಚೆನ್ನಾಗಿ ಪರೀಕ್ಷಿಸಿ‘ ನೀವೇ ಅದರ ಮೇಲೆ ಭರವಸೆ ಬೆಳೆಸ್ಕೊಬಹುದು. (ಅಪೊಸ್ತಲರ ಕಾರ್ಯ 17:11) ಇದನ್ನ ಮಾಡೋಕ್ಕೆ ಉಚಿತ ಬೈಬಲ್‌ ಅಧ್ಯಯನದ ಕೋರ್ಸ್‌ ಸಹಾಯ ಮಾಡುತ್ತೆ. ಅದನ್ನ ನೋಡಿ, 2023ನ್ನ ನಿರೀಕ್ಷೆಗಳ ಗೂಡಾಗಿ ಮಾಡಿ!

a ಯೆಹೋವ ಅನ್ನೋದು ದೇವರ ವೈಯಕ್ತಿಕ ಹೆಸರು.—ಕೀರ್ತನೆ 83:18.