ನಮ್ಮ ಕ್ರೈಸ್ತ ಜೀವನ
ಯೆಹೋವನು ಕೊಡುವ ಶಿಕ್ಷಣವೇ ಅತ್ಯುತ್ತಮ
ಯಾಕೆ ಪ್ರಾಮುಖ್ಯ: ಮಹಾನ್ ಬೋಧಕನಾದ ಯೆಹೋವನು ಅತ್ಯುತ್ತಮ ಶಿಕ್ಷಣವನ್ನು ಕೊಡುತ್ತಿದ್ದಾನೆ. ಜೀವನವನ್ನು ಹೇಗೆ ಉತ್ತಮಗೊಳಿಸಬಹುದು ಎಂದು ಕಲಿಸುವುದರ ಜೊತೆಗೆ ಸುಂದರ ಭವಿಷ್ಯತ್ತಿಗೂ ನಮ್ಮನ್ನು ಸಿದ್ಧಗೊಳಿಸುತ್ತಿದ್ದಾನೆ. ಅದೂ ಉಚಿತವಾಗಿ! (ಯೆಶಾ 11:6-9; 30:20, 21; ಪ್ರಕ 22:17) ಬೇರೆಯವರಿಗೆ ಜೀವರಕ್ಷಕ ಸಂದೇಶ ಸಾರಲು ದೈವಿಕ ಶಿಕ್ಷಣದ ಮೂಲಕ ನಮ್ಮನ್ನು ತಯಾರು ಮಾಡುತ್ತಾನೆ.—2ಕೊರಿಂ 3:5.
ಹೇಗೆ ಮಾಡಬೇಕು:
-
ದೀನತೆಯನ್ನು ಬೆಳೆಸಿಕೊಳ್ಳಿ.—ಕೀರ್ತ 25:8, 9
-
ಈಗ ಸಿಗುವ ಎಲ್ಲ ತರಬೇತಿಯನ್ನು ಸ್ವೀಕರಿಸಿ. ಇದರಲ್ಲಿ ವಿದ್ಯಾರ್ಥಿ ನೇಮಕಗಳೂ ಸೇರಿವೆ
-
ಆಧ್ಯಾತ್ಮಿಕ ಗುರಿಗಳನ್ನು ಇಡಿ.—ಫಿಲಿ 3:13
-
ಇನ್ನೂ ಹೆಚ್ಚಿನ ತರಬೇತಿಗಾಗಿ ತ್ಯಾಗ ಮಾಡಿ.—ಫಿಲಿ 3:8
ಯೆಹೋವನ ಬೋಧನೆಗಳಿಂದ ಆಧ್ಯಾತ್ಮಿಕವಾಗಿ ಐಶ್ವರ್ಯವಂತರಾದರು ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ಕೆಲವು ಸಹೋದರ-ಸಹೋದರಿಯರು ಯಾವೆಲ್ಲಾ ಸವಾಲುಗಳನ್ನು ಎದುರಿಸಬೇಕಾಯಿತು?
-
ರಾಜ್ಯ ಪ್ರಚಾರಕರ ಶಾಲೆಯಿಂದ ಯಾವ ತರಬೇತಿ ಸಿಗುತ್ತದೆ?
-
ಆ ಸಹೋದರ-ಸಹೋದರಿಯರಿಗೆ ಹೊಸ ನೇಮಕ ಸಿಕ್ಕಿದಾಗ ಸಭೆಯವರು ಹೇಗೆ ಸಹಾಯಮಾಡಿದರು?
-
ರಾಜ್ಯ ಪ್ರಚಾರಕರ ಶಾಲೆಗೆ ಹಾಜರಾಗಲು ಯಾವ ಅರ್ಹತೆಗಳು ಇರಬೇಕು? (kr-E ಪುಟ 189)
-
ಯೆಹೋವನ ಸಂಘಟನೆಯಲ್ಲಿ ಇನ್ನು ಯಾವ ತರಬೇತಿ ಪಡೆಯಬಹುದು?