ನಮ್ಮ ಕ್ರೈಸ್ತ ಜೀವನ
ನಂಗೆ ಯಾವುದು ಮುಖ್ಯ!
ಯಾಕೋಬನಿಗೆ ಯೆಹೋವನ ಆಶೀರ್ವಾದ ತುಂಬಾ ಮುಖ್ಯವಾಗಿತ್ತು. ಅದನ್ನು ಪಡೆಯೋಕೆ ದೇವದೂತನೊಂದಿಗೆ ಸಹ ಹೋರಾಡಿದ. (ಆದಿ 32:24-31; ಹೋಶೇ 12:3, 4) ನಮ್ಮ ಬಗ್ಗೆ ಏನು? ನಾವು ಸಹ ಯೆಹೋವನ ಮಾತು ಕೇಳಲು ಮತ್ತು ಆತನ ಆಶೀರ್ವಾದ ಪಡೆಯಲು ಶ್ರಮಪಡುತ್ತೇವಾ? ಉದಾಹರಣೆಗೆ, ಕೂಟಗಳು ಇರುವ ದಿನ ತುಂಬ ಹೊತ್ತು ಕೆಲಸ ಮಾಡಬೇಕಾಗಿ ಬಂದರೆ ಆಗೇನು? ಅಂಥ ಸಂದರ್ಭದಲ್ಲಿ ನೀವೇನು ಮಾಡ್ತೀರಾ? ನಾವು ಯೆಹೋವನಿಗೆ ನಮ್ಮ ಎಲ್ಲಾ ಸಮಯ, ಶಕ್ತಿ, ಮತ್ತು ಸೊತ್ತುಗಳನ್ನು ಕೊಡುವಾಗ ಆತನು ಸ್ಥಳಹಿಡಿಯಲಾಗದಷ್ಟು ಸುವರವನ್ನು ನಮ್ಮ ಮೇಲೆ ಸುರಿಯುತ್ತಾನೆ. (ಮಲಾ 3:10) ಯೆಹೋವನು ನಮ್ಮನ್ನು ಮಾರ್ಗದರ್ಶಿಸುತ್ತಾನೆ, ಸಂರಕ್ಷಿಸುತ್ತಾನೆ ಮತ್ತು ನಮ್ಮ ಎಲ್ಲಾ ಅಗತ್ಯಗಳನ್ನು ನೋಡಿಕೊಳ್ಳುತ್ತಾನೆ.—ಮತ್ತಾ 6:33; ಇಬ್ರಿ 13:5.
ನಿಮ್ಮ ದೃಷ್ಟಿ ಆಧ್ಯಾತ್ಮಿಕ ಗುರಿಗಳಿಂದ ಬೇರೆಡೆ ಹರಿದಾಡದಿರಲಿ ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ತಾನು ಇಷ್ಟಪಟ್ಟಿದ್ದ ವಿಷಯದಿಂದಾನೇ ಸಹೋದರಿಗೆ ಯಾವ ಪರೀಕ್ಷೆ ಬಂತು?
-
ಹೇಗೆ ಕೆಲಸಾನೇ ಒಂದು ದೊಡ್ಡ ಪರೀಕ್ಷೆ ಆಗಿದೆ?
-
ತಿಮೊಥೆಯ ಪ್ರೌಢ ಕ್ರೈಸ್ತನಾಗಿದ್ರು ಆಧ್ಯಾತ್ಮಿಕ ಗುರಿಗಳನ್ನು ಇಡುತ್ತಾ ಮುಂದುವರಿಯಬೇಕಿತ್ತು ಯಾಕೆ?—1ತಿಮೊ 4:16
-
ಯೆಹೋವನ ಸೇವೇನೇ ನಮಗೆ “ಮುಖ್ಯ ಕೆಲಸ” ಅಂತ ಹೇಗೆ ತೋರಿಸುತ್ತೇವೆ?