ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ
ಕೆಟ್ಟ ಸಹವಾಸ ಬಿಡೋಕೆ ವಿದ್ಯಾರ್ಥಿಗಳಿಗೆ ಸಹಾಯಮಾಡಿ
ಬೈಬಲ್ ವಿದ್ಯಾರ್ಥಿಗಳು ಒಳ್ಳೆಯವರ ಸಹವಾಸ ಮಾಡಿದ್ರೆ ಯೆಹೋವ ದೇವರ ಫ್ರೆಂಡ್ ಆಗೋಕೆ ಸುಲಭ ಆಗುತ್ತೆ. (ಕೀರ್ತ 15:1, 4) ಸರಿಯಾದ ದಾರಿಯಲ್ಲಿ ನಡಿಯೋಕೆ ಸಹಾಯ ಆಗುತ್ತೆ.—ಜ್ಞಾನೋ 13:20; ಖುಷಿಯಾಗಿ ಬಾಳೋಣ ಪಾಠ 48.
ವಿದ್ಯಾರ್ಥಿಗಳಿಗೆ ತಮ್ಮ ಹಳೇ ಸ್ನೇಹಿತರನ್ನ ಬಿಡೋಕೆ ತುಂಬ ಕಷ್ಟ ಆಗಬಹುದು. ಹಾಗಾಗಿ ಅವರನ್ನ ಅರ್ಥಮಾಡಿಕೊಂಡು ಕೆಟ್ಟ ಸಹವಾಸ ಬಿಡೋಕೆ ಅವರಿಗೆ ಸಹಾಯ ಮಾಡಿ. ಸ್ಟಡಿ ಮಾಡೋ ದಿನ ಮಾತ್ರ ಅಲ್ಲ ಬೇರೆ ದಿನಗಳಲ್ಲೂ ಅವರ ಹತ್ರ ಮಾತಾಡಿ. ಮೆಸೇಜ್ ಮಾಡಿ ಅಥವಾ ಫೋನ್ ಮಾಡಿ ಅಥವಾ ಅವರ ಮನೆಗೆ ಹೋಗಿ ಅವರನ್ನ ನೋಡಿಕೊಂಡು ಬನ್ನಿ. ಅವರು ಪ್ರಗತಿ ಮಾಡಿದ್ರೆ, ಬೇರೆ ಸಹೋದರರ ಜೊತೆ ಬೆರೆಯೋಕೆ ಅವಕಾಶ ಮಾಡಿಕೊಡಿ. ಆಗ ಅವರಿಗೆ ಕಳೆದುಕೊಂಡಿದ್ದಕ್ಕಿಂತ ಜಾಸ್ತಿನೇ ಸಿಕ್ಕಿದೆ ಅಂತ ಅರ್ಥ ಆಗುತ್ತೆ. (ಮಾರ್ಕ 10:29, 30) ಯೆಹೋವ ದೇವರ ಕುಟುಂಬ ದೊಡ್ಡದಾಗುವುದನ್ನ ನೋಡುವಾಗ ನಿಮಗೂ ಖುಷಿಯಾಗುತ್ತೆ.
ಬೈಬಲ್ ವಿದ್ಯಾರ್ಥಿಗಳಿಗೆ ಸಹಾಯಮಾಡಿ—ಕೆಟ್ಟಸಹವಾಸ ಬಿಡಲು ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಕೆಟ್ಟ ಸಹವಾಸದಿಂದ ಏನಾಗುತ್ತೆ?—1ಕೊರಿಂ 15:33
-
ಗೆಟ್‌ಟುಗೆದರ್ ಅಂದಾಗ ಜಾಸ್ಮಿನ್ ಮನಸ್ಸಿಗೆ ಏನು ಬಂತು?
-
ಕೆಟ್ಟ ಸಹವಾಸ ಬಿಟ್ಟುಬಿಡೋಕೆ ನೀತಾ ಜಾಸ್ಮಿನ್‌ಗೆ ಹೇಗೆ ಸಹಾಯ ಮಾಡಿದಳು?