ನಮ್ಮ ಕ್ರೈಸ್ತ ಜೀವನ
ನಮಗೋಸ್ಕರ ಸೇವೆ ಮಾಡೋಕೆ ತುಂಬ ಕಷ್ಟಪಡ್ತಾರೆ
ಸಂಚರಣ ಮೇಲ್ವಿಚಾರಕರು ಮತ್ತು ಅವರ ಹೆಂಡತಿಯರು ನಮಗೋಸ್ಕರ ತುಂಬ ತ್ಯಾಗಗಳನ್ನ ಮಾಡ್ತಾರೆ, ಪ್ರೀತಿ ತೋರಿಸ್ತಾರೆ. ನಮ್ಮ ತರಾನೇ ಅವರಿಗೂ ಬೇಜಾರ್ ಆಗುತ್ತೆ, ಸುಸ್ತಾಗುತ್ತೆ, ಚಿಂತೆನೂ ಇರುತ್ತೆ. (ಯಾಕೋ 5:17) ಆದ್ರೂ ಅವರು ಭೇಟಿ ನೀಡುವ ಸಭೆಯ ಸಹೋದರ ಸಹೋದರಿಯರಿಗೆ ಪ್ರೋತ್ಸಾಹ ಕೊಡ್ತಾರೆ. ಅವರಿಗೆ ನಾವು “ತುಂಬ ಗೌರವ ಕೊಡಬೇಕು.”—1ತಿಮೊ 5:17.
ಅಪೊಸ್ತಲ ಪೌಲ ರೋಮ್ ಸಭೆಯನ್ನ ಭೇಟಿ ಮಾಡೋಕೆ ಪ್ಲಾನ್ ಮಾಡಿದ. ಅವರಿಗೆ ದೇವರ ಉಡುಗೊರೆಯನ್ನ ಕೊಡಬೇಕು ಅಂದ್ಕೊಂಡ. “ನಿಮ್ಮ ನಂಬಿಕೆಯಿಂದ ನಾನು, ನನ್ನ ನಂಬಿಕೆಯಿಂದ ನೀವು ಪ್ರೋತ್ಸಾಹ ಪಡಿಬೇಕು” ಅಂತ ಹೀಗೆ ಮಾಡಿದ. (ರೋಮ 1:11, 12) ನಿಮ್ಮ ಸಂಚರಣ ಮೇಲ್ವಿಚಾರಕರಿಗೆ ಮತ್ತು ಅವರ ಹೆಂಡತಿಗೆ ನೀವು ಹೇಗೆ ಪ್ರೋತ್ಸಾಹ ಕೊಡಬಹುದು?
ಗ್ರಾಮೀಣ ಸಂಚರಣ ಮೇಲ್ವಿಚಾರಕರ ಜೀವನ ಅನ್ನೋ ವಿಡಿಯೋ ನೋಡಿ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
-
ಸಂಚರಣ ಮೇಲ್ವಿಚಾರಕ ಮತ್ತು ಅವರ ಹೆಂಡತಿ ನಮಗೋಸ್ಕರ ಯಾವೆಲ್ಲ ತ್ಯಾಗಗಳನ್ನ ಮಾಡ್ತಾರೆ?
-
ಅವರು ಮಾಡೋ ಕೆಲಸದಿಂದ ನಿಮಗೆ ಹೇಗೆ ಪ್ರಯೋಜನ ಆಗಿದೆ?
-
ನಾವು ಅವರಿಗೆ ಹೇಗೆ ಪ್ರೋತ್ಸಾಹ ಕೊಡಬಹುದು?