ದೋಷಪರಿಹಾರಕ ದಿನದಂದು ನಡೆಯುತ್ತಿದ್ದ ವಿಷಯಗಳಿಂದ ನಾವೇನು ಕಲಿಬಹುದು?
ದೋಷಪರಿಹಾರಕ ದಿನದಂದು ಪರಿಮಳಧೂಪವನ್ನು ಸುಡುತ್ತಿದ್ದ ವಿಷಯದಿಂದ ನಾವೇನು ಕಲಿಬಹುದು?
-
ಯೆಹೋವನ ನಂಬಿಗಸ್ತ ಸೇವಕರು ಮಾಡುವ ಪ್ರಾರ್ಥನೆಗಳು ಧೂಪದಂತೆ ಇವೆ. (ಕೀರ್ತ 141:2) ಮಹಾ ಯಾಜಕ ಯೆಹೋವನ ಮುಂದೆ ತುಂಬ ಭಯಭಕ್ತಿ ಗೌರವದಿಂದ ಧೂಪವನ್ನ ತರುತ್ತಿದ್ದ. ಅದೇರೀತಿ, ನಾವು ಯೆಹೋವನಿಗೆ ತುಂಬ ಭಯಭಕ್ತಿ ಗೌರವದಿಂದ ಪ್ರಾರ್ಥನೆ ಮಾಡಬೇಕು
-
ಮಹಾ ಯಾಜಕ ಪರಿಮಳಧೂಪವನ್ನು ಸುಟ್ಟ ನಂತರನೇ ದೋಷಪರಿಹಾರಕ ಯಜ್ಞವನ್ನ ಅರ್ಪಿಸಬೇಕಿತ್ತು. ಅದೇರೀತಿ, ಯೇಸು ಭೂಮಿಯಲ್ಲಿದ್ದಾಗ ಮನುಷ್ಯರಿಗಾಗಿ ತನ್ನ ಜೀವವನ್ನ ಯಜ್ಞವಾಗಿ ಅರ್ಪಿಸುವುದಕ್ಕಿಂತ ಮುಂಚೆ ಜೀವನಪೂರ್ತಿ ಯೆಹೋವನು ಹೇಳಿದಂತೆ ನಡೀಬೇಕಿತ್ತು, ನಿಷ್ಠೆಯಿಂದ ಇರಬೇಕಿತ್ತು. ಆಗ ಮಾತ್ರ ಯೆಹೋವನು ಯೇಸುವಿನ ಯಜ್ಞವನ್ನ ಸ್ವೀಕರಿಸಲಿದ್ದನು
ಯೆಹೋವನು ನನ್ನ ಯಜ್ಞಗಳನ್ನ ಸ್ವೀಕರಿಸಬೇಕಂದ್ರೆ ನಾನೇನು ಮಾಡಬೇಕು?