ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮ್ಮ ಕ್ರೈಸ್ತ ಜೀವನ

ಈ ಲೋಕ ಅಂತ್ಯ ಆಗುವಾಗ ನಮ್ಮನ್ನ ಯೆಹೋವ ಕಾಪಾಡ್ತಾನೆ ಅಂತ ನಂಬಿ

ಈ ಲೋಕ ಅಂತ್ಯ ಆಗುವಾಗ ನಮ್ಮನ್ನ ಯೆಹೋವ ಕಾಪಾಡ್ತಾನೆ ಅಂತ ನಂಬಿ

ಇನ್ನು ಸ್ವಲ್ಪದರಲ್ಲೇ ಯೆಹೋವ ಈ ಲೋಕಕ್ಕೆ ತಾಳ್ಮೆ ತೋರಿಸೋದನ್ನ ನಿಲ್ಲಿಸಿಬಿಡ್ತಾನೆ. ಸುಳ್ಳು ಧರ್ಮಗಳು ನಾಶ ಆಗುತ್ತೆ, ಜನಾಂಗಗಳ ಗುಂಪು ದೇವಜನರ ಮೇಲೆ ಆಕ್ರಮಣ ಮಾಡುತ್ತೆ ಮತ್ತು ಕೆಟ್ಟವರನ್ನ ಯೆಹೋವ ಹರ್ಮಗೆದೋನ್‌ನಲ್ಲಿ ನಾಶ ಮಾಡಿಬಿಡ್ತಾನೆ. ಕ್ರೈಸ್ತರು ಈ ಘಟನೆಗಳು ಯಾವಾಗ ನಡಿಯುತ್ತೆ ಅಂತ ಎದುರುನೋಡ್ತಿದ್ದಾರೆ.

ನಮಗೆ ಮಹಾ ಸಂಕಟದಲ್ಲಿ ಏನೇನಾಗುತ್ತೆ ಅನ್ನೋದರ ಬಗ್ಗೆ ಪೂರ್ತಿ ಗೊತ್ತಿಲ್ಲ. ಉದಾಹರಣೆಗೆ, ಅದು ಯಾವಾಗ ಶುರುವಾಗುತ್ತೆ, ರಾಜಕೀಯ ನಾಯಕರು ಧರ್ಮಗಳ ಮೇಲೆ ಯಾಕೆ ಆಕ್ರಮಣ ಮಾಡ್ತಾರೆ, ಜನಾಂಗಗಳ ಗುಂಪು ದೇವಜನರ ಮೇಲೆ ಮಾಡೋ ಆಕ್ರಮಣ ಎಷ್ಟು ದಿನಗಳ ತನಕ ಇರುತ್ತೆ ಅಥವಾ ಹೇಗೆ ಆಕ್ರಮಣ ಮಾಡ್ತಾರೆ ಅಂತನೂ ಗೊತ್ತಿಲ್ಲ. ಅಷ್ಟೇ ಅಲ್ಲ, ಯೆಹೋವ ಕೆಟ್ಟವರನ್ನ ಹರ್ಮಗೆದೋನ್‌ನಲ್ಲಿ ಹೇಗೆ ನಾಶಮಾಡ್ತಾನೆ ಅಂತನೂ ಗೊತ್ತಿಲ್ಲ.

ಆದ್ರೆ ಮುಂದೆ ಈ ಘಟನೆಗಳು ನಡಿಯುವಾಗ ನಾವು ಧೈರ್ಯದಿಂದ ಇರೋಕೆ ಮತ್ತು ಯೆಹೋವ ನಮ್ಮನ್ನ ಕಾಪಾಡ್ತಾನೆ ಅಂತ ನಂಬೋಕೆ ಏನು ಆಧಾರ ಬೇಕೋ ಅದನ್ನ ಯೆಹೋವ ಬೈಬಲ್‌ನಲ್ಲಿ ಕೊಟ್ಟಿದ್ದಾನೆ. ಉದಾಹರಣೆಗೆ, ನಾವು “ಕೊನೇ ದಿನಗಳಲ್ಲಿ” ಜೀವಿಸ್ತಿದ್ದೀವಿ ಅಂತ ನಮಗೆ ಗೊತ್ತು. (2ತಿಮೊ 3:1) ಸತ್ಯ ಧರ್ಮ ನಾಶ ಆಗಬಾರದು ಅಂತ ಧರ್ಮಗಳ ಮೇಲೆ ಆಗೋ ಆಕ್ರಮಣವನ್ನ ‘ಕಡಿಮೆ ಮಾಡಲಾಗುತ್ತೆ’ ಅಂತನೂ ನಮಗೆ ಗೊತ್ತು. (ಮತ್ತಾ 24:22) ಜೊತೆಗೆ ಯೆಹೋವ ತನ್ನ ಜನರನ್ನ ಕಾಪಾಡ್ತಾನೆ ಅಂತನೂ ಗೊತ್ತು. (2ಪೇತ್ರ 2:9) ಅಷ್ಟೇ ಅಲ್ಲ, ಕೆಟ್ಟವರಿಗೆ ಶಿಕ್ಷೆ ಕೊಡೋಕೆ ಮತ್ತು ದೊಡ್ಡ ಗುಂಪಿನವರನ್ನ ಕಾಪಾಡೋಕೆ ಯೆಹೋವ ಸರಿಯಾದ, ಶಕ್ತಿಶಾಲಿಯಾದ ವ್ಯಕ್ತಿಯನ್ನೇ ಆರಿಸಿದ್ದಾನೆ ಅಂತನೂ ನಮಗೆ ಗೊತ್ತು.—ಪ್ರಕ 19:11, 15, 16.

ಮುಂದೆ ನಡಿಯೋ ಘಟನೆಗಳನ್ನ ನೋಡಿ “ಭಯದಿಂದ ಜನ ತಲೆ ತಿರುಗಿ ಬೀಳ್ತಾರೆ.” ಆದ್ರೆ ಯೆಹೋವ ಈ ಹಿಂದೆ ತನ್ನ ಜನರನ್ನ ಹೇಗೆಲ್ಲಾ ಕಾಪಾಡಿದ್ದಾನೆ ಅನ್ನೋದರ ಬಗ್ಗೆ ಬೈಬಲ್‌ನಲ್ಲಿ ಓದಿ ಅದರ ಬಗ್ಗೆ ಚೆನ್ನಾಗಿ ಯೋಚನೆ ಮಾಡಿದ್ರೆ ನಾವು ನಮ್ಮ ‘ತಲೆ ಮೇಲಕ್ಕೆತ್ತಿ ಸ್ಥಿರವಾಗಿ ನಿಂತ್ಕೊಳ್ತೀವಿ.’ ನಮಗೆ ಆದಷ್ಟು ಬೇಗ ಬಿಡುಗಡೆ ಸಿಗುತ್ತೆ ಅನ್ನೋ ಭರವಸೆ ಮೂಡುತ್ತೆ.—ಲೂಕ 21:26, 28.