ಫೆಬ್ರವರಿ 1-7
ನೆಹೆಮೀಯ 1-4
ಗೀತೆ 126 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನೆಹೆಮೀಯನು ಸತ್ಯಾರಾಧನೆಯನ್ನು ಪ್ರೀತಿಸಿದನು”: (10 ನಿ.)
[ನೆಹೆಮೀಯ ಪುಸ್ತಕದ ಪರಿಚಯ ಎಂಬ ವಿಡಿಯೋ ತೋರಿಸಿ.]
ನೆಹೆ 1:11–2:3—ನೆಹೆಮೀಯನು ಸತ್ಯಾರಾಧನೆಯನ್ನು ಬೆಂಬಲಿಸುವುದರಲ್ಲಿ ಸಂತೋಷ ಕಂಡುಕೊಂಡನು (ಕಾವಲಿನಬುರುಜು 06 2/1 ಪು. 9, ಪ್ಯಾ. 7)
ನೆಹೆ 4:14—ತನ್ನ ಗಮನವನ್ನು ಯೆಹೋವನ ಮೇಲೆ ಕೇಂದ್ರೀಕರಿಸುವ ಮೂಲಕ ನೆಹೆಮೀಯನು ವಿರೋಧವನ್ನು ಜಯಿಸಿದನು (ಕಾವಲಿನಬುರುಜು 06 2/1 ಪು. 10, ಪ್ಯಾ. 2)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ನೆಹೆ 1:1; 2:1—ನೆಹೆಮೀಯ 1:1 ಮತ್ತು 2:1ರಲ್ಲಿ ತಿಳಿಸಲಾದ “ಇಪ್ಪತ್ತನೆಯ ವರುಷ” ಒಂದೇ ಬಿಂದುವಿನಿಂದ ಲೆಕ್ಕಿಸಲ್ಪಟ್ಟಿದೆ ಎಂದು ನಾವು ಹೇಗೆ ಹೇಳಬಹುದು? (ಕಾವಲಿನಬುರುಜು 06 2/1 ಪು. 8, ಪ್ಯಾ. 5)
ನೆಹೆ 4:17, 18—ಪುನರ್ನಿರ್ಮಾಣ ಕಾರ್ಯವನ್ನು ಒಬ್ಬ ವ್ಯಕ್ತಿಯು ಬರೀ ಒಂದು ಕೈಯಿಂದ ಹೇಗೆ ಮಾಡಸಾಧ್ಯವಿತ್ತು? (ಕಾವಲಿನಬುರುಜು 06 2/1 ಪು. 9, ಪ್ಯಾ. 1)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: ನೆಹೆ 3:1-14 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಈ ತಿಂಗಳ ನಿರೂಪಣೆಗಳನ್ನು ತಯಾರಿಸಿ: (15 ನಿ.) ಚರ್ಚೆ. ಕರಪತ್ರದ ಎರಡು ಮಾದರಿ ನಿರೂಪಣೆಗಳನ್ನು ಅಭಿನಯಿಸಿ. ಕಿರುಹೊತ್ತಗೆಯ ಮಾದರಿ ನಿರೂಪಣೆಯ ವಿಡಿಯೋ ಹಾಕಿ. ನಂತರ ಮುಖ್ಯಾಂಶಗಳನ್ನು ಚರ್ಚಿಸಿ. ಪುನರ್ಭೇಟಿಗಾಗಿ ಪ್ರಚಾರಕನು ಹೇಗೆ ತಳಪಾಯ ಹಾಕಿದನೆಂದು ಒತ್ತಿಹೇಳಿ. ತಮ್ಮ ಸ್ವಂತ ನಿರೂಪಣೆಗಳನ್ನು ಬರೆಯುವಂತೆ ಪ್ರಚಾರಕರನ್ನು ಪ್ರೋತ್ಸಾಹಿಸಿ.
ನಮ್ಮ ಕ್ರೈಸ್ತ ಜೀವನ
ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ಆಕ್ಸಿಲಿಯರಿ ಪಯನೀಯರ್ ಸೇವೆ ಮಾಡಲು ಈಗಲೇ ಸಿದ್ಧತೆ ಮಾಡಿ: (15 ನಿ.) ಚರ್ಚೆ. “ಕ್ರಿಸ್ತನ ಮರಣದ ಸ್ಮರಣೆಯ ಸಮಯಾವಧಿ ಸಂತೋಷಕರವಾಗಿರಲಿ!” ಎಂಬ ಲೇಖನದಲ್ಲಿರುವ ಮುಖ್ಯಾಂಶಗಳನ್ನು ಪರಿಗಣಿಸಿ. (ನಮ್ಮ ರಾಜ್ಯ ಸೇವೆ 2/14 ಪು. 2) ಮೊದಲೇ ಸಿದ್ಧತೆ ಯಾಕೆ ಮಾಡಬೇಕೆಂದು ಒತ್ತಿಹೇಳಿ. (ಜ್ಞಾನೋ 21:5) ಈ ಹಿಂದೆ ಆಕ್ಸಿಲಿಯರಿ ಪಯನೀಯರರಾಗಿ ಸೇವೆ ಮಾಡಿದ ಇಬ್ಬರು ಪ್ರಚಾರಕರ ಸಂದರ್ಶನ ಮಾಡಿ. ಅವರು ಯಾವ ಅಡ್ಡಿತಡೆಗಳನ್ನು ಜಯಿಸಬೇಕಾಯಿತು? ಅವರಿಗೆ ಯಾವ ಸಂತೋಷ ಸಿಕ್ಕಿತು?
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 96, 97 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 141 ಮತ್ತು ಪ್ರಾರ್ಥನೆ
ನೆನಪಿಡಿ: ದಯವಿಟ್ಟು ಪೂರ್ತಿ ಸಂಗೀತವನ್ನು ಒಮ್ಮೆ ಹಾಕಿ, ನಂತರ ಎರಡನೇ ಬಾರಿ ಹಾಕಿ ಸಭೆಯವರೆಲ್ಲರೂ ಹಾಡಿ