ಫೆಬ್ರವರಿ 15-21
ನೆಹೆಮೀಯ 9-11
ಗೀತೆ 84 ಮತ್ತು ಪ್ರಾರ್ಥನೆ
ಆರಂಭದ ಮಾತುಗಳು (3 ನಿಮಿಷದೊಳಗೆ)
ಬೈಬಲಿನಲ್ಲಿರುವ ರತ್ನಗಳು
“ನಿಷ್ಠಾವಂತ ಆರಾಧಕರು ದೈವಿಕ ಏರ್ಪಾಡುಗಳಿಗೆ ಬೆಂಬಲ ನೀಡುತ್ತಾರೆ”: (10 ನಿ.)
ನೆಹೆ 10:28-30—ಅವರು ಅನ್ಯ “ದೇಶನಿವಾಸಿ”ಗಳನ್ನು ಮದುವೆ ಮಾಡಿಕೊಳ್ಳುವುದಿಲ್ಲವೆಂದು ಒಪ್ಪಿಕೊಂಡರು (ಕಾವಲಿನಬುರುಜು 98 10/15 ಪು. 21, ಪ್ಯಾ. 11)
ನೆಹೆ 10:32-39—ಅವರು ಸತ್ಯಾರಾಧನೆಯನ್ನು ಅನೇಕ ವಿಧಗಳಲ್ಲಿ ಬೆಂಬಲಿಸಲು ದೃಢ ತೀರ್ಮಾನ ಮಾಡಿದರು (ಕಾವಲಿನಬುರುಜು 98 10/15 ಪು. 21, ಪ್ಯಾ. 11-12)
ನೆಹೆ 11:1, 2—ಅವರು ವಿಶೇಷವಾದ ದೈವಿಕ ಏರ್ಪಾಡಿಗೆ ಸ್ವಇಚ್ಛೆಯಿಂದ ಬೆಂಬಲ ನೀಡಿದರು (ಕಾವಲಿನಬುರುಜು 06 2/1 ಪು. 11, ಪ್ಯಾ. 6; ಕಾವಲಿನಬರುಜು 98 10/15 ಪು. 22, ಪ್ಯಾ. 13)
ಆಧ್ಯಾತ್ಮಿಕ ಮುತ್ತುಗಳನ್ನು ಹುಡುಕಿ: (8 ನಿ.)
ನೆಹೆ 9:19-21—ತನ್ನ ಜನರ ಅವಶ್ಯಕತೆಗಳನ್ನು ಪೂರೈಸುವನೆಂದು ಯೆಹೋವನು ಹೇಗೆ ತೋರಿಸಿಕೊಟ್ಟನು? (ಕಾವಲಿನಬುರುಜು 13 9/15 ಪು. 9, ಪ್ಯಾ. 9-10)
ನೆಹೆ 9:6-38—ಪ್ರಾರ್ಥನೆಯ ಬಗ್ಗೆ ಲೇವಿಯರು ನಮಗೆ ಯಾವ ಉತ್ತಮ ಮಾದರಿಯನ್ನು ಇಟ್ಟಿದ್ದಾರೆ? (ಕಾವಲಿನಬುರುಜು 13 10/15 ಪು. 22-23, ಪ್ಯಾ. 6-7)
ಈ ವಾರದ ಬೈಬಲ್ ವಾಚನವು ಯೆಹೋವನ ಬಗ್ಗೆ ನನಗೆ ಏನನ್ನು ಕಲಿಸುತ್ತದೆ?
ಈ ವಾರದ ಬೈಬಲ್ ವಾಚನದಲ್ಲಿರುವ ಯಾವ ವಿಷಯಗಳನ್ನು ನಾನು ಸೇವೆಯಲ್ಲಿ ಉಪಯೋಗಿಸಬಹುದು?
ಬೈಬಲ್ ಓದುವಿಕೆ: ನೆಹೆ 11:15-36 (4 ನಿಮಿಷದೊಳಗೆ)
ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ
ಮೊದಲ ಭೇಟಿ: (2 ನಿಮಿಷದೊಳಗೆ) ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರದ ಕೊನೆಯ ಪುಟದಲ್ಲಿರುವ ಮಾಹಿತಿಯನ್ನು ಉಪಯೋಗಿಸಿ ಅದನ್ನು ನೀಡಿ. ಪುನರ್ಭೇಟಿಗಾಗಿ ತಳಪಾಯ ಹಾಕಿ.
ಪುನರ್ಭೇಟಿ: (4 ನಿಮಿಷದೊಳಗೆ) ನಮ್ಮ ಕಷ್ಟಗಳಿಗೆ ಕೊನೆ ಇದೆಯಾ? ಕರಪತ್ರವನ್ನು ನೀಡಿದಾಗ ಆಸಕ್ತಿ ತೋರಿಸಿದವರಿಗೆ ಹೇಗೆ ಪುನರ್ಭೇಟಿ ಮಾಡುವುದೆಂಬ ಅಭಿನಯವಿರಲಿ. ಮುಂದಿನ ಭೇಟಿಗಾಗಿ ತಳಪಾಯ ಹಾಕಿ.
ಬೈಬಲ್ ಅಧ್ಯಯನ: (6 ನಿಮಿಷದೊಳಗೆ) ಬೈಬಲ್ ಅಧ್ಯಯನ ಮಾಡುವ ಅಭಿನಯವಿರಲಿ. (ಬೋಧಿಸುತ್ತದೆ ಪು. 32-33, ಪ್ಯಾ. 13-14)
ನಮ್ಮ ಕ್ರೈಸ್ತ ಜೀವನ
“ಇದೇ ಅತ್ಯುತ್ತಮ ಜೀವನ”: (15 ನಿ.) ಚರ್ಚೆ. ಆರಂಭದಲ್ಲೇ ಈ ವಿಡಿಯೋವನ್ನು ಹಾಕಿ. ನಂತರ ಪ್ರಶ್ನೆಗಳನ್ನು ಪರಿಗಣಿಸಿ. ಅನೇಕ ವರ್ಷಗಳ ಕಾಲ ಅವಿವಾಹಿತರಾಗಿ ಯೆಹೋವನ ಸೇವೆಯನ್ನು ಮಾಡಿದ ವಿವಾಹಿತ ಅಥವಾ ಅವಿವಾಹಿತ ಪ್ರಚಾರಕರೊಬ್ಬರನ್ನು ಸಂದರ್ಶಿಸಿ. (1 ಕೊರಿಂ 7:35) ಇದರಿಂದ ಯಾವ ಆಶೀರ್ವಾದಗಳನ್ನು ಪಡೆದರೆಂದು ಕೇಳಿ.
ಸಭಾ ಬೈಬಲ್ ಅಧ್ಯಯನ: ಬೈಬಲ್ ಕಥೆಗಳು, ಕಥೆ 100, 101 (30 ನಿ.)
ಇಂದಿನ ಕೂಟದ ಮುಖ್ಯಾಂಶಗಳು, ಮುಂದಿನ ಕೂಟದ ಮುನ್ನೋಟ (3 ನಿ.)
ಗೀತೆ 13 ಮತ್ತು ಪ್ರಾರ್ಥನೆ