ನಮ್ಮ ಕ್ರೈಸ್ತ ಜೀವನ
ಪುನರುತ್ಥಾನಕ್ಕೆ ದಾರಿ ತೆರೆದ ವಿಮೋಚನಾ ಮೌಲ್ಯ
ವಿಮೋಚನಾ ಮೌಲ್ಯದಿಂದ ನಮಗೆ ಸಿಗಲಿರುವ ಆಶೀರ್ವಾದಗಳ ಬಗ್ಗೆ ಯೋಚಿಸಲು ಕ್ರಿಸ್ತನ ಸ್ಮರಣೆಯ ಸಮಯ ಒಳ್ಳೆಯ ಸಂದರ್ಭವಾಗಿದೆ. ಅಂಥ ಆಶೀರ್ವಾದಗಳಲ್ಲಿ ಒಂದು ಪುನರುತ್ಥಾನ. ಮನುಷ್ಯರು ಸಾಯಬೇಕೆಂದು ಯೆಹೋವ ದೇವರು ಬಯಸಲಿಲ್ಲ. ಆದ್ದರಿಂದಲೇ ನಮಗಾಗುವ ನೋವುಗಳಲ್ಲಿ ತುಂಬ ಮನ ಕಲುಕುವಂಥದ್ದು ಪ್ರಿಯರ ಮರಣವಾಗಿದೆ. (1ಕೊರಿಂ 15:26) ಲಾಜರ ಸತ್ತಾಗ ತನ್ನ ಶಿಷ್ಯರು ದುಃಖಿಸುತ್ತಿದ್ದದ್ದನ್ನು ಕಂಡು ಯೇಸು ಕೂಡ ಕಣ್ಣೀರು ಬಿಟ್ಟನು. (ಯೋಹಾ 11:33-35) ಯೇಸು ತನ್ನ ತಂದೆಯ ಗುಣಗಳನ್ನು ಪರಿಪೂರ್ಣವಾಗಿ ತೋರಿಸಿದನು. ಆದ್ದರಿಂದ ಪ್ರಿಯರನ್ನು ಮರಣದಲ್ಲಿ ಕಳೆದುಕೊಂಡಾಗ ಯೆಹೋವನಿಗೂ ನೋವಾಗುತ್ತದೆ ಅಂತ ನಮಗೆ ಗೊತ್ತಾಗುತ್ತದೆ. (ಯೋಹಾ 14:7) ತೀರಿ ಹೋಗಿರುವ ತನ್ನ ಸೇವಕರನ್ನು ಪುನರುತ್ಥಾನ ಮಾಡುವ ಸಮಯ ಯಾವಾಗ ಬರುತ್ತೋ ಅಂತ ಯೆಹೋವನು ಎದುರುನೋಡುತ್ತಿದ್ದಾನೆ. ನಾವು ಸಹ ಅದಕ್ಕಾಗಿ ಎದುರುನೋಡಬೇಕು.—ಯೋಬ 14:14, 15.
ಯೆಹೋವನು ಎಲ್ಲವನ್ನು ಕ್ರಮವಾಗಿ ಮಾಡುವುದರಿಂದ, ಪುನರುತ್ಥಾನವನ್ನು ಸಹ ಕ್ರಮಬದ್ಧವಾಗಿ ಮಾಡುತ್ತಾನೆ ಎಂದು ಹೇಳಬಹುದು. (1ಕೊರಿಂ 14:33, 40) ದೇವರ ರಾಜ್ಯದಲ್ಲಿ ಶವಸಂಸ್ಕಾರಗಳ ಬದಲು ಪುನರುತ್ಥಾನವಾದವರನ್ನು ಸ್ವಾಗತಿಸುವ ಸಂಭ್ರಮಾಚರಣೆಗಳಿರುತ್ತವೆ. ನೀವು ಪುನರುತ್ಥಾನದ ಬಗ್ಗೆ ಧ್ಯಾನಿಸುತ್ತೀರೋ? ಮುಖ್ಯವಾಗಿ ನಿಮಗೆ ತುಂಬ ದುಃಖವಾಗುವಾಗ ಇದನ್ನು ಮಾಡಿ. (2ಕೊರಿಂ 4:17, 18) ವಿಮೋಚನಾ ಮೌಲ್ಯದ ಏರ್ಪಾಡಿಗಾಗಿ ಮತ್ತು ಪುನರುತ್ಥಾನದ ಬಗ್ಗೆ ತಿಳಿಸಿದ್ದಕ್ಕಾಗಿ ಯೆಹೋವನಿಗೆ ನೀವು ಕೃತಜ್ಞತೆ ತಿಳಿಸುತ್ತೀರೋ?—ಕೊಲೊ 3:15.
-
ನಿಮ್ಮ ಸ್ನೇಹಿತರಲ್ಲಿ ಮತ್ತು ಸಂಬಂಧಿಕರಲ್ಲಿ ಯಾರ ಪುನರುತ್ಥಾನ ನೋಡಬೇಕೆಂದಿದ್ದೀರಾ?
-
ಬೈಬಲಿನಲ್ಲಿ ತಿಳಿಸಿರುವ ಯಾರನ್ನು ನೀವು ಭೇಟಿಮಾಡಿ ಮಾತಾಡಲು ಇಷ್ಟಪಡುತ್ತೀರಾ?