ನಮ್ಮ ಕ್ರೈಸ್ತ ಜೀವನ
ಯೆಹೋವನನ್ನು ಸದಾ ನೆನಪಿನಲ್ಲಿಡಲು ನಿಮ್ಮ ಕುಟುಂಬಕ್ಕೆ ಸಹಾಯಮಾಡಿ
ಯೆಹೂದ್ಯರು ತಮ್ಮ ದೇವರಾದ ಯೆಹೋವನನ್ನು ಮರೆತುಬಿಟ್ಟಿದ್ದರಿಂದ ಬರಲಿರುವ ನಾಶನದ ಬಗ್ಗೆ ಅವರನ್ನು ಎಚ್ಚರಿಸುವಂತೆ ಯೆರೆಮೀಯನಿಗೆ ಹೇಳಲಾಯಿತು. (ಯೆರೆ 13:25) ಇಡೀ ಜನಾಂಗ ಆಧ್ಯಾತ್ಮಿಕವಾಗಿ ಇಂಥ ವಿಷಾದಕರ ಸ್ಥಿತಿಗೆ ಬರಲು ಕಾರಣವೇನು? ಕಾರಣ, ಇಸ್ರಾಯೇಲ್ಯ ಕುಟುಂಬಗಳಲ್ಲಿ ಆಧ್ಯಾತ್ಮಿಕತೆಯೇ ಇರಲಿಲ್ಲ. ಯಾಕೆಂದರೆ ಧರ್ಮೋಪದೇಶಕಾಂಡ 6:5-7ರಲ್ಲಿರುವ ಯೆಹೋವನ ಮಾರ್ಗದರ್ಶನವನ್ನು ಕುಟುಂಬದ ಶಿರಸ್ಸು ಪಾಲಿಸುತ್ತಿರಲಿಲ್ಲ.
ಇಂದು ಸಹ ಕುಟುಂಬಗಳು ಆಧ್ಯಾತ್ಮಿಕವಾಗಿ ದೃಢವಾಗಿದ್ದರೆ ಸಭೆಗಳು ಬಲವಾಗಿರುತ್ತವೆ. ಕುಟುಂಬ ಆರಾಧನೆಯನ್ನು ತಪ್ಪದೆ, ಅರ್ಥಪೂರ್ಣವಾಗಿ ಮಾಡುವ ಮೂಲಕ ಕುಟುಂಬದವರು ಯೆಹೋವನನ್ನು ಸದಾ ನೆನಪಿನಲ್ಲಿಡಲು ಕುಟುಂಬದ ಶಿರಸ್ಸು ಸಹಾಯಮಾಡಬಹುದು. (ಕೀರ್ತ 22:27) ‘ಈ ಮಾತುಗಳು ನಿಮ್ಮ ಹೃದಯದಲ್ಲಿರಬೇಕು’—ಕುಟುಂಬ ಸಂದರ್ಶನಗಳು ಎಂಬ ವಿಡಿಯೋ ನೋಡಿದ ನಂತರ ಈ ಪ್ರಶ್ನೆಗಳನ್ನು ಉತ್ತರಿಸಿ:
-
ತಮ್ಮ ಕುಟುಂಬ ಆರಾಧನೆಗೆ ಬಂದ ತಡೆಗಳನ್ನು ಕೆಲವು ಕುಟುಂಬಗಳು ಹೇಗೆ ಎದುರಿಸಿದವು?
-
ಕುಟುಂಬ ಆರಾಧನೆಯನ್ನು ತಪ್ಪದೆ ಮತ್ತು ಅರ್ಥಪೂರ್ಣವಾಗಿ ಮಾಡುವುದರಿಂದ ಯಾವ ಪ್ರಯೋಜನವಿದೆ?
-
ಕುಟುಂಬ ಆರಾಧನೆ ಮಾಡಲು ನನಗಿರುವ ಅಡ್ಡಿತಡೆಗಳೇನು ಮತ್ತು ಅವುಗಳನ್ನು ನಿಭಾಯಿಸಲು ನಾನು ಏನು ಮಾಡುತ್ತೇನೆ?