ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ ಕೂಟದ ಕೈಪಿಡಿ ಮಾರ್ಚ್ 2018
ಮಾದರಿ ಸಂಭಾಷಣೆಗಳು
ಸಂಭಾಷಣೆಗಳು ಸ್ಮರಣೆಯ ಆಮಂತ್ರಣ ಪತ್ರದ ಅಭಿಯಾನದ ಮತ್ತು ಈ ಪ್ರಶ್ನೆಗಳ ಮೇಲೆ ಆಧರಿತ: ಯೇಸು ಯಾಕೆ ಸಾಯಬೇಕಾಯಿತು? ವಿಮೋಚನಾ ಮೌಲ್ಯದಿಂದ ಏನು ಪ್ರಯೋಜನ?
ಬೈಬಲಿನಲ್ಲಿರುವ ರತ್ನಗಳು
“ನಿಮ್ಮಲ್ಲಿ ದೊಡ್ಡವನಾಗಬೇಕೆಂದಿರುವವನು ನಿಮ್ಮ ಸೇವಕನಾಗಿರಬೇಕು”
ನಾವು ದೇವರ ಆರಾಧನೆಯಲ್ಲಿ ನಮಗೆ ಹೆಸರು, ಹೊಗಳಿಕೆ ಸಿಗುವಂಥ ಅಂಶಗಳನ್ನೇ ಹೆಚ್ಚಾಗಿ ಮಾಡುತ್ತೇವಾ? ದೀನತೆ ಇರುವ ಸೇವಕರು ಯೆಹೋವನು ಮಾತ್ರ ಗಮನಿಸುವ ಕೆಲಸಗಳನ್ನೂ ಮಾಡುತ್ತಾರೆ.
ಬೈಬಲಿನಲ್ಲಿರುವ ರತ್ನಗಳು
ಎರಡು ಅತಿ ದೊಡ್ಡ ಆಜ್ಞೆಗಳನ್ನು ಪಾಲಿಸಿ
ಬೈಬಲಿನಲ್ಲಿರುವ ಯಾವ ಆಜ್ಞೆಗಳನ್ನು ಯೇಸು ಅತಿ ದೊಡ್ಡ ಆಜ್ಞೆಗಳು ಎಂದು ಹೇಳಿದನು? ಈ ಆಜ್ಞೆಗಳನ್ನು ನಾವು ಹೇಗೆ ಪಾಲಿಸಬಹುದು?
ನಮ್ಮ ಕ್ರೈಸ್ತ ಜೀವನ
ದೇವರ ಮೇಲೆ ಮತ್ತು ನೆರೆಯವರ ಮೇಲೆ ಪ್ರೀತಿಯನ್ನು ಹೇಗೆ ಬೆಳೆಸಿಕೊಳ್ಳಬಹುದು?
ನಾವು ದೇವರನ್ನು ಮತ್ತು ನೆರೆಯವರನ್ನು ಪ್ರೀತಿಸಬೇಕು. ಇದನ್ನು ಬೆಳೆಸಿಕೊಳ್ಳುವ ಒಂದು ಮುಖ್ಯವಾದ ವಿಧ ನಾವು ದಿನಾಲೂ ಬೈಬಲ್ ಓದುವುದು.
ಬೈಬಲಿನಲ್ಲಿರುವ ರತ್ನಗಳು
ಕಡೇ ದಿವಸಗಳಲ್ಲಿ ಆಧ್ಯಾತ್ಮಿಕವಾಗಿ ಎಚ್ಚರವಾಗಿರಿ
ಇಂದು ಹೆಚ್ಚಿನ ಜನರು ಜೀವನದ ಸಾಮಾನ್ಯ ಚಟುವಟಿಕೆಗಳಿಗೆ ಎಷ್ಟು ಮಹತ್ವ ಕೊಟ್ಟಿದ್ದಾರೆಂದರೆ ಆಧ್ಯಾತ್ಮಿಕ ಚಟುವಟಿಕೆಗಳಿಗೆ ಅವರ ಜೀವನದಲ್ಲಿ ಸಮಯನೇ ಇಲ್ಲ. ಆಧ್ಯಾತ್ಮಿಕವಾಗಿ ಎಚ್ಚರವಾಗಿರುವ ಕ್ರೈಸ್ತರ ದೃಷ್ಟಿಕೋನ ಇವರ ದೃಷ್ಟಿಕೋನಕ್ಕಿಂತ ಹೇಗೆ ಭಿನ್ನವಾಗಿದೆ?
ನಮ್ಮ ಕ್ರೈಸ್ತ ಜೀವನ
ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಹತ್ತಿರ
ನಾವು ಅಂತ್ಯದ ಸಮಯದಲ್ಲಿ ಜೀವಿಸುತ್ತಿದ್ದೇವೆ ಎಂದು ಯೇಸುವಿನ ಮಾತುಗಳಿಂದ ಹೇಗೆ ಗೊತ್ತಾಗುತ್ತದೆ? ಈ ಪ್ರಶ್ನೆಗೆ ಈ ವಿಷಯಗಳ ವ್ಯವಸ್ಥೆಯ ಸಮಾಪ್ತಿಗೆ ಹತ್ತಿರ ಎಂಬ ವಿಡಿಯೋದಲ್ಲಿ ಉತ್ತರ ಇದೆ.
ಬೈಬಲಿನಲ್ಲಿರುವ ರತ್ನಗಳು
“ಸದಾ ಎಚ್ಚರವಾಗಿರಿ”
ಹತ್ತು ಕನ್ಯೆಯರ ಕುರಿತಾದ ದೃಷ್ಟಾಂತದಲ್ಲಿರುವ ಮದುಮಗ, ಬುದ್ಧಿವಂತೆಯರಾದ ಕನ್ಯೆಯರು, ಬುದ್ಧಿಹೀನೆಯರಾದ ಕನ್ಯೆಯರು ಯಾರನ್ನು ಚಿತ್ರಿಸುತ್ತಾರೆ? ಈ ದೃಷ್ಟಾಂತದಲ್ಲಿ ನಿಮಗೆ ಯಾವ ಸಂದೇಶವಿದೆ?
ನಮ್ಮ ಕ್ರೈಸ್ತ ಜೀವನ
ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ತಯಾರಿ ಮಾಡುವುದು ಹೇಗೆಂದು ನಿಮ್ಮ ವಿದ್ಯಾರ್ಥಿಗಳಿಗೆ ಕಲಿಸಿ
ಆರಂಭದಿಂದಲೇ, ನಮ್ಮ ವಿದ್ಯಾರ್ಥಿಗಳು ಅಧ್ಯಯನಕ್ಕೆ ತಯಾರಿ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ನಾವು ಸಹಾಯ ಮಾಡಬೇಕು. ಇದನ್ನು ಮಾಡುವುದು ಹೇಗೆ?