ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಸಹೋದರ ಸಹೋದರಿಯರಿಂದ ಸಹಾಯ ಪಡಕೊಳ್ಳಿ

ಸಹೋದರ ಸಹೋದರಿಯರಿಂದ ಸಹಾಯ ಪಡಕೊಳ್ಳಿ

ಯೆಹೋವ ದೇವರು “ಎಲ್ಲ ಕಡೆ ಇರೋ” ನಮ್ಮ ಸಹೋದರರನ್ನ ನಮ್ಮ ಸಹಾಯಕ್ಕಾಗಿ ಕೊಟ್ಟಿದ್ದಾರೆ. (1ಪೇತ್ರ 5:9) ಸೇವೆಯಲ್ಲಿ ಏನೇ ಸಮಸ್ಯೆ ಬಂದ್ರೂ ಅದನ್ನ ಚೆನ್ನಾಗಿ ಮಾಡಿಕೊಂಡು ಹೋಗೋಕೆ ಈ ಸಹೋದರರು ಸಹಾಯ ಮಾಡ್ತಾರೆ. ಉದಾಹರಣೆಗೆ ಅಕ್ವಿಲ-ಪ್ರಿಸ್ಕಿಲ್ಲ, ಸೀಲ, ತಿಮೊತಿ ಮತ್ತು ಬೇರೆಯವರು ಅಪೊಸ್ತಲ ಪೌಲನಿಗೆ ಸಹಾಯ ಮಾಡಿದ್ರು.—ಅಕಾ 18:1-5.

ಸಹೋದರ ಸಹೋದರಿಯರು ಸೇವೇಲಿ ನಮಗೆ ಹೇಗೆ ಸಹಾಯ ಮಾಡ್ತಾರೆ? ಅವರು ನಮಗೆ ತುಂಬ ವಿಷ್ಯಗಳನ್ನ ಹೇಳಿಕೊಡ್ತಾರೆ. ಮನೆಯವರು ನಮ್ಮ ಸಂದೇಶ ಕೇಳದಿದ್ರೆ ಏನ್‌ ಮಾಡಬೇಕು, ಪುನರ್ಭೇಟಿ ಹೇಗೆ ಮಾಡೋದು, ಬೈಬಲ್‌ ಸ್ಟಡಿ ಮಾಡೋಕೆ ಮನೆಯವರನ್ನ ಹೇಗೆ ಕೇಳೋದು, ಹೇಗೆ ಸ್ಟಡಿ ಮಾಡೋದು ಅಂತೆಲ್ಲಾ ಹೇಳಿಕೊಡ್ತಾರೆ. ಅಂಥ ಸಹೋದರ ಸಹೋದರಿಯರ ಹತ್ರ ಹೋಗಿ ಸಹಾಯ ಕೇಳಿ. ಇದ್ರಿಂದ ನಿಮ್ಮಿಬ್ಬರಿಗೂ ಪ್ರಯೋಜನ ಆಗುತ್ತೆ. ಸಂತೋಷವಾಗಿ ಸೇವೆ ಮಾಡೋಕೆ ಆಗುತ್ತೆ.—ಫಿಲಿ 1:25.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಯೆಹೋವ ಕೊಡೋ ಸಹಾಯ—ನಮ್ಮ ಸಹೋದರರು ವಿಡಿಯೋ ನೋಡಿ, ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ಜಾಸ್ಮಿನನ್ನ ಕೂಟಗಳಿಗೆ ಕರ್ಕೊಂಡು ಬರೋಕೆ ನೀತಾ ಏನೆಲ್ಲಾ ಮಾಡಿದಳು?

  • ನಮ್ಮ ಬೈಬಲ್‌ ಸ್ಟಡಿಗೆ ಬೇರೆ ಸಹೋದರ ಸಹೋದರಿಯರನ್ನ ಯಾಕೆ ಕರ್ಕೊಂಡು ಹೋಗಬೇಕು?

  • ಒಬ್ಬ ವ್ಯಕ್ತಿನ ಶಿಷ್ಯನಾಗಿ ಮಾಡೋಕೆ ಇಡೀ ಸಭೆಯ ಸಹಾಯ ಬೇಕು

    ಸಹೋದರಿ ಅಬಿಗೇ ಮತ್ತು ಜಾಸ್ಮಿನ್‌ ಇಬ್ಬರಿಗೂ ಏನಂದ್ರೆ ತುಂಬ ಇಷ್ಟ?

  • ಸಹೋದರ ಸಹೋದರಿಯರು ನಿಮಗೆ ಸೇವೆನ ಚೆನ್ನಾಗಿ ಮಾಡೋಕೆ ಯಾವ್ಯಾವ ಕೌಶಲಗಳನ್ನ ಕಲಿಸಿ ಕೊಡ್ತಾರೆ?